1/n
ನೆನ್ನೆಯಿಂದ ಅನಿಸುತ್ತ ಇರುವುದು, ಅಕಸ್ಮಾತ್ ಹಂಸಲೇಖ ಅವರು ಪೇಜಾವರರ ಹೆಸರು ಹೇಳದೆ ಬೇರೆ ಮಠದ ಸ್ವಾಮೀಜಿಗಳ ಹೆಸರು ಹೇಳಿದ್ದರೆ ಸಂಗಿಗಳು ಇಷ್ಟೊಂದು ಗಲಾಟೆ ಮಾಡ್ತಾ ಇದ್ದರ?
ಯಾಕಂದ್ರೆ ನಮ್ಮ ವೈಕ್ತಿಕ ಅನುಭವದ ಪ್ರಕಾರ, ಉಡುಪಿ ಮಠ ಯಾವತ್ತಿಗೂ ಅಷ್ಟು ಸಹಿಷ್ಣು ಮಠ ಅಲ್ಲ. ಬೇರೆ ಜಾತಿ ಧಾರ್ಮ ಬಿಡಿ, ಹಿಂದೂ ಧರ್ಮದ ಪ್ರಸಿದ್ಧ Image
2/n
ತತ್ವಜ್ಞಾನಿ ಅದ್ವೈತ ಧರ್ಮದ ಪ್ರತಿಪಾದಕ ಶಂಕರ ಭಗವತ್ಪಾದರನ್ನು ಕಂಡ್ರೆ ಉಡುಪಿ ಮಠಕ್ಕೆ ಆಗಲ್ಲ.
ಉಡಪಿಮಠಮಾತ್ರವಲ್ಲ ಮಧ್ವಪರಂಪರೆಯಲ್ಲಿ ಯಾರಿಗೂ ಶಂಕರಾಚಾರ್ಯರ ಬಗ್ಗೆ ಗೌರವಯಿಲ್ಲ. ಅವರ ಮತದ ಗ್ರಂಥಗಳಲ್ಲಿ ಶಂಕರರನ್ನ "(ಜಾತಿ)ಸಂಕರ" ನೆಂದು, ಅವರ ತಾಯಿ ನಡತೆಗೆಟ್ಟವಳೆಂದೂ, ಶಂಕರರು ಮಣಿಮಂತನೆಂಬ ರಾಕ್ಷಸ.... ಹೀಗೆಲ್ಲಾ ನಿಂದನೆ ಉಂಟು. Image
3/n
ಶಂಕರರ ನಿಂದನೆ ವಿರುದ್ಧ ಹೋರಾಟವಾದಾಗ ಪೇಜಾವರರು ಅಂತಹ ಗ್ರಂಥಗಳ ಮುದ್ರಣ, ಪ್ರವಚನ, ಪಾಠ ನಿಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಅವರ ವಿದ್ಯಾಪೀಠದಲ್ಲಿ ಇಂದಿಗೂ ಶಂಕರರ ನಿಂದನೆಯ ಗ್ರಂಥ ಮುದ್ರಣ, ಪಾಠ, ಪ್ರವಚನ ನಡೆಯುತ್ತಿದೆ. ಇಷ್ಟೆಲ್ಲಾ ಇದ್ದರೂ ಶಂಕರ ಭಗವತ್ಪಾದರ ಪೀಠ ದಕ್ಷಿಣಾನ್ಮಯ ಶ್ರೀ ಶೃಂಗೇರಿ ಪೀಠ ಯಾವತ್ತೂ ಉಡುಪಿ ಮಠದ ಜೊತೆ Image
4/n
ಜಗಳಕ್ಕಾಗಲಿ, ಖಂಡನೆಗಾಗಲೀ ಬಂದಿಲ್ಲ, ಬರುವುದೂ ಇಲ್ಲ. ಅದು ಶೃಂಗೇರಿ ಪೀಠದ ದೊಡ್ಡತನ. ಹಿಂದೆ ಯಾರೋ ಮುಸ್ಲಿಂ ಹುಡುಗ ಶೃಂಗೇರಿ ಜಗದ್ಗುರುಗಳ ಬಗ್ಗೆ ಅಸಹ್ಯವಾಗಿ ಬರೆದಾಗ ಕೂಡ ಮಠ ಏನೂ ಹೇಳಿರಲಿಲ್ಲ. ಆದ್ರೆ ಖುದ್ದು ಮುಸ್ಲಿಂ ಧರ್ಮ ಮುಖಂಡರೇ ಮುಂದೆ ಬಂದು ಜಗದ್ಗುರಗಳ ಹತ್ತಿರ ಮಾತಾಡಿ ಆ ಹುಡುಗನಿಗೆ ಕ್ಷಮಾದಾನ ಕೊಡಿಸಿದ್ದರು.
