HG Profile picture
12 Jan, 7 tweets, 2 min read
ವಿವೇಕಾನಂದರು ೧೮೯೩ ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರಚಾರ ಮಾಡಿದ್ದ ಸಂಗತಿ ಎಲ್ಲರಿಗೂ ಗೊತ್ತಿದೆ ಆದ್ರೆ ಅದರ ಜೊತೆಗೆ ಅವರು ಆ ಸಮ್ಮೇಳನದ ಭಾಷಣದಲ್ಲಿ ಹೆಚ್ಚು ಮಾತನಾಡಿದ್ದು ಬೌದ್ಧ ಧರ್ಮದ ಬಗ್ಗೆ ಅಲ್ಲಿ ಈ ಸಂತರು ಹೇಳಿದ್ದರ ಬಗ್ಗೆ ಅವರ Vivekananda:The Complete Works ಕೃತಿಯ ಆರನೇ ಸಂಪುಟದ ಪುಟ ಸಂಖ್ಯೆ ೨೨೭ ರಲ್ಲಿ +
ದಾಖಲಾಗಿದೆ ವಿವೇಕಾನಂದರ ಪ್ರಕಾರ - ಬುದ್ಧ ನನ್ನ ಇಷ್ಟ ದೇವತೆ ಆತ ದೇವರ ಬಗ್ಗೆ ಯಾವ ವಾದವನ್ನು ಭೋದಿಸಲಿಲ್ಲ ಅವನೇ ದೇವರಾಗಿದ್ದ ಇದರಲ್ಲಿ ನನಗೆ ಸಂಪೂರ್ಣ ನಂಬಿಕೆ ಬುದ್ದನು ಪೂರ್ವಕ್ಕೆ ಒಂದು ಸಂದೇಶ ನೀಡಿದಂತೆ ನಾನು ಪಶ್ಚಿಮಕ್ಕೆ ಒಂದು ಸಂದೇಶ ನೀಡಲು ಬಂದಿದ್ದೇನೆ ನೀವು ಕೇಳಿರುವಂತೆ ನಾನು ಬೌದ್ಧನಲ್ಲ ಆದರೂ ನಾನೊಬ್ಬ ಬೌದ್ಧ ಎಂಬ ಉನ್ನತ +
ನುಡಿಯನ್ನು ಅವರು ನುಡಿದಿದ್ದಾರೆ ಅದರ ಜೊತೆಗೆ ಸ್ಯಾನ್ ಫ್ರಾನ್ಸಿಸ್ಕೊ ದಲ್ಲಿ ಮಾಡಿದ ಭಾಷಣದಲ್ಲಿ ಸಹ ಎಲ್ಲಾ ಧರ್ಮಗಳ ತುಟ್ಟ ತುದಿಯಾದ ಅನುಭಾವ (ವೇದಾಂತವನ್ನು) ಸ್ವೀಕರಿಸಿದ್ದಾಗಿ ಅವರ Vivekananda: The Complete Works ನ ಎಂಟನೆ ಸಂಪುಟದ Is Vedanta the Future Religion? ನಲ್ಲಿ ದಾಖಲಾಗಿದೆ ಅವರು ಅನುಭಾವಿಗಳು ಅವರನ್ನು ನಾವುಗಳು +
ಒಂದು ದರ್ಮ ಒಂದು ಮತ ಒಂದು ಪಂಥಕ್ಕೆ ಸಿಮೀತವಾಗಿಡುವುದು ತಪ್ಪು ಅಂತ ನನ್ನ ಅಭಿಪ್ರಾಯ ನಮ್ಮ ಪಾಲಿಗೆ ವಿವೇಕಾನಂದ ಅವರು ಎರಡನೇ ಬುದ್ಧ ಆದರೆ ಅವರುಗಳು ಹೇಳಿದ ವೇದಾಂತವನ್ನು ಅನುಸರಿಸುವಲ್ಲಿ ನಾವು ವಿಫಲರಾಗಿದ್ದೇವೆ ಅಷ್ಟೇ ಸರ್ ಅವರು ವೇದಾಂತ ಸೊಸೈಟಿಯನ್ನು ಸಹ ಕಟ್ಟಿದ್ದರು ಅದರ ಜೊತೆಗೆ ರಾಮಕೃಷ್ಣ ಮಿಷನ್ ಅನ್ನು ಕಟ್ಟಿದರು ಆ ಮೂಲಕ ವೇದಾಂತ +
ಸಮಾಜ ಕಟ್ಟುವ ಪ್ರಯತ್ನ ಮಾಡಿದ್ದರು ಆದ್ರೆ ಅವರನ್ನು ನಮ್ಮವರು ಹೈಜಾಕ್ ಮಾಡಿದ್ದಾರೆ ಅಷ್ಟೇ ಅದಲ್ಲದೇ ಅವರ ಭೋಧನೆಗಳನ್ನು ತಮಗೆ ಬೇಕಾದಷ್ಟೇ ಕಟ್ ಆ್ಯಂಡ್ ಪೇಸ್ಟ್ ಮಾಡಿಕೊಂಡಿದ್ದಾರೆ.

