1/n ಇವತ್ತು #NationalFarmersday, ಹಾಗಾಗಿ ನಮ್ಮ ರೈತರ, ರೈತರ ಬದುಕಿನ ಬಗ್ಗೆ ಇರುವ ಒನಷ್ಟು ತಪ್ಪು ಕಲ್ಪನೆಗಳ ಬಗ್ಗೆ ಮಾತಾಡೋಣ.
೧. ಸಬ್ಸಿಡಿ: ನಿಮ್ಮ ವಾಟ್ಸಪ್ಪ್ ಯುನಿವರ್ಸಿಟಿ ಅಲ್ಲಿ, ಐಟಿ ಸೆಲ್ ಪೋಸ್ಟ್ಗಳಲ್ಲಿ ನೀವು ನೋಡಿರುತ್ತೀರಿ ಹೇಗೆ ರೈತರು ಸಬ್ಸಿಡಿ ಇಂದ ಜೀವಿಸುತ್ತಿದ್ದಾರೆ, ಹೇಗೆ ನಿಮ್ಮ ತೆರಿಗೆ ಹಣ ರೈತರ ಸಬ್ಸಿಡಿ
2/n ಅಲ್ಲಿ ಪೋಲಾಗುತ್ತ ಇದೆ ಅಂತ. ಆದ್ರೆ ನಿಮಗೆ ಗೊತ್ತಿರದ ವಿಷಯ ಅಂದ್ರೆ ಸಬ್ಸಿಡಿ ಅನ್ನುವುದೇ ಒಂದು ಸ್ಕ್ಯಾಮ್. ಅನಗತ್ಯವಾಗಿ ಬೆಲೆ ಏರಿಸಿದ ಗುತ್ತಿಗೆದಾರ ಅಥವಾ ಉತ್ಪಾದಕನ ಪ್ರಾಡಕ್ಟ್ ಗಳೇ ಸಬ್ಸಿಡಿಯಲ್ಲಿ ಬರುವುದು. ಉದಾಹರಣೆಗೆ ಸಬ್ಸಿಡಿಗೆ ಸಿಗುವ ಚೈನ್ಸಾ ಬೆಲೆ ೨೫೦೦೦ ಇರುತ್ತೆ. ಅದಕ್ಕೆ ೫೦% ಸಬ್ಸಿಡಿ ಕೊಡ್ತಾರೆ ಅಂದ್ರೆ ರೈತ
3/n ೧೨.೫ ಸಾವಿರ ಕೊಡುತ್ತಾನೆ. ಆದ್ರೆ ಮುಕ್ತ ಮಾರುಕಟ್ಟೆಯಲ್ಲಿ ೧೦ ಸಾವಿರಕ್ಕೆ ಚೈನ್ಸಾ ಸಿಗುತ್ತೆ! ಇನ್ನು ಒಂದು ಪಾಲಿ ಹೌಸ್ ಗೆ ೫೦% ಸಬ್ಸಿಡಿ ಕೊಡುತ್ತಾರೆ ಆದ್ರೆ ನೀವು ಅವರು ಹೇಳಿದ ಗುತ್ತಿಗೆದಾರನ ಕೈಲಿಯೇ ಮಾಡಿಸಬೇಕು. ಅಲ್ಲಿ ನಿಮಗೆ ೨.೫ ಲಕ್ಷ ಬೀಳುತ್ತೆ. ನಾವೇ ಸ್ವತಃ ಖುದ್ದಾಗಿ ಮಾಡಿದರೆ ೫೦-೬೦ ಸಾವಿರದಲ್ಲಿ ಆಗುತ್ತೆ,
4/n ನಾವು ಮಾಡಿದ್ದೇವೆ ಕೂಡ. ಇದು ಒಂಥರಾ ಅಮೆಜಾನ್ ಸೇಲ್ ತರಹ ೨೦೦ ರೂಪಾಯಿ ವಸ್ತುವನ್ನು ೬೦೦ ಕ್ಕೆ ಏರಿಸಿ ೫೦% ಡಿಸ್ಕೌಂಟ್ ಕೊಡುವುದು. ನಿಮಗೆ ಒಂದು ಅತ್ಯಾಧುನಿಕ ತಂತ್ರಜ್ಞಾನದ ಕಾರೊಂದು ೩-೪ ಲಕ್ಷಕ್ಕೆ ಸಿಗುತ್ತೆ ಆದ್ರೆ ಅದಕ್ಕಿಂತ ೩-೪ ದಶಕ ಹಿಂದೆ ಇರುವ, ಶಿಲಾಯುಗದ ತಂತ್ರಜ್ಞಾನದ ಟ್ರಾಕ್ಟರ್ ಬೆಲೆ ಎಷ್ಟಿದೆ ಗೊತ್ತಾ? ಯಾಕಂದ್ರೆ ಇಲ್ಲಿ
5/n ಕೂಡ ಸಬ್ಸಿಡಿ ಇರುವುದು ಟ್ರಾಕ್ಟರ್ ಕಂಪನಿಗಳನ್ನು ಬೆಳೆಸಲು. ಇಲ್ಲ ಅಂದ್ರೆ ಅಷ್ಟು ಕಳಪೆ ತಂತ್ರಜಾನವನ್ನು ಯಾರು ಮೂಸಿ ನೋಡ್ತಾ ಇದ್ರು?
