ಬ್ರಿಟೀಷರೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿ, ಸ್ವಾತಂತ್ರ‍್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ, ದೂರ ದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರ, ಬ್ರಿಟಿಷರಿಗೆ ಭಯ ಪಟ್ಟು ಮೈಸೂರು ಅರಸರು ದಸರಾ ನಿಲ್ಲಿಸಿದಾಗ, ಬ್ರಿಟಿಷರನ್ನು ಎದುರಿಸಿ ಸತತ 5 ವರ್ಷಗಳ ಕಾಲ ದಸರಾ ಹಬ್ಬ
ಆಚರಿಸಿದ್ದು ಹಝರತ್ ಟಿಪ್ಪು ಸುಲ್ತಾನ್
ಟಿಪ್ಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ #ಹಿಂದೂ_ದೇವಾಲಯಗಳಿಗೆ_ದಾನ_ದತ್ತಿಗಳನ್ನು ಕೊಟ್ಟಿದ್ದನು.
ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದನು.
ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿದನು.
ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ.
ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದನು.
ಕುಣಿಗಲ್‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದನು.
ಕೇರಳದ ಮಲಬಾರಿನ ಹೆಣ್ಣುಗಳು ಮಾನ ಮುಚ್ಚಲು ರೇಷ್ಮೇ ವಸ್ತ್ರಗಳನ್ನೇ ದಾನ ಮಾಡಿದನು ಮತ್ತು ಸ್ತನ ತೆರಿಗೆಯನ್ನು ರದ್ದುಗೊಳಿಸಿದನು.
ದಲಿತರ ಮೇಲಿನ ಬಹಿಷ್ಕಾರವನ್ನು ತೊಡೆದು ಹಾಕಿದನು.
ಭೂ ಕಂದಾಯ ನೀತಿಯನ್ನು ಜಾರಿಗೆ ತಂದನು.
ಟಿಪ್ಪುವಿನ ಬಗ್ಗೆ ಕೆಲವು ಪ್ರಶ್ನೆಗಳು ಹಿಂದುತ್ವವಾದಿಗಳಿಗೆ
೧. ಟಿಪ್ಪು ಮತಾಂತರ ಮಾಡುವವನಾಗಿದ್ದರೆ ಶ್ರೀರಂಗ ಪಟ್ಟಣದಲ್ಲಿ ಹಿಂದೂಗಳು ಇರುತ್ತಿದ್ದರೆ ?
೨. ಹೋಗಲಿ ಶ್ರೀರಂಗ ಪಟ್ಟಣ ಎಂಬ ಹೆಸರಾದರೂ ಹಾಗೇ ಹೇಗೆ ಉಳಿಯಿತು?
೩. ಟಿಪ್ಪುವಿನ ಬಗ್ಗೆ ಕೆಲವು ಬ್ರಿಟೀಷ್ ಇತಿಹಾಸಕಾರರು ಮಲಬಾರಿನಲ್ಲಿಯ ಘಟನೆಗಳ ಬಗ್ಗೆ ವಿಕೃತವಾಗಿ ಬರೆದಿದ್ದಾರೆ ಅಲ್ಲವೇ! ಹಾಗಾದರೆ ಅದೇ ಬ್ರಿಟೀಷ್ ಇತಿಹಾಸಕಾರರಿಗೆ ಮಲಬಾರಿನಲ್ಲಿ
ಅಸ್ಪೃಶ್ಯರ ಹೆಂಗಸರ #ಮೊಲೆತೆರಿಗೆ ಹಾಕಿದ ನಂಬೂದರಿಗಳ ಬಗ್ಗೆ ಏಕೆ ಬರೆಯಲಿಲ್ಲ?
೪. ಟಿಪ್ಪು ಮತಾಂತರಿ ಕ್ರೂರಿ ಆಗಿದ್ದರೆ ಆತನ ಸೈನ್ಯದಲ್ಲಿ ಕೂಡಾ ಮುಸಲ್ಮಾನರು ಮಾತ್ರ ಇರಬೇಕಿತ್ತಲ್ಲವೇ? ಮತ್ತೇ ಅಸ್ಪೃಶ್ಯ ಮತ್ತು ಹಿಂದುಳಿದ ಜಾತಿಗಳ ಸೈನಿಕರು ಹೇಗೆ ಬಂದರು?
೫. ಇನ್ನೂ ಪ್ರಮುಖ ಪ್ರಶ್ನೆ ಕೇರಳದ ಬ್ರಾಹ್ಮಣರ ತಲೆ ಕಡಿದ ಟಿಪ್ಪು ಎಂದು ನೀವು
ಹೇಳುವುದಾದರೆ ಒಬ್ಬ ಬ್ರಾಹ್ಮಣ "ದಿವಾನ್ ಪೂರ್ಣಯ್ಯ" ಮಂತ್ರಿಯಾಗಲು ಹೇಗೆ ಸಾಧ್ಯ?
