ವಿವೆರಿಡೀ(viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು.
ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಲ್ಲಿ ಇವಕ್ಕೆ Civet ಎಂದು ಕರೆಯುತ್ತಾರೆ.
1) ಸಾಮಾನ್ಯ ಕಬ್ಬೆಕ್ಕು:Asian palm civet ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ ಮೈಬಣ್ಣ ಬಿಳಿ ಮಿಶ್ರಿತ ಕಪ್ಪು ರಾತ್ರಿ ಸಂಚರಿಸುವ ಇವು ಪಾಳು ಮನೆ ಮರದ ಪೊಟರೆಯಲ್ಲಿ
ವಾಸಿಸುತ್ತದೆ, ಕೆಲವು ಸಲ ಮನೆಗಳಿಗೂ ನುಗ್ಗಿ ದಾಂಧಲೆ ಮಾಡುತ್ತದೆ
2) ಪುನುಗು ಬೆಕ್ಕು Small Indian civet ಇದು ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತದೆ, 3 - 4 ಕಿಲೋ ತೂಗುತ್ತವೆ, ಹಳದಿ ಬೂದು ಅಥವಾ ಬೂದುಗಂದು, ಬೆನ್ನ ಮೇಲೆ 4-5 ಕಪ್ಪು ಪಟ್ಟೆಗಳು ಪಕ್ಕದಲ್ಲಿ ಚುಕ್ಕೆಗಳ ಸಾಲು ಇದೆ, ಬಾಲದುದ್ದಕ್ಕೂ ಕಪ್ಪು ಉಂಗುರಗಳಿವೆ.
ದಟ್ಟ ಕಾಡಿಗಿಂತ ಹುಲ್ಲುಗಾವಲು, ಕುರುಚಲ ಕಾಡುಗಳು ಇಷ್ಟ, ಹಳ್ಳ ಹೊಳೆಗಳ ಅಕ್ಕಪಕ್ಕ ಕೃಷಿ ಭೂಮಿಯಲ್ಲೇ ಹೆಚ್ಚಾಗಿ ಕಾಣಿಸುತ್ತದೆ, ಕಪ್ಪೆ, ಏಡಿ, ಇಲಿ, ಹೆಗ್ಗಣ, ಕೀಟ ಮೀನುಗಳನ್ನು ಬೇಟೆಯಾಡುತ್ತದೆ. ಕೆಲವು ಸಲ ಸಾಕಿದ ಕೋಳಿ ಗೂಡುಗಳ ಮೇಲೂ ದಾಳಿ ಮಾಡುತ್ತವೆ. ನೆಲವಾಸಿಗಳು, ಮೈಯನ್ನು ನೆಕ್ಕಿ ಸ್ವಚ್ಚ ಮಾಡುತ್ತವೆ.4-5 ಮರಿಗಳಿಗೆ ಜನ್ಮ ನೀಡುತ್ತವೆ
ಇವುಗಳ ಜನನಾಂಗದ ಬಳಿ ವಾಸನೆಯನ್ನು ಸ್ರವಿಸುವ ಗ್ರಂಥಿಗಳಿದ್ದು ಬಂಧನದಲ್ಲಿಟ್ಟು ಪುನುಗನ್ನು ತೆಗೆಯುತ್ತಾರೆ. ಕೃಷಿಯಲ್ಲಿ ವಿಪರೀತ ಕ್ರಿಮಿನಾಶಕ ಹಾಗು ಗದ್ದೆಗಳಲ್ಲಿ ಏಡಿಯನ್ನು ಸಾಯಿಸಲು ಬಳಸುವ ವಿಷ ಇವುಗಳಿಗೆ ಮಾರಕವಾಗಿದ್ದು, ರಸ್ತೆ ಅಪಘಾತಗಳಲ್ಲೂ ಸಾಯುತ್ತವೆ.
