ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.
ಕೇವಲ ಮರ ಬೆಳೆಸಿದರೆ ಸಾಕಾಗಲ್ಲಾ! ಅದೆಷ್ಟೋ ವರುಷಗಳಿಂದ ಬೆಳೆದ ಈ ಸಂಕೀರ್ಣ ಕಾಡುಗಳನ್ನು ಕಾಪಾಡೋದು ಅತ್ಯವಶ್ಯಕ. ನಾವು ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಕಾಡು ಕಳೆದುಕೊಂಡಿದು ಆಯ್ತು, ಸಕಾಲಕ್ಕೆ ಮಳೆ ಬಾರದೇ ಅಕಾಲಿಕ ಮಳೆಗೆ ಜನ ಪರದಾಡಿದು ಆಯ್ತು ಆದ್ರೂ ನಮಗೆ ಬುದ್ಧಿ ಬಂದಿಲ್ಲಾ!!
ಯಾಕಂದ್ರೆ ನಮಗೆ ಅದ ಬೇಡ, ವಿದ್ಯಾವಂತರಾದರು ಕಾಡು ,
ಪರಿಸರದ ಬಗ್ಗೆ ಬರಬೇಕಾದ ಕುತೂಹಲಕ್ಕಿಂತ ಆಸೆ ,ಹಣವೇ ಹೆಚ್ಚಾಯಿತೇ ನಮಗೆ?
ರಾಜಕೀಯದವರಿಗೆ ಅಭಿವೃದ್ಧಿ ಮಾಡೋಕೆ ಕಾಡೇ ಯಾಕೆ ಬೇಕು? ಪರಿಸರ ವಾದಿಗಳು ಅದನ್ನು ಪ್ರಶ್ನಿಸಿದರೆ ಎಲ್ಲಾ ಅಭಿವೃದ್ಧಿ ಆಗದೇ ಉಳಿದಿರುವುದೇ ಡೋಂಗಿ ಪರಿಸರವಾದಿಗಳಿಂದ ಎಂಬ ಧೋರಣೆ ಬೇರೆ.
ಹಾಗಾದರೆ ಪರಿಸರ ಎಲ್ಲರಿಗೂ ಬೇಡವೇ? ಕೇವಲ ಮೋಜು ,ಮಸ್ತಿಗೆ ಮಾತ್ರ ಪರಿಸರ ಸೀಮಿತನಾ??