1/n ಈವಾಗ ಅಂತೂ ಎಲ್ಲಿ ನೋಡಿದರೂ ಸನಾತನ ಪ್ರೊಗ್ರೆಸ್ಸೂ, ವಿಜ್ಞಾನ, ಕಲೆ ಅಂತ ನಮ್ಮ ದೇವಾಲಯಗಳ ಬಗ್ಗೆ ಪುಂಗುವುದು. ಆ ಗೋಪುರ ನೋಡಿ ಹೇಗೆ ಪರ್ಫೆಕ್ಟ್ ಆಗಿ ೯೦ ಡಿಗ್ರಿ ಇದೆ, ಇದು ನೋಡಿ ಹೇಗೆ ಲೈಟ್ ಬೀಳುತ್ತೆ, ಇಲ್ಲಿ ನೋಡಿ ಗಾಳಿಯಲ್ಲಿ ನಿಂತ ಕಂಬ, ಅದು ನೋಡಿ ಸಿಂಹದ ಬಾಯಲ್ಲಿ ಇರುವ ಕಲ್ಲಿನ ಚೆಂಡು…
2/n ಆಹಾ ನಮ್ಮ ಸನಾತನಿ ಶಿಲ್ಪಕಲೆ! ವಿಶ್ವಗುರು…
ನಮ್ಮ ದೇವಾಲಯಗಳ ಶಿಲ್ಪಕಲೆಗಳ ಬಗ್ಗೆ ಎರಡು ಮಾತಿಲ್ಲ. ನಮ್ಮ ಶಿಲ್ಪಕಲೆಗಳು ಜಗತ್ತಿನ ಅದ್ಭುತಗಳಲ್ಲಿ ಒಂದು. ಇವತ್ತಿಗೂ ಅವು ವಿಶೇಷವೇ. ಒಬ್ಬ ವಿನ್ಯಾಸಕರನಾಗಿ ನೋಡಿದರೆ ನಮಗೆ ಪ್ರತಿಯೊಂದೂ ಅಮೋಘವಾಗಿ ಕಾಣುತ್ತವೆ, ಅವುಗಳ ಹಿಂದಿನ ಶಿಲ್ಪಿಯ ಶ್ರಮ ಕಾಣುತ್ತದೆ.
3/n ಶಿಲ್ಪಕಲೆ ಅನ್ನುವುದು ಒಂದು ಕಠಿಣ ವಿದ್ಯೆ. ಇದು ಸುಮ್ಮನೆ ದಕ್ಕುವುದಲ್ಲ, ಹಲವಾರು ವರ್ಷಗಳ ಪರಿಶ್ರಮ ಬೇಕು.
ಭಾರತೀಯ ಶಿಲ್ಪಕಲೆಗಳ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗ ಅರಿವಾಗಿದ್ದು ಇದು. ಇಲ್ಲಿ ಶಿಲ್ಪಕಲೆ ಅನ್ನುವುದು ವಂಶ ಪಾರಂಪರ್ಯ ವೃತ್ತಿ ಆಗಿದೆ. ಕಾರಣ ಮೇಲೆ ಹೇಳಿದ ಹಾಗೆ ವರ್ಷಾನುಗಟ್ಟಲೆ ಕಲಿಯಬೇಕಾದ ಅನಿವಾರ್ಯತೆ.
4/n ಹಾಗಾಗಿ ಶಿಲ್ಪಿಯ ಮನೆ ಒಂದು ವರ್ಗ ವಾಗಿ ಬದಲಾಗಿದ್ದಾರೆ ಆಶ್ಚರ್ಯ ಇಲ್ಲ.
ಸೋಜಿಗ ಅಂದ್ರೆ ಇದಕ್ಕೆ ಕೂಡ ಜಾತಿ ವಿಂಗಡಣೆ ಅಂಟಿಕೊಳ್ಳುತ್ತೆ! ಬಹುತೇಕ ಶಿಲ್ಪಿಗಳು ವಿಶ್ವಕರ್ಮ ಅನ್ನುವ ಜಾತಿಗೆ ಸೇರುತ್ತಾರೆ. ಇವರಲ್ಲಿ ಚಿತ್ರಕಾರರೂ ಇದ್ದಾರೆ, ಬಂಗಾರದ ಕೆಲ್ಸದವರೂ, ಕುಸುರಿ ಅವರೂ, ಆಯುಧ ಮಾಡುವವರು, ಸಂಗೀತಕಾರರು ಹೀಗೆ.