ತಮಗೆ ಬೇಕಾದ ಹಾಗೆ ಅವರನ್ನು ಹಾಗೂ ಅವರ ಸಿದ್ದಾಂತಗಳನ್ನು ಬಳಸಿಕೊಂಡ್ರು

ಎಲ್ಲಾ ಮಹಾನ್ ವ್ಯಕ್ತಿಗಳನ್ನು ಮತ್ತವರ ಭೋದನೆಗಳನ್ನು ಮತ್ತು ಸಿದ್ದಾಂತಗಳನ್ನ +
ನಮ್ಮಲ್ಲಿ ಅನೇಕರು ಪರಿಪೂರ್ಣ ಪಾಲಿಸದೆ ತಮಗೆ ಬೇಕಾದ ಹಾಗೆ ಉಪಯೋಗಿಸಿ ಕೊಳ್ಳುವುದು ಹೊಸತೇನಲ್ಲ ಅದು ಬುದ್ದ ಇರಲಿ ಬಸವಣ್ಣ ಇರಲಿ ವಿವೇಕಾನಂದರು ಇರಲಿ ಅಂಬೇಡ್ಕರ್ ಇರಲಿ

ನಮಗೆ ತಿಳಿದ ಮತ್ತು ಓದಿದ ಮಾಹಿತಿಯ ಆಧಾರದಲ್ಲಿ ಇದನ್ನು ಹಾಕಿದ್ದೇನೆ ಇದಕ್ಕೆ ಅನೇಕ ಲೇಖಕತ ಬರವಣಿಗೆ ಸಾಕ್ಷಿ ಸಹ ಇದೆ ಅನಿವಾರ್ಯ ಕಾರಣಗಳಿಂದ ಇಲ್ಲಿ ಹಾಕಲು ಆಗುತ್ತಿಲ್ಲ +
ಬೇಕಾದರೆ ಡಿಎಮ್ ಮಾಡಿದರೆ ಫೋಟೋ ಕಾಪಿ ಹಾಕುತ್ತೇನೆ

ಮೌಲ್ಯಯುತ ಟೀಕೆ/ವಿಮರ್ಶೆಗೆ ಸದಾ ಸ್ವಾಗತ

ವಂದನೆಗಳೊಂದಿಗೆ...

