1/nಅಯೋದ್ಯೆ ಮಂದಿರದ ವಿಷಯದಲ್ಲಿ ಹಿಂದೂ ಮುಸಲ್ಮಾನರು ಕಚ್ಚಾಡಿದ್ದು ಗೊತ್ತಿರಬಹುದು. ಈ ಜಗಳ ಅದೊಂದೇ ವಿಷಯಕ್ಕೆ ಮಾತ್ರ ಸೀಮಿತ ಅಲ್ಲ, ಶತಮಾನಗಳಿಂದ ಇವರಿಬ್ಬರು ಕಚ್ಚಾಡುತ್ತಾ ಇದ್ದಾರೆ. ಹಾಗೆಯೆ ದೂರದ ಏರುಸೆಲಂ ಅಲ್ಲಿ ಕ್ರಿಶ್ಚಿಯನ್ ರು, ಮುಸಲ್ಮಾನರು ಮತ್ತು ಯಹೂದಿಗಳು ಕಚ್ಚಾಡುತ್ತಾ ಇದ್ದಾರೆ.
2/nಇವರೆಲ್ಲರಲ್ಲೂ “ತಾನೇ ಶ್ರೇಷ್ಠ, ನಮ್ಮ ದೇವರೇ ಎಲ್ಲರಿಗಿಂತ ಮೇಲು” ಅನ್ನುವ ಭಾವನೆ ಆಳವಾಗಿ ಬೇರೂರಿದೆ.
ಇವರೆಲ್ಲರಲ್ಲೂ ಇರುವ ಒಂದು ಸಾಮಾನ್ಯ ಅಂಶ ಅಂದ್ರೆ ಈ ನಾಲ್ವರೂ (ಸನಾತನಿ, ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ) ಸೃಷ್ಟಿಕರ್ತ ಅನ್ನುವ ಅಂಶದಲ್ಲಿ ನಂಬಿಕೆ ಇಟ್ಟಿದ್ದಾರೆ.
3/nಅಂದ್ರೆ ಇವರ ಪ್ರಕಾರ ಸಮಸ್ತ ವಿಶ್ವಕ್ಕೆ, ಅಲ್ಲಿರುವ ಜೀವಿಗಳಿಗೆ, ಗುಡ್ಡ ಬೆಟ್ಟ ನದಿ ಸಾಗರಗಳು “ಸೃಷ್ಟಿ” ಇಂದ ಆದವುಗಳು. ಒಬ್ಬ ಸರ್ವಶಕ್ತ ದೇವರು ಇದನ್ನೆಲ್ಲಾ ಮಾಡಿದ್ದು. ಮಾನವನು ಸಹ ಸೃಷ್ಟಿಯೇ. ಇವರೆಲ್ಲರ ಪ್ರಕಾರ ನಮಗೆ ಒಬ್ಬ ಮೂಲ ಪುರುಷ ಇದ್ದಾನೆ. ಅದು ಆಡಂ ಅಂತ ಒಬ್ಬರು ಅಂದರೆ ಮನು ಅಂತ ಇನ್ನೊಬ್ಬರು ಅಂತಾರೆ.
4/nಎಲೋಹಿಮ್ ಅಂತ ಯಹೂದಿಗಳು ಕರೆದರೆ ಅಲ್ಲಾ ಅಂತ ಮುಸ್ಲೀಮರು, ಬ್ರಹ್ಮ ಅಂತ ಸನಾತನಿಗಳು, ದೇವ ಅಂತ ಕ್ರಿಶ್ಚಿಯನ್ ರು ಈ ಸೃಷ್ಟಿಕರ್ತನನ್ನು ಕರೆಯುತ್ತಾರೆ.
ಇಲ್ಲಿ ಇನ್ನೊಂದು ಅಂಶ ಇದೆ. ಈ ನಾಲ್ಕೂ ಮತಗಳು ಹುಟ್ಟಿದ್ದು ಇವತ್ತಿನ ಇರಾನ್ ಸುತ್ತ ಮುತ್ತ. ಸನಾತನಿಗಳು ಸ್ವಲ್ಪ ಮುಂಚೆ ಅಲ್ಲಿಂದ ಕಳಚಿಕೊಳ್ಳುತ್ತಾರೆ ಅಷ್ಟೇ.