5/n ಒಂಥರಾ ಕಲೆಗೆ ಇರುವ ಒಂದು ಜಾತಿ.
ಆದ್ರೆ ಇಲ್ಲೊಂದು ಕ್ಯಾಚ್ ಇದೆ!
ಈ ಸನಾತನಿಗಳು ಹಂಚಿಕೊಳ್ಳುತ್ತಿರುವ ಅದ್ಭುತ, ವಿಶ್ವಗುರು.. ಅನ್ನುವ ದೇವಾಲಯಗಲನ್ನು ಕೆತ್ತಿದ, ಆ ಮೂರ್ತಿಗಳನ್ನು ಮಾಡಿದ, ಆ ಮೂರ್ತಿಯ ಆಭರಣಗಳನ್ನು ಮಾಡಿದ ಶಿಲ್ಪಿಗೆ ಆ ದೇವಾಲಯ ಕಟ್ಟಿ ಆದ ಮೇಲೆ ಪ್ರವೇಶ ಇಲ್ಲ! ಯಾಕಂದ್ರೆ ವರ್ಣಾಶ್ರಮದ ಪ್ರಕಾರ ಅವನು ಒಬ್ಬ ಶೂದ್ರ!
6/n
ನಂಬಲು ಆಗುತ್ತಾ ಇಲ್ಲವೇ?
ಆದ್ರೆ ಇದು ಸತ್ಯ. ಇವತ್ತಿಗೂ ಈ ವಿಶ್ವಕರ್ಮ ಸಮುದಾಯದವರಿಗೆ ಸನಾತನ ದೇವಾಲಯಗಳ ವಿಶೇಷ ಸ್ಥಳಗಳಿಗೆ ಪ್ರವೇಶ ಇಲ್ಲ. ವೈದಿಕ ಪಂಕ್ತಿಗಳಲ್ಲಿ ಕೂರುವ ಹಾಗಿಲ್ಲ.
ಇದೇ ರೀತಿ ದೇವಾಲಯದ ವಾದ್ಯಗಾರರಿಗೂ ಇದೆ.
ಏನೂ ಕಿತ್ತು ದಬ್ಬಾಕದ ತಟ್ಟೆ ಕಾಸು ವರ್ಗ ಮಾತ್ರ ಮನೆಯಲ್ಲಿ ಮಾಲೀಕರು ಇಲ್ಲದಾಗ ಬಾಗಿಲು ತೆಗೆದಿಟ್ಟರೆ
7/n ಎಲ್ಲಾ ಕಡೆ ಓಡಾಡಿ ಕುಣಿದಾಡುವ ನಾಯಿ ತರಹ ದೇವಾಲಯಗಳಲ್ಲಿ ರಾಜ್ಯಭಾರ ಮಾಡುತ್ತೆ.
ದುರಂತ ಅಂದ್ರೆ ಇವತ್ತಿನ ವಿಶ್ವಕರ್ಮ ಸಮುದಾಯದ ಜನಕ್ಕೆ ಈ ಬೇಧ ಭಾವ ಅರ್ಥ ಆಗುತ್ತಾ ಇಲ್ಲ.
ನಮ್ಮ ಗೊರೂರು ರಾಮಸ್ವಾಮಿ ಅಯ್ಯಂಗಾರರ ಒಂದು ಪುಸ್ತ ಇದೆ ಕಮ್ಮಾರ ವೀರಭದ್ರಾಚಾರಿ ಅಂತ, ಇಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪ ಮಾಡುತ್ತಾರೆ.
