ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಹೀಗೆ ಸಮಾಜದಲ್ಲಿನ ಸಮಸ್ಯೆಗಳನ್ನು ತಮ್ಮ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದ ಕನ್ನಡ ಹೆಸರಾಂತ ಲೇಖಕಿ ಎಂ.ಕೆ. ಇಂದಿರಾ ಅವರ ಜನ್ಮದಿನವಿಂದು.
ಎಂ.ಕೆ.ಇಂದಿರಾ 1917 ರಲ್ಲಿ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದರು. ಕೇವಲ ಎರಡನೇ
ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ 12ನೇ ವಯಸ್ಸಿನಲ್ಲಿ ಅವರು ಮದುವೆಯಾದರು. ತದಂತರ ಇಂದಿರಾರವರು ತುಂಗಭದ್ರ ಇವರ ಮೊದಲ ಕೃತಿಯನ್ನು ರಚಿಸಿದರು. ಇದಾದನಂತರ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಸದಾನಂದ, ಫಣಿಯಮ್ಮ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಲ್ಲದೆ ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ
ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎಂದು ಹೇಳಿದ್ದರು. ಎಂ.ಕೆ ಇಂದಿರಾ ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ.
ಇಂದಿರಾ ಅವರ ಮೊಮ್ಮಗಳಾದ ವಾಸಂತಿ ಅವರು ಒಂದು
ಸಂದರ್ಶನದಲ್ಲಿ ಹೇಳಿದ್ದರು , ಬೆಳಿಗ್ಗೆ ಬೇಗ ಎದ್ದು ಪೂಜೆ, ತಿಂಡಿ ಮುಗಿಸಿ ಹೆಗಲ ಮೇಲೆ ಒಂದು ಜೋಳಿಗೆ ಏರಿಸಿಕೊಂಡು ಅವರು ಹೊರಡುತ್ತಿದ್ದರು. ಅವರ ಜೋಳಿಗೆಯಲ್ಲಿ ಇರುತ್ತಿದ್ದಿದ್ದು ಅವರ ಸಾಹಿತ್ಯ ಸರಕುಗಳಾದ ಪೆನ್, ಬಿಳಿ ಹಾಳೆ, ರಟ್ಟು ಮತ್ತು ಒಂದು ಫ್ಲಾಸ್ಕ್ ನಲ್ಲಿ ಸೊಸೆ ಮಾಡಿ ಕೊಟ್ಟ ಕಾಫಿ. ಲಾಲ್ಬಾಗಿನಲ್ಲಿ ಬಂಡೆಕಲ್ಲಿನ ಮೇಲೆ ಕುಳಿತು
ಗಂಟೆಗಟ್ಟಲೆ ಕಾದಂಬರಿಗಳನ್ನು ಬರೆಯುತ್ತಿದ್ದರು. ಮಧ್ಯಾಹ್ನ ಸುಮಾರು 2 ಘಂಟೆ ಸಮಯಕ್ಕೆ ವಾಪಸ್ ಮನೆಗೆ ಬರುತ್ತಿದ್ದರು. ಇವರು ನನ್ನ ಪ್ರೀತಿಯ 'ಅಮ್ಮ', ವಾವೆಯಲ್ಲಿ ಅವರು ನನಗೆ 'ಅಜ್ಜಿ', ನಾನು ಅವರ ಹಿರಿಯ ಮಗನ ಮಗಳು. ಆದರೂ, ನಾನು ಅವರನ್ನು ಕರೆಯುತ್ತಿದ್ದುದು 'ಅಮ್ಮ' ಎಂದೇ.
ಆ ಸಂದರ್ಶನದ ಆಯ್ದ ಭಾಗ ಇಲ್ಲಿ ಬರೆದಿರುವೆ

