ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ...
ಕಾರಣ,
ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ ಮನೆಯಲ್ಲಿರಬೇಕು,
2, ಅದನ್ನ ಸಮಾಜದಲ್ಲಿ ಇನ್ನೊಬ್ಬರ ಮೇಲೆ ಹೇರಕೂಡದು ಅಂತ ಹೇಳ್ದವರು. ತೇಜಸ್ವಿ ಯಾವತ್ತೂ ತಮ್ಮ ತಮ್ಮ ಸಮುದಾಯದವರನ್ನೇ ಬೆಳೆಸಿಕೊಂಡು ಬರಲಿಲ್ಲ..
ತೇಜಸ್ವಿ ಯಾವತ್ತೂ ಯಾರೋ ಒಬ್ಬ ಬಂದು ದೇಶವನ್ನ ನಡೆಸ್ತಾನೆ, ಯಾವುದೋ ದೇವರು ಧರೆಗಿಳಿದು ಬರುವ ಅವನಿಲ್ಲದೆ ಈ ದೇಶ ನಡೆಯೋದೆ ಇಲ್ಲ ಅನ್ನೋ ಆಶಾವಾದಿತನದಿಂದ ಬದುಕಿದವರಲ್ಲ....
ಒಮ್ಮೆ
3,ಅಂದಿನ ಪ್ರಧಾನಿ 'ಉದಯರವಿ' ಮನೆಗೆ ಬರ್ತೀನಿ ಅಂದಾಗ ದಯವಿಟ್ಟು ಬರಬೇಡಿ, ತೊಂದ್ರೆ ಆಗುತ್ತೆ ಅಂತ ನೇರವಾಗಿ ಹೇಳ್ದೋರು ತೇಜಸ್ವಿ.
ತೇಜಸ್ವಿ ಯಾವತ್ತೂ ಮಾರ, ಎಂಕ್ಟ, ಕರಿಯಪ್ಪ, ಚೀಂಕ್ರ, ಬಬ್ಬು, ಮೂಡಿಗೆರೆಯ ಬಿರಿಯಾನಿ ಸಾಬು, ಮೆಕ್ಯಾನಿಕ್ ಗಳು, ಟಿವಿ ರಿಪೇರಿ ಅಂಗಡಿಯವರು, ಬೇಕರಿಯವರು, ತಮ್ಮ ಕೂಲಿಯಾಳುಗಳ ಜತೆ ಮುಕ್ತವಾಗಿ ಬೆರೆಯುತ್ತ,
4, ಅವರ ಜಾತಿ ಯಾವುದೆಂದು ಲೆಕ್ಕಿಸದೆ, ಶ್ರೇಷ್ಠತೆಯ ವ್ಯಸನಕ್ಕೆ ಬೀಳದೆ ಬದುಕಿ ಬಂದವರು,......
ತೇಜಸ್ವಿಯನ್ನ ಕಾಡಿನ ಸಂತ, ವಿಸ್ಮಯ ಮಾಯಾವಿ ಅಂತೆಲ್ಲಾ ಹೇಳೋರು, ತೇಜಸ್ವಿಯಲ್ಲಿದ್ದ ಕಾಡಿನ ಕಾಳಜಿ ಇವತ್ತಿನವರಿಗೆ ಯಾಕೆ ಬರುತ್ತಿಲ್ಲ ? ಜಾತ್ಯತೀತ ಪ್ರಜ್ಞೆ ಯಾಕೆ ಬರ್ತಿಲ್ಲ ?
ಕರ್ವಾಲೋ ಜುಗಾರಿ ಕ್ರಾಸ್ ಬಗ್ಗೆ ತುಂಬಾ ಚೆಂದ ಪ್ರಚಾರ
5, ಮಾಡ್ತಾರೆ ನಿಜ. ಮಾಡಲೇಬೇಕಾದ್ದು ಅದು, ಆದ್ರೆ ತೇಜಸ್ವಿಯವರು ಜಾತಿ ಬಿಡಿ ಅಂತ ಹೇಳಿದ್ದನ್ನ ಯಾಕ್ ಪ್ರಚಾರ ಮಾಡೋಲ್ಲ ? ತೇಜಸ್ವಿಯಲ್ಲಿದ್ದ ರಾಜಕೀಯ ಪ್ರಜ್ಞೆ ಬಗ್ಗೆ ಯಾಕೆ ಪ್ರಚಾರ ಮಾಡೋಲ್ಲ ಯಾರೂ ? ತೇಜಸ್ವಿ ಪ್ರಕೃತಿ ಬಗ್ಗೆ ಹೇಳಿದ್ದನ್ನ ಯಾಕ್ ಪ್ರಚಾರ ಮಾಡಲ್ಲ ಜನ ? ತೇಜಸ್ವಿ ಹೇಳಿದ ಮನುಷ್ಯತ್ವದ ಬಗ್ಗೆ ಯಾಕೆ ಪ್ರಚಾರ ಮಾಡೋಲ್ಲ ಜನ ?
6, ಕರ್ವಾಲೋ - ಜುಗಾರಿ ಕ್ರಾಸ್ ನಲ್ಲೇ ತೇಜಸ್ವಿ ಹೇಳಿದ ವಿಷ್ಯಗಳನ್ನ ಪೂರ್ಣವಾಗಿ ಯಾಕೆ ಇವರು ಆಚರಿಸೋಲ್ಲ ?
ತೇಜಸ್ವಿ ಯಾವತ್ತೂ ಮೆರಿಟ್ ಆಧಾರದ ಜೀವನ ಮಾಡಲಿಲ್ಲ. ಅಥವಾ ಒಬ್ಬ ವ್ಯಕ್ತಿ ಇಷ್ಟೇ marks ತೆಗೆದರೆ ಆತ ಬುದ್ಧಿವಂತ ಅನ್ನೋ ದೃಷ್ಟಿಯಲ್ಲಿ ಯಾವತ್ತೂ ನೋಡಲಿಲ್ಲ... 4 ಗೋಡೆಗಳಾಚೆ ಕಲಿಯೋದು ಸಿಕ್ಕಾಪಟ್ಟೆ ಇದೆ ಅಂತ ಹೇಳ್ದೋರು...
7, ಎಷ್ಟು ಕಲಿತರೂ, ಕಲಿಯೋದು ಸಿಕ್ಕಾಪಟ್ಟೆ ಇರುತ್ತೆ ಅಂತ ಹೇಳಿಕೊಟ್ಟವರು.... ತಾವು ಓದಿದ್ದು ಕನ್ನಡ ಎಂ.ಎ ಆದರೂ, ಮೂಡಿಗೆರೆಯಲ್ಲಿ ಬದುಕಿ, ಪರಿಸರದ ರೋಚಕ ಸಂಗತಿಗಳನ್ನ ಜನಸಾಮಾನ್ಯರಿಗೆ ಸರಳವಾಗಿ ಅರ್ಥಾಗುವಂತೆ ಬರೆದವರು...
ಹಕ್ಕಿಪುಕ್ಕ ಅಂತ ಪಕ್ಷಿಗಳ ಲೋಕ, ವಿಸ್ಮಯ, ಫ್ಲೈಯಿಂಗ್ ಸಾಸರ್, ಏರೋಪ್ಲೇನ್ ಚಿಟ್ಟೆ ಮುಂತಾದ ಪುಸ್ತಕಗಳು ಹೇಗೆ
8, ಇಂದಿಗೂ ಓದುಗರಿಗೆ ಮೋಡಿ, ಮಾಹಿತಿ ಎರಡನ್ನೂ ಕೊಡುತ್ತೆ !
ಫೋಟೋಗ್ರಫಿ, ಕಾಡು, ಸುತ್ತಾಟ, ಮೀನಿಗೆ ಗಾಳ, ವಿಜ್ಞಾನಿಗಳು ಹಾಗೂ ಕೃಪಾಕರ ಸೇನಾನಿಯವರ ಒಡನಾಟ, ವೈಚಾರಿಕ ಮಾತು ಚರ್ಚೆ, ತಮ್ಮ ಸ್ಕೂಟರ್ ರಿಪೇರಿ, ಕಂಪ್ಯೂಟರ್ ರಿಪೇರಿ ಯಪ್ಪಾ ಒಂದ ಎರಡ ಎಲ್ಲವೂ ಅವರ ಬದುಕಿನೊಳಗೆ ಭಾಗವಾಗಿ ಹೋಗಿತ್ತು. ನೀವದನ್ನೆಲ್ಲಾ ಮಾಡ್ತೀರಾ ಅಂತ ಕೇಳಿದ್ರೆ,
9, ಬೈತಾ ಇದ್ರು ಸರಿಯಾಗಿ. ಇತ್ತೀಚಿನ DSLR ಅಲ್ಲಿ ಎಲ್ಲರೂ ಫೋಟೋಗ್ರಫರ್ಗಳೇ, (ನನ್ನನೂ ಸೇರಿಯೇ) ಆದ್ರೆ ಅಂದಿನ ಫಿಲ್ಮ್ ರೋಲಿನಲ್ಲಿ ಫೋಟೋಗ್ರಫಿ, ಮತ್ತೆ ನೆಗಟಿವ್ ತೊಳೆದು ಚಿತ್ರ ಮಾಡೋದು,
ಅಬ್ಬಬ್ಬಾ ಒಂದೋ ಎರಡೋ !?????