n/n
ಸಿಂಪಲ್ ಆಗಿ ಹೇಳಬೇಕು ಅಂದ್ರೆ ಮೂಲದಿಂದಲೇ ಉಡುಪಿ ಮಠ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುವುದಿಲ್ಲ, ಬೇಕಾದ್ರೆ ಅದು ಮಾಡಬಹುದು.
ಎಲ್ಲಾ ಮಠಗಳೂ ಶೃಂಗೇರಿ ಮಠ ಅಲ್ಲ. ಅದಕ್ಕೆ ಹಾರೆಸ್ಸೆಸ್ ಕೂಡ ಆಯ್ದುಕೊಂಡಿದ್ದು ಉಡುಪಿ ಮಠವನ್ನು. ಶೃಂಗೇರಿ ಮಠ ಸೊಪ್ಪು ಹಾಕಲ್ಲ ಅಂತ ಅದಕ್ಕೆ ಗೊತ್ತು.

• • •

Missing some Tweet in this thread? You can try to force a refresh
 

Keep Current with Sri Sri Sri Srimad Jagatmindri Mahaswamigal 🛕

Sri Sri Sri Srimad Jagatmindri Mahaswamigal 🛕 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @jagatmindri

17 Nov
1/n
ಇವತ್ತಿನ ಬಾಗಲಕೋಟೆಯ ಬಾದಾಮಿಯಲ್ಲಿ ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ಅಣ್ಣ ತಮ್ಮ ಇದ್ದರು ಅಂತೇ. ಮದ್ಯೆ ಏಷಿಯಾ ದಿಂದ ಬಂದ ವೈದಿಕರ ಪ್ರಕಾರ ಇವರು ರಾಕ್ಷಸರು. ಅದೇ ನಮ್ಮ ಮಹಿಷಾಸುರ, ರಾವಣ, ಬಲಿ, ನರಕಾಸುರ ಮೊದಲಾದವರ ತರಹ. ಇಲ್ಲಿ ಆರ್ಯ ಮತ್ತು ದ್ರಾವಿಡ ವಾದವನ್ನು ತಳುಕು ಹಾಕಿ ನೋಡಿದರೆ ಬಹುಪಾಲು ರಾಕ್ಷಸರು Image
2/n
ನಮ್ಮ ದ್ರಾವಿಡ ಸಂಸ್ಕೃತಿಗೆ ಸೇರುತ್ತಾರೆ. ಇರಲಿ ನಮಗೆ ಅದನ್ನು ಮತ್ತೆ ಮತ್ತೆ ಹೇಳುವ ಇಚ್ಛೆ ಇಲ್ಲ. ವಾಪಸ್ ನಮ್ಮ ಬ್ರದರ್ಸ್ ಹತ್ರ ಬರುವ.
ಈ ಬ್ರದರ್ಸ್ ಗೆ ಬಿಟ್ಟಿಯಾಗಿ, ದುಡಿಯದೆ ತಿನ್ನುವವರನ್ನು ಕಂಡರೆ ಅಗ್ತಾ ಇರಲಿಲ್ಲ ಅಂತೇ. ಕೆಲವರಿಗೆ ಟ್ರಾಫಿಕ್ ಅಲ್ಲಿ ಮೈ ಕೈ ಸರಿ ಇದ್ದು ಭಿಕ್ಷೆ ಬೇಡುವವರನ್ನು ಕಂಡ್ರೆ ಮೈ ಉರಿತದಲ್ಲ ಹಂಗೆ.
3/n
ಸೊ ಅಣ್ಣ ತಮ್ಮ ಒಂದು ಮಸ್ತ್ ಗೇಂ ಮಾಡ್ತಾರೆ ಅಂತೇ.
ವೈದಿಕರ ಕಥೆ ಪ್ರಕಾರ ಇಲ್ವಲನಿಗೆ ಮೃತ ಸಂಜೀವಿನಿ ವಿದ್ಯೆ ಗೊತ್ತಿತ್ತಂತೆ. ಅಂದ್ರೆ ಸತ್ತವರನ್ನು ಬದುಕಿಸುವ ವಿದ್ಯೆ. ಮತ್ತು ವಾತಾಪಿಗೆ ಯಾವ ಪ್ರಾಣಿ ಆಗಿ ಬೇಕಾದರೂ ಮಾರ್ಪಾಡು ಆಗುವ ವಿದ್ಯೆ.
