ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ
ಎಲೆ ಮಾನವಾ

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ..

ಈ ಪದ್ಯವನ್ನು ಯಾರೂ ಮರೆತಿರಲಾರರು. ನಾವು ಹಿರಿಯರನ್ನು ನೆನೆಯುವಾಗ ಅವರು ಉಳಿಸಿಹೋದ ಮುದಭಾವಗಳಿಂದ ನೆನೆಯಬೇಕು. ಮೇಲಿನ ಪದ್ಯ ನೀಡಿದವರು ಎಸ್. ಜಿ. ನರಸಿಂಹಾಚಾರ್ಯರು. ಇಂದು ಅವರ ಪುಣ್ಯಸ್ಮರಣೆ.

ಎಸ್. ಜಿ. ನರಸಿಂಹಾಚಾರ್ ಕನ್ನಡ, ಸಂಸ್ಕೃತ,
ಇಂಗ್ಲಿಷ್, ತಮಿಳು ಭಾಷೆಗಳ ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು. ಹಳಗನ್ನಡದಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು.

ನರಸಿಂಹಾಚಾರ‍್ಯರು 1862ರ ಸೆಪ್ಟೆಂಬರ್ 11ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ದೇವಾಲಯದಲ್ಲಿ ಕೈಂಕರ್ಯದಲ್ಲಿದ್ದ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮನವರು.

ನರಸಿಂಹಾಚಾರ್ಯರ ಪ್ರಾರಂಭಿಕ ಶಿಕ್ಷಣ
ಶ್ರೀರಂಗಪಟ್ಟಣದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯ ನಂತರ ಮೈಸೂರು ಸರಕಾರದ ವಿದ್ಯಾ ಇಲಾಖೆಗೆ ಸೇರಿ ಶ್ರೀರಂಗಪಟ್ಟಣದಲ್ಲಿ ಉಪಾಧ್ಯಾಯರಾಗಿ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ, ಗ್ರಂಥಪಾಲಕರಾಗಿ, ಸರಕಾರದ ಕನ್ನಡ ಭಾಷಾಂತರಕಾರರಾಗಿ ವಿವಿದೆಡೆಯಲ್ಲಿ ಸೇವೆ ಸಲ್ಲಿಸಿದರು. ಕನ್ನಡ ಭಾಷಾಭಿವೃದ್ಧಿ ಸಮಿತಿ,
ಶಾಲಾ ಪಠ್ಯ ನಿಯಾಮಕ ಸಮಿತಿ, ಪರೀಕ್ಷಾ ಮಂಡಲಿಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ಎಸ. ಜಿ. ನರಸಿಂಹಾಚಾರ್ಯರು ಕಾವ್ಯ ಹಾಗೂ ಗದ್ಯಗ್ರಂಥಗಳ ಭಾಷಾಂತರವನ್ನು ಮಾಡಿದ್ದಲ್ಲದೆ ಹಲವಾರು ಸ್ವತಂತ್ರ ಕೃತಿಗಳನ್ನು ರಚಿಸಿದರು. ಅನೇಕ ಹಳಗನ್ನಡ, ನಡುಗನ್ನಡ ಗ್ರಂಥಗಳ ಪ್ರಕಟಣೆ ಮಾಡಿದರು. ಅನೇಕ ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ,
ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರದು. ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ ಮೊದಲಾದ ಪ್ರಮುಖ ಗ್ರಂಥಗಳ ಪ್ರಕಟಣೆ ಮಾಡಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯದ ಪರಿಷ್ಕರಣೆಗಳನ್ನು ಹೊರತಂದರು.

ಇವು ಮೈಸೂರು ವಿಶ್ವವಿದ್ಯಾಲಯದ ಕನ್ನಡ
ಗ್ರಂಥಮಾಲೆಯ ಪ್ರವರ್ತಕ ಗ್ರಂಥಗಳು.

ನರಸಿಂಹಾಚಾರ್ಯರು 1892ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಪ್ರಾರಂಭ ಮಾಡಿದರು. ಪತ್ರಿಕೆ ನಿಂತುಹೋದಾಗ 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ' ಪತ್ರಿಕೆ ಪ್ರಾರಂಭ ಮಾಡಿದರು.

