ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ LED ಪರದೆಯ ಮೇಲೆ #JaiBhim ಉಚಿತ ಸಾರ್ವಜನಿಕ ಚಲನಚಿತ್ರ ಪ್ರದರ್ಶನ 🙏
ಶಿರ್ತಾಡಿ, ಮೂಡಬಿದಿರೆ, ದಕ್ಷಿಣ ಕನ್ನಡ.
ನಮ್ಮ ಈ ಪ್ರಯತ್ನ ಯಶಸ್ವಿಯಾಗಲಿ ನಿಮ್ಮೆಲ್ಲರ ಆಶೀರ್ವಾದದಿಂದ. #educate_agitate_organise
*ಭಾರತ ದೇಶದೊಳಗೆ ಅದೆಷ್ಟೋ ಯುದ್ಧ ರಾಜ-ರಾಜನ ನಡುವೆ ರಾಜ್ಯ- ರಾಜ್ಯಗಳ ನಡುವೆ ಪ್ರತಿಷ್ಠೆ, ಸ್ವಾರ್ಥಕ್ಕಾಗಿ ಯುದ್ಧಗಳು ನಡೆದಿವೆ ಆದರೆ ಈ ದೇಶದಲ್ಲಿ ಶಿಕ್ಷಣ, ಸಾಮಾಜಿಕ ಸಮಾನತೆ, ಸ್ವಾತಂತ್ರ್ಯಕ್ಕಾಗಿ ನಡೆದ ಮೊಟ್ಟ ಮೊದಲ ದಲಿತ ಸ್ವಾಭಿಮಾನದ ಯುದ್ಧವೇ ಭೀಮಾ ಕೋರೆಂಗಾವ್ 1818 ಜನವರಿ 1.*
*ಭೀಮಾ ಕೋರೆಂಗಾವ್ ಯುದ್ಧದಲ್ಲಿ ಶೋಷಿತ ದಲಿತ
ಸ್ವಾಭಿಮಾನಿಗಳು ಕೈಯಲ್ಲಿ ಖಡ್ಗ ಹಿಡಿದು ಹೋರಾಡಿ ಸ್ವಾಭಿಮಾನದ ವಿಜಯವನ್ನ ಸಾಧಿಸುತ್ತಾರೆ, ಅದೆಷ್ಟೋ ವರ್ಷಗಳ ನಂತರ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಲೆಯಲ್ಲಿ ಜ್ಞಾನ, ಕೈಯಲ್ಲಿ ಪೆನ್ನು ಹಿಡಿದು ಈ ದೇಶದ ಶೋಷಿತ ಸಮಾಜದ ಪರವಾಗಿ ಹೋರಾಟ ಮಾಡಿ ಈ ದೇಶಕ್ಕೆ ಸುಭದ್ರ ಸ್ವಾತಂತ್ರ್ಯ, ಸಮಾನತೆ ಸೋದರತ್ವ, ಜಾತ್ಯತೀತ ಈ ವಿಶ್ವವೇ ಮೆಚ್ಚುವ ಅತೀ
ದೊಡ್ಡ ಲಿಖಿತ ಸಂವಿಧಾನ ಕೊಟ್ಟಂತಹ ಮಹಾನ್ ಚೇತನ ಅದು ಡಾ||ಬಿ.ಆರ್ ಅಂಬೇಡ್ಕರ್.*
*ಜೈ ಭೀಮ್ ಚಲನಚಿತ್ರ ಕೂಡ ಹಾಗೆಯೇ ಒಂದು ನೈಜ್ಯ ಕಥೆ ಆಧಾರಿತ ಚಲನಚಿತ್ರ ಇದು, ಸ್ವಾತಂತ್ರ್ಯ ಭಾರತದ ನಂತರದ ದಿನಗಳಲ್ಲಿ ವಕೀಲ ವೃತ್ತಿಯಲ್ಲಿದ್ದ ಒಬ್ಬ ವ್ಯಕ್ತಿಯ ಶೋಷಿತ ಸಮಾಜದ ಪರ ಹೋರಾಟದ ನೈಜ್ಯ ಕಥೆಯೇ ಜೈ ಭೀಮ್, JAI BHIM ಸಿನಿಮಾ, ಭಾರತ ಸಿನಿಮಾ
ರಂಗದಲ್ಲಿ ದಾಖಲೆ ನಿರ್ಮಿಸಿದ ಚಲನಚಿತ್ರ ಕೂಡ ಹೌದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಅದ್ಬುತ ಸದ್ದು ಮಾಡಿದ ಸಾಮಾಜಿಕ ಹೋರಾಟ ಮತ್ತು ಈ ದೇಶದ ಕಾನೂನಿನ ಮಹತ್ವ ಸಾರುವ ಅದ್ಬುತ ಸಿನಿಮಾ ಜೈ ಭೀಮ್. 2022 ಭೀಮಾ ಕೋರೆಂಗಾವ್ ವಿಜಯೋತ್ಸವದ ಪ್ರಯುಕ್ತ ಜನವರಿ 1 ಶನಿವಾರ ಸಂಜೆ 7:00 ಕ್ಕೆ ಸರಿಯಾಗಿ ಶಿರ್ತಾಡಿ ಬಸ್ ನಿಲ್ದಾಣದಲ್ಲಿ .
ಏಕಲಿಪಿ, ಏಕಭಾಷೆ ಮತ್ತು ಏಕಮತ ಇವು ಯಾವುವೂ ಭಾವೈಕ್ಯವನ್ನು ಸಾಧಿಸಲಾರದೆ ಸೋತಿರುವುದಕ್ಕೆ ಇತಿಹಾಸದ ಉದ್ದಕ್ಕೂ ಸಾಕ್ಷ್ಯಗಳು ಚೆಲ್ಲಿಬಿದ್ದಿವೆಯಲ್ಲಾ!?
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ,
ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ.
– ಕುವೆಂಪು, ಮನುಜ ಮತ ವಿಶ್ವ ಪಥ, ಪುಟ ೧
ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ
ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