ಯಾವ ಪ್ರಶಸ್ತಿಗೂ ಆಸೆ ಪಡಲಿಲ್ಲ..... ಯಾವುದೋ ಪ್ರಶಸ್ತಿ ಬರಲೆಂದು ಪುಸ್ತಕವೂ ಬರೆಯಲಿಲ್ಲ... ಪ್ರಶಸ್ತಿ ಬಂದರೂ
10, ಇಸ್ಕೊಳೋಕೆ ಇವ್ರು ಹೋಗ್ಲಿಲ್ಲ.... ಸನ್ಮಾನ ಅಂದ್ರೆ ಮಾರುದೂರ ಹೋಗ್ತಾ ಇದ್ರು.... ಅವ್ರೇ ಹೇಳಿದ್ರು ನಾಚಿಕೆ ಆಗುತ್ತೆ ಮರಯ ಅವೆಲ್ಲಾ ಅಂತ...
ಕನ್ನಡ ಭಾಷೆ ಹೀಗೆ ಬಳಸಬೇಕು, ಗ್ರಾಂಥಿಕವಾಗಿಯೇ ಬಳಸಬೇಕು ಅಂತ ಯಾವತ್ತೂ ಹೇಳ್ದವರಲ್ಲ. ತಮಗಿಷ್ಟ ಬಂದಂಗೆ ಬಳಸ್ತ ಹೋದ್ರು. ಮಂದಣ್ಣ, ಎಂಕ್ಟ ಮಾತಾಡಿದ್ದು ಕನ್ನಡ, ತಾನು ಮಾತಾಡಿದ್ದು ಕನ್ನಡ ಅಂತ
11, ಭಾವಿಸಿದವ್ರು. ಕನ್ನಡ ಲಿಪಿಯನ್ನ ಎಲ್ಲೆಡೆ ಇಂಗ್ಲಿಷ್‌ನಷ್ಟೇ ಸಲೀಸಾಗಿ ಎಲ್ಲ ಮಾಧ್ಯಮಗಳಲ್ಲಿಯೂ ಬಳಸಲು ಟೈಪಿಸಬೇಕೆಂಬ ಕನಸು ಕಂಡವರು. ಪಾಪ ! ಕೊನೆಗೂ ಪೂರ್ಣವಾಗಿ ಅವರ ಕನಸು ನನಸಾಗಲಿಲ್ಲ.
ತೇಜಸ್ವಿ ಜಾತ್ಯತೀತರಿಗೊಂದು ಸಾಂವಿಧಾನಿಕ ಸ್ಥಾನಮಾನ ಕೊಡಿ ಅಂತ ಹೇಳಿದವರು. ನಾಸ್ತಿಕತೆ, ಆಸ್ತಿಕತೆ ಎರಡೂ ಬದುಕಿಗೆ ಬೇಡ, ಎಡಪಂಥವೂ ಬೇಡ,
12, ಬಲಪಂಥವೂ ಬೇಡ ತೆಪ್ಪಗೆ ಮನುಷ್ಯರಂತೆ ಬದುಕಿ ಅಂತ ಹೇಳಿದವರು. ತೇಜಸ್ವಿಯವರ ಕಾಲದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳೇ ಈಗಲೂ ಸಮಸ್ಯೆಗಳಾಗಿ ನಮ್ಮ ಕಣ್ಮುಂದೆ ಇವೆ.
ಇವತ್ ಅವರ ಹುಟ್ದಬ್ಬ, ತೇಜಸ್ವಿ ನಮ್ಮೊಳಗಿರಲಿ. ಪ್ರತಿಯೊಬ್ಬರು ಒಬ್ಬೊಬ್ಬರಾಗಿ ತೇಜಸ್ವಿಯಾಗಿ ಹೊರಬರಲಿ. ತೇಜಸ್ವಿಯವರನ್ನ ಹೊಗಳಿ ಹೊಗಳಿ ನಾವ್ ಕೈ ಕಟ್ಕೊಂಡು ಕೂತರೆ
13, ಅದು ನಾವು ತೇಜಸ್ವಿಯವರಿಗೆ ನಾವು ಮಾಡುವ ಅಪಚಾರ. ಅವರ ಆಶಯಗಳು ಇವತ್ತು ಎಲ್ಲೆಡೆ ಹರಡಬೇಕು. ಅವರ ಒಂದೊಂದು ಪುಸ್ತಕಕ್ಕೂ ಅದರದ್ದೇ ಆದ ಆಳ ಇದೆ. ಪ್ರತಿಯೊಬ್ಬರಲ್ಲೂ ಒಬ್ಬೊಬ್ಬ ತೇಜಸ್ವಿ ಇರ್ತಾರೆ, ಅವರನ್ನ ಹೊರತರಬೇಕು. ಅವರ ಎಷ್ಟೋ ಕನಸುಗಳನ್ನ ನನಸು ಮಾಡುವ ಜವಾಬ್ದಾರಿ ಕನ್ನಡಿಗರ ಮೇಲಿದೆ.