ಸೊ ಅಣ್ಣ ತಮ್ಮ ಏನ್ಮಾಡ್ತಾ ಇದ್ರೂ ಅಂದ್ರೆ ಅವರ ಮನೆಯ ದಾರಿಯಲ್ಲಿ ಭೋಜನ ಭಿಕ್ಷೆ ಕೋರಿ
Read 11 tweets
15 Nov
1/n
ಸನ್ನಿಧಾನಂ ಗಳ ಆನ್ಲೈನ್ ಮತ್ತು ಆಫ್ಲೈನ್ ಮಿತ್ರವೃಂದದಲ್ಲಿ ಹಲವಾರು ದಲಿತರು ಇದ್ದಾರೆ. ಕೆಲವರು ಹೇಳುವುದುಂಟು ನೀವು ಗ್ರೇಟ್ ಕಣ್ರೀ, ವಾಯ್ಸ್ ಎತ್ತುತ್ತಾ ಇದ್ದೀರಾ..
ಈ ವಿಷಯದ ಬಗ್ಗೆಯೇ ಇವತ್ತಿನ ಪ್ರವಚನ.
ಈ ರೀತಿ ಸಮಾಜದಲ್ಲಿ ಮೇಲ್ವರ್ಗ ಅನ್ನಿಸಿಕೊಳ್ಳುವವರಿಂದ ದಲಿತರ ಹೋರಾಟಗಳು ಹೈಜಾಕ್ ಆಗುವ ಎಲ್ಲ ಚಾನ್ಸಸ್ ಇದೆ.
2/n
ಹಾಗಾಗಿ ನಮ್ಮನ್ನು ಅಟ್ಟ ಹತ್ತಿಸಬೇಡಿ. ನಾವು ಯಾವತ್ತಿಗೂ ವಾಯ್ಸ್ ಆಗಲು ಸಾಧ್ಯ ಇಲ್ಲ ಯಾಕಂದ್ರೆ ನಾವು ಏನೇ ಮಾಡಿದರು ಸಮಾಜದಲ್ಲಿ ನಮಗೊಂದು ಕಂಫರ್ಟಬಲ್ ಸ್ಥಾನ ಇದೆ. ಇಲ್ಲಿ ಹೋರಾಟವನ್ನು ಅವರೇ ಮಾಡಬೇಕು. ಇದಕ್ಕೊಂದು ಉದಾಹರಣೆ ಕೊಡುವ. ಒಂದು ಮನೆ ಇದೆ ಅಲ್ಲಿ ಮಗ ಮಗಳು ಇದ್ದಾರೆ. ಇಲ್ಲಿ ಮಗ ಅವನು ಊಟ ಮಾಡಿದ ತಟ್ಟೆ ತೊಳೀತಾನೆ,
3/n
ಅಲ್ಪ ಸ್ವಲ್ಪ ಮನೆ ಗುಡಿಸಿ ಒರೆಸುತ್ತಾನೆ ಕೂಡ. ಎಲ್ಲ ಕಡೆ ಅವನ ಬಗ್ಗೆಯೇ ಮಾತು “ಎಷ್ಟು ಒಳ್ಳೆ ಹುಡುಗ, ಮನೆ ಕೆಲಸ ಎಲ್ಲ ಮಾಡ್ತಾನೆ, ತುಂಬಾ ಗ್ರೇಟು, ಮಗ ಅಂದ್ರೆ ಹಾಗಿರಬೇಕು”
ಆಮೇಲೆ ಈ ಹುಡುಗನೇ ಹೆಣ್ಣು ಮಕ್ಕಳ ಕಷ್ಟದ ಬದುಕನ್ನು ಜನರ ಮುಂದೆ ಬಿಡಿಸಿ ಇಟ್ಟು ಅವರ ಪರ ಧ್ವನಿ ಎತ್ತುತ್ತಾನೆ ಅಂದುಕೊಳ್ಳಿ
ಇಲ್ಲಿ ಆ ಹುಡುಗ ಅರಿಯದೆ
Read 7 tweets
18 Sep