8/n ನಮ್ಮಲ್ಲಿ ಇಂತಹ ಅನೇಕ ಜಾತಿ/ಸಮುದಾಯಗಳು ಇವೆ. ನಿಜ ಅರ್ಥದಲ್ಲಿ ಇವತ್ತು ಏನು ಸಂಘಿಗಳು ಸನಾತನ ಅಚೀವ್ಮೆಂಟು ಅಂತ ಪುಂಗುತ್ತಾರಲ್ಲ, ಅವನ್ನು ಕಟ್ಟಿದ ಮಂದಿ. ಆದ್ರೆ ಅವರನ್ನು ಯಾವತ್ತಿಗೂ ಗುರುತಿಸಲ್ಲ. ಕ್ರೆಡಿಟ್ ಎಲ್ಲ ತಗೋಳೋದು ಸನಾತನ ಧರ್ಮದ ಮಾಲೀಕರು!
ದೇವಾಲಯಗಳು ಶಿಲ್ಪಕಲೆಯ ಶಾಲೆಗಳು ಇದ್ದ ಹಾಗೆ.
9/n ಅವನ್ನು ಒಂದು ವರ್ಗದ ಸುಪರ್ಧಿಗೆ ಕೊಟ್ಟು ಬಿಟ್ಟರೆ ಜಗತ್ತಿಗೆ ಈ ಕಲೆಯ ಬಗ್ಗೆ ತಿಳಿಯುವುದಿಲ್ಲ. ನಮ್ಮ ಪ್ರತಿಯೊಂದು ದೇವಾಲಯಗಳೂ ಒಂದು ಶಿಲ್ಪಕಲೆಯ ಮ್ಯೂಸಿಯಂ. ಇವನ್ನು ಸರ್ವರಿಗೂ ತೆರೆಯಬೇಕು. ಯಾಕಂದ್ರೆ ಶಿಲ್ಪಿಯ ಪರಿಶ್ರಮ ಜಗತ್ತಿಗೆ ಗೊತ್ತಾಗಬೇಕು.ಮೈಕೆಲೆಂಜಿಲೊ ಡೇವಿಡ್ ಅದಷ್ಟೇ ಪ್ರಸಿದ್ಧ ಜಕಣಾಚಾರಿ ಯ ಚೆನ್ನಕೇಶವನೂ ಆಗಬಹುದು,
10/n ಮಡಿ ಮೈಲಿಗೆ ಬಿಟ್ಟರೆ!
ಜಗತ್ತಿನ ಕಲೆಗೂ ಒಂದು ಜಾತಿ ಹಣೆಪಟ್ಟಿ ಅಂಟಿಸಿದ್ದರೆ ಅದು ಸನಾತನ ಧರ್ಮ ಮಾತ್ರ. ಕೆಲವು ತಿಂಗಳಗಳ ಹಿಂದೆ ನಮ್ಮ ಕನ್ನಡದ ಹೆಮ್ಮೆ ಸತೀಶ್ ಆಚಾರ್ಯ ಅವರ ಪೋಸ್ಟ್ ಒಂದಕ್ಕೆ ಉರಿದುಕೊಂಡು ಒಂದಷ್ಟು ಮಂದಿ ಅವ್ರ ನಿಂದನೆ ಮಾಡುವಾಗ ಅವ್ರ ಜಾತಿಯನ್ನು ಎಳೆದು ತಂದ್ರು. ಕುತೂಹಲದಿಂದ ಅದರ ಬಗ್ಗೆ ಅಧ್ಯಯನ ಮಾಡಿದಾಗ
n/n
ಕಂಡಿದ್ದು ಇವೆಲ್ಲ. ನಮ್ಮ ಸಮಾಜ ಎಷ್ಟು ಕ್ಲಿಷ್ಟ ಇದೆ! ಇಲ್ಲಿ ಎಷ್ಟು ಹುಳುಕು ಇದೆ ಎಂದು ಹುಡುಕುತ್ತಾ ಹೋದರೆ ಮಿದುಳು ಸೆಗಣಿ ಆಗುತ್ತೆ!
