"ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ಕಾವೇರಿಯಿಂದ ಗೋದಾವರಿ ಪರ್ಯಂತದ ನಾಡನ್ನು ಸುಮಾರು ಅರವತ್ತು ವರ್ಷ ಧರ್ಮದಿಂದ ಪಾಲಿಸಿ, ದೇಶ ವಿದೇಶಗಳಲ್ಲೂ ಪ್ರಸಿದ್ಧನಾಗಿದ್ದ ದೊರೆ." #ನೃಪತುಂಗ#ತರಾಸು
"ಸುಖವಾಗಲಿ ದುಃಖವಾಗಲಿ ಒಂಟಿಯಾಗಿ ಬರುವುದಿಲ್ಲ, ಇಲ್ಲದಾಗ ಇಲ್ಲ, ಬರುವಾಗ ಹಿಂಡುಹಿಂಡಾಗಿ ಹುಣ್ಣಿಮೆಯ ಮಧ್ಯರಾತ್ರಿ ಏರಿ ಏರಿ ಬರುವ ಕಡಲ ಅಲೆಗಳಂತೆ ಬರುತ್ತವೆ." #ನೃಪತುಂಗ#ತರಾಸು
ತಾವಾಗಿ ಯಾರೂ ಯುದ್ಧಕ್ಕೆ ರಕ್ತಪಾತಕ್ಕೆ ಹಾತೊರೆಯಬಾರದು.ಅಂಥ ಅಧರ್ಮ ಯುದ್ಧ ಇಹಪರರ ವೈರಿ.ಆದರೆ ಪ್ರಜಾ ಪಾಲನೆಗೆ ಅಗತ್ಯವಾದ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ.ನಿಗ್ರಹಯೋಗ್ಯನಾದ ಶತ್ರುವನ್ನಾಗಲಿ,ದುಷ್ಟ ಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ,ಪ್ರಜಾ ಪರಿಪಾಲನೆ ಮಾಡುವ ದೊರೆಯೇ ಸಮಂಜಸನು. #ನೃಪತುಂಗ
"ಅರಸೊತ್ತಿಗೆ ನಿತ್ಯ ಸುಖಾಸಮಾರಾಧನೆಯ ಸುಪ್ಪತ್ತಿಗೆಯಲ್ಲ. ಪ್ರಜೆಗಳ ವೀರಭಟರ ತ್ಯಾಗದ ಹಾಲಿನಿಂದ ಬೆಳೆದ ರಾಜಶರೀರ ಅವರ ಸೇವೆಗೆ ಮೀಸಲಾಗಬೇಕು."
"ನಿಂತಲ್ಲಿ ನಿಲ್ಲದೆ ಸಾಗಿದ, ಕೆಣಕಿದ ಜೇನುಪೆಡೆಯಂಥ ಕನ್ನಡ ಸೇನೆ , ವೆಂಗಿವಳ್ಳಿಯ ಬಯಲಲ್ಲಿ ಚಾಲುಕ್ಯ ಸೇನೆಯ ಮೇಲೆ ಎರಗಿತು, ಹಾವಿನ ಮೇಲೆ ಎರಗುವ ಗರುಡನಂತೆ. #ನೃಪತುಂಗ#ತರಾಸು_ಅವ್ರು
"ರಾಷ್ಟ್ರಕೂಟ ಸೇನೆಯ ಸಿಡಿಲಾಘಾತದಿದಿರು ಚಾಲುಕ್ಯ ಸೇನೆ ತತ್ತರಿಸಿ ಸತ್ತ ದೊರೆ ಕಲಿವಿಷ್ಣುವರ್ಧನನನ್ನು ಸಮರಭೂಮಿಯಲ್ಲಿ ಬಿಟ್ಟು ಸಾಮಂತ ಪದವಿ ಸ್ವೀಕಾರ ಮಾಡಿ ಪಲಾಯನ ಮಾಡಿತು. ಮುಗಿಲಿನಂತೆ ಕವಿದು ಬಂದದು ಇಬ್ಬನಿಯಂತೆ ಕರಗಿ ಹೋಯಿತು." #ನೃಪತುಂಗ#ತರಾಸು_ಅವ್ರು
"ಬರುವುದೆಲ್ಲಾ ನಾವು ಅನುಭವಿಸಬೇಕೆಂದು ಬರುತ್ತವೆಯೇ ಹೊರತು , ಮನೋವ್ಯಥೆ ಮಾಡಿಕೊಂಡು ಕೊರಗುವುದಕ್ಕಲ್ಲ. ಸುಖ ದುಃಖಗಳು ಅಭ್ಯಾಗತರಂತೆ. ಒಬ್ಬರು ಬಂದರೆಂದು ಹಿಗ್ಗೇಕೆ, ಮತ್ತೊಬ್ಬರು ಬಂದರೆಂದು ಕೊರಗೇಕೆ.? ಬರುವುದು ಬರಲಿ ನಮ್ಮ ಕರ್ತವ್ಯ ನಾವು ಮಾಡಬೇಕು." #ನೃಪತುಂಗ#ತರಾಸು
ಲಕ್ಷ್ಮವ್ವ - "ಕಾಪಾಡುವ ದೈವವೇ ಕಾಡುವ ಪಿಡುಗಾದಾಗ ಏನು ಮಾಡುವುದು ?"