1/n
ಈವಾಗ ಅಂತೂ ಎಲ್ಲಿ ನೋಡಿದರೂ ಸನಾತನ ಪ್ರೊಗ್ರೆಸ್ಸೂ, ವಿಜ್ಞಾನ, ಕಲೆ ಅಂತ ನಮ್ಮ ದೇವಾಲಯಗಳ ಬಗ್ಗೆ ಪುಂಗುವುದು. ಆ ಗೋಪುರ ನೋಡಿ ಹೇಗೆ ಪರ್ಫೆಕ್ಟ್ ಆಗಿ ೯೦ ಡಿಗ್ರಿ ಇದೆ, ಇದು ನೋಡಿ ಹೇಗೆ ಲೈಟ್ ಬೀಳುತ್ತೆ, ಇಲ್ಲಿ ನೋಡಿ ಗಾಳಿಯಲ್ಲಿ ನಿಂತ ಕಂಬ, ಅದು ನೋಡಿ ಸಿಂಹದ ಬಾಯಲ್ಲಿ ಇರುವ ಕಲ್ಲಿನ ಚೆಂಡು…
2/n
ಆಹಾ ನಮ್ಮ ಸನಾತನಿ ಶಿಲ್ಪಕಲೆ! ವಿಶ್ವಗುರು…
ನಮ್ಮ ದೇವಾಲಯಗಳ ಶಿಲ್ಪಕಲೆಗಳ ಬಗ್ಗೆ ಎರಡು ಮಾತಿಲ್ಲ. ನಮ್ಮ ಶಿಲ್ಪಕಲೆಗಳು ಜಗತ್ತಿನ ಅದ್ಭುತಗಳಲ್ಲಿ ಒಂದು. ಇವತ್ತಿಗೂ ಅವು ವಿಶೇಷವೇ. ಒಬ್ಬ ವಿನ್ಯಾಸಕರನಾಗಿ ನೋಡಿದರೆ ನಮಗೆ ಪ್ರತಿಯೊಂದೂ ಅಮೋಘವಾಗಿ ಕಾಣುತ್ತವೆ, ಅವುಗಳ ಹಿಂದಿನ ಶಿಲ್ಪಿಯ ಶ್ರಮ ಕಾಣುತ್ತದೆ.
3/n
ಶಿಲ್ಪಕಲೆ ಅನ್ನುವುದು ಒಂದು ಕಠಿಣ ವಿದ್ಯೆ. ಇದು ಸುಮ್ಮನೆ ದಕ್ಕುವುದಲ್ಲ, ಹಲವಾರು ವರ್ಷಗಳ ಪರಿಶ್ರಮ ಬೇಕು.
ಭಾರತೀಯ ಶಿಲ್ಪಕಲೆಗಳ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗ ಅರಿವಾಗಿದ್ದು ಇದು. ಇಲ್ಲಿ ಶಿಲ್ಪಕಲೆ ಅನ್ನುವುದು ವಂಶ ಪಾರಂಪರ್ಯ ವೃತ್ತಿ ಆಗಿದೆ. ಕಾರಣ ಮೇಲೆ ಹೇಳಿದ ಹಾಗೆ ವರ್ಷಾನುಗಟ್ಟಲೆ ಕಲಿಯಬೇಕಾದ ಅನಿವಾರ್ಯತೆ.
Read 11 tweets
18 Sep
1/n
ಇವತ್ತಿನ ಪ್ರವಚನ ಮತ್ತೆ ಮಹಿಳಾ ಸ್ವಾತಂತ್ರ ದ ಬಗ್ಗೆ. ಯಾವುದೇ ಪುಸ್ತಕದ ಬದನೇ ಕಾಯಿ ಅಲ್ಲ, ಕೇವಲ ಸನ್ನಿಧಾನಂ ಗಳ ಅನುಭವ ಅಷ್ಟೇ.