೬. ಬ್ರಿಟೀಷರಿಂದ ತಪ್ಪಿಸಿಕೊಳ್ಳಲು ಸಾಮಾನ್ಯರ ವೇಷ ಧರಿಸಿ ಪರಾರಿಯಾಗುವಾಗ ಟಿಪ್ಪು ಸತ್ತ ಎಂದು ಹೇಳುತ್ತೀರಲ್ಲವೇ! ಹಾಗಾದರೆ ಇದಕ್ಕೂ ಮುಂಚೆ ನಡೆದ ಯುದ್ದದಲ್ಲಿ ತನ್ನ ಮಕ್ಕಳನ್ನು ಒತ್ತೆ ಇಡುವ ಅಗತ್ಯತೆ ಏನಿತ್ತು? ಸೋಲೊಪ್ಪಿ ರಾಜನಾಗೇ ಜೀವಿಸಬಹುದಿತ್ತಲ್ಲವೇ?
೭. ಸಾವು ಸಂಭವಿಸದಂತೆ ಯುದ್ದ ಮಾಡಿದ ಯಾವುದಾದರೂ ರಾಜನಿದ್ದರೆ ಖಂಡಿತಾ ತಿಳಿಸಿ.
ಟಿಪ್ಪು ಸುಲ್ತಾನರನ್ನು ನೀವು ಗೌರವಿಸುವುದು ಬೇಡ. ಆದರೆ ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ. ಸಾಧ್ಯವಾಗದಿದ್ದರೆ ನೀವು ಟಿಪ್ಪು ಜಯಂತಿಯನ್ನು ಮಾಡಲೇಬೇಕೆಂಬ ಒತ್ತಾಯವಿಲ್ಲ. ಆದರೆ ಆತನೊಬ್ಬ ಮುಸಲ್ಲಾನನೆಂಬ ಕಾರಣಕ್ಕೆ ದ್ವೇಷಿಸುವ ನೀಚತೆ ಬಿಡಿ.
ದೇಶದ ಬಗ್ಗೆ ನಿಮಗೆ ಗೌರವವಿದ್ದರೆ ಆ ದೇಶಕ್ಕಾಗಿ ಮಡಿದವರ ಬಗ್ಗೆಯೂ ಇರಲಿ ಎಂದು ಆಶಿಸುತ್ತಾ.ಸಂಗೊಳ್ಳಿ ರಾಯಣ್ಣನ ಹೋರಾಟದಲ್ಲಿ ಕನ್ನಡಿಗರ ಗೆಲುವು ಸಂತೋಷದಾಯಕ! ಆದರೆ ಕೆಲ ಕನ್ನಡಿಗರಿಗೆ ಸಂಗೊಳ್ಳಿ ರಾಯಣ್ಣನಲ್ಲಿರುವ ಅಭಿಮಾನ, ಟಿಪ್ಪುವಿನ ಮೇಲಿಲ್ಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದಾಗಲೂ ನಿಂದಿಸಿದಾಗಲೂ ಕೆಲ ಕನ್ನಡಿಗರು
ತುಟಿ ಬಿಚ್ಚಲಿಲ್ಲ.
ನಮ್ಮವರೇ ನಮ್ಮವರಿಗೆ ಧರ್ಮದ ಹೆಸರೇಳಿ ಒಬ್ಬ ವೀರ ಕನ್ನಡಿಗನನ್ನು ಕೀಳಾಗಿ ಕಾಣುತ್ತಿರುವುದು ನಿಜಕ್ಕೂ ದುಃಖ್ಖಕರ.
ಕನ್ನಡಿಗನ ಧರ್ಮವು ಬದಲಾದ ಹಾಗೆ,ಕೆಲ ಕನ್ನಡಿಗರ ಪ್ರೀತಿಯೂ ಬದಲಾಗಿತ್ತು.!
• • •
Missing some Tweet in this thread? You can try to
force a refresh
ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ. #ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು #Vodafone ನಷ್ಟ 50 ಸಾವಿರ ಕೋಟಿ #Airtel ನಷ್ಟ 23 ಸಾವಿರ ಕೋಟಿ #BSNL ನಷ್ಟ 20 ಸಾವಿರ ಕೋಟಿ #MTNL ನಷ್ಟ 755 ಕೋಟಿ
1/9
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು. 1/4
ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
ಇಂದಿನ ದಿನ 40₹ kg ಬಾಳೆಹಣ್ಣು ಕೊಂಡುಕೊಳ್ಳಲ್ಲು ಶಕ್ತರಲ್ಲದ ಜನರಿಗೆ ನಾಳೆಯ ದಿನ ಒಂದು ಬಾಳೆಹಣ್ಣನ್ನು 40₹ ಕೊಟ್ಟು ನಾಲ್ಕು ತುಂಡುಗಳನ್ನು ನಾಲ್ಕು ಜನ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಇನ್ನಾದ್ರು ಜನಸಾಮಾನ್ಯರು ಎಚ್ಚೆತ್ತುಕೊಂಡು ರೈತರಿಗೆ ನೈತಿಕ ಬೆಂಬಲ ಕೊಟ್ಟು ಅವರ ಜೊತೆ
ನಿಲ್ಲಬೇಕಿದೆ.
3/4
ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46
ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46
Reign ೨೬ ಜುಲೈ ೧೫೦೯ - ೧೫೨೯[೧] ಜನನ ೧೬ ಫೆಬ್ರುವರಿ ೧೪೭೧ ಜನ್ಮ ಸ್ಥಳಹಂಪಿ, ಕರ್ನಾಟಕ ಮರಣ ೧೫೨೯ Buried ಹಂಪಿ,ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು.
3/46