ನಾಳೆ ಇಂತಹ ಇನ್ನೊಂದು ವರ್ಗದ ಬಗ್ಗೆ ಮಾತಾಡುವ. ಹೇಗೆ ಒಂದು ವರ್ಗದ ಶ್ರಮದ ಫಲವನ್ನು ಇನ್ನೊಂದು ಸೋಮಾರಿ ವರ್ಗ ಹೈಜಾಕ್ ಮಾಡಿಕೊಂಡು ಕ್ರೆಡಿಟ್ ಜೀವಿ ಆಗಿದೆ ಅಂತ ನೋಡುವ
• • •
Missing some Tweet in this thread? You can try to
force a refresh
1/n ಇವತ್ತಿನ ಪ್ರವಚನ ಮತ್ತೆ ಮಹಿಳಾ ಸ್ವಾತಂತ್ರ ದ ಬಗ್ಗೆ. ಯಾವುದೇ ಪುಸ್ತಕದ ಬದನೇ ಕಾಯಿ ಅಲ್ಲ, ಕೇವಲ ಸನ್ನಿಧಾನಂ ಗಳ ಅನುಭವ ಅಷ್ಟೇ.
ಹಿಂದೆ ಹೇಳಿದ್ದೆವು ಹೇಗೆ ಕರ್ಮಠ ಬ್ರಾಹ್ಮಣ ಮನೆಗಳಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ ಇದೆ ಅಂತ. ಸನ್ನಿಧಾನಂ ಗಳು ಬೆಳೆದದ್ದು ಕರ್ಮಠ ವಾತಾವರಣವೇ ಆದರೂ ನಮ್ಮಲ್ಲಿ ಸ್ವಲ್ಪ ಮಟ್ಟಿಗೆ
2/n ಸ್ವಾತಂತ್ರ್ಯ ಇತ್ತು. ಬೇರೆ ಕರ್ಮಠ ಮನೆಗಳಿಗಿಂತ ಸ್ವಲ್ಪ ಉತ್ತಮ ಅನ್ನುವಷ್ಟು! ನಮ್ಮಲ್ಲಿ ಸ್ತ್ರೀಯರು ಸ್ಟೇರಿಂಗ್ ವೀಲ್ ಹಿಡಿಯುವಷ್ಟು, ಒಬ್ಬರೇ ಬ್ಯಾಂಕ್, ಕಚೇರಿ ವ್ಯವಹಾರಗಳಿಗೆ ಹೋಗುವಷ್ಟು ಅಂತ ಹೇಳಬಹುದು. ಹಾಗಿದ್ದೂ, ಸ್ತ್ರೀಯರ ಸ್ಥಾನಮಾನ ಪುರುಷರಿಗಿಂತ ಕಮ್ಮಿಯೇ. ದಶಕಗಳ ಹಿಂದೆ ನಮ್ಮಲ್ಲಿ ಕೂಡ ನಿಜ ಮನೆಗೆ ಮುಟ್ಟಾದ ಸ್ತ್ರೀಯರಿಗೆ
3/n ಪ್ರವೇಶ ಇರಲಿಲ್ಲ. ಅಕಸ್ಮಾತ್ ಅವರ ಬಟ್ಟೆ ಸೋಕಿದರೆ ಜನಿವಾರ ಬದಲಿಸಬೇಕಾದ ಸ್ಥಿತಿ ಇತ್ತು. ಇವತ್ತು ನಮ್ಮ ಜನಿವಾರ ಎಲ್ಲಿದೆ ಅಂತ ನಮಗೇ ಗೊತ್ತಿಲ್ಲ! ಉಪಕರ್ಮದ ಆಸುಪಾಸಿನಲ್ಲಿ ಪ್ರತ್ಯಕ್ಷ ಆಗುತ್ತೆ ಅಷ್ಟೇ. ಅಂದ್ರೆ ನಮಗೆ ಅಂದ್ರೆ ಪುರುಷರಿಗೆ ಕರ್ಮಠ ಸಂಕೋಲೆಯಿಂದ ಹೊರಗೆ ಬಂದರೂ ಸಮಾಜ ನಮ್ಮನ್ನು ಮೊದಲಿನ ತರಹವೇ ಗೌರವಿಸುತ್ತದೆ
1/n कर्मण्येवाधिकारस्ते मा फलेषु कदाचन।
मा कर्मफलहेतुर्भूर्मा ते सङ्गोऽस्त्वकर्मणि॥ २-४७
ಇದು ಭಗವದ್ಗೀತೆಯ ಎರಡನೇ ಅಧ್ಯಾಯದ ೪೭ ನೇ ಶ್ಲೋಕ. ಇದನ್ನು ನೀವು ಬಹಳ ಕಡೆ ಕೇಳಿರುತ್ತೀರಿ. ದೂರದರ್ಶನದ ವಿಷ್ಣುಪುರಾಣ ಧಾರಾವಾಹಿಯ ಪೀಠಿಕೆ ಇದೇ.