೨. ಲೋನ್ ಗಳು: ಇಲ್ಲಿ ಬರುವ ವಾಟ್ಸಾಪ್ ವಿಶ್ವವಿದ್ಯಾಲಯದ ವಾದ ಅಂದ್ರೆ, ಇದು ರೈತರಿಂದ ಜನಕ್ಕೆ ಆಗುವ ಮೋಸ. ರೈತ ಲೋನ್ ತಗಂಡು ಮಜಾ ಮಾಡಿ ವಾಪಾಸ್ ಕಟ್ಟಲ್ಲ! ಇಲ್ಲಿ ಗಮನಿಸಬೇಕು, ಹೀಗೆ ಮನ್ನಾ ಆಗುವ
6/n ಲೋನ್ ಗಳು ಸಣ್ಣ ಮಟ್ಟದ ಲೋನ್ ಗಳು. ಇದನ್ನು ತಗೋಳೋದು ಸಣ್ಣ ರೈತರು. ನೆನಪಿಡಿ ಸಣ್ಣ ರೈತರ ಬದುಕು ಇವತ್ತಿಗೂ ಮುರಾ ಬಟ್ಟೆ ಆಗಿದೆ. ಇವರು ಬೆಳೆಯುವುದೇ ಸೀಸನಲ್ ಕ್ರಾಪ್ ಗಳು. ೯೦% ಭಾರಿ ಬೆಳೆದದ್ದು ಕೈಗೆ ಬರಲ್ಲ. ನಿಮಗಾದ್ರೆ ತಿಂಗಳ ಕೊನೆಯಲ್ಲಿ ಸಂಬಳ ಬರುತ್ತೆ ಆದ್ರೆ ಈ ಸಣ್ಣ ರೈತನಿಗೆ ಆ ಗ್ಯಾರಂಟಿ ಇಲ್ಲ. ಅದಕ್ಕೆ ನಮ್ಮಂತಹ ರೈತರು
7/n ಆಹಾರ ಬೆಳೆ ಬಿಟ್ಟು ಅಡಿಕೆ ಕಾಳುಮೆಣಸು ಅಂತಹ ವಾಣಿಜ್ಯ ಬೆಳೆಗೆ ಹೋಗಿರುವುದು. ಇಲ್ಲಿ ನಮಗೆ ಸಾಲ ಮನ್ನಾ ಆಗಲ್ಲ. ಯಾಕಂದ್ರೆ ಸಾಲದ ಪ್ರಮಾಣ ಕೂಡ ಹಲವು ಲಕ್ಷಗಳಿಂದ ಕೋಟಿಯಲ್ಲಿ ಇರುತ್ತದೆ. ಹಾಗೆ ಕೃಷಿ ಸಲ ಸಿಗುವುದು ನಿಮ್ಮ ಕಾರಿನ ಸಾಲ ಸಿಕ್ಕಿದಷ್ಟು ಸುಲಭ ಇಲ್ಲ. ಎಲ್ಲೆಲ್ಲೋ ಕೈ ಬೆಚ್ಚಗೆ ಮಾಡಬೇಕು. ಪಿ ಡಿ ಓ ಗಳು ಪೈಪ್ ಅಲ್ಲಿ
8/n ಲಕ್ಷಗಟ್ಟಲೆ ಹೇಗೆ ಇಟ್ಟಿದ್ದು ಅಂದ್ರೆ ಇದರಿಂದ.