ನಾನು ಹುಟ್ಟಿದ
ನಂತರವೇ ಅಮ್ಮ ಬರೆಯಲು ಪ್ರಾರಂಭಿಸಿದ್ದು. ಕುಟುಂಬದಲ್ಲಿ ಆಗ ಅಮ್ಮನಿಗೆ ಬೆನ್ನೆಲುಬಾಗಿ ನಿಂತವರು ನನ್ನ ಅಜ್ಜ, ಅಮ್ಮನ ತಮ್ಮ ಟಿ. ಎಸ್. ರಾಮಚಂದ್ರ ರಾವ್('ಛೂಬಾಣ' ಖ್ಯಾತಿ) ಮತ್ತು ನನ್ನ ತಾಯಿ ಪ್ರಭ. ಅಮ್ಮನ ತಲೆಯಲ್ಲಿ ಕಥಾವಸ್ತುಗಳು ಯಥೇಚ್ಛವಾಗಿದ್ದವು. ಪ್ರಕಾಶಕರಿಗೆ ಕೊಟ್ಟ ಮಾತಿನಂತೆ ಗಡುವು ಮುಗಿಯುವ ಮುನ್ನವೇ ತಮ್ಮ ಕಾದಂಬರಿಗಳನ್ನು
ಬರೆದು ಪೂರೈಸುತ್ತಿದ್ದರು. ಸಮಯದ ಅಭಾವವಿದ್ದರೆ ರಾತ್ರಿಯೆಲ್ಲ್ಲ ನಿದ್ದೆಗೆಟ್ಟು ಬರೆಯುತ್ತಿದ್ದರು. ಅಮ್ಮನಿಗೆ ತೀವ್ರ ಮೊನಚಾದ ಜ್ಞಾಪಕ ಶಕ್ತಿ ಇತ್ತು. ಅಮ್ಮ ಬರೆಯಲು ಕುಳಿತಾಗ ಅಡುಗೆ ಮನೆಯ ಕೆಲಸದ ಮೇಲೂ ನಿಗಾ ಇಡುತ್ತಿದ್ದರು. ಬರೆಯುವುದರ ನಡುನಡುವೆ ಎದ್ದು ಅಡುಗೆಮನೆಗೆ ಹೋಗಿ ಕುಕ್ಕರ್ ಇಳಿಸುವುದು, ಸಾರು ಹುಳಿ ಕುದಿಸುವುದು, ಒಗ್ಗರಣೆ
ಹಾಕುವುದು ಇವನ್ನೆಲ್ಲ ಜೊತೆಗೇ ಮಾಡುತ್ತಿದ್ದರು. ಅಡುಗೆ ಮನೆಯಿಂದ ಹೊರಬಂದು ಮತ್ತೆ ಹಾಗೇ ಲೇಖನಿ ಹಿಡಿದು ಸರಸರ ಬರೆಯುವುದನ್ನು ಮುಂದುವರೆಸುತ್ತಿದ್ದರು. ತಾನು ಎಲ್ಲಿಯವರೆಗೆ ಅಥವಾ ಯಾವ ಸಂಗತಿಯವರೆಗೆ ನಿಲ್ಲಿಸಿದ್ದೆ ಎಂದು ಅಮ್ಮ ಒಮ್ಮೆಯೂ ಹೊರಳಿಸಿ ಓದುತ್ತಿರಲಿಲ್ಲ.
ಅಮ್ಮನಿಗೆ ಅವರ ಒಂದು ಕೊರತೆಯ ಬಗ್ಗೆ ಕೊಂಚ ವ್ಯಸನವಿತ್ತು. ಇಂಗ್ಲೀಶ್
ಮಾತನಾಡಲು ಅಷ್ಟಾಗಿ ಬಾರದಿರುವುದು. ಫಣಿಯಮ್ಮ ಕಾದಂಬರಿ ಇಂಗ್ಲೀಶ್ ಭಾಷೆಗೆ ಅನುವಾದವಾದಾಗ ಅದನ್ನೋದಿದ ಅನೇಕರು ದೂರದ ರಾಜ್ಯಗಳಿಂದ ಅಮ್ಮನಿಗೆ ಇಂಗ್ಲಿಷ್ನಲ್ಲಿ ಅಭಿಮಾನದ ಪತ್ರಗಳನ್ನು ಬರೆಯುತ್ತಿದ್ದರು. ಅಮ್ಮನಿಗೆ ನಾನೇ ಇಂಗ್ಲೀಶ್ ಶಿಕ್ಷ ಕಿ. ಅಮ್ಮ ನನ್ನ ಮುಂದೆ ಕೂತು ನಿಧಾನವಾಗಿ ಪದಗಳನ್ನು ಬಿಡಿಸಿ ಬಿಡಿಸಿ ಓದಿಕೊಂಡು
ಅರ್ಥಮಾಡಿಕೊಳ್ಳುತ್ತಿದ್ದರು. ನಾನು ಇಂಗ್ಲಿಷ್ನಲ್ಲಿ ಹೇಳುತ್ತಿದ್ದ ಟಿಪ್ಪಣಿಗಳನ್ನು ನಿಧಾನವಾಗಿ ಆಲಿಸಿ ಕನ್ನಡದಲ್ಲಿ ಅರ್ಥ ಹೇಳುವ ಪ್ರಯತ್ನ ಮಾಡುತ್ತಿದ್ದರು.