@threadreaderapp unroll

• • •

Missing some Tweet in this thread? You can try to force a refresh
 

Keep Current with HG

HG Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @hppgouda123

5 Jan
ಈ ದಿನ ಕರ್ನಾಟಕದ ಉತ್ತರದಲ್ಲಿ ಬಾದಾಮಿ ಬನಶಂಕರಿ ಪಟ್ಟದಕಲ್ಲು ಐಹೊಳೆ ಕಡೆಗೆ ಕಿರು ಪ್ರವಾಸ ಹೋಗಿದ್ದೆವು ಅಲ್ಲಿ ಅನೇಕ ರೀತಿಯ ಸಮಸ್ಯೆಗಳವೆ ಹೆಚ್ಚಾಗಿ ಸ್ವಚ್ಚತಾ ಪರಿಕಲ್ಪನೆ ಅಲ್ಲಿ ಇಲ್ಲ ಇಲ್ಲಿ ಹಾಕಿದ ಚಿತ್ರಗಳು ಬನಶಂಕರಿ ದೇವಾಲಯ ಕಲ್ಯಾಣಿಯದ್ದು ಹೀಗಾದ್ರೆ ಸ್ವಚ್ಚ ಭಾರತ ಯೋಜನೆ ಹೇಗೆ ಯಶಸ್ವಿಯಾಗುತ್ತದೆ ದೇಶದ ಪ್ರಮುಖ ಪ್ರವಾಸಿ ತಾಣಗಳು +
ಹೀಗೆ ಕಸದಿಂದ ಕೂಡಿದರೆ ಬೇರೆ ನಾಡಿನ ಮತ್ತು ಬೇರೆ ದೇಶದ ಪ್ರವಾಸಿಗರು ಹೇಗೆ ಇಂತಹ ಸ್ಥಳಗಳಿಗೆ ಬರುತ್ತಾರೆ ನಮ್ಮ ನಾಡಿನ ಪ್ರವಾಸೋದ್ಯಮ ಹೇಗೆ ಸುಧಾರಿಸುತ್ತದೆ

ಈ ಕಲ್ಯಾಣಿಯಲ್ಲಿ ಜನರು ಸ್ನಾನ ಮಾಡೋದಕ್ಕೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿ ಕಲ್ಯಾಣಿ ರಕ್ಷಿಸಿ.

ಪಟ್ಟದಕಲ್ಲು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಪಾರಂಪರಿಕ ತಾಣವಾಗಿದೆ ಅದು ನಮ್ಮ+
ಹೆಮ್ಮೆ ಇಲ್ಲಿ ಇಂದು ಅನೇಕರಿಗೆ ಕೌಂಟರ್ ನಲ್ಲಿ ಜನರಿಗೆ ಪ್ರವೇಶ ಶುಲ್ಕ ಪಾವತಿ ಮಾಡಿದರೆ ಕೊಡಲು ಚಿಲ್ಲರೆ ಇಲ್ಲ ಅಥವಾ
ಸ್ಕ್ಯಾನ್ ಮಾಡಿ ಪಾವತಿ ಮಾಡುವ ವ್ಯವಸ್ಥೆ ಇಲ್ಲ ಇದಕ್ಕೆ ಒಂದು ವ್ಯವಸ್ಥೆ ಮಾಡಿ

ಐಹೊಳೆಯ ಅನೇಕ ಸ್ಮಾರಕಗಳು ಕೊಳಚೆ ನೀರಲ್ಲಿವೆ ಹೇಳಿದರೆ ಅಲ್ಲಿನ ಸಿಬ್ಬಂದಿಗಳು ಬಹಳ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು
ಇದು ತರವಲ್ಲ +
Read 7 tweets
23 Dec 20
#ಕಾಡುವಕವಿತೆ

ದಾರಿಯುದ್ದಕ್ಕೂ ವನವಾಸ,
ಅಗ್ನಿಪರೀಕ್ಷೆ ಹೇಗೆ ದಾಟುತ್ತೀಯೆ ನನ್ನ ಮಗಳೆ?
‘ನಸ್ತ್ರೀ ಸ್ವಾತಂತ್ರ‍್ಯಮರ್ಹತಿ’ – ಎಂದು ವಟಗುಟ್ಟು-
ತ್ತಲೇ ಇದೆ ಮನುಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ; ಶ್ರೀರಾಮ-
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ, ದ್ರೌಪದಿ ಜೂಜಿಗೆ
ವಸ್ತುವಾಗುಳಿದದ್ದು ಎಂಥ ವಿಪರೀತ..!
ದ್ರೌಪದಿಯಂತೆ ಎಲ್ಲರಿಗು ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷಣರೇಖೆ,
ದಾಟಿ ನಡೆದೇನೆಂಬ ಧೈರ್ಯವಿಲ್ಲ.