೩. ಪರಿಹಾರ: ಮತ್ತೆ ನಿಮ್ಮ ಯುನಿವರ್ಸಿಟಿ ಅನ್ನುತ್ತೆ ಸರ್ಕಾರ ಬೆಲೆ ಪರಿಹಾರ ಕೊಡುವುದು ನಮ್ಮ ಹಣ ಇಂದ. ನಮ್ಮ ಮೇಲೆ ಭಾರ. ನಿಮಗ್ಗೊತ್ತಾ ನೀವು ಕಾರು ಬೈಕು ಇನ್ಶೂರೆನ್ಸ್ ಮಾಡಿಸಿದ ಹಾಗೆ ನಾವು ಕೂಡ ಮಾಡುತ್ತೇವೆ, ನಾವೂ ಕೂಡ ಪ್ರೀಮಿಯಂ ಕಟ್ಟಬೇಕು. ಕ್ಲೈಮ್ ಕೂಡ ಅಷ್ಟು ಸುಲಭವಾಗಿ ಆಗಲ್ಲ!
9/n ಹಾಗೆಯೆ ಸರ್ಕಾರ ಕೊಡುವ ಪರಿಹಾರ ಅನ್ನುವುದೇ ಒಂದು ಜೋಕು!! ಬೇಕಾದರೆ ಯಾರಾದರೂ ರೈತನನ್ನು ಕೇಳಿ ಎಷ್ಟು ಕೊಡುತ್ತಾರೆ ಅಂತ!!
೪. ರೈತರಿಗೆ ತೆರಿಗೆ ಇಲ್ಲ: ಇದು ಬಹು ಸಾಮಾನ್ಯ ವಾದ. ಆದ್ರೆ ನಿಮಗೆ ಗೊತ್ತಿರಲಿ ದೇಶದ ಪ್ರತಿಯೊಬ್ಬ ನಾಗರಿಕನೂ ತೆರಿಗೆ ಕಟ್ಟುತ್ತಾನೆ. ರೈತ ಇನ್ನೂ ಜಾಸ್ತಿ. ಯಾಕಂದ್ರೆ ನಾವು ಖರೀದಿಸುವ ವಸ್ತುಗಳು ಕೂಡ ಜಾಸ್ತಿ.
10/n ಒಮ್ಮೆ ಹೇಳಿ ನೀವು ಯಾವಾಗ ೫ ಟನ್ ಯೂರಿಯಾ ಖರೀದಿಸಿದ್ದೀರಿ? ನಿಮಗೆ ದಿನಕ್ಕೆ ೨೦ ಲೀಟರ್ ಡೀಸಲ್ ಬೇಕಾ? ೫೦೦ಕೆಜಿ ಪ್ಲಾಸ್ಟಿಕ್ ಶೀಟ್? ೫೦೦ ಕೆಜಿ ಕಾಪರ್ ಸಲ್ಫೆಟ್? ಹೋಗಲಿ ೨೦ ಟನ್ ಸುಣ್ಣ? ೧ ಟನ್ ತಂತಿ? ಇವೆಲ್ಲಕ್ಕೂ ತೆರಿಗೆ ಇದೆ. ಹಾಗೂ ಇವೆಲ್ಲ ನೀವು ನಗರದಲ್ಲಿ ಕೆಲಸ ಮಾಡುವ ಕಂಪನಿಗಳ ಉತ್ಪಾದನೆಗಳೇ. ರೈತ ಇದನ್ನು ತಗೊಳ್ಳಲ್ಲ
11/n ಅಂದ್ರೆ ನಿಮ್ಮ ಕಂಪನಿ ಶಟರ್ ಎಳೆಯಬೇಕು.