ಸನ್ನಿಧಾನಂ ಗಳ ಪ್ರಕಾರ ಇದು ಶೂದ್ರ ಗ್ಯಾಸ್ ಲೈಟಿಂಗ್ ನ ಒಂದು ಯಶಸ್ವೀ ಅಭಿಯಾನ!
2/n
ಇದು ಹೇಗೆ? ಸನ್ನಿಧಾನಂ ಗಳು ನಮ್ಮ ಧರ್ಮಗ್ರಂಥದ ಅವಮಾನ ಮಾಡ್ತಾ ಇದ್ದಾರೆ ಅಂತ ಕೋಪವೇ?
ಸ್ವಲ್ಪ ತಡ್ಕೊಳಿ!
ಈ ಶ್ಲೋಕದ ಅರ್ಥ ಏನು ಅಂತ ನೋಡುವ. ಇಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುವುದು, ಕುರುಕ್ಷೇತ್ರದಲ್ಲಿ.
ಯಾವಾಗ?
ಅರ್ಜುನನು ತನ್ನ ಸಂಬಂಧಿಕರ ವಿರುದ್ಧ ಹೋರಾಡಲು ಹಿಂಜರಿದಾಗ.
3/n ಕೃಷ್ಣ ಅಂತಾನೆ
“ನಿನಗೆ ಕರ್ಮದಲ್ಲಿ ಅಂದ್ರೆ ಮಾಡುವ ಕೆಲ್ಸದಲ್ಲಿ ಮಾತ್ರ ಅಧಿಕಾರ ಇದೆ, ಅದರ ಫಲಿತಾಂಶ ಅಥವಾ ಫಲದಲ್ಲಿ ಅಲ್ಲ.
ಹಾಗಾಗಿ ಕೆಲ್ಸದ ಫಲಿತಾಂಶ ನಿನ್ನ ಗುರಿ ಆಗಬಾರದು ಹಾಗೂ ಕೆಲಸ ಮಾಡದೇ ಇರುವುದರ ಬಗ್ಗೆ ಕೂಡ ನೀನು ಆಸಕ್ತಿ ತೋರಿಸಬಾರದು”
ಈ ಕಾಂಟೆಕ್ಸ್ಟ್ ಇದ್ದಿದ್ದು ಅರ್ಜುನನ ಆ ಸಂಧರ್ಭಕ್ಕೆ ಮಾತ್ರ.
1/n ಇತ್ತೀಚಿನ ಆಂಟಿ ರಿಸೆರ್ವೆಷನ್ ಕೂಗಿನಲ್ಲಿ ಬರುತ್ತಿರುವ ಇನ್ನೊಂದು ವಾದ “ಹೌದು ಅವರು ಶೋಷಿತರು ಇರಬಹುದು ಆದ್ರೆ ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಮಾಡಿದ್ದ (ಒಂದು ವೇಳೆ ಮಾಡಿದ್ದರೆ!) ಶೋಷಣೆಗೆ ನಾವ್ಯಾಕೆ ಇವತ್ತು ಬೆಲೆ ತೆರಬೇಕು? ನಮ್ಮ ತಪ್ಪೇನಿದೆ?”