3) ಕಂದು ಕಬ್ಬೆಕ್ಕು: Brown palm civet ನಮ್ಮಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿದ್ದು, ಕಪ್ಪು ಮಿಶ್ರಿತ ಕಂದು ಮೈಬಣ್ಣ ಹೊಂದಿದ್ದು, ಬಿಳಿ, ಅಚ್ಚ ಬಿಳಿ ಬಣ್ಣದ ಜೀವಿಗಳನ್ನು ಸಹ ನೋಡಬಹುದು, ಮರವಾಸಿಗಳಾಗಿದ್ದು ಬಹುತೇಕ ಹಣ್ಣುಗಳನ್ನು ಬೀಜ ಸಮೇತ ತಿಂದು ವಿಸರ್ಜಿಸುತ್ತದೆ. ಕಾಡುಗಳಲ್ಲೇ ವಾಸಿಸುವ ಇವನ್ನು
ಪಶ್ಚಿಮ ಘಟ್ಟದ ಸಸ್ಯ ವೈವಿಧ್ಯತೆ ಸಂರಕ್ಷಕ ಎಂದೇ ಹೇಳಬಹುದು, ಇವು ಹಣ್ಣು ತಿಂದು ವಿಸರ್ಜಿಸುವ ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಶೇಕಡಾ ನೂರರಷ್ಟು ಇರುತ್ತದೆ. ಕಾಡಿನ ತುಂಬೆಲ್ಲ ಹಣ್ಣಿನ ಮರಗಳ ವೈವಿಧ್ಯತೆಗೆ ಈ ಕಬ್ಬೆಕ್ಕೂ ಪ್ರಮುಖ ಕಾರಣ.ಒಂದು ವೇಳೆ ಪಶ್ಚಿಮ ಘಟ್ಟಗಳಲ್ಲಿ ಇವುಗಳ ಸಂತತಿ ಕುಸಿದರೆ ಕಾಡಿಗೆ ಅಪಾಯ.
ಕಾಫಿ ತೋಟಗಳಲ್ಲಿ ಕಾಫಿ ಹಣ್ಣನ್ನು ತಿಂದು ವಿಸರ್ಜಿಸಿದ ಬೀಜಗಳಿಂದ ಅದ್ಬುತ ಸ್ವಾದದ ಸಿವೆಟ್ ಕಾಫಿಯನ್ನು ಸಹ ತಯಾರಿಸುತ್ತಾರೆ. ಮಹರಾಷ್ಟ್ರದಲ್ಲಿ ಒಮ್ಮೆ ಬಿಳಿ ಮೈಬಣ್ಣದ white coated brown palm Civet ಪತ್ತೆಯಾಗಿದ್ದು ಈ researchgate.net/publication/27… ಲಿಂಕ್ ಬಳಸಿ ಓದಬಹುದು.
ನಮ್ಮ ರಾಜ್ಯದಲ್ಲಿಯೂ ಇವು ಇರುವುದನ್ನು ಕೆಲವರು ನೋಡಿದ್ದಾರೆ, ಆದರೆ ಅಧಿಕೃತವಾಗಿ ಯಾರು ದಾಖಲಿಸಿಲ್ಲ.
4)ಮಲಬಾರ್ ಸಿವೆಟ್: ಕರಾವಳಿ ಭಾಗದ ಕಾಡುಗಳಲ್ಲಿ ಕಂಡು ಬರುತ್ತಿದ್ದ ಮಲಬಾರ್ ಸಿವೆಟ್ ಸಾಕು ನಾಯಿ ಗಾತ್ರದಲ್ಲಿ ಇರುತ್ತಿತ್ತು, ನೆಲ ವಾಸಿಯಾದದನ್ನು ಇತ್ತಚಿಗೆ ನೋಡಿ ದಾಖಲಿಸಿದರು ಯಾರು ಇಲ್ಲದ್ದರಿಂದ
ವಂಶನಾಶವಾಗಿದೆ(Extinct) ಎಂದು ತೀರ್ಮಾನಿಸಲಾಗಿದೆ.ಕೇರಳದ ಹಳ್ಳಿಯೊಂದರಲ್ಲಿ ಇದರ ಚರ್ಮವನ್ನು ವಶಪಡಿಸಿಕೊಂಡಿದ್ದು ಬಿಟ್ಟರೆ ಇದು ಇರುವ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲ.
✍️ನಾಗರಾಜ್ ಬೆಳ್ಳೂರು #WesternGhats#ಪಶ್ಚಿಮಘಟ್ಟಗಳು
• • •
Missing some Tweet in this thread? You can try to
force a refresh
ಇಂದು ದೇಶಾದ್ಯಂತ ಹಾಗೂ ನಮ್ಮ ರಾಜ್ಯಾದ್ಯಂತ ಆಚರಿಸುತ್ತಿರೋ “ವನ್ಯಜೀವಿ ಸಪ್ತಾಹ” ಕ್ಕೆ ನಮ್ಮ ತೀವ್ರ ವಿರೋಧವಿದೆ….!
