ನೀವು ಬ್ರಾಹ್ಮಣರು ಆಗಿದ್ದರೆ ಮುಂದೆ ಓದಿರಿ. ನಿಮ್ಮ ಬಗ್ಗೆಯೇ ಹೇಳಿರುವ ಒಂದು ಮಾಲಿಕೆ. ಅನುಭವ ಅಂತ ಬೇಕಾದರೂ ಅನ್ನಿ.
ನೀವು ಬಹಳ ಕಷ್ಟ ಪಟ್ಟು ಓದಿ ಇವಾಗ ಯಾವುದಾದರೂ MNC ಅಲ್ಲಿ ಇದ್ದೀರಾ, ಬೆಂಗಳೂರು ಇಲ್ಲವೇ ಅಮೇರಿಕ, ಯೂರೋಪ್ ದೇಶಗಳಲ್ಲಿ ಸೆಟಲ್ ಆಗಿದ್ದೀರಾ.
ನಿಮ್ಮ ಸ್ಥಿತಿ ಚೆನ್ನಾಗಿ ಇದೆ ಹಾಗೂ ಇದಕ್ಕೆ ನಿಮ್ಮ ಸ್ವಂತ ಶ್ರಮವೇ ಕಾರಣ.
ಪೆಟ್ರೋಮ್ಯಾಕ್ಸ್ ವಿಷಯಕ್ಕೆ ಬರುವ, ಗ್ಯಾಸ್ ಲೈಟಿಂಗ್ ಎಫೆಕ್ಟ್ ಅಂತ ಇದೆ, ಇಲ್ಲಿ ವಿಕ್ಟಿಮ್ ಗೆ ಮೇಲಿಂದ ಮೇಲೆ ಏನನ್ನೋ ಹೇಳಿ ಅದೇ ನಿಜ, ಅದೇ ಬದುಕು, ಅದೇ ಸರ್ವಸ್ವ ಅಂತ ನಂಬಿಸುವುದು.
ಉದಾಹರಣೆಗೆ ಮಹಿಳೆಯರಿಗೆ ತಾಯಿ ಎಂಬ ಸ್ಥಾನವೇ ಅತ್ಯುನ್ನತ, ತಾಯಿಯೇ ದೇವರು ಅಂತ ಹೇಳುತ್ತಾ ಆಕೆಯನ್ನು ಒಂದು ಬಂಧನದಲ್ಲಿ ಕಟ್ಟಿ ಹಾಕುವುದು. ಆಕೆಗೆ ಕೂಡ ಇದೇ ನನ್ನ ದೊಡ್ಡ ಅಚೀವ್ಮೆಂಟ್ ಅಥವಾ ಇದರಿಂದನೇ ನನ್ನ ಗೌರವ ಹೆಚ್ಚು ಅನ್ನುವ ನಂಬಿಕೆ ಮನಸ್ಸಿನಲ್ಲಿ ಉರುತ್ತದೆ, ಅದನ್ನೇ ಮುಂದೆ ಆಕೆ ತನ್ನ ಮಗಳಿಗೆ/ಸೊಸೆಗೆ ಹೇಳುತ್ತಾಳೆ.
ಎಷ್ಟೇ ಕಷ್ಟ ಆದರೂ ತೋರಗೊಡದೆ ಮಕ್ಕಳ ಚಾಕರಿ ಮಾಡುತ್ತಾಳೆ, ಜೊತೆಗೆ ಗಂಡನದ್ದು ಸಹ.
ಇಲ್ಲಿ ಕೂಡ ಬ್ರಾಹ್ಮಣರ ಗ್ಯಾಸ್ ಲೈಟಿಂಗ್ ಆಗಿದೆ. ಒಂದು ವರ್ಗ ತಲೆತಲಾಂತರಗಳಿಂದ ಬ್ರಾಹ್ಮಣರ ಗ್ಯಾಸ್ ಲೈಟಿಂಗ್ ಮಾಡುತ್ತ ಬಂದಿದೆ.