ಇದಕ್ಕೆ ನೇರವಾಗಿ ಉತ್ತರಿಸುವ ಮುಂಚೆ ಒಂದು ಕಥೆ.
2/n ಅವನು ಒಬ್ಬ ಸಾಮಾನ್ಯ ಹುಡುಗ, ಜನರಲ್ ಕೆಟಗರಿ ಅವನು ಮಲೆನಾಡ ಪ್ರಾಂತ್ಯ. ಪಿಯುಸಿ ನಂತರ ಬರೆದ ಸಿ ಇ ಟಿ ಅಲ್ಲಿ ಐದೋ ಆರೋ ಸಾವಿರ ರ್ಯಾಂಕ್ ಬಂದಿತ್ತು. ಅಯ್ಯೋ ಬಿ ಎಮ್ಮೆಸ್ ಅಲ್ಲಿ ಈ ದರಿದ್ರ ರಿಸೆರ್ವೆಷನ್ ಇಂದ ಕಂಪ್ಯೂಟರ್ ಸೈನ್ಸ್ ತಪ್ಪಿ ಹೋಯಿತು ಅಂತ ಅತ್ಕೋತಾ ಮೆಕ್ಯಾನಿಕಲ್ ತಗೊಂಡ. ಅದೇ ರ್ಯಾಂಕ್ ಗೆ ಬೇರೆ ಕಾಲೇಜಲ್ಲಿ
3/n ಕಂಪ್ಯೂಟರ್ ಸೈನ್ಸ್ ಸೀಟು ಇತ್ತು ಅದು ಬೇರೆ ಮಾತು. ಇರಲಿ. ಅವನ ಪ್ರಾಂತ್ಯದಲ್ಲೇ ಇದ್ದ ಕಾಲೇಜಿನಲ್ಲಿ ಎಲ್ಲ ಸೀಟುಗಳು ಕೊಳೆಯುತ್ತಾ ಬಿದ್ದಿದ್ದವು ಕೂಡಾ!
ಸನ್ನಿಧಾನಂ ಅವ್ನ ಜೊತೆ ಸಂವಾದ ಮಾಡುವಾಗ ಬಂದ ಪ್ರಶ್ನೆ
“ಏನು ನೀನು ಬೆಂಗಳೂರಿನಲ್ಲಿ ಎಲ್ಲಿದ್ದೆ? ಪಿಜಿ ಯಾ ಅಥವಾ ಕಾಲೇಜು ಹಾಸ್ಟೆಲ್ಲ?”
ಸನ್ನಿಧಾನಂಗಳ ಅನುಭವದ ತಾಳೇಗರಿಯಿಂದ ಒಂದಷ್ಟು.
ನಾವು ನೋಡಿದ ಹಾಗೆ ಬಹಳಷ್ಟು ಜನರಲ್ ಮೆರಿಟ್ ಹುಡುಗರು ಪಿಯುಸಿ ನಂತರ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಬರಲಿಲ್ಲ. ಕಾರಣ ಅವರಿಗೆ ರಿಸೆರ್ವೆಷನ್ ಇಂದಾಗಿ ಸೀಟುಗಳು ಸಿಗಲಿಲ್ಲ ಅಂತಲ್ಲ. ಅವರು ತೆಗೆದ ಅಂಕಗಳು ಹಾಗೆ ಇದ್ದವು. 1/n
2/n ಕರ್ನಾಟಕದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎಷ್ಟು ಸೀಟುಗಳು ಇವೆ ಅಂದ್ರೆ ೨೦೧೯ರಲ್ಲಿ ಸರಿ ಸುಮಾರು ೨೭೦೦೦ ಸೀಟುಗಳಿಗೆ ವಿದ್ಯಾರ್ಥಿಗಳೇ ಇರಲಿಲ್ಲ! ಅಂದ್ರೆ ಇರುವ ಸೀಟುಗಳು ತೇರ್ಗಡೆಯಾಗಿ ಬರುವ ವಿದ್ಯಾರ್ಥಿಗಳಿಗಿಂತ ಜಾಸ್ತಿ ಇದ್ದವು.