ಎಲ್ಲ ಧರ್ಮಗಳ ನಿಲುವು ಇಷ್ಟೆ; ಈಡನ್ನಿನ ತೋಟ-ದಲ್ಲಿ ತಿನ್ನಬಾರದ ಹಣ್ಣ ತಿನ್ನಿಸಿದವಳು
ಈವ್; ಗಂಡಸಿನ ಪತನಕ್ಕೆ ಕಾರಣ ಹೆಣ್ಣು;
ಮಾಯೆ; ಋಷಿಗಳ ತಪಸ್ಸು ಕೆಡಿಸಿದವಳು.
ಬುದ್ಧ ಹೇಳಿದ್ದೇನು ಆನಂದನಿಗೆ? ಸದ್ಯಕ್ಕೆ
ಹೆಣ್ಣು ಸೇರುವುದು ಬೇಡ ನಮ್ಮ ಸಂಘಕ್ಕೆ;
ಅರ್ಹಂತ ಮತದಂತೆ ಗಂಡಾಗಿ ಹುಟ್ಟಿದರೆ
ಮಾತ್ರ ಅರ್ಹತೆಯುಂಟು ಮೋಕ್ಷಕ್ಕೆ!

ಹೇಳುತ್ತದೆ ಖುರಾನ್; ಹೆಣ್ಣೊಂದು ಬರಿಯ ಹೊಲ,
ನಿನ್ನ ಸ್ವತ್ತು; ಮೂರು ಸಲ ತಲಾಖ್ ಎಂದರೆ ಸಾಕು.
ಸ್ತ್ರೀ ಶೂದ್ರಾದಿಗಳಿಗೆಲ್ಲಿಯದೋ ವೇದಾಧಿಕಾರ?
ಇಂಥ ದಯವಿರದ ಧರ್ಮಗಳ ಆಚೆ ನೂಕು.
Read 4 tweets
3 Dec 20
ಅವರ ಮೂಲ ಹೆಸರು ತಿಮ್ಮಪ್ಪ ನಾಯಕ
ಅವರ ಕೃಷ್ಣದೇವರಾಯನ ಸಾಮ್ರಾಜ್ಯದಲ್ಲಿ ಸೇನೆಯಲ್ಲಿದ್ದರು ನಂತರ ಹರಿದಾಸ ಪಂಥದ ಕವಿಗಳಾದರು ಆದರೆ ಕೃಷ್ಣನ ಕಿಂಡಿ ಅಥವಾ ಕನಕನ ಕಿಂಡಿಯ ಬಗ್ಗೆ ನಮ್ಮ ಸ್ನಾತಕೋತ್ತರ ಪದವಿ ಪ್ರೊಫೆಸರ್ ಒಬ್ಬರು ಹೇಳಿದ್ದು ಹೀಗೆ