ಹಿಂದೆ ಹೇಳಿದ್ದೆವು ಹೇಗೆ ಕರ್ಮಠ ಬ್ರಾಹ್ಮಣ ಮನೆಗಳಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ ಇದೆ ಅಂತ. ಸನ್ನಿಧಾನಂ ಗಳು ಬೆಳೆದದ್ದು ಕರ್ಮಠ ವಾತಾವರಣವೇ ಆದರೂ ನಮ್ಮಲ್ಲಿ ಸ್ವಲ್ಪ ಮಟ್ಟಿಗೆ
2/n
ಸ್ವಾತಂತ್ರ್ಯ ಇತ್ತು. ಬೇರೆ ಕರ್ಮಠ ಮನೆಗಳಿಗಿಂತ ಸ್ವಲ್ಪ ಉತ್ತಮ ಅನ್ನುವಷ್ಟು! ನಮ್ಮಲ್ಲಿ ಸ್ತ್ರೀಯರು ಸ್ಟೇರಿಂಗ್ ವೀಲ್ ಹಿಡಿಯುವಷ್ಟು, ಒಬ್ಬರೇ ಬ್ಯಾಂಕ್, ಕಚೇರಿ ವ್ಯವಹಾರಗಳಿಗೆ ಹೋಗುವಷ್ಟು ಅಂತ ಹೇಳಬಹುದು. ಹಾಗಿದ್ದೂ, ಸ್ತ್ರೀಯರ ಸ್ಥಾನಮಾನ ಪುರುಷರಿಗಿಂತ ಕಮ್ಮಿಯೇ. ದಶಕಗಳ ಹಿಂದೆ ನಮ್ಮಲ್ಲಿ ಕೂಡ ನಿಜ ಮನೆಗೆ ಮುಟ್ಟಾದ ಸ್ತ್ರೀಯರಿಗೆ
3/n
ಪ್ರವೇಶ ಇರಲಿಲ್ಲ. ಅಕಸ್ಮಾತ್ ಅವರ ಬಟ್ಟೆ ಸೋಕಿದರೆ ಜನಿವಾರ ಬದಲಿಸಬೇಕಾದ ಸ್ಥಿತಿ ಇತ್ತು. ಇವತ್ತು ನಮ್ಮ ಜನಿವಾರ ಎಲ್ಲಿದೆ ಅಂತ ನಮಗೇ ಗೊತ್ತಿಲ್ಲ! ಉಪಕರ್ಮದ ಆಸುಪಾಸಿನಲ್ಲಿ ಪ್ರತ್ಯಕ್ಷ ಆಗುತ್ತೆ ಅಷ್ಟೇ. ಅಂದ್ರೆ ನಮಗೆ ಅಂದ್ರೆ ಪುರುಷರಿಗೆ ಕರ್ಮಠ ಸಂಕೋಲೆಯಿಂದ ಹೊರಗೆ ಬಂದರೂ ಸಮಾಜ ನಮ್ಮನ್ನು ಮೊದಲಿನ ತರಹವೇ ಗೌರವಿಸುತ್ತದೆ
Read 9 tweets
17 Sep
1/n
कर्मण्येवाधिकारस्ते मा फलेषु कदाचन।
मा कर्मफलहेतुर्भूर्मा ते सङ्गोऽस्त्वकर्मणि॥ २-४७

ಇದು ಭಗವದ್ಗೀತೆಯ ಎರಡನೇ ಅಧ್ಯಾಯದ ೪೭ ನೇ ಶ್ಲೋಕ. ಇದನ್ನು ನೀವು ಬಹಳ ಕಡೆ ಕೇಳಿರುತ್ತೀರಿ. ದೂರದರ್ಶನದ ವಿಷ್ಣುಪುರಾಣ ಧಾರಾವಾಹಿಯ ಪೀಠಿಕೆ ಇದೇ.
ಸನ್ನಿಧಾನಂ ಗಳ ಪ್ರಕಾರ ಇದು ಶೂದ್ರ ಗ್ಯಾಸ್ ಲೈಟಿಂಗ್ ನ ಒಂದು ಯಶಸ್ವೀ ಅಭಿಯಾನ!
2/n

ಇದು ಹೇಗೆ? ಸನ್ನಿಧಾನಂ ಗಳು ನಮ್ಮ ಧರ್ಮಗ್ರಂಥದ ಅವಮಾನ ಮಾಡ್ತಾ ಇದ್ದಾರೆ ಅಂತ ಕೋಪವೇ?
ಸ್ವಲ್ಪ ತಡ್ಕೊಳಿ!
ಈ ಶ್ಲೋಕದ ಅರ್ಥ ಏನು ಅಂತ ನೋಡುವ. ಇಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುವುದು, ಕುರುಕ್ಷೇತ್ರದಲ್ಲಿ.
ಯಾವಾಗ?
ಅರ್ಜುನನು ತನ್ನ ಸಂಬಂಧಿಕರ ವಿರುದ್ಧ ಹೋರಾಡಲು ಹಿಂಜರಿದಾಗ.