ಅಂದ್ರೆ ಈ ಜನರಲ್ ಮೆರಿಟ್ ಅವ್ರು ಇಂಜಿನಿಯರಿಂಗ್ ಇಂದ ವಂಚಿತರಾಗಿದ್ದು ರಿಸರ್ವೇಶನ್ ಇಂದ ಅಲ್ಲ!
3/n ನಾವು ಗಮನಿಸಿದ ಹಾಗೆ ಬಹುಪಾಲು ಈ ಜನರಲ್ ಅವರು ಶಿಕ್ಷಣ ನಿಲ್ಲಿಸಿದ್ದು ವಯೋ ಸಹಜ ಬಿಸಿ ರಕ್ತ ಮಿದುಳಿನಲ್ಲಿ ಜಾಸ್ತಿ ಜಾಸ್ತಿ ತುಂಬಿ! ಯಾವನಿಗೂ ರಿಸರ್ವೇಶನ್ ಇಂದ ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣ ಕೈ ತಪ್ಪಿಲ್ಲ. ಇವರ ಇನ್ನೊಂದು ವಾದ ಅಂದ್ರೆ "ಹೌದು ಸೀಟುಗಳು ಇದ್ದವು ಆದ್ರೆ ನಮಗೆ ಕಡಿಮೆ ಫೀಸ್ ನ ಸರ್ಕಾರೀ ಸೀಟುಗಳು ತಪ್ಪಿ ಹೋದವು".
1/n
ಪೆಗಾಸಸ್ಸಿನ ಬಣ್ಣ ಯಾವುದು?
ಇವಾಗ ಅದು ಕೇಸರಿ ಬಣ್ಣ ಅಂತ ನಮಗೆ ಗೊತ್ತಾಗಿದೆ ಆದ್ರೆ ೨೮ ಬಿಲಿಯನ್ ವರ್ಷಗಳ ಹಿಂದೆ ಇದೇ ಪ್ರಶ್ನೆಗೆ ಕಾಸ್ಮಿಕ್ ವರ್ಲ್ದೇ ಅಲ್ಲೋಲ ಕಲ್ಲೋಲ ಆಗಿತ್ತು. ಅದರ ಬಗ್ಗೆ ಇವತ್ತಿನ ಪ್ರವಚನ.
ಸನಾತನ ಧರ್ಮದ ಪ್ರಕಾರ ಇವತ್ತಿನ ಎಲ್ಲ ಮನುಷ್ಯರ ಮೂಲ ಪುರುಷ ಮನು.
2/n ಮುಸ್ಲಿಂ ಕ್ರಿಶ್ಚಿಯನ್ ಯಹೂದಿಗಳಲ್ಲಿ ಆಡಮ್ ಇದ್ದಾನಲ್ಲ ಹಂಗೆ. ಅದಕ್ಕೆ ಹೇಳುವುದು ಈ ನನ್ಮಕ್ಕಳು ಎಲ್ಲಾ ಸೇಮ್ ಟು ಸೇಮ್.
ಹಂಗಾದ್ರೆ ಎರಡನೇ ಜೆನೆರೇಷನ್ ಮನುಷ್ಯರೆಲ್ಲ ಏನು ಇನ್ಸೆಸ್ಟ್ ಇಂದ ಹುಟ್ಟಿದ್ದಾ? ಅನ್ನುವ ಅಧಿಕಪ್ರಸಂಗ ಬೇಡ. ಎಲ್ಲಾ ಧರ್ಮಗಳ ಪ್ರಕಾರ ಮಾನವ ಕುಲ ಬೆಳೆದಿದ್ದೆ ಇನ್ಸೆಸ್ಟ್ ಇಂದ! ಅದಕ್ಕೆ ನಾವು ಧರ್ಮ ಗಳಿಂದ ದೂರ!