ಈ ಕನಕಕಿಂಡಿ ಅಂದಿನ ಸಮಾಜದ ಶೋಷಣೆಯ ಮತ್ತೊಂದು ಮುಖ ಆ ಗುಡಿಯೊಳಗೆ ಕೆಳವರ್ಗದ ಜನರಿಗೆ ಪ್ರವೇಶ
ಇರದಿದ್ದಾಗ ಅದಕ್ಕಾಗಿ ಕನಕದಾಸದ ನೇತೃತ್ವದಲ್ಲಿ ಒಂದು ಜನಕ್ರಾಂತಿ ಅದೇ ದೇವಸ್ಥಾನ ಪ್ರವೇಶ ಚಳುವಳಿ ನೆಡೆದಾಗ ಕೊನೆಗೂ ದೇವಸ್ಥಾನದವರು ಒಳಗೆ ಬಿಡಲಿಕ್ಕೆ ಒಪ್ಪದೇ ಆ ಕಿಂಡಿಯ ಮೂಲಕ ಈ ವರ್ಗಗಳಿಗೆ ಕೃಷ್ಣನ ದರ್ಶನ ಆಗುವಂತೆ ವ್ಯವಸ್ಥೆ ಮಾಡಿದರಂತೆ ಹಾಗಾಗಿ ಅದು ಕನಕನ ಕಿಂಡಿ ಎಂದು ಸೃಷ್ಟಿಯಾಯಿತು ಎಂದು ಹೇಳಿದ್ದು ನೆನಪಿದೆ ಹರಿದಾಸ ಪಂಥ ವೈಷ್ಣವ
ಮತದ ಭಾಗ ಅವಾಗಿನ ಕಾಲದಲ್ಲಿ.
ಅವರ ಮನೆತನದ ತಂದೆಯ ಕಾಲದಿಂದಲೂ ಸಹ ವೈಷ್ಣವ ಮತದ ಅನುಕರಣೆ ಕನಕದಾಸ ಮನೆಯಲ್ಲಿತ್ತು ಅಷ್ಟೇ ಏಕೆ ಅವರ ಮೂಲ ಹೆಸರು ಸಹ ತಿಮ್ಮಪ್ಪ ನಾಯಕ(ಅವರ ತಂದೆತಾಯಿಗೆ ಬೇಗ ಮಕ್ಕಳಾಗದಿದ್ದಾಗ ತಿರುಪತಿ ವೆಂಕಟೇಶ್ವರ ದೇವರಿಗೆ ಬೇಡಿಕೊಂಡಿದ್ದರಂತೆ ಆ ಭಕ್ತಿಗೆ ತಿಮ್ಮಪ್ಪ ನಾಯಕ ಅಂತ ಹೆಸರಿಟ್ಟಿದ್ದರು)ಆಗಿನ ಸಮಾಜದಲ್ಲಿ ಬೇರೆ ಬೇರೆ
Read 6 tweets
1 Dec 20
ಅಸಲಿಗೆ ಶಿವಾಜಿ ಸಹ ಸಾಮಾನ್ಯ ಅರಸನೇ ಹೊರತು ಹಿಂದೂವಾದಿಯಲ್ಲ ಸರ್ ಹಾಗೆ ಚಿತ್ರಿಸಲಾಗಿದೆ ಅಷ್ಟೇ ಕಾರಣ ಏನೆಂದರೆ ಶಿವಾಜಿ ನಂತರ ಬಂದ ಮರಾಠ ಸಾಮ್ರಾಜ್ಯ ವಶಪಡಿಸಿಕೊಂಡಿದ್ದು ಪೇಶ್ವೆಗಳಾದ ಚಿತ್ಪಾವನರು ಬಹುಸಂಖ್ಯಾತ ಮರಾಠಿಗರಿಗೆ ಈ ಭಾವನೆ ಉಣಬಡಿಸಿ ಮರಾಠಿಗಳ ಬೆಂಬಲವನ್ನು ಪಡೆದುಕೊಂಡು ಆಳ್ವಿಕೆ ನೆಡೆಸಿದರು ಇಲ್ಲದಿದ್ದರೇ ಅವರಿಗೆ ಆಡಳಿತ ಮಾಡಲು
ಆಗುತ್ತಿರಲಿಲ್ಲ ಅದಕ್ಕಾಗಿ ಈ ಭಾವನೆ ಬಿತ್ತಲಾಗಿದೆ ಶಿವಾಜಿ ಅನ್ಯ ಮತೀಯ ಸುಲ್ತಾನರಲ್ಲಿ ಔರಂಗಜೇಬನ ವಿರುದ್ಧ ಮಾತ್ರ ಯುದ್ಧ ಮಾಡಿದ್ದು ಬಿಟ್ಟರೇ ಅವರ ತಂದೆ ಷಹಜಿ ಬೋಂಸ್ಲೆ ಬಿಜಾಪುರದ ಸುಲ್ತಾನನ ಜಹಗೀರುದಾರ ಬೆಂಗಳೂರು ಸುಲ್ತಾನನ ಅಧೀನದಲ್ಲಿ ಇದ್ದಾಗ ಪುಣೆ ಮತ್ತು ಬೆಂಗಳೂರಿನ ಜಹಗೀರುದಾರಿಕೆ ನೋಡಿಕೊಳ್ಳುವ ಅಧಿಕಾರಿಯಾಗಿದ್ದ ಷಹಜಿ ಬೋಂಸ್ಲೆ
ತಂದೆಯ ಮರಣಾನಂತರ ಬಿಜಾಪುರದ ಸುಲ್ತಾನರ ಜೊತೆಗೆ ಸಂಘರ್ಷವಾಗಿ ತನ್ನ ಪಾಲಿನ ಕೊಟೆಗಳೊಂದಿಗೆ ಸ್ವಂತ ರಾಜ್ಯ ಕಟ್ಟಿದ ಶಿವಾಜಿ ಇವರಿಗಿಂತಲೂ ಅನೇಕ ಅರಸರು ದಕ್ಷಿಣದಲ್ಲಿ ಉತ್ತರದ ಸುಲ್ತಾನರಿಗೆ ತಲೆ ಬಾಗದೇ ಪ್ರಬಲ ಸಾಮ್ರಾಜ್ಯ ಕಟ್ಟಿದ್ದರೂ ಅವರಿಗೆ ಈ‌ ಹಿಂದುತ್ವದ ಲೇಪನ ಮಾಡುವದಿಲ್ಲ ಏಕೆಂದರೆ ಪೇಶ್ವೆಗಳಂತೆ ಇಲ್ಲಿ ಯಾರು ಇರಲಿಲ್ಲ ಇಷ್ಟೆಲ್ಲಾ
Read 5 tweets
27 Nov 20
ನಿಮ್ಮ ಮಾತು ಸರಿ ಇದನ್ನು ಬರೆದ್ದಕ್ಕೆ ನಿಮಗೆ ಕೆಲವರು ಬಾಜಪದವ್ರು ಖುಷಿಯಾದ್ರೆ ಕಾಂಗ್ರೇಸ್ ನವರು ಬೇಜಾರಾಗಬಹುದು