ಕಾಲ ಮಾಗಿದಂತೆ, ಅಮ್ಮನ ಜೀವನದಲ್ಲಿ ಸಾಕಷ್ಟು ಏರಿಳಿತಗಳುಂಟಾದವು. ನನ್ನ ಅಜ್ಜ, ಅಮ್ಮನ ತಮ್ಮ ಟಿ.ಎಸ್.ರಾಮಚಂದ್ರ ರಾವ್, ಕಿರಿಯ ಮಗ ನಾಗೇಂದ್ರ ಇವರೆಲ್ಲರ ಸಾವಿನಿಂದ ಅಮ್ಮನಿಗೆ
ದೊಡ್ಡ ಪೆಟ್ಟೇ ಆಯಿತು. ಅವರ ಮನೋವೇದನೆ ತಡೆದುಕೊಳ್ಳಲು ತಮ್ಮ ಲೇಖನಿಯನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದರು. ಸಾಕಷ್ಟು ಹಣ ಗಳಿಸಿದರೂ ಅಮ್ಮನಿಗೆ ದುರಾಸೆ ಎಂದೂ ಇರಲ್ಲಿಲ್ಲ.
ತನ್ನ ವೃಧ್ಯಾಪ್ಯದಲ್ಲಿ ತಾನು ಯಾವ ರೀತಿಯಲ್ಲೂ ಯಾರಿಗೂ ಹೊರೆಯಾಗಬಾರದೆಂದು ತಮ್ಮ ಪುಸ್ತಕಗಳ ಹಕ್ಕುಗಳನ್ನು ಬಿಟ್ಟಿಕೊಟ್ಟು ಅದರಿಂದ ಬಂದ ಆದಾಯದಲ್ಲಿ ಅಮ್ಮ ತಮ್ಮ ಖರ್ಚು
ವೆಚ್ಚಗಳನ್ನು ನಿಭಾಯಿಸುತ್ತಿದ್ದರು.
ಅಮ್ಮ ತಮ್ಮ ಕೊನೆಯ ದಿನಗಳಲ್ಲೂ ಮನೋ ಸ್ಥೈರ್ಯ ಕಳೆದುಕೊಳ್ಳದೆ ತಮ್ಮ ಮಕ್ಕಳನ್ನೆಲ್ಲ ಕರೆದು ಹೇಳಿದರು- 'ಸಮಾಧಾನವಾಗಿ ಕೇಳಿ, ನನ್ನ ಸಮಯ ಬಂದಿದೆ, ಏನೇ ಕಾಯಿಲೆ ಇದ್ರೂ ಪರ್ವಾಗಿಲ್ಲ, ದಯವಿಟ್ಟು ನನ್ನನ್ನ ಆಸ್ಪತ್ರೆಯಲ್ಲಿ ಅಂಗಾತ್ವಾಗಿ ಮಲಗ್ಸಿ, ಟ್ಯೂಬು, ಸೂಜಿ, ಪ್ಲಾಸ್ಟಿಕ್ ಬ್ಯಾಗ್ ಏನೇನೋ ಚುಚ್ಚಿ ಹಿಂಸೆ
ಮಾಡ್ಬೇಡಿ. ನಾನು ನೆಮ್ಮದಿಯಿಂದ ಹೋಗ್ತೀನಿ.
ಕೊನೆಗೆ ಅಮ್ಮ ತಜ್ಞರನ್ನು ನೇರವಾಗಿ ಕೇಳಿದರು- 'ಡಾಕ್ಟ್ರೇ ನನ್ನ ಬಳಿ ಎಷ್ಟು ಸಮಯವಿದೆ?' ತಜ್ಞರು 'ಸುಮಾರು ಒಂದೂವರೆ ತಿಂಗಳು' ಎಂದರು. ಅಮ್ಮ ನಗುತ್ತಲೇ 'ಸರಿ, ನಾನು ಸುಬ್ಬಣ್ಣನ ಮನೆಗೆ ಹೋಗಿ ಅಲ್ಲಿ ನನ್ನ ಹಿರಿ ಸೊಸೆ ಮಗ್ಗುಲಲ್ಲೇ ಪ್ರಾಣ ಬಿಡ್ತೀನಿ' ಎಂದರು.
ಮನೆಗೆ ಬಂದ ಮೇಲೆ ಒಂದೇ ವಾರ ಅಮ್ಮ
ಇದ್ದದ್ದು. ಕಡೆಯ ಏಳು ದಿನಗಳಲ್ಲಿ ತಮ್ಮ ಜೀವನದ ಅಪೂರ್ವ ಘಟನೆಗಳನ್ನೆಲ್ಲ ಮೆಲುಕು ಹಾಕಿದರು. ತಮ್ಮ ಆತ್ಮೀಯರನ್ನೆಲ್ಲ ಸ್ಮರಿಸಿದರು. ಮಾರ್ಚ್15, 1994 ರಂದು ಮದ್ಯಾಹ್ನ 1 ಘಂಟೆಗೆ ಅಮ್ಮ ಗಂಜಿ ಕುಡಿದು ಮಲಗಿದ್ದರು. ನಿದ್ದೆಯಲ್ಲೇ ಕೊನೆಯುಸಿರೆಳೆದರು. ಅಮ್ಮನ 'ಸಿಂದುವಿನಲ್ಲಿ ಬಿಂದು' ಗ್ರಂಥ ಅರ್ಧದಲ್ಲೇ ನಿಂತಿತ್ತು.