3/n
ಇರಲಿ
ಆ ಮನುವಿನ ಅಪ್ಪ ಕಶ್ಯಪ ಬ್ರಹ್ಮ. ಹಾಗು ಆ ಕಶ್ಯಪನಿಗೆ ಹಲವಾರು ಹೆಂಡತಿಯರು. ಒಬ್ಬಳು ಹೆಂಡತಿ ದಿತಿ, ಅವಳ ಮಕ್ಕಳು ದೈತ್ಯರು. ಅದಿತಿ ಯ ಮಕ್ಕಳ ದೇವತೆಗಳು. ದೇವತೆಗಳ ರಾಜ ದೇವೇಂದ್ರ. ನರರ ರಾಜ ನರೇಂದ್ರ ಇದ್ದ ಹಾಗೆ. ಈ ನರೇಂದ್ರನ ಹತ್ರ ಒಂದು ಪೆಗಾಸಸ್ಸು.. ಅಯ್ಯೋ ಸಾರಿ ಪ್ರವಚನದ ಓಘದಲ್ಲಿ ತಪ್ಪು ಆಯಿತು.
1/n ಒಂದು ಹೊಟ್ಟೆಯ ಪುರಾಣ!
ನೀವು ಗಮನಿಸಿರಬಹುದು, ನಿಮ್ಮ ಸುತ್ತ ಮುತ್ತಲಿನ ಬಹುಪಾಲು ಭಾರತೀಯರಲ್ಲಿ ಅದರಲ್ಲೂ ಈ ಇಂಜಿನಿಯರುಗಳಲ್ಲಿ ಹೊಟ್ಟೆ ಸ್ವಲ್ಪ ಮುಂದೆ ಬಂದಿರುತ್ತದೆ. ಕೆಲವರದ್ದು ಮಿತಿ ಮೀರಿ ಬಂದಿರುತ್ತದೆ. ಆದರೆ ಅವರ ಉಳಿದ ದೇಹ ಭಾಗಗಳು ಅಷ್ಟು ಕೊಬ್ಬಿರುವುದಿಲ್ಲ. ಇನ್ಫ್ಯಾಕ್ಟ್ ಅವು ಸಣ್ಣಗೆ ಇರುವ ಚಾನ್ಸಸ್ ಜಾಸ್ತಿ.
2/nಅದಕ್ಕೇ ಅವರ BMI ಲೆಕ್ಕ ಹಾಕಿದರೆ ಅದು “ಲಿಮಿಟ್” ಒಳಗಡೆ ಇದ್ದರೂ ಆಶ್ಚರ್ಯ ಇಲ್ಲ.
ಈ ತರಹದ ದೇಹ ರಚನೆ, ಅಂದ್ರೆ ಗುಡಾಣ ಹೊಟ್ಟೆ, ಸಣಕಲು ದೇಹ, ಪ್ರಪಂಚದ ಉಳಿದ ಭಾಗಗಳಲ್ಲಿ ಅಷ್ಟು ಹೆಚ್ಚು ಕಾಣ ಬರುವುದಿಲ್ಲ. ಉದಾಹರಣೆಗೆ ಅಮೇರಿಕ ಅಲ್ಲಿ ಕೂಡ ಡೊಳ್ಳು ಹೊಟ್ಟೆಯವರು ಇದ್ದಾರೆ ಆದ್ರೆ ಅವರಲ್ಲಿ ಹೊಟ್ಟೆ ಜೊತೆ ತೋಳು, ಕತ್ತು,
3/nತೊಡೆ ಹೀಗೆ ಎಲ್ಲಾ ಕೊಬ್ಬಿರುತ್ತದೆ.
ಇದೇ ಕಾರಣದಿಂದ ಇಂದು ಭಾರತೀಯ ವೈದ್ಯಲೋಕದಲ್ಲಿ BMI ಲೆಕ್ಕವನ್ನು ಕೈ ಬಿಟ್ಟು waist-to-stature ratio (WSR) ಅನ್ನು ಹೆಚ್ಚು ಉಪಯೋಗಿಸುತ್ತಾರೆ. ಇದಕ್ಕೂ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗಗಳಿಗೆ ನೇರ ಸಂಬಂಧ ಇದೆ.
ಈಗ ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್ ಗೆ ಬರುವ. ನಿಮಗೆ ಗೊತ್ತಿರಬಹುದು,