ಅಶ್ವತ್ಥ ವೃಕ್ಷ (ಅರಳಿ) ಶ್ರೇಷ್ಠ ಎಂದು ಹೇಳುವ ಭಗವದ್ಗೀತೆಯ ಶ್ಲೋಕದಂತೆ ಆಲ ಹಾಗೂ ಅರಳಿ ಮರಗಳ ಗುಂಪಿಗೆ ಸೇರುವ ( Ficus species) ಮರಗಳನ್ನು Key stone ಪ್ರಭೇದದ ಮರಗಳೆಂದು ವೈಜ್ಞಾನಿಕ
ಹಿನ್ನಲೆಯಲ್ಲೂ ಸಹ ಗುರುತಿಸಲಾಗಿದೆ. ಅದಕ್ಕೆ ಕಾರಣ ಈ ಜಾತಿಯ ಮರಗಳು ವಿವಿಧ ಕಾಲಮಾನದಲ್ಲಿ (ನಿರ್ಧಿಷ್ಟ ಋತುಮಾನದಲ್ಲಿ ಮಾತ್ರವಲ್ಲ) ಯಥೇಚ್ಛವಾಗಿ ಹಣ್ಣುಗಳನ್ನು ಬಿಡುವುದರಿಂದ ಆ ಹಣ್ಣುಗಳು ಕೋತಿ, ಅಳಿಲು, ಬಾವುಲಿಯಂತ ಸಸ್ತನಿಗಳಿಗೂ, ವಿವಿಧ ಜಾತಿಯ ಅಸಂಖ್ಯಾತ ಪಕ್ಷಿಗಳಿಗೂ ಹೊಟ್ಟೆತುಂಬಾ ಆಹಾರ ಒದಗಿಸುತ್ತವೆ. ಜೊತೆಗೆ ಆಶ್ರಯವನ್ನೂ ಕೂಡ
ಕೊಡುತ್ತವೆ, ಈ ಸತ್ಯವನ್ನು ತಿಳಿದೆ ಏನೋ ಹಿಂದೆ ರಾಜ ಮಹಾರಾಜರುಗಳು ಸಾಲುಮರಗಳನ್ನು ಬೆಳೆಸುವಾಗ ಬಹುತೇಕ ವಿವಿಧ ಆಲದ ಜಾತಿಯ ಮರಗಳನ್ನು (ಆಲ, ಅರಳಿ, ಗೋಣಿ, ಬಸರಿ, ಬಿಳಿಬಸರಿ ಇತ್ಯಾದಿ) ಬೆಳಸುತ್ತಿದ್ದರು. ಹೀಗಾಗಿ ಈ ಹಿಂದೆ ಕಾಡುಪ್ರಾಣಿಗಳು ಯಥೇಚ್ಛವಾಗಿದ್ದರೂ,ಕೃಷಿ ಜಮೀನು ಕಡಿಮೆ ಇದ್ದರೂ ಕೋತಿಗಳ ಕಾಟ ಎಲ್ಲೂ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ
ಗಿಳಿಗಳು ಬಂದು ಹೊಲಗದ್ದೆಯ ಫಸಲನ್ನು ತಿನ್ನುತ್ತಿರಲಿಲ್ಲ.
ಮಳೆಗಾಲ ಬಂದರೆ ಬಹಳಷ್ಟು ಜನ ಊರಿನ ದೇವಾಲಯ, ರಸ್ತೆಬದಿ, ಸರ್ಕಾರಿ ಕಛೇರಿ, ಶಾಲಾಕಾಲೇಜು ಮುಂತಾದ ಕಡೆ ಗಿಡ ನೆಡುವ ಯೋಚನೆ ಮಾಡಿರುತ್ತಿರಿ. ಅಂತವರು ದಯವಿಟ್ಟು ಆದಷ್ಟು ಆಲದ ಜಾತಿಯ ಮರಗಳನ್ನು ಬೆಳೆಸಲು ಪ್ರಯತ್ನಿಸಿ. ಆಲದ ಜಾತಿಯ ಗಿಡಗಳು ಸಿಗದಿದ್ದಲೇ ಅವುಗಳ ಮರಗಳ ಟೊಂಗೆ
( ಸು. ಎರಡು ಮೀಟರ್ ಉದ್ದ, ರಟ್ಟೆ ಗಾತ್ರದ ಟೊಂಗೆ) ಕಡಿದು ನೆಟ್ಟರೂ ಅವು ಬೇಗನೇ ಮರವಾಗುತ್ತವೆ.
🙏🙏
- ಸಂಜಯ್ ಹೊಯ್ಸಳ
• ಕೈಯಲ್ಲಿ ಸೇವಿಸುವುದರಿಂದ ಬೇರೆಡೆ ಆಲೋಚನೆ ಹೋಗದೆ ರುಚಿಯನ್ನ ಚೆನ್ನಾಗಿ ಸವಿಯಬಹುದು
• ಬೆರಳುಗಳಿಂದ ಆಹಾರ ಕಲೆಸಿಕೊಂಡು, ತುತ್ತು ಮಾಡಿ ಸೇವಿಸುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ, ಬೆರಳು ತುಟಿಗೆ ತಾಗಿದಾಗ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ
2/4
ಸುಖಾಸನದಲ್ಲಿ ಕುಳಿತು ಊಟ ಮಾಡುವುದು :
• ಹೃದಯ ಪಂಪ್ ಮಾಡುವಾಗ ದೇಹದಲ್ಲಿ ರಕ್ತ ಪರಿಚಲನೆ ಸುಗವಾಗುತ್ತದೆ
• ಹೊಟ್ಟೆಯ ಸುತ್ತಲಿನ ಸ್ನಾಯುಗಳು ಸರಿಯಾದ ರೀತಿಯಲ್ಲಿ ಸಕ್ರಿಯಗೊಳುತ್ತವೆ & ಊಟದತ್ತ ಸ್ಥಿರ ಪ್ರಜ್ಞೆ ವಹಿಸಬಹುದು
• ಕುಳಿತು ಕುಟುಂಬದೊಂದಿಗೆ ಕೂಡಿ ಊಟ ಮಾಡುವುದರಿಂದ ಸಂತೋಷ ಹೆಚ್ಚು, ಊಟ ತೃಪ್ತಿಕರವಾಗಿರುತ್ತದೆ