#ವಂದೇಮಾತರಂ

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

5 Jan
ಈ ಹಾಡಿನಲ್ಲಿ ಬರುವ ಪದಗಳು ಇಂದು ಯಾರೂ ಬಳಸುವುದೇ ಇಲ್ಲ.

ಚಿತ್ರ: ರಾಣಿ ಹೊನಮ್ಮ
ರಚನೆ : ಸೀತಾರಾಮ ಶಾಸ್ತ್ರಿ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ ಬಿ ಎಸ್ ಮತ್ತು ಪಿ ಸುಶೀಲಾ

ಹಾ...ರುತ ದೂರ ದೂರ..
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ...
ಸುಂದರ ಸ್ವೈರವಿಹಾ..ರ...

ಹಾ...ರುತ ದೂರ ದೂರ..
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ....ಆಆಆ...
ಸುಂದರ ಸ್ವೈರವಿಹಾ..ರ...

ಏನೀ ಕಲಾ ವಿಲಾಸ...
ಏನೀ...ಮನೋವಿಕಾಸ
ಏನೀ ಕಲಾ ವಿಲಾಸ....
ಏನೀ ಮನೋವಿಕಾಸ.....

ಈ ನವ್ಯ ರಮ್ಯ ಕೋಶ...
ಪೂರ್ಣೇಂದು ಹಾಸ ಭಾಸ
ಓಓ... ಪೂರ್ಣೇಂದು ಹಾಸ ಭಾಸ

ಹಾರುತ ದೂ..ರ ದೂ..ರ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ....
ಸುಂದರ ಸ್ವೈರವಿಹಾ..ರ...

ಹಾರೈಸಿ ತೆರೆದ ಕಣ್ಣ....
ಪೋರೈಪ ನೂರು ಬಣ್ಣ....
ಹಾರೈಸಿ ತೆರೆದ ಕಣ್ಣ..
ಪೋರೈಪ ನೂರು ಬಣ್ಣ...

ಶೃಂಗಾರ ಸಂವಿಧಾನ...
ಸೌಂದರ್ಯ ಸನ್ನಿಧಾನ
ಈ...ಸೌಂದರ್ಯ ಸನ್ನಿಧಾ...ನ

ಹಾರುತ ದೂ..ರ ದೂ..ರ
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ....ರಾ
Read 4 tweets
5 Jan
Born for a ultra rich family at England, he could have lead a luxury life, but #BarinGhose choose to follow his elder brother #MaharshiAurobindo's path.