ರಾಜ್ಯಪಾಲರು, ಅರಣ್ಯಮಂತ್ರಿಗಳು, ಅರಣ್ಯ ಪಡೆಯ ಮುಖ್ಯಸ್ಥರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದು: 👇👇👇👇( ದಯವಿಟ್ಟು ಓದಿ )🙏🙏🙏 Retweet ಮಾಡಿ
ನಿಮಗೆ ತಿಳಿದಿರುವಂತೆ ಈ ಎಲ್ಲಾ ಯೋಜನೆಗಳು ನಮ್ಮ ಪಶ್ಚಿಮಘಟ್ಟದೊಳಗಿನ ಅತೀಸೂಕ್ಷ್ಮ ಪರಿಸರ ವಲಯದಲ್ಲಿಯೇ ಬರುತ್ತವೆ. ಹಾವನ್ನು ಕುರಿತಾಗಿ, ಕಪ್ಪೆಗಳ ಅಧ್ಯಯನ ಹೀಗೇ ನಾನಾ ರೀತಿಯ ಸಂಶೋಧನೆ ಮಾಡುತ್ತಿರುವ ನೀವುಗಳು ಯಾಕೆ ಇಂತಹ ಯೋಜನೆಗಳನ್ನು ವಿರೋಧಿಸ್ತಿಲ್ಲ? ಮುಂದೆ ಈ ಯೋಜನೆಗಳೆಲ್ಲಾ ನಡೆದುಹೋದರೆ ನಿಮಗೆ ನಮಗೆ ಕುಡಿಯೋಕೇ ನೀರು ಸಿಗಲ್ಲ…!
ಉಸಿರೇ ಇರಲ್ಲ…! ಇನ್ನು ಕಪ್ಪೆ ಹಾವು ಚಿಟ್ಟೆಗಳ ಮಾತೆಲ್ಲಿ ಬಂತು?
ವನ್ಯಜೀವಿ ಕಾಯ್ದೆ ಎಲ್ಲಿದೆ?
ಅರಣ್ಯನೀತಿ ಎಲ್ಲಿದೆ?
ಮಾಧವ್ ಗಾಡ್ಗೀಳ್ ವರದಿಗಳು ಎಲ್ಲಿ ಹೋದವು? ಅವುಗಳನ್ನು ಸಂಪೂರ್ಣವಾಗಿ ಜಾರಿಮಾಡುವುದು ಮತ್ತು ಅದರಂತೆ ಕಾನೂನು ಕಾಪಾಡುವುದು ಯಾರ ಕೆಲಸ? ಸರ್ಕಾರದವರು ಎಡವಿದಾಗ ನಿಮ್ಮಂತವರು ಎಚ್ಚರಿಸಬೇಕಲ್ಲವೇ?
ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ...
ಕಾರಣ,
ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ ಮನೆಯಲ್ಲಿರಬೇಕು,
2, ಅದನ್ನ ಸಮಾಜದಲ್ಲಿ ಇನ್ನೊಬ್ಬರ ಮೇಲೆ ಹೇರಕೂಡದು ಅಂತ ಹೇಳ್ದವರು. ತೇಜಸ್ವಿ ಯಾವತ್ತೂ ತಮ್ಮ ತಮ್ಮ ಸಮುದಾಯದವರನ್ನೇ ಬೆಳೆಸಿಕೊಂಡು ಬರಲಿಲ್ಲ..
ತೇಜಸ್ವಿ ಯಾವತ್ತೂ ಯಾರೋ ಒಬ್ಬ ಬಂದು ದೇಶವನ್ನ ನಡೆಸ್ತಾನೆ, ಯಾವುದೋ ದೇವರು ಧರೆಗಿಳಿದು ಬರುವ ಅವನಿಲ್ಲದೆ ಈ ದೇಶ ನಡೆಯೋದೆ ಇಲ್ಲ ಅನ್ನೋ ಆಶಾವಾದಿತನದಿಂದ ಬದುಕಿದವರಲ್ಲ....
ಒಮ್ಮೆ
3,ಅಂದಿನ ಪ್ರಧಾನಿ 'ಉದಯರವಿ' ಮನೆಗೆ ಬರ್ತೀನಿ ಅಂದಾಗ ದಯವಿಟ್ಟು ಬರಬೇಡಿ, ತೊಂದ್ರೆ ಆಗುತ್ತೆ ಅಂತ ನೇರವಾಗಿ ಹೇಳ್ದೋರು ತೇಜಸ್ವಿ.
ತೇಜಸ್ವಿ ಯಾವತ್ತೂ ಮಾರ, ಎಂಕ್ಟ, ಕರಿಯಪ್ಪ, ಚೀಂಕ್ರ, ಬಬ್ಬು, ಮೂಡಿಗೆರೆಯ ಬಿರಿಯಾನಿ ಸಾಬು, ಮೆಕ್ಯಾನಿಕ್ ಗಳು, ಟಿವಿ ರಿಪೇರಿ ಅಂಗಡಿಯವರು, ಬೇಕರಿಯವರು, ತಮ್ಮ ಕೂಲಿಯಾಳುಗಳ ಜತೆ ಮುಕ್ತವಾಗಿ ಬೆರೆಯುತ್ತ,
ಹಳ್ಳಿ ಮನೆಗೆ ಬಂದವರು ಹಾಲು, ತುಪ್ಪ, ಬೆಲ್ಲ, ಅನ್ನ,ಮೊಸರು,ಮಜ್ಜಿಗೆ,ಉಪ್ಪಿನಕಾಯಿ ಬಗ್ಗೆ ಮೆಚ್ಚಿ ಮಾತಾಡೋದು ಎಲ್ಲರಿಗೂ ಗೊತ್ತಿದೆ.
