• ಕೈಯಲ್ಲಿ ಸೇವಿಸುವುದರಿಂದ ಬೇರೆಡೆ ಆಲೋಚನೆ ಹೋಗದೆ ರುಚಿಯನ್ನ ಚೆನ್ನಾಗಿ ಸವಿಯಬಹುದು
• ಬೆರಳುಗಳಿಂದ ಆಹಾರ ಕಲೆಸಿಕೊಂಡು, ತುತ್ತು ಮಾಡಿ ಸೇವಿಸುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ, ಬೆರಳು ತುಟಿಗೆ ತಾಗಿದಾಗ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ
2/4
ಸುಖಾಸನದಲ್ಲಿ ಕುಳಿತು ಊಟ ಮಾಡುವುದು :
• ಹೃದಯ ಪಂಪ್ ಮಾಡುವಾಗ ದೇಹದಲ್ಲಿ ರಕ್ತ ಪರಿಚಲನೆ ಸುಗವಾಗುತ್ತದೆ
• ಹೊಟ್ಟೆಯ ಸುತ್ತಲಿನ ಸ್ನಾಯುಗಳು ಸರಿಯಾದ ರೀತಿಯಲ್ಲಿ ಸಕ್ರಿಯಗೊಳುತ್ತವೆ & ಊಟದತ್ತ ಸ್ಥಿರ ಪ್ರಜ್ಞೆ ವಹಿಸಬಹುದು
• ಕುಳಿತು ಕುಟುಂಬದೊಂದಿಗೆ ಕೂಡಿ ಊಟ ಮಾಡುವುದರಿಂದ ಸಂತೋಷ ಹೆಚ್ಚು, ಊಟ ತೃಪ್ತಿಕರವಾಗಿರುತ್ತದೆ
3/4
ಪುರಾಣಗಳ ಪ್ರಕಾರ ಪ್ರತಿ ಕೈ ಬೆರಳು ಒಂದೊಂದು ತತ್ವ ಹೊಂದಿವೆ
• ಹೆಬ್ಬೆರಳು: ಅಗ್ನಿತತ್ವ
• ತೋರು ಬೆರಳು: ವಾಯುತತ್ವ
• ಮಧ್ಯ ಬೆರಳು: ಆಕಾಶ
• ಉಂಗುರ ಬೆರಳು: ಭೂಮಿ
• ಕಿರುಬೆರಳು: ಜಲತತ್ವ
ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ
ಅಶ್ವತ್ಥ ವೃಕ್ಷ (ಅರಳಿ) ಶ್ರೇಷ್ಠ ಎಂದು ಹೇಳುವ ಭಗವದ್ಗೀತೆಯ ಶ್ಲೋಕದಂತೆ ಆಲ ಹಾಗೂ ಅರಳಿ ಮರಗಳ ಗುಂಪಿಗೆ ಸೇರುವ ( Ficus species) ಮರಗಳನ್ನು Key stone ಪ್ರಭೇದದ ಮರಗಳೆಂದು ವೈಜ್ಞಾನಿಕ
ಹಿನ್ನಲೆಯಲ್ಲೂ ಸಹ ಗುರುತಿಸಲಾಗಿದೆ. ಅದಕ್ಕೆ ಕಾರಣ ಈ ಜಾತಿಯ ಮರಗಳು ವಿವಿಧ ಕಾಲಮಾನದಲ್ಲಿ (ನಿರ್ಧಿಷ್ಟ ಋತುಮಾನದಲ್ಲಿ ಮಾತ್ರವಲ್ಲ) ಯಥೇಚ್ಛವಾಗಿ ಹಣ್ಣುಗಳನ್ನು ಬಿಡುವುದರಿಂದ ಆ ಹಣ್ಣುಗಳು ಕೋತಿ, ಅಳಿಲು, ಬಾವುಲಿಯಂತ ಸಸ್ತನಿಗಳಿಗೂ, ವಿವಿಧ ಜಾತಿಯ ಅಸಂಖ್ಯಾತ ಪಕ್ಷಿಗಳಿಗೂ ಹೊಟ್ಟೆತುಂಬಾ ಆಹಾರ ಒದಗಿಸುತ್ತವೆ. ಜೊತೆಗೆ ಆಶ್ರಯವನ್ನೂ ಕೂಡ
ಕೊಡುತ್ತವೆ, ಈ ಸತ್ಯವನ್ನು ತಿಳಿದೆ ಏನೋ ಹಿಂದೆ ರಾಜ ಮಹಾರಾಜರುಗಳು ಸಾಲುಮರಗಳನ್ನು ಬೆಳೆಸುವಾಗ ಬಹುತೇಕ ವಿವಿಧ ಆಲದ ಜಾತಿಯ ಮರಗಳನ್ನು (ಆಲ, ಅರಳಿ, ಗೋಣಿ, ಬಸರಿ, ಬಿಳಿಬಸರಿ ಇತ್ಯಾದಿ) ಬೆಳಸುತ್ತಿದ್ದರು. ಹೀಗಾಗಿ ಈ ಹಿಂದೆ ಕಾಡುಪ್ರಾಣಿಗಳು ಯಥೇಚ್ಛವಾಗಿದ್ದರೂ,ಕೃಷಿ ಜಮೀನು ಕಡಿಮೆ ಇದ್ದರೂ ಕೋತಿಗಳ ಕಾಟ ಎಲ್ಲೂ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