His story will ruin your mind.

"The Tale of my Exile" is not a diary or a chronologically organised memoir of the 12 years ImageImageImage
that Barin spent in the Cellular jail as a political prisoner. However, his sense of trauma and bewilderment are clearly understood from the very opening lines of the tale that is written in retrospect, recalling in abstract descriptions and comments, the horrendous experience
of living death. So in the first page, Barin Ghosh wrote matter-of-factly about his hazy “memory” — “This faculty seems to have fallen into a moribund condition and can only groan at its best”. Past events can only be recalled as “shadowy and uncanny images, as it were,
Read 16 tweets
4 Jan
#Kesari
#Lokamanya
#BalaGangadharaTilak
Journalism is often termed as the first draft of history. Newspapers record history. Some newspapers also create history for several reasons. Kesari is one of those newspapers which has recorded and created history in almost equal measures ImageImageImageImage
It has been used as the socio political platform of Bal Gangadhar Tilak, one of the most prominent leaders of Indian freedom movement. Kesari was his megaphone for propagating his social and political ideology and countering his opponent’s.
It was in January 1881 that Tilak and
Gopal Ganesh Agarkar along with Mahadeo Ballal Namjoshi, Vaman S. Apte and Ganesh K. Garde, started two newspapers: The Mahratta on Sunday, January 2, 1881 in English and the ‘Kesari’ on January 4, 1881 in Marathi.
They had specific objectives for starting these newspapers,
Read 15 tweets
3 Jan
#PazhassiRaja
How Many Bharatiya’s Are Aware Of The Fact That Arthur Wellesely, Duke of Wellington Adopted Methods Of Guerrilla Warfare Used By Pazhassi Raja To Defeat Napoleon's Armies In Spain?
Whereas Left & Congress Distorians Sang The Bravery and Valour Of Mughals & Muslim
Invaders, Showered Petals On Christians For Bringing Light To Otherwise Dark Bharata Khanda, Here Is An Account From British On A Raja Of A Small Kingdom Of Tiny Kerala.
Born on 03rd January 1753 as #KeralaVarma, he was the de facto head of kingdom of Kottayam, Malabar region
and is popularly known as Kerala Simham on account of his martial exploits.
When Hyder Ali (Tipu Sultan’s Father) occupied Malabar in 1773, the Raja of Kottayam found political asylum in Kallara near Vikom in Kottayam district of Kerala. Pazhassi Raja, the fourth prince in line
Read 24 tweets
3 Jan
Let's remember the saga of
#VeerapandyaKattabomman on his Jayanti.
Our motherland is called “Veer Bhoomi” as so many valiant heroes fought for her and laid down their lives in great honour, while fighting the foreign invaders.
Pandiya naadu in south Tamilnadu stretching from
Madurai to Tirunelveli is quite famous in this regard especially for the Polygar wars and is indeed a “Veeram vilaindha nilam” (a land where courage is cultivated).
Veerapandiya Kattabomman Karuthayya Nayakkar, the 47th ruler from the Kattabomman clan near Tuticorin, was one of
the Polygars (Palayakkarars) – the subordinates of the erstwhile Naicker rulers of Madurai who appointed them as regional chieftains of their different divisions (Palayams) to administer, collect taxes, and also maintain a battalion of troops.
It is said that during a hunting
Read 19 tweets
1 Jan
Whereas that Gandhi who was responsible for partition is world famous, there was another Gandhi who faded into oblivion after bringing Junagadh to Bharath.

#SamaldasGandhi was the son of Laxmidas/Kalidas Karamchand Gandhi, elder brother of MK Gandhi, Samaldas was a close
follower of his uncle, Mohandas.
He was initially part of Gujarati evening news paper Janmabhoomi. Due to some differences he left Janmabhoomi and started new news paper named "Vande Mataram".

When the Nawab of Junagadh acceded his state to Pakistan in 1947, Samaldas headed a
government-in-exile, "Aarzi Hukumat" or "Temporary Government" created by citizens of Junagadh with Rajkot as its capital to reflect the wishes of its majority population who wished the state to become part of India instead.
Samaldas was invited by Nawab’s Dewan Sir Shah Nawaz
Read 6 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(