✍️Tushar Rajesh
• • •
Missing some Tweet in this thread? You can try to
force a refresh
ಹಳ್ಳಿ ಮನೆಗೆ ಬಂದವರು ಹಾಲು, ತುಪ್ಪ, ಬೆಲ್ಲ, ಅನ್ನ,ಮೊಸರು,ಮಜ್ಜಿಗೆ,ಉಪ್ಪಿನಕಾಯಿ ಬಗ್ಗೆ ಮೆಚ್ಚಿ ಮಾತಾಡೋದು ಎಲ್ಲರಿಗೂ ಗೊತ್ತಿದೆ.
ನೀವಿನ್ನೂ ಭತ್ತ ಬೇಳಿತೀರಾ?
ಆಕಳು ಸಾಕ್ತೀರ? ಪ್ರಶ್ನೆಯನ್ನು ಕೇಳ್ತಾರೆ.
ಮಾತಿನ ಮಧ್ಯೆ ಎಮ್ಮೆ ಹಾಲು ಚಹಾ ಚೆನ್ನಾಗಿ ಇರ್ತದೆ ಎಂದು ಹೇಳ್ತಾರೆ.
2, ನಿರ್ವಹಣೆ ಕಷ್ಟ , ಕೃಷಿ ನಷ್ಟ ಎಂದು ಗದ್ದೆ, ಕೊಟ್ಟಿಗೆ ನೋಡುವ ರೀತಿಗಳು ಈಗ ಬದಲಾಗಿವೆ. ಆದರೆ ಉಣ್ಣಲು ಒಳ್ಳೆಯದು ಬೇಕೆಂಬ ಹಂಬಲ ಮಾತ್ರ ಹಾಗೇ ಇದೆ😀
'ಮೊದಲು ನನ್ನ ಮನೆಗೆ. ಏನೆಲ್ಲ ಒಳ್ಳೆಯದು ಬೇಕೋ ಅದನ್ನು ನಾನು ಬೇಳಿತಿನಿ....' ಹೆಚ್ಚಿದ್ದರೆ ಮಾರಾಟ ಎಂಬ ನಿಲುವು ಕೆಲ ಕೃಷಿಕರದು. 'ಕೃಷಿಕರಿದ್ದರೆ ಚೆನ್ನ, ದುಡಿಯುವವರಿದ್ದರೆ ಅನ್ನ'
3, ಸತ್ಯ ಮನದಟ್ಟಾಗಿದೆ.
ಒಳ್ಳೆಯ ಚಹಾ ಬೇಕು, ಹಸು ಸಾಕೋದು ಕಷ್ಟ.
ಆರೋಗ್ಯ ದೃಷ್ಟಿಯಿಂದ ಉತ್ತಮ ನಾಟಿ ಅಕ್ಕಿ ಬೇಕು, ಭತ್ತದ ಬೇಸಾಯ ಸಾಧ್ಯವಿಲ್ಲ.... ಎಂಬ ಸಮಸ್ಯೆ.
ಹಾಗಾದರೆ ಒಂದು ಕೆಲಸ ಮಾಡಿ . ಆಗಾಗ ಕೃಷಿ ಪ್ರವಾಸ ಮಾಡಿ, ಕೃಷಿಕರನ್ನು ಮಾತಾಡಿಸಿ ಪರಿಚಯ ಮಾಡಿಕೊಳ್ಳಿ. ನಿಮಗೆ ವಿಶ್ವಾಸ ಮೂಡಿದಾಗ ನೇರ ರೈತರಿಂದ ಖರೀದಿ ಮಾಡಿ.
ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.
ಕೇವಲ ಮರ ಬೆಳೆಸಿದರೆ ಸಾಕಾಗಲ್ಲಾ! ಅದೆಷ್ಟೋ ವರುಷಗಳಿಂದ ಬೆಳೆದ ಈ ಸಂಕೀರ್ಣ ಕಾಡುಗಳನ್ನು ಕಾಪಾಡೋದು ಅತ್ಯವಶ್ಯಕ. ನಾವು ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಕಾಡು ಕಳೆದುಕೊಂಡಿದು ಆಯ್ತು, ಸಕಾಲಕ್ಕೆ ಮಳೆ ಬಾರದೇ ಅಕಾಲಿಕ ಮಳೆಗೆ ಜನ ಪರದಾಡಿದು ಆಯ್ತು ಆದ್ರೂ ನಮಗೆ ಬುದ್ಧಿ ಬಂದಿಲ್ಲಾ!!
ಯಾಕಂದ್ರೆ ನಮಗೆ ಅದ ಬೇಡ, ವಿದ್ಯಾವಂತರಾದರು ಕಾಡು ,