ಇವೆಲ್ಲದರ ಮೇಲೆ ಇನ್ನೊಂದು ವಿಷಯ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಕೃಷಿ ಮೇಲೆ ಭಾರತ ಖರ್ಚು ಮಾಡುತ್ತಿರುವುದು ತುಂಬಾ ಕಡಿಮೆ . ಇವತ್ತು ಭಾರತದ ಅರ್ಥಿಕ್ವ್ಯವಸ್ಥೆಯ ಬಹುದೊಡ್ಡ ಭಾಗ ಕೃಷಿ . ಅತಿ ಹೆಚ್ಚು ಉದ್ಯೋಗ ಕೊಟ್ಟಿರುವ ರಂಗ ಕೂಡ ಹೌದು
n/n
ಹಾಗಿದ್ದೂ ಸರ್ಕಾರ ಕೃಷಿಗೆ ಕೊಟ್ಟಿರುವುದು ತುಂಬಾ ಕಮ್ಮಿ. ಯುರೋಪ್ ನಲ್ಲಿ ಕೃಷಿ ಸಬ್ಸಿಡಿ ಎಷ್ಟಿದೆ ಅಂತ ನೋಡಿ.
ವಾಟ್ಸಾಪ್ ವಿಶ್ವವಿದ್ಯಾಲಯ ಬಿಟ್ಟು ಆಚೆ ಬನ್ನಿ
• • •
Missing some Tweet in this thread? You can try to
force a refresh
1/n ನಮ್ಮ ಮಠದ ಹತ್ರ ಒಬ್ರು ತಾತ ಇದ್ದಾರೆ. ರಿಟೈರ್ಡ್ ಪ್ರೊಫೆಸ್ಸರ್. ದಿನಾ ಪೂರ್ತಿ ವಾಟ್ಸಾಪ್ ಅಲ್ಲಿ ಇರ್ತಾರೆ. ಮಾತು ಮಾತಿಗೆ ಮುಸ್ಲಿಂ ಮೇಲೆ ವಿಷ ಕಾರೋದು. ಮುಸುಲ್ರು ಹಂಗೆ, ಹಿಂಗೇ, ಅವ್ರೆಲ್ಲ ಸಾಯ್ಬೇಕು, ಅವರಿಂದ ನೇ ದೇಶ ಹಾಳಾಗಿರೋದು... ಅವ್ರ ಜೀವನದಲ್ಲಿ ಅನೇಕ ಅನ್ಯಾಯಗಳು ಆಗಿವೆ. ದಶಕಗಳ ಹಿಂದೆ ಯಾವನೋ ಇವರಿಗೆ ನಂಬಿಸಿ ನಕಲಿ
2/n ಸೈಟ್ ಮಾರಿ ಲಕ್ಷಗಟ್ಟಲೆ ಯಾಮಾರಿಸಿದ್ದ. ಇನ್ನೊಮ್ಮೆ ಕೂಡ ಹೀಗೆ ಸೈಟ್ ವಿಚಾರದಲ್ಲಿ ಮೋಸ ಹೋಗಿದ್ದರು. ಒಮ್ಮೆ ಇವರ ಮನೆಯಲ್ಲಿ ಕಳ್ಳತನ ಕೂಡ ಆಗಿತ್ತು. ಆದ್ರೆ ಇದ್ಯಾವುದನ್ನೂ ಮಾಡಿದ್ದು ಮುಸ್ಲಿಮರಲ್ಲ. ಮತ್ಯಾಕೆ ಈ ಮುಸ್ಲಿಂ ದ್ವೇಷ?
ಇನ್ನು ಅಚ್ಚರಿ ಅಂದ್ರೆ ಇವರ ತಂದೆಗೆ ಹೃದಯಾಘಾತ ಆದಾಗ ತಕ್ಷಣ ಆಸ್ಪತ್ರೆಗೆ ತಂದು ಸೇರಿಸಿದ್ದು ಒಬ್ಬ
3/n ಮುಸ್ಲಿಂ ಆಟೋ ಡ್ರೈವರ್ ಅಂತೇ. ಹಾಗಂತ ಅವ್ರೆ ಹೇಳ್ತಾರೆ. ಕೇಳಿದ್ರೆ ಎಲ್ಲೋ ಕೋಟಿಗೊಬ್ಬರು ಒಳ್ಳೆಯವರು ಇರಬಹುದು ಎಂಬ ಉಡಾಫೆ.