ಬಾಲ ಸಾಹಿತ್ಯಕ್ಕೂ ಎಸ್. ಜಿ. ನರಸಿಂಹಾಚಾರ್ಯರ ಕೊಡುಗೆ ಅಪಾರ. ಮಕ್ಕಳಲ್ಲಿ
ಸಾಹಿತ್ಯಾಭಿರುಚಿ ಬೆಳೆಸಲು ಪಠ್ಯ ಸಮಿತಿಯ ನಿಯಮಾನುಸಾರ ಹಿಂದೂದೇಶದ ನಾಗರಿಕತೆ, ಬಾಲಭೂವಿವರಣೆಯ ಕೃತಿಗಳನ್ನು ಮೂಡಿಸಿದರು. ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, ಇಟ್ಟರೆ ಸಗಣಿಯಾದೆ ಇಂದಿಗೂ ಜನಪ್ರಿಯ ಪದ್ಯಗಳು.

ಎಸ್. ಜಿ. ನರಸಿಂಹಾಚಾರ್ ಅವರು ಮೂಡಿಸಿದ ಕೃತಿಗಳಲ್ಲಿ ದಿಲೀಪ ಚರಿತೆ, ಅಜನೃಪ ಚರಿತೆ,
ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಲ್ಡ್‌ಸ್ಮಿತ್‌ನ ‘ದಿ ಹರ‍್ಮಿಟ್’ 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ
ಮುಂತಾದುವು ಸೇರಿವೆ.

ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಪ್ರಥಮಾಧ್ಯಕ್ಷರಾಗಿದ್ದ ನರಸಿಂಹಾಚಾರ್ಯರು 1907ರ ಡಿಸೆಂಬರ್ 22ರಂದು ಇನ್ನೂ 45ರ ಹರೆಯದಲ್ಲೇ ಅಕಾಲ ಮೃತ್ಯುವಿಗೀಡಾದರು.

#ಕನ್ನಡಹಾಡು
#ಎಮ್ಮೆತಮ್ಮಣ್ಣ

#ಮರೆತಮಾಣಿಕ್ಯಗಳು

#ವಂದೇಮಾತರಂ
ನಿಮ್ಮನ್ನ ಈ ಥ್ರೆಡ್ ಅಲ್ಲಿ ಟ್ಯಾಗ್ ಮಾಡೋದು ಮರೆತೆ 🤦🤦🤦🤦🤦

@nammsiem @KannadaNaduu

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Dec 24
#SwamiShraddhanand – The Sanyasi who was murdered for doing Gharwapsi.

In 1922, Dr Bhim Rao Ambedkar famously called Swami Shraddhanand “the greatest and most sincere champion of the Untouchables”.

In Indian history, this honorific title Great Soul (Mahatma) is bestowed Image
upon Mohandas Karamchand Gandhi as ‘Mahatma’ Gandhi. Most historical texts characterize him as an angelic, saintly statesman who could do no wrong.
But, in reality, there was one Mahatma whose name has all but been erased in Indian history textbooks. He was ‘Mahatma Munshiram’ Image
more famously known as Swami Shraddhanand. For long, the Swami has been portrayed by historians as just a ‘Hindu’ revivalist. But if one goes through the story of his life one will find him to be a living portrait of bravery and sacrifice.
Swami Shraddhanand’s Shuddhi mission
Read 17 tweets
Dec 22
#SrinivasaRamanujan

His Jayanti is celebrated as National Mathematics Day.

His Notebooks are still being analysed more than 100 years after his death. His mentor Prof. G. H. Hardy said: “My personal ratings of contemporary mathematicians on the basis of pure talent,
on a scale from 0 to 100: G. H. Hardy – 25; John Littlewood 30; David Hilbert 80; Srinivasa Ramanujan 100.”

Did you know that math wizard knew how to solve a problem in 100 different ways?

As he worked on his theorems, Ramanujan couldn't use paper as it was quite expensive.
He worked on his derivations on slate, choosing to note down only the important results and summaries in his notebooks. Despite his unemployment and abject poverty, he had filled an entire notebook by the age of 23.

