ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46
ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46
Reign ೨೬ ಜುಲೈ ೧೫೦೯ - ೧೫೨೯[೧] ಜನನ ೧೬ ಫೆಬ್ರುವರಿ ೧೪೭೧ ಜನ್ಮ ಸ್ಥಳಹಂಪಿ, ಕರ್ನಾಟಕ ಮರಣ ೧೫೨೯ Buried ಹಂಪಿ,ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು.
3/46
ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು(ಮಂತ್ರಿ) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ
4/46
ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ,ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ.ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ.
5/46
ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ
6/46
ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ. ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ.
7/46
೧೫೧೦ರಲ್ಲಿ ಉತ್ತರದ ರಾಯಚೂರಿಗೆ ಮುತ್ತಿಗೆ ಹಾಕಿ ಗುಲ್ಬರ್ಗಾಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ.ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ
8/46
ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾ ನಿ೦ದ ರಾಯಚೂರನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು.
9/46
ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರ ಮೊದಲ ರಾಜಧಾನಿಯಾದ ಗುಲ್ಬರ್ಗಾದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು , ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ.
10/46
ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ.
11/46
ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒರಿಸ್ಸಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು.
12/46
ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು. ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ, ವಿಜಯನಗರದ ಹಳ್ಳಿ, ಪಟ್ಟಣಗಳ ಮೇಲಿನ ಧಾಳಿ, ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು.
13/46
೧೫೦೯ರಲ್ಲಿ, ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮಹಮೂದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್,
14/46
ಗುಲ್ಬರ್ಗಾ ಮತ್ತು ಬಿಜಯಪುರಗಳ ಮೇಲೆ ಧಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮಹಮೂದನನ್ನು ಬಿಡುಗಡೆ ಮಾಡಿ ಆತನನ್ನು , ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ ತಿಮ್ಮರಸ ಸೋಲಿಸಿದನು.
15/46
ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು , ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ.
16/46
ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು. ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು.
17/46
ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು.ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿಕೋಟೆಗೆ ಮುತ್ತಿಗೆ ಹಾಕಿತು ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು.
18/46
ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ
19/46
ರಣರಂಗದಿಂದ ಹಿಂದೆಗೆಯಲಾರಂಭಿಸಿತು.ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು
20/46
ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ
21/46
ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು. ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು.
22/46
ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. ೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು
23/46
ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು. ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ
24/46
ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್
25/46
ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್
25/46
ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ. ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು
26/46
ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ ಪೆಮ್ಮಸಾನಿ ರಾಮಲಿಂಗ ನಾಯ್ಡು ಅರಸರ ಪ್ರೀತ್ಯಾದರಗಳನ್ನು
27/46
ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು. ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ).
28/46
ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು.
29/46
೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ.
30/46
ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು.
31/46
ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ.
32/46
ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ
33/46
ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು. ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ
34/46
ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ.bಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ
35/46
ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ.
ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ
36/46
ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳ
37/46
ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ . ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ.
38/46
ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು
39/46
ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು.ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ
40/46
ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ. ಕೃಷ್ಣದೇವರಾಯನ ಆಡಳಿತವು ಅನೇಕ
41/46
ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ
42/46
ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.
43/46
ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು
44/46
ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ. ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು
45/46
ಸಂಸ್ಕೃತದಲ್ಲಿ,ಶ್ರೀವ್ಯಾಸತೀರ್ಥರು ತಾತ್ಪಾರ್ಯಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ.ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ.
46/46

• • •

Missing some Tweet in this thread? You can try to force a refresh
 

Keep Current with Rᴀᴍᴇsʜ Hᴀʟᴀɢᴏɴᴅ 🗨

Rᴀᴍᴇsʜ Hᴀʟᴀɢᴏɴᴅ 🗨 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @RHalagond

17 Dec
ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ.
#ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು
#Vodafone ನಷ್ಟ 50 ಸಾವಿರ ಕೋಟಿ
#Airtel ನಷ್ಟ 23 ಸಾವಿರ ಕೋಟಿ
#BSNL ನಷ್ಟ 20 ಸಾವಿರ ಕೋಟಿ
#MTNL ನಷ್ಟ 755 ಕೋಟಿ
1/9
#ಬಿಪಿಸಿಎಲ್ ನಷ್ಟ 750 ಕೋಟಿ
#ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಷ್ಟ 286 ಕೋಟಿ
#ಏರ್ ಇಂಡಿಯಾ ನಷ್ಟ 4600 ಕೋಟಿ
#ಸ್ಪೈಸ್ ಜೆಟ್ ನಷ್ಟ 465 ಕೋಟಿ
#ಇಂಡಿಗೋ ನಷ್ಟ 1062 ಕೋಟಿ
#ಬಿಎಚ್‌ಇಎಲ್ ನಷ್ಟ 260 ಕೋಟಿ
#ಇಂಡಿಯಾ ಪೋಸ್ಟ್ ನಷ್ಟ 15 ಸಾವಿರ ಕೋಟಿ
#ಜಿಎಮ್ಆರ್ ಇನ್ಪ್ರಾ ನಷ್ಟ 561 ಕೋಟಿ
#ಯೆಸ್ ಬ್ಯಾಂಕ್ ನಷ್ಟ 600 ಕೋಟಿ
2/9
#ಯೂನಿಯನ್ ಬ್ಯಾಂಕ್ ನಷ್ಟ 1190 ಕೋಟಿ
#ಪಿಎನ್‌ಬಿ ಬ್ಯಾಂಕ್ ನಷ್ಟ 4750 ಕೋಟಿ.
#ಆ್ಯಕ್ಸಿಸ್ ಬ್ಯಾಂಕ್ ನಷ್ಟ 112 ಕೋಟಿ
#ಜೆಪಿ ಕಂಪನಿ ಮುಳುಗಿದೆ
#ವಿಡಿಯೋಕೋನ್ ದಿವಾಳಿಯಾಗಿದೆ.
#ಏರ್‌ಸೆಲ್ ಮತ್ತು ಡೊಕೊಮೊ ಮುಳುಗಿದೆ.
#ಜೆಟ್ ಏರ್‌ವೇಸ್ ಮುಚ್ಚಿದೆ
#ವಿಮಾನ ನಿಲ್ದಾಣಗಳನ್ನು ಅದಾನಿಗೆ ಮಾರಲಾಗುತ್ತಿದೆ.
#ರೈಲ್ವೆ ಇಲಾಖೆ ಮಾರಾಟಕ್ಕಿದೆ.
3/9
Read 10 tweets
17 Dec
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು.
1/4 Image
ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
ಇಂದಿನ ದಿನ 40₹ kg ಬಾಳೆಹಣ್ಣು ಕೊಂಡುಕೊಳ್ಳಲ್ಲು ಶಕ್ತರಲ್ಲದ ಜನರಿಗೆ ನಾಳೆಯ ದಿನ ಒಂದು ಬಾಳೆಹಣ್ಣನ್ನು 40₹ ಕೊಟ್ಟು ನಾಲ್ಕು ತುಂಡುಗಳನ್ನು ನಾಲ್ಕು ಜನ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಇನ್ನಾದ್ರು ಜನಸಾಮಾನ್ಯರು ಎಚ್ಚೆತ್ತುಕೊಂಡು ರೈತರಿಗೆ ನೈತಿಕ ಬೆಂಬಲ ಕೊಟ್ಟು ಅವರ ಜೊತೆ
ನಿಲ್ಲಬೇಕಿದೆ.
3/4
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!