ನೀವಿನ್ನೂ ಭತ್ತ ಬೇಳಿತೀರಾ?
ಆಕಳು ಸಾಕ್ತೀರ? ಪ್ರಶ್ನೆಯನ್ನು ಕೇಳ್ತಾರೆ.
ಮಾತಿನ ಮಧ್ಯೆ ಎಮ್ಮೆ ಹಾಲು ಚಹಾ ಚೆನ್ನಾಗಿ ಇರ್ತದೆ ಎಂದು ಹೇಳ್ತಾರೆ.
2, ನಿರ್ವಹಣೆ ಕಷ್ಟ , ಕೃಷಿ ನಷ್ಟ ಎಂದು ಗದ್ದೆ, ಕೊಟ್ಟಿಗೆ ನೋಡುವ ರೀತಿಗಳು ಈಗ ಬದಲಾಗಿವೆ. ಆದರೆ ಉಣ್ಣಲು ಒಳ್ಳೆಯದು ಬೇಕೆಂಬ ಹಂಬಲ ಮಾತ್ರ ಹಾಗೇ ಇದೆ😀
'ಮೊದಲು ನನ್ನ ಮನೆಗೆ. ಏನೆಲ್ಲ ಒಳ್ಳೆಯದು ಬೇಕೋ ಅದನ್ನು ನಾನು ಬೇಳಿತಿನಿ....' ಹೆಚ್ಚಿದ್ದರೆ ಮಾರಾಟ ಎಂಬ ನಿಲುವು ಕೆಲ ಕೃಷಿಕರದು. 'ಕೃಷಿಕರಿದ್ದರೆ ಚೆನ್ನ, ದುಡಿಯುವವರಿದ್ದರೆ ಅನ್ನ'
3, ಸತ್ಯ ಮನದಟ್ಟಾಗಿದೆ.
ಒಳ್ಳೆಯ ಚಹಾ ಬೇಕು, ಹಸು ಸಾಕೋದು ಕಷ್ಟ.
ಆರೋಗ್ಯ ದೃಷ್ಟಿಯಿಂದ ಉತ್ತಮ ನಾಟಿ ಅಕ್ಕಿ ಬೇಕು, ಭತ್ತದ ಬೇಸಾಯ ಸಾಧ್ಯವಿಲ್ಲ.... ಎಂಬ ಸಮಸ್ಯೆ.
ಹಾಗಾದರೆ ಒಂದು ಕೆಲಸ ಮಾಡಿ . ಆಗಾಗ ಕೃಷಿ ಪ್ರವಾಸ ಮಾಡಿ, ಕೃಷಿಕರನ್ನು ಮಾತಾಡಿಸಿ ಪರಿಚಯ ಮಾಡಿಕೊಳ್ಳಿ. ನಿಮಗೆ ವಿಶ್ವಾಸ ಮೂಡಿದಾಗ ನೇರ ರೈತರಿಂದ ಖರೀದಿ ಮಾಡಿ.
ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.
ಕೇವಲ ಮರ ಬೆಳೆಸಿದರೆ ಸಾಕಾಗಲ್ಲಾ! ಅದೆಷ್ಟೋ ವರುಷಗಳಿಂದ ಬೆಳೆದ ಈ ಸಂಕೀರ್ಣ ಕಾಡುಗಳನ್ನು ಕಾಪಾಡೋದು ಅತ್ಯವಶ್ಯಕ. ನಾವು ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಕಾಡು ಕಳೆದುಕೊಂಡಿದು ಆಯ್ತು, ಸಕಾಲಕ್ಕೆ ಮಳೆ ಬಾರದೇ ಅಕಾಲಿಕ ಮಳೆಗೆ ಜನ ಪರದಾಡಿದು ಆಯ್ತು ಆದ್ರೂ ನಮಗೆ ಬುದ್ಧಿ ಬಂದಿಲ್ಲಾ!!
ಯಾಕಂದ್ರೆ ನಮಗೆ ಅದ ಬೇಡ, ವಿದ್ಯಾವಂತರಾದರು ಕಾಡು ,