5/nಈಗ ಇರುವುದು ಅಚ್ಚರಿ. ಇವನ್ನು ಹೊರತುಪಡಿಸಿ ನಮ್ಮ ಮಣ್ಣಿನಲ್ಲಿ ಇನ್ನು ಕೆಲವು ಮತಗಳು ಇವೆ. ಅವುಗಳಲ್ಲಿ ಇನ್ನೊಂದು ಸಾಮ್ಯತೆ ಇದೆ. ಇವು ಯಾವುವೂ ಸೃಷ್ಟಿಕರ್ತ ಅಥವಾ ಸೃಷ್ಟಿ ಎನ್ನುವ ಅಂಶವನ್ನು ಒಪ್ಪುವುದಿಲ್ಲ. ಜೈನ ಪಂಥ ಇಲ್ಲಿನ ಮೂಲ ನಂಬಿಕೆ, ಇಲ್ಲಿ ಸೃಷ್ಟಿ ಅನ್ನುವ ಅಂಶ ಇಲ್ಲ, ಸೃಷ್ಟಿಕರ್ತ ಅಂತ ಇಲ್ಲವೇ ಇಲ್ಲ.
6/n “ನಾವು ಬಂದಾಗ ಭೂಮಿ, ವಿಶ್ವ, ನೆಲ ಜಲ ..ಎಲ್ಲ ಇತ್ತು” ಅಷ್ಟೇ. ಇನ್ನೊಂದು ಮೂಲ ಪಂಥ ಬೌದ್ಧ ಧರ್ಮ ಕೂಡ ಸೃಷ್ಟಿಕರ್ತ ಅನ್ನುವ ಅಂಶವನ್ನು ತಳ್ಳಿ ಹಾಕುತ್ತದೆ.
ಅಂತೆಯೇ ನೆಲದ ಇನ್ನು ಹಲವು ಮೂಲ ನಂಬಿಕೆಗಳಲ್ಲಿ ಈ ಸೃಷ್ಟಿಯ ಪ್ರಸ್ತಾಪ ಇಲ್ಲ.
ಉದಾಹರಣೆಗೆ ನಮ್ಮ ಮಳೆಕಾಡಿನ ಚೌಡಿ. ಆಕೆ ನಮ್ಮನ್ನು ಸಲಹುತ್ತಾಳೆ,
7/nಆದರೆ ಆಕೆ ಯಾರನ್ನೂ ಸೃಷ್ಟಿ ಮಾಡಿಲ್ಲ. ಎಲ್ಲವೂ ವರ್ತಮಾನ ಕಾಲದಲ್ಲಿ ಇವೆ. ನಮ್ಮ ಜೀವನ ಇರುವುದು ವರ್ತಮಾನದಲ್ಲಿ, ಸರಿ ತಪ್ಪುಗಳು ಸಹ ಇಲ್ಲಿಯೇ, ಇದೇ ಕಾಲಘಟ್ಟದಲ್ಲಿ ಇರುವುದು. ಹಿಂದೆ ಯಾರು ಏನು ಮಾಡಿದರು, ಅದು ಅಗತ್ಯ ಇಲ್ಲ .
8/nಇವೆಲ್ಲದರ ನಡುವೆ ಇನ್ನೊಂದು ದೊಡ್ಡ ವ್ಯತ್ಯಾಸ ಇದೆ. ಅದು ಈ “ಸೃಷ್ಟಿ” ಪಂಥದವರು ಯಾವತ್ತೂ ಸುಮ್ಮನೆ ಕುಳಿತುಕೊಳ್ಳುವ ಮಂದಿ ಅಲ್ಲ, ಅವರಿಗೆ ತಮ್ಮ “ಶ್ರೇಷ್ಠ” ಪಂಥವನ್ನು ಇನ್ನೊಬ್ಬರ ಮೇಲೆ ಹೇರುವ ತೆವಲು ಜಾಸ್ತಿ. ನಮ್ಮವರೇ ಹೆಚ್ಚು ಹೆಚ್ಚು ಆಗಬೇಕು ಎನ್ನುವ ಹುಚ್ಚು ಹಠ. ಅದಕ್ಕಾಗಿ ಯುದ್ಧ ಮಾಡುತ್ತಾರೆ, ರಕ್ತದ ಹೊಳೆ ಹರಿಸುತ್ತಾರೆ.