When Hardy invited him for Cambridge, Ramanujan considered
Read 8 tweets
Dec 21
ಚಲನಚಿತ್ರ: ಶುಭಮಂಗಳ
ರಚನೆ: ವಿಜಯನಾರಸಿಂಹ
ಸಂಗೀತ: ವಿಜಯ ಭಾಸ್ಕರ್‌
ಗಾಯನ:ಆರ್.‌ ಎನ್.‌ ಸುದರ್ಶನ್‌‌

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ
ಕಾವೇರಿ ಸೀಮೆಯ ಕನ್ಯೆಯು ನಾನು
ಬೇಲೂರು ಬಾಲೆಯ ಪ್ರತಿನಿಧಿ ನಾನು
ತುಂಗೆಯ, ಭದ್ರೆಯ, ತುಂಗೆಯ ಭದ್ರೆಯ ತೌರಿನ ಹೂ ನಾನು, ತೌರಿನ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಸೂರ್ಯನ ಕಾಂತಿಯ ಸುಂದರಿ ನಾನು
ತಿಂಗಳ ಬೆಳಕಿನ ತಂಗಿಯು ನಾನು
ಪ್ರೇಮದ, ಕಾವ್ಯಕೆ,
ಪ್ರೇಮದ ಕಾವ್ಯಕೆ ಪೂಜೆಯ ಹೂ ನಾನು, ಪೂಜೆಯ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

ಅರಿಶಿನ ಕುಂಕುಮ ಶೋಭಿತೆ ನಾನು
ವಧುವಿನ ಶೃಂಗಾರ ಭೂಷಿತೆ ನಾನು
ಮಂಗಳ, ಸೂತ್ರವ, ಮಂಗಳ ಸೂತ್ರವ ಬೇಡುವ ಹೂ ನಾನು, ಬೇಡುವ ಹೂ ನಾನು

ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ
Read 4 tweets
Dec 20
To @kharge

In May 1921, he was arrested on charges of “sedition” for his “objectionable” speeches..

After a few hearings, he decided to plead his own case and read out a written statement.

After hearing it, Justice Smelly said: “His defense is even more seditious than
his original speech!”

The judge ordered him to give an undertaking in writing that he would not deliver seditious speeches for 1 yr, and furnish a bail bond of Rs3,000.

He responded, “My conscience tells me that I am completely innocent. A policy of repression would only add
fuel to the fire already raging because of the government’s vicious policies. I am convinced that the day is not far off for the foreign regime to reap the fruits of its sinful actions. I have faith in the justice of the Omnipresent God.
I, therefore, refuse to comply with the
Read 10 tweets
Dec 20
As a middle class person, I have few reasons to complain against @PMOIndia, especially Very High CNG PRICE and Not reigning in Congress Ecosystem...

But, I vouch for one thing...

My Money is spent for Bharat's Betterment and Development.

Read This!

"Smartphone shipments from
India crossed the Rs 50,000-crore mark during April-November 2022, up 110% compared to the same period last year. This is also 10% higher from Rs 45,000 crore registered during the entire FY22".

The main contributors for this phenomenal growth is Apple & Samsung.

"Till 2018,
electronics was ranked as India’s 10th largest export segment, and now it has moved up to the sixth position. It is highly likely that electronics could be in the top five export segments from India at the end of FY23".

“Thanks to the smartphone PLI scheme, we have exceeded
Read 6 tweets
Dec 16
Decades before so called Mother Teresa played on poverty of Hindus to make billions, this Irish showed to the Western World that Hindus are Daughter Sellers and Make their living out of running Prostitution.
In 1894, Amy received an invitation from a friend to join the Church
of England Zenana Mission in Bangalore and a year later in 1896, Amy went to go live in the Tirunelveli district with Reverend Thomas Walker and his wife who were CMS missionaries.
Amy learnt Tamil, started wearing Saree and mixing with Hindu women, slowly she spread the word
that and I quote
“Deeply rooted in the religion was the practice of selling little girls & boys who were unwanted to ‘marry’ the Brahmin temple priests. Amy became increasingly aware of the fact that many Indian children were dedicated to the gods by their parents or guardians,
Read 6 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(