ನಿಮಗೆ ಆದ ಗ್ಯಾಸ್ ಲೈಟಿಂಗ್ ಈ ತರಹ ಇರಬಹುದು
“ಅಯ್ಯೋ ನೀವು ಬ್ರಾಹ್ಮಣರು, ಒಳ್ಳೆ ತಲೆ ಇದೆ, ವಿದ್ಯೆ ಚೆನ್ನಾಗಿ ಹತ್ತುತ್ತದೆ, ನಿಮಗೆ ಸರಸ್ವತಿಯ ಆಶೀರ್ವಾದ ಇದೆ”
“ಸರಸ್ವತಿ ಮುಂದೆ ಲಕ್ಷ್ಮಿ ಏನೂ ಅಲ್ಲ”
“ವಿದ್ಯೆ ವಿನಯವನ್ನು ಕೊಡುತ್ತದೆ, ವಿನಯ ಗೌರವವನ್ನು ಹಾಗು ಬ್ರಾಹ್ಮಣರಿಗೆ ಗೌರವವೇ ಆಭೂಷಣ”
“ಬ್ರಾಂಬ್ರು ಅಂದ್ರೆ ಚೆನ್ನಾಗಿ ಓದಿ ಇಂಜಿನಿಯರ್ರೋ ಡಾಕ್ಟ್ರೋ ಆಗ್ತಾರೆ, ಇನ್ಫೋಸಿಸ್ ವಿಪ್ರೊ ಇಲ್ಲ ಮೈಕ್ರೋಸಾಫ್ಟ್ ಅಲ್ಲಿ ಕೆಲಸ ಸಿಗುತ್ತೆ .. “
ಈಗ ಸ್ವಲ್ಪ ತಿರುಗಿ ನೋಡಿ, ನಿಮಗೆ ಈ ತರಹ ಹೇಳಿದ ಮಂದಿ ನಿಮ್ಮ ಊರು/ಹಳ್ಳಿ ಬಿಟ್ಟು ಹೋಗಿಲ್ಲ, ಅವರು ಅಲ್ಲೇ ಇದ್ದು ಜೀವನ ಮಾಡಿದ್ದಾರೆ, ಹೆಚ್ಚು ಹೆಚ್ಚು ಅಸ್ತಿ ಮಾಡಿದ್ದಾರೆ.
ಬಹಳಷ್ಟು ಮಂದಿ ದೊಡ್ಡ ಬಿಸ್ನೆಸ್ ಮನ್ ಆಗಿದ್ದಾರೆ. ರಾಜಕೀಯ ನಾಯಕರು ಆಗಿದ್ದಾರೆ. ಎಷ್ಟೋ ಕಡೆ ನಿಮ್ಮ ಜಮೀನನ್ನು ಅವರೇ ಮೂರ್ಕಾಸಿಗೆ ತಗೊಂಡು ಇವತ್ತು ಕೋಟಿ ಕೋಟಿಗೆ ಬಾಳುತ್ತಾ ಇದ್ದಾರೆ. ಐಷಾರಾಮಿ ಬಂಗಲೆ, ಕಾರು, ಅಧಿಕಾರ ಎಲ್ಲ ಇದೆ.
ನೀವು ಮಾತ್ರ ಇನ್ನು ೯-೬ ಕೆಲಸ!
ನಿಮ್ಮ ಮ್ಯಾನೇಜರ್ ಬ್ರಾಹ್ಮಣ ಇರಬಹುದು ಆದರೆ ನಿಮ್ಮ ಕಂಪನಿಯ ಮಾಲೀಕ ಅಲ್
ಅವನೂ ಕೂಡ ನಿಮಗೇ ಗ್ಯಾಸ್ ಲೈಟಿಂಗ್ ಮಾಡಿದ ವರ್ಗದವನೇ ಆಗಿದ್ದರೆ ಅಚ್ಚರಿ ಇಲ್ಲ.
ಇನ್ನು ಆಹಾರದ ವಿಷಯಕ್ಕೆ ಬಂದ್ರೆ
“ಅಯ್ಯೋ ಬ್ರಾಹ್ಮಣರು ಶ್ರೇಷ್ಠ, ದೇವರ ಸ್ವರೂಪ ..”ಅಂತ ಅತ್ತ ಹತ್ತಿಸಿ “ಬ್ರಾಂಬ್ರು ಮಾಂಸ ತಿನ್ನೋಲ್ಲ” ಅಂತ ಇನ್ನೊಂದು ಗ್ಯಾಸ್ ಲೈಟ್. ಪ್ರೊಟೀನ್ ಅನ್ನು ಬ್ರಾಮ್ಬ್ರಿಂದ ದೂರ ಇಡುತ್ತೆ ಈ ವರ್ಗ.