ಯಾಕೆ ಈ ತರಹ ಯಾವನೋ ಹೇಳಿದ್ದನ್ನು ನಂಬಿ ನಂಜು ಕಾರ್ತೀರಾ?
ನಿಮಗೆ ಅನ್ಯಾಯ ಮೋಸ ಮಾಡಿದವರನ್ನು ನೆನಪಿಸಿಕೊಳ್ಳಿ. ಅವರೆಲ್ಲ ಯಾರು ಅಂತ ಯೋಚಿಸಿ. ಈ ರೀತಿಯ ದ್ವೇಷ ಒಳ್ಳೆಯದಲ್ಲ. ನಿಮ್ಮ ಮಗ/ಮಗಳಿಗೆ ಒಳ್ಳೆಯ
1/n ಕನ್ನಡದ ಮಕ್ಕಳಿಗೆ NEET ಯಾಕೆ ಮರಣ ಮೃದಂಗ?
ಇಲ್ಲಿದೆ ಒಂದು ಜಿಜ್ಞಾಸೆ. ನಿಮ್ಮ ಉತ್ತರದ ಭಕ್ತಿಯನ್ನು ಬದಿಗಿಟ್ಟು ಪ್ರವಚನಕ್ಕೆ ಬನ್ನಿರಿ.
ಪದವಿ ಪೂರ್ವ ಶಿಕ್ಷಣದಲ್ಲಿ ಉತ್ತರಭಾರತಕ್ಕೂ ದಕ್ಷಿಣಕ್ಕೂ ಬಹಳ ವ್ಯತ್ಯಾಸ ಉಂಟು. ಅಲ್ಲಿ ಪಿಯುಸಿ ಅಥವಾ ಹನ್ನೊಂದು ಹನ್ನೆರಡಕ್ಕೆ ಕಾಲೇಜಿಗೆ /ಶಾಲೆಗೆ ಹೋಗುವ ಸಂಸ್ಕೃತಿ ಕಮ್ಮಿ. ಯಾವ್ದಾದ್ರು ಹುಳ
2/n ಕಾಲೇಜಿನಲ್ಲಿ ರಿಜಿಸ್ಟರ್ ಮಾಡ್ಕೊಂಡು ೨ ವರ್ಷ ಕೋಚಿಂಗ್ ಸೆಂಟರ್ ಗಳಲ್ಲೇ ಕಳೆಯುತ್ತಾರೆ. ಇಲ್ಲಿನ ತರಹ ಪಿಯುಸಿ ನ ಕಾಲೇಜಿಗೆ ಹೋಗಲ್ಲ. ನೀಟ್ ಅಥವಾ ಐ ಐ ಟಿ ಬರೆಯುವ ಮಕ್ಕಳದ್ದು ಇದೇ ಕಥೆ. ಇನ್ನೂ ಸಿಂಪಲ್ ಆಗಿ ಹೇಳಬೇಕು ಅಂದ್ರೆ ಆ ಎರಡು ವರ್ಷವನ್ನು ಒಂದು ಪರೀಕ್ಷೆಯನ್ನು ಹೇಗೆ ಕ್ರ್ಯಾಕ್ ಮಾಡಬೇಕು ಅನ್ನುವ ಏಕೈಕ ಗುರಿ ಒಂದಿಗೆ
3/n ಕಳೆಯುತ್ತಾರೆ. ಇಲ್ಲಿನ ತರಹ ಪಿಯುಸಿ ಕಾಲೇಜಿನ ಪಾಠಗಳ ಹಂಗಿಲ್ಲ, ಕ್ಲಾಸ್ ಅಟೆಂಡ್ ಮಾಡಬೇಕು, ಭಾಷೆ ವಿಷಯಗಳನ್ನೂ ಕಲಿಯಬೇಕು ಅನ್ನುವ ಹಂಗಿಲ್ಲ. ಹಾಗಾಗಿ ನೀಟ್ ಮತ್ತು ಐ ಐ ಟಿ ಅಲ್ಲಿ ಅವರಿಗೆ ನಮ್ಮ ಮಕ್ಕಳಿಗಿಂತ ಜಾಸ್ತಿ ಆದ್ವಂಟೆಜ್ ಸಿಗುತ್ತೆ. ಹಿಂದೆ ನಮ್ಮ ಮಕ್ಕಳಿಗೆ ಈ ಸ್ಥಿತಿ ಇರಲಿಲ್ಲ. ನಮ್ಮ ರಾಜ್ಯದ ವೈದ್ಯಕೀಯ ಕಾಲೇಜುಗಳು,