ನೃಪತುಂಗ - "ಕಾಡುವ ಪಿಡುಗು ದೈವದ ಅವತಾರವೇ ಎಂದು ನಂಬಿ ನಿಲ್ಲುವುದು." #ನೃಪತುಂಗ#ತರಾಸು
"ಪರಿಹಾರವಿಲ್ಲದ ದುಃಖವಾವೂದು ಈ ಜಗತ್ತಿನಲ್ಲಿಲ್ಲ" #ನೃಪತುಂಗ#ತರಾಸು
"ಹೂವಿನ ಗಿಡದ ಮೇಲೆ ಪ್ರೀತಿ ಇರಬೇಕು ನಿಜ. ಹಾಗೆಂದು ಹೆಚ್ಚಾಗಿ ನೀರು, ಗೊಬ್ಬರ ಹಾಕಿದರೆ ಗಿಡ ಉಳಿದೀತೆ..? ಮಕ್ಕಳೂ ಗಿಡದ ಹಾಗೆ, ಕಾಪಾಡುವಾಗ ಮಮತೆ ಬೇಕು , ಪ್ರೀತಿಸುವಾಗ ಸಂಯಮ ಬೇಕು." #ನೃಪತುಂಗ#ತರಾಸು
"ಅರಸೊತ್ತಿಗೆ ಸುಖದ ಸುಪ್ಪತ್ತಿಗೆಯಲ್ಲ , ಕಠಿಣ ಹೊಣೆಗಾರಿಕೆಯ ಮುಳ್ಳಿನ ಮಂಚ." #ನೃಪತುಂಗ#ತರಾಸು
"ಇಹವನ್ನು ಮರೆತು ಪರಕ್ಕೆ ಎಳೆಸುವುದು ಮುಗಿಲಿಗೆ ಏಣಿ ಹಾಕಲು ಯತ್ನಿಸಿದಂತೆ"
"ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಕುಶಲತೆಯಿಂದ ತನ್ಮಯತೆಯಿಂದ ಮಾಡುವುದೇ ಯೋಗ."
"ಮೃತರಾದವರ ಬಗ್ಗೆ ನಮಗೆ ಪ್ರೇಮವಿದ್ದರೆ ಕಂಬನಿಗರೆಯುತ್ತ ಕುಳಿತುಕೊಳ್ಳುವುದೇ ಆ ಪ್ರೇಮಕ್ಕೆ ಸಾಕ್ಷಿಯಲ್ಲ,ಪರಲೋಕದಲ್ಲಿರುವ ಅವರ ಆತ್ಮಕ್ಕೆ ತೃಪ್ತಿಯಾಗುವಂತೆ ಬದುಕಿರುವ ನಾವು ಬದುಕಬೇಕು.ಶೋಕದಿಂದ ಹತಾಶರಾಗಿ ಕುಳಿತರೆ ಅವರ ಆತ್ಮಕ್ಕೂ ಅತೃಪ್ತಿ , ನಮ್ಮ ಆತ್ಮಕ್ಕೂ ಕೇಡು."
"ಚಕ್ರವರ್ತಿ ವೈಯಕ್ತಿಕವಾಗಿ ಯಾವ ಧರ್ಮದಲ್ಲೇ ಶ್ರದ್ದೆ ತೋರಿದರೂ, ಚಕ್ರವರ್ತಿಯಾಗಿ ಆ ಬಗೆಯ ಬೇಧ ಮಾಡಿದರೆ ಅಂತ ಅರಸನಿಗೆ ವಿನಾಶ ತಪ್ಪದು. ಚಕ್ರವರ್ತಿಯಾಗಿ ಪಾಲಿಸಬೇಕಾದದ್ದು ಪ್ರಜಾ ಧರ್ಮವೊಂದೇ "
"ಜಗತ್ತಿನಲ್ಲಿ ಜನಿಸಿದ ಜನ ಸ್ನೇಹ ಶಾಂತಿಗಳಿಂದ ಹೂ ಬಳ್ಳಿಗಳಂತೆ ನಗುತ್ತಾ ಬದುಕಬೇಕೆಂಬುದು ಪ್ರಕೃತಿಯ ಬಯಕೆ, ಅದಕ್ಕೆ ವಿರುದ್ಧವಾಗಿ ಮಾನವನೇ ಮಾನವನ ವೈರಿಯಾಗಿ ರಕ್ತಪಾತಕ್ಕಿಳಿದಾಗ, ಸ್ವಾರ್ಥಕ್ಕಾಗಿ ಕೊಲೆ ಯುದ್ಧಗಳಾಗಿ ಭೂದೇವಿಗೆ ರಕ್ತಸ್ನಾನದ ಕಳಂಕವಾದಾಗ, ಲಲಿತೆಯಾದ ಪ್ರಕೃತಿ ದುರ್ಗೆಯಾಗುತ್ತಾಳೆ."
'ಚಕ್ರವರ್ತಿ' ಅನ್ನೋ ಪದಕ್ಕೆ ಕಲಶವಿಟ್ಟಂತೆ ರಾಜ್ಯಭಾರ ಮಾಡಿ, ವೈರಿಗಳ ವಿರುದ್ಧ ಛಲದಿಂದ ಹೋರಾಡಿ ಮೆರೆದಾಡಿದ ಹಲವು ಮಹನೀಯರುಗಳ ಪಟ್ಟಿಯಲ್ಲಿ ನಮ್ಮ ಕನ್ನಡದ💛❤️ದೊರೆಗಳು ಇದ್ದಾರೆ🙏.ನಮ್ಮವರ, ನಮ್ಮ ನಾಡಿನ ಇತಿಹಾಸ ತಿಳಿದಾಗ ರೋಮಾಂಚನ ಆಗತ್ತೆ, ಹೆಮ್ಮೆ ಅನ್ಸುತ್ತೆ.😍
ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
ಮಾಹಿತಿ ಸಂಗ್ರಹ: ಶರತ್ ವಿಶ್ವಕರ್ಮ ಅವ್ರು
ಕೃಪೆ: ಶಿವರಾಜ ಅವ್ರು
• ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
1/n
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
2/n
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
3/n