ಅಣಬೆ ಕೂಡ ಬ್ರಾಂಬ್ರು ತಿನ್ನೋಲ್ಲ ಅನ್ನುವ ಮಟ್ಟಿಗೆ.
ಹೀಗಾಗಿ ದೈಹಿಕವಾಗಿ ನೀವು ದುರ್ಬಲರಾಗಿದ್ದಲ್ಲಿ ಆಶ್ಚರ್ಯ ಇಲ್ಲ.
ಹೊಡೆದಾಟ, ಬಡಿದಾಟ, ಗಲಾಟೆ, ಅನ್ಯಾಯಕ್ಕೆ ಧ್ವನಿ ಎತ್ತುವುದು ಇವೆಲ್ಲ ಗುಣಗಳು ಕೂಡ ನಿಮ್ಮ ಹತ್ತಿರ ಬೆಳೆಯಲು ಬಿಡಲಿಲ್ಲ.
ಕಾರಣ “ಬ್ರಾಂಬ್ರು ತುಂಬಾ ಒಳ್ಳೆಯವರು, ಅವರು ಈ ಎಲ್ಲ ಶೂದ್ರ ಬುದ್ಧಿ ಮಾಡಬಾರದು “ ಅನ್ನುವ ಗ್ಯಾಸ್ ಲೈಟ್.
ಈಗ ಕೂಡ ನೀವು ನಿಮ್ಮನ್ನು ಡಿಫೆಂಡ್ ಮಾಡುತ್ತೀರಿ. ಇಲ್ಲ ಇಂತಹದ್ದು ಏನೂ ಇಲ್ಲ, ನಮ್ಮನ್ನು ಯಾರೂ ಬ್ರೈನ್ ವಾಶ್ ಮಾಡಿಲ್ಲ. ನಾವೇ ಬೇಕು ಅಂತ ಅಧಿಕಾರ ಹಣದ ಹಿಂದೆ ಹೋಗಿಲ್ಲ, ನಮಗೆ ಅದು ಇಷ್ಟ ಇಲ್ಲ ಕೂಡ.
ನಾವು ಚಂದ್ರಗುಪ್ತನನ್ನು ಸಿಂಹಾಸನದ ಮೇಲೆ ಕೂರಿಸಿದ ಚಾಣಕ್ಯ ವಂಶದವರು, ನಮಗೆ ಸಿಂಹಾಸನ ಬೇಡ. ನಾವು ದೇವಗುರು ಬೃಹಸ್ಪತಿ ತರಹ, ನಮಗೆ ಇಂದ್ರ ಪದವಿ ಮೇಲೆ ಇಚ್ಛೆ ಇಲ್ಲ ಅಂತ.
ಇದಕ್ಕೆ ಭಟ್ರೇ ಗ್ಯಾಸ್ ಲೈಟ್ ಎಫೆಕ್ಟ್ ಅನ್ನುವುದು. ನಿಮಗೆ ಯಾವುತ್ತೂ ನೀವೇ ವಿಕ್ಟಿಮ್ ಅಂತ ಅರ್ಥ ಆಗುವುದಿಲ್ಲ.
ಅದೇ ತಾಯಿಯ ತರಹ, ಆಕೆ ಯಾವತ್ತೂ ತನ್ನ ತಾಯಿ ಸ್ಥಾನ ಅನ್ನುವುದು ತನ್ನನ್ನು ಶೋಷಿಸಲು ಹಾಗು ಇನ್ನೊಬ್ಬರು ಆರಾಮಾಗಿ ಇರಲು ಮಾಡಿದ ಒಂದು ಮಾಸ್ಟರ್ ಪ್ಲಾನ್ ಅಂತ ಅನ್ನಿಸುವುದೇ ಇಲ್ಲ
ಎಷ್ಟೇ ಕರೆದರೂ ಮನೆಒಳಗೆ ಬರದ ದಲಿತನೂ ಕೂಡ ಇದೇ ಕೇಸ್. ಅವನ ಮನಸ್ಸಿನಲ್ಲಿ ಕೂಡ “ನಾನು ಹೀಗೆಯೇ ಇದ್ದರೆ ಗೌರವ” ಅನ್ನುವ ಭಾವನೆಯನ್ನು ನೆಟ್ಟಿದೆ ಈ ಗ್ಯಾಸ್ ಲೈಟ್
ಹಾಗಾದ್ರೆ ಯಾರು ನಿಮ್ಮನ್ನು ಗ್ಯಾಸ್ ಲೈಟ್ ಮಾಡಿದ ವರ್ಗ?