3/n
ಕೃಷ್ಣ ಅಂತಾನೆ
“ನಿನಗೆ ಕರ್ಮದಲ್ಲಿ ಅಂದ್ರೆ ಮಾಡುವ ಕೆಲ್ಸದಲ್ಲಿ ಮಾತ್ರ ಅಧಿಕಾರ ಇದೆ, ಅದರ ಫಲಿತಾಂಶ ಅಥವಾ ಫಲದಲ್ಲಿ ಅಲ್ಲ.
ಹಾಗಾಗಿ ಕೆಲ್ಸದ ಫಲಿತಾಂಶ ನಿನ್ನ ಗುರಿ ಆಗಬಾರದು ಹಾಗೂ ಕೆಲಸ ಮಾಡದೇ ಇರುವುದರ ಬಗ್ಗೆ ಕೂಡ ನೀನು ಆಸಕ್ತಿ ತೋರಿಸಬಾರದು”
ಈ ಕಾಂಟೆಕ್ಸ್ಟ್ ಇದ್ದಿದ್ದು ಅರ್ಜುನನ ಆ ಸಂಧರ್ಭಕ್ಕೆ ಮಾತ್ರ.
Read 7 tweets
31 Jul
1/n
ಇತ್ತೀಚಿನ ಆಂಟಿ ರಿಸೆರ್ವೆಷನ್ ಕೂಗಿನಲ್ಲಿ ಬರುತ್ತಿರುವ ಇನ್ನೊಂದು ವಾದ “ಹೌದು ಅವರು ಶೋಷಿತರು ಇರಬಹುದು ಆದ್ರೆ ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಮಾಡಿದ್ದ (ಒಂದು ವೇಳೆ ಮಾಡಿದ್ದರೆ!) ಶೋಷಣೆಗೆ ನಾವ್ಯಾಕೆ ಇವತ್ತು ಬೆಲೆ ತೆರಬೇಕು? ನಮ್ಮ ತಪ್ಪೇನಿದೆ?”
ಇದಕ್ಕೆ ನೇರವಾಗಿ ಉತ್ತರಿಸುವ ಮುಂಚೆ ಒಂದು ಕಥೆ.
2/n
ಅವನು ಒಬ್ಬ ಸಾಮಾನ್ಯ ಹುಡುಗ, ಜನರಲ್ ಕೆಟಗರಿ ಅವನು ಮಲೆನಾಡ ಪ್ರಾಂತ್ಯ. ಪಿಯುಸಿ ನಂತರ ಬರೆದ ಸಿ ಇ ಟಿ ಅಲ್ಲಿ ಐದೋ ಆರೋ ಸಾವಿರ ರ್ಯಾಂಕ್ ಬಂದಿತ್ತು. ಅಯ್ಯೋ ಬಿ ಎಮ್ಮೆಸ್ ಅಲ್ಲಿ ಈ ದರಿದ್ರ ರಿಸೆರ್ವೆಷನ್ ಇಂದ ಕಂಪ್ಯೂಟರ್ ಸೈನ್ಸ್ ತಪ್ಪಿ ಹೋಯಿತು ಅಂತ ಅತ್ಕೋತಾ ಮೆಕ್ಯಾನಿಕಲ್ ತಗೊಂಡ. ಅದೇ ರ್ಯಾಂಕ್ ಗೆ ಬೇರೆ ಕಾಲೇಜಲ್ಲಿ
3/n
ಕಂಪ್ಯೂಟರ್ ಸೈನ್ಸ್ ಸೀಟು ಇತ್ತು ಅದು ಬೇರೆ ಮಾತು. ಇರಲಿ. ಅವನ ಪ್ರಾಂತ್ಯದಲ್ಲೇ ಇದ್ದ ಕಾಲೇಜಿನಲ್ಲಿ ಎಲ್ಲ ಸೀಟುಗಳು ಕೊಳೆಯುತ್ತಾ ಬಿದ್ದಿದ್ದವು ಕೂಡಾ!
ಸನ್ನಿಧಾನಂ ಅವ್ನ ಜೊತೆ ಸಂವಾದ ಮಾಡುವಾಗ ಬಂದ ಪ್ರಶ್ನೆ
“ಏನು ನೀನು ಬೆಂಗಳೂರಿನಲ್ಲಿ ಎಲ್ಲಿದ್ದೆ? ಪಿಜಿ ಯಾ ಅಥವಾ ಕಾಲೇಜು ಹಾಸ್ಟೆಲ್ಲ?”
Read 9 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal

Thank you for your support!

Follow Us on Twitter!

:(