9/nಆದರೆ ಇನ್ನೊಂದು ಗುಂಪು ಇದೆಯಲ್ಲ, ಅದೇ “ಸೃಷ್ಟಿಯಲ್ಲಿ ನಂಬಿಕೆ ಇಲ್ಲದ ಗುಂಪು” ಅವರು ಮನುಷತ್ವದಲ್ಲಿ ನಂಬಿಕೆ ಇಟ್ಟವರು. ವರ್ತಮಾನದಲ್ಲಿ ಬದುಕುವ ಮಂದಿ. ಅವರಿಗೆ ಈ ಹೇರಿಕೆಯ ತೆವಲು ಇಲ್ಲ.
n/nಇವತ್ತಿಗೂ ನಮ್ಮ ದೇಶದಲ್ಲಿ (ಪ್ರಪಂಚದಲ್ಲಿ ಕೂಡ ) ಅಂಡಲ್ಲಿ ಹುಣ್ಣಾದ ಹುಚ್ಚು ನಾಯಿಗಳಂತೆ ಕಚ್ಚಾಡಿ ನನ್ನದೇ ದೊಡ್ಡದು, ನಾವೇ ಶ್ರೇಷ್ಠ ಅನ್ನುವುದು ಈ ಮೇಲೆ ಹೇಳಿದ “ಸೃಷ್ಟಿ ಪಂಥ” ದವರು ಮಾತ್ರ!
ನಿಮ್ಮದು ಯಾವುದು?
ಮಣ್ಣಿನ ಮೂಲ ನಂಬಿಕೆಯೋ? ಅಥವಾ ದೂರದ ಊರಿನಿಂದ ಬಂದ “ಹೇರಿಕೆಯ ಹಪಾಹಪಿಯೋ”?
• • •
Missing some Tweet in this thread? You can try to
force a refresh
ನೀವು ಬ್ರಾಹ್ಮಣರು ಆಗಿದ್ದರೆ ಮುಂದೆ ಓದಿರಿ. ನಿಮ್ಮ ಬಗ್ಗೆಯೇ ಹೇಳಿರುವ ಒಂದು ಮಾಲಿಕೆ. ಅನುಭವ ಅಂತ ಬೇಕಾದರೂ ಅನ್ನಿ.
ನೀವು ಬಹಳ ಕಷ್ಟ ಪಟ್ಟು ಓದಿ ಇವಾಗ ಯಾವುದಾದರೂ MNC ಅಲ್ಲಿ ಇದ್ದೀರಾ, ಬೆಂಗಳೂರು ಇಲ್ಲವೇ ಅಮೇರಿಕ, ಯೂರೋಪ್ ದೇಶಗಳಲ್ಲಿ ಸೆಟಲ್ ಆಗಿದ್ದೀರಾ.
ನಿಮ್ಮ ಸ್ಥಿತಿ ಚೆನ್ನಾಗಿ ಇದೆ ಹಾಗೂ ಇದಕ್ಕೆ ನಿಮ್ಮ ಸ್ವಂತ ಶ್ರಮವೇ ಕಾರಣ.
ಪೆಟ್ರೋಮ್ಯಾಕ್ಸ್ ವಿಷಯಕ್ಕೆ ಬರುವ, ಗ್ಯಾಸ್ ಲೈಟಿಂಗ್ ಎಫೆಕ್ಟ್ ಅಂತ ಇದೆ, ಇಲ್ಲಿ ವಿಕ್ಟಿಮ್ ಗೆ ಮೇಲಿಂದ ಮೇಲೆ ಏನನ್ನೋ ಹೇಳಿ ಅದೇ ನಿಜ, ಅದೇ ಬದುಕು, ಅದೇ ಸರ್ವಸ್ವ ಅಂತ ನಂಬಿಸುವುದು.
ಉದಾಹರಣೆಗೆ ಮಹಿಳೆಯರಿಗೆ ತಾಯಿ ಎಂಬ ಸ್ಥಾನವೇ ಅತ್ಯುನ್ನತ, ತಾಯಿಯೇ ದೇವರು ಅಂತ ಹೇಳುತ್ತಾ ಆಕೆಯನ್ನು ಒಂದು ಬಂಧನದಲ್ಲಿ ಕಟ್ಟಿ ಹಾಕುವುದು. ಆಕೆಗೆ ಕೂಡ ಇದೇ ನನ್ನ ದೊಡ್ಡ ಅಚೀವ್ಮೆಂಟ್ ಅಥವಾ ಇದರಿಂದನೇ ನನ್ನ ಗೌರವ ಹೆಚ್ಚು ಅನ್ನುವ ನಂಬಿಕೆ ಮನಸ್ಸಿನಲ್ಲಿ ಉರುತ್ತದೆ, ಅದನ್ನೇ ಮುಂದೆ ಆಕೆ ತನ್ನ ಮಗಳಿಗೆ/ಸೊಸೆಗೆ ಹೇಳುತ್ತಾಳೆ.