ಇವರು ಕರ್ನಾಟಕದಲ್ಲಿ ಒಕ್ಕಲಿಗರು ಇರಬಹುದು, ಆಂದ್ರದಲ್ಲಿ ರೆಡ್ಡಿ ನಾಯ್ಡು, ಗುಜರಾತ್ ಅಲ್ಲಿ ಪಟೇಲ್, ಉತ್ತರ ಪ್ರದೇಶ ಬಿಹಾರದಲ್ಲಿ ಥಾಕುರ್, ಯಾದವ್, ಇನ್ನೊಂದು ಕಡೆ ಬನಿಯ, ಫ಼ಾರ್ಸಿ … ಹೀಗೆ
ಸಂಪತ್ತು ಅಧಿಕಾರ ಇವರ ಹತ್ತಿರ ಇರುತ್ತೆ. ನಿಮಗೆ ಮಾತ್ರ ಪ್ರಯೋಜನಕ್ಕೆ ಬಾರದ “ಗೌರವ”
• • •
Missing some Tweet in this thread? You can try to
force a refresh
1/nಅಯೋದ್ಯೆ ಮಂದಿರದ ವಿಷಯದಲ್ಲಿ ಹಿಂದೂ ಮುಸಲ್ಮಾನರು ಕಚ್ಚಾಡಿದ್ದು ಗೊತ್ತಿರಬಹುದು. ಈ ಜಗಳ ಅದೊಂದೇ ವಿಷಯಕ್ಕೆ ಮಾತ್ರ ಸೀಮಿತ ಅಲ್ಲ, ಶತಮಾನಗಳಿಂದ ಇವರಿಬ್ಬರು ಕಚ್ಚಾಡುತ್ತಾ ಇದ್ದಾರೆ. ಹಾಗೆಯೆ ದೂರದ ಏರುಸೆಲಂ ಅಲ್ಲಿ ಕ್ರಿಶ್ಚಿಯನ್ ರು, ಮುಸಲ್ಮಾನರು ಮತ್ತು ಯಹೂದಿಗಳು ಕಚ್ಚಾಡುತ್ತಾ ಇದ್ದಾರೆ.
2/nಇವರೆಲ್ಲರಲ್ಲೂ “ತಾನೇ ಶ್ರೇಷ್ಠ, ನಮ್ಮ ದೇವರೇ ಎಲ್ಲರಿಗಿಂತ ಮೇಲು” ಅನ್ನುವ ಭಾವನೆ ಆಳವಾಗಿ ಬೇರೂರಿದೆ.
ಇವರೆಲ್ಲರಲ್ಲೂ ಇರುವ ಒಂದು ಸಾಮಾನ್ಯ ಅಂಶ ಅಂದ್ರೆ ಈ ನಾಲ್ವರೂ (ಸನಾತನಿ, ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ) ಸೃಷ್ಟಿಕರ್ತ ಅನ್ನುವ ಅಂಶದಲ್ಲಿ ನಂಬಿಕೆ ಇಟ್ಟಿದ್ದಾರೆ.
3/nಅಂದ್ರೆ ಇವರ ಪ್ರಕಾರ ಸಮಸ್ತ ವಿಶ್ವಕ್ಕೆ, ಅಲ್ಲಿರುವ ಜೀವಿಗಳಿಗೆ, ಗುಡ್ಡ ಬೆಟ್ಟ ನದಿ ಸಾಗರಗಳು “ಸೃಷ್ಟಿ” ಇಂದ ಆದವುಗಳು. ಒಬ್ಬ ಸರ್ವಶಕ್ತ ದೇವರು ಇದನ್ನೆಲ್ಲಾ ಮಾಡಿದ್ದು. ಮಾನವನು ಸಹ ಸೃಷ್ಟಿಯೇ. ಇವರೆಲ್ಲರ ಪ್ರಕಾರ ನಮಗೆ ಒಬ್ಬ ಮೂಲ ಪುರುಷ ಇದ್ದಾನೆ. ಅದು ಆಡಂ ಅಂತ ಒಬ್ಬರು ಅಂದರೆ ಮನು ಅಂತ ಇನ್ನೊಬ್ಬರು ಅಂತಾರೆ.