ಏಕೆಂದರೆ ೧೯೭೬ ರಲ್ಲಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ ೪ಎ ಎಂಬ ಭಾಗ ಮತ್ತು ೫೧ಎ ಎಂಬ ಪರಿಚ್ಛೇದದಡಿಯಲ್ಲಿ ೧೦ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ದು ಇಂದಿರಮ್ಮರ ಕಾಂಗ್ರೇಸ್ ಸರ್ಕಾರವೇ...
ನಮ್ಮ‌ ಸಂವಿಧಾನದ ೧೧ ನೇ ಮೂಲಭೂತ ಕರ್ತವ್ಯವನ್ನು ೨೦೦೨ ರಲ್ಲಿ ವಾಜಪೇಯಿ ಅವರ ಸರ್ಕಾರ ೮೬ ನೇ ತಿದ್ದುಪಡಿ ಮೂಲಕ ಸೇರಿಸಿತು
ಇಲ್ಲಿ ನಾವು ಪಕ್ಷಗಳನ್ನು ದೂರುವದಕ್ಕಿಂತ ಜನರನ್ನು ದೂರಬೇಕಾಗಿದೆ ಏಕೆಂದರೆ ನಮ್ಮ ಹಕ್ಕುಗಳನ್ನು ನಾವು ಪಾಲಿಸುವಲ್ಲಿ ಸಫಲರಾಗಿದ್ದೆವೆ ಆದರೆ ಕರ್ತವ್ಯಗಳನ್ನು ಮರೆತಿದ್ದಕ್ಕೆ ನಾವೇ ಕಾರಣವೇ ಹೊರತು ಕಾಂಗ್ರೇಸ್ಸೋ ಬಾಜಪವೋ
ಅಥವಾ ಇನ್ಯಾವುದೋ ಪಕ್ಷಗಳಲ್ಲ ಅದು ನಮ್ಮ ವಿಫಲತೆ ಅಂತ ಹೇಳಬಹುದು ಏಕೆಂದ್ರೆ ಅದ್ಯಾವ ಉದ್ದೇಶದಿಂದ ಅವರುಗಳು ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ರೋ ಒಟ್ಟಿನಲ್ಲಿ ಅದು ಒಳ್ಳೆಯದು ಆದರೆ ನಾವು ಯಾವುದೋ ಒಂದು ಪಕ್ಷಕ್ಕೆ ಅಥವಾ ಸಿದ್ದಾಂತಕ್ಕೆ ಕಟ್ಟು ಬಿದ್ದಾಗ ನಮಗೆ ಕೇವಲ ಹಕ್ಕುಗಳು ಮಾತ್ರ ಕಾಣುತ್ತವೆ ಕರ್ತವ್ಯಗಳು ನಗಣ್ಯವಾಗಿರುತ್ತವೆ...
Read 8 tweets
21 Nov 20
ಹಿಂದೂ ಧರ್ಮ ಅಲ್ಲ ಅದೊಂದು ಜೀವನ ವಿಧಾನ ಇದನ್ನು ನಾನು ಹೇಳಿಲ್ಲ ಈ ದೇಶದ ಉಚ್ಚ ನ್ಯಾಯಾಲಯ ೧೯೯೫ ರಲ್ಲಿ ನ್ಯಾಯಮೂರ್ತಿ ಜೆ.ಎಸ್ ವರ್ಮಾ ಅವರ ನ್ಯಾಯಪೀಠ ಎಸ್ ರಾಧಾಕೃಷ್ಣನ್ ಅವರ ತತ್ವಶಾಸ್ತ್ರ ಮತ್ತು ವಿಲ್ ಡ್ಯೂರಾಂಟ್ ಅವರ ಇತಿಹಾಸದ ಬರವಣಿಗೆಗಳ ಜೊತೆ ಅನೇಕ ದಾಖಲೆಗಳನ್ನು ಅವಲೋಕಿಸಿ ನೀಡಿದ ತಿರ್ಪು ಏಕೆಂದರೆ ನಮಗೆ ಅನೇಕ ವೈವಿಧ್ಯಮಯ ಆಚರಣೆ
ಮತ್ತು ಜೀವನ ಪದ್ದತ್ತಿಗಳಿವೆ(ಧಾರ್ಮಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ)
ಅದಲ್ಲದೇ ಈ ಹಿಂದೂ ಎಂಬ ಪದ ಪ್ರಾಚೀನ ಕಾಲದ ಯಾವ ಧರ್ಮ ಮತ್ತು ಲೌಕಿಕ ಗ್ರಂಥಗಳಲ್ಲಿ ಉಲ್ಲೇಖ ಇಲ್ಲ ಈಗ ಇದನ್ನು ಬಳಸುವವರಿಗೆ ಇದು ಧರ್ಮ ಸೂಚಕವೋ?
ಜನಾಂಗೀಯ ಸೂಚಕವೋ? ಭೌಗೋಳಿಕ ಸೂಚಕವೋ ಎಂದು ನಿಖರವಾಗಿ ಗೊತ್ತಿಲ್ಲ
ಏಕೆಂದರೆ ಸಿಂದೂ ಎಂಬ ಪದದ ಮುಂದಿನ ಅರ್ಥಗಳೇ ಈ
ಹಿಂದೂ(ಪರ್ಶಿಯನ್) & ಇಂಡಸ್(ಗ್ರೀಕರು). ಇವರ ಸಾಂಸ್ಕೃತಿಕ ವಲಸೆ ಪರಿಣಾಮವಾಗಿ ಮತ್ತು ಪದಬಳಕೆಯಲ್ಲಾದ ಶಬ್ದೋಚ್ಚಾರದ ಪರಿಣಾಮದಿಂದ ಸಿಂದೂ ನದಿ ತೀರದ ಸುತ್ತಲಿನ ಪ್ರದೇಶಕ್ಕೆ ಹಿಂದೂ ಅಥವಾ ಇಂಡಸ್ (ಈಗ ಇಂಡಿಯಾ) ಎಂಬ ಉಲ್ಲೇಖಗಳು ಬಂದಿವೆ ಅದೊಂದು ಸೀಮಿತ ವಲಯದ ಪ್ರದೇಶದ ಭೌಗೋಳಿಕ ಸೂಚಕ ಮಾತ್ರ ಇಡಿ ಭಾರತ ಒಕ್ಕೂಟದ ಸೂಚಕವಲ್ಲ.
ಸಾಮಾನ್ಯ ಶಕ ಎಂಟನೆ
Read 9 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!