1/n "ದಲಿತರಿಗೆ, ಶೂದ್ರರಿಗೆ, ಮಹಿಳೆಯರಿಗೆ ಅಂಬೇಡ್ಕರ್ ಸಂವಿಧಾನ ಒಂದು ಬದುಕನ್ನು ಕೊಟ್ಟಿದೆ ಅದಕ್ಕೆ ಅರ್ಥ ಕೊಟ್ಟಿದೆ. ಆದ್ರೆ ಬ್ರಾಂಬ್ರಾಗಿ ನಿಮಗ್ಯಾಕೆ ಅಂಬೇಡ್ಕರ್ ಮೇಲೆ ಇಷ್ಟು ಪ್ರೀತಿ?" ಇದು ನಮಗೆ ಅವಾಗಾವಾಗ ಒಂದಿಬ್ಬರು ಕೇಳುವುದುಂಟು. ಸಂಬಂಧಿಗಳಲ್ಲೇ ಹಲವಾರು ಕೇಳಿದ್ದೂ ಉಂಟು.
ಅದರ ಬಗ್ಗೆ ಒಂದಿಷ್ಟು.
2/n ಮನುಷ್ಯ ಅಂದ್ರೆ ನಾಗರೀಕತೆ, ನಾಗರೀಕತೆ ಅಂದ್ರೆ ಸಂಸ್ಕೃತಿ. ಇದೇ ಮನುಷ್ಯನ ಬದುಕಿನ ಅರ್ಥ. ಸಂಸ್ಕೃತಿ ಅಂದ್ರೆ ವಿವಿಧ ಮನಸ್ಸುಗಳ ಮಿಲನ, ಸಂವಾದ ಹೀಗೆ. ಅಂಬೇಡ್ಕರ್ ಅವರ ಸಂವಿಧಾನ ವೈವಿಧ್ಯದ ಮನಸ್ಸುಗಳಿಗೆ ಅವಕಾಶ ಕೊಟ್ಟಿದ್ದರಿಂದಲೇ ನಮಗೆ ಆ ಮನಸ್ಸುಗಳ ಜೊತೆ ಬೆರೆಯಲು ಸಾಧ್ಯ ಆಗಿದ್ದು. ಉದಾಹರಣೆಗೆ ನಾವು ಓದಿದ್ದ ಶಾಲೆಯಲ್ಲಿ ನಮ್ಮ
3/n ಸಹಪಾಠಿಗಳಲ್ಲಿ ದೂರದ ಅಸ್ಸಾಮಿನ ಕಾಡಿನ ಬುಡಕಟ್ಟಿನ ಹುಡುಗ ಇದ್ದ. ದೂರದ ಜಾರ್ಖಂಡ್ ನ ನಕ್ಸಲ್ ಪೀಡಿತ ಕೊಂಪೆಯ ಹುಡುಗಿ ಇದ್ದಳು. ತಮಿಳುನಾಡಿನ ಅಯ್ಯಂಗಾರಿ ಹುಡುಗಿ. ಮಹಾರಾಷ್ಟ್ರದ ಸ್ಮಶಾನ ಕಾಯುವ ವ್ಯಕ್ತಿಯೊಬ್ಬರ ಮೊಮ್ಮಗ, ಕಾಶ್ಮೀರದ ಹುಡುಗ, ತ್ರಿಲಿಂಗಿ ಗಳು, ಸಲಿಂಗಿಗಳು, ಕರ್ಮಠ ಬ್ರಾಹ್ಮಣರು ಹೀಗೆ ಹತ್ತು ಹಲವು ವೈವಿಧ್ಯಮಯ
1/n ಇವತ್ತಿನ ಬಾಗಲಕೋಟೆಯ ಬಾದಾಮಿಯಲ್ಲಿ ವಾತಾಪಿ ಮತ್ತು ಇಲ್ವಲ ಎಂಬ ಇಬ್ಬರು ಅಣ್ಣ ತಮ್ಮ ಇದ್ದರು ಅಂತೇ. ಮದ್ಯೆ ಏಷಿಯಾ ದಿಂದ ಬಂದ ವೈದಿಕರ ಪ್ರಕಾರ ಇವರು ರಾಕ್ಷಸರು. ಅದೇ ನಮ್ಮ ಮಹಿಷಾಸುರ, ರಾವಣ, ಬಲಿ, ನರಕಾಸುರ ಮೊದಲಾದವರ ತರಹ. ಇಲ್ಲಿ ಆರ್ಯ ಮತ್ತು ದ್ರಾವಿಡ ವಾದವನ್ನು ತಳುಕು ಹಾಕಿ ನೋಡಿದರೆ ಬಹುಪಾಲು ರಾಕ್ಷಸರು
2/n ನಮ್ಮ ದ್ರಾವಿಡ ಸಂಸ್ಕೃತಿಗೆ ಸೇರುತ್ತಾರೆ. ಇರಲಿ ನಮಗೆ ಅದನ್ನು ಮತ್ತೆ ಮತ್ತೆ ಹೇಳುವ ಇಚ್ಛೆ ಇಲ್ಲ. ವಾಪಸ್ ನಮ್ಮ ಬ್ರದರ್ಸ್ ಹತ್ರ ಬರುವ.
ಈ ಬ್ರದರ್ಸ್ ಗೆ ಬಿಟ್ಟಿಯಾಗಿ, ದುಡಿಯದೆ ತಿನ್ನುವವರನ್ನು ಕಂಡರೆ ಅಗ್ತಾ ಇರಲಿಲ್ಲ ಅಂತೇ. ಕೆಲವರಿಗೆ ಟ್ರಾಫಿಕ್ ಅಲ್ಲಿ ಮೈ ಕೈ ಸರಿ ಇದ್ದು ಭಿಕ್ಷೆ ಬೇಡುವವರನ್ನು ಕಂಡ್ರೆ ಮೈ ಉರಿತದಲ್ಲ ಹಂಗೆ.
3/n ಸೊ ಅಣ್ಣ ತಮ್ಮ ಒಂದು ಮಸ್ತ್ ಗೇಂ ಮಾಡ್ತಾರೆ ಅಂತೇ.
ವೈದಿಕರ ಕಥೆ ಪ್ರಕಾರ ಇಲ್ವಲನಿಗೆ ಮೃತ ಸಂಜೀವಿನಿ ವಿದ್ಯೆ ಗೊತ್ತಿತ್ತಂತೆ. ಅಂದ್ರೆ ಸತ್ತವರನ್ನು ಬದುಕಿಸುವ ವಿದ್ಯೆ. ಮತ್ತು ವಾತಾಪಿಗೆ ಯಾವ ಪ್ರಾಣಿ ಆಗಿ ಬೇಕಾದರೂ ಮಾರ್ಪಾಡು ಆಗುವ ವಿದ್ಯೆ.
ಸೊ ಅಣ್ಣ ತಮ್ಮ ಏನ್ಮಾಡ್ತಾ ಇದ್ರೂ ಅಂದ್ರೆ ಅವರ ಮನೆಯ ದಾರಿಯಲ್ಲಿ ಭೋಜನ ಭಿಕ್ಷೆ ಕೋರಿ
1/n ನೆನ್ನೆಯಿಂದ ಅನಿಸುತ್ತ ಇರುವುದು, ಅಕಸ್ಮಾತ್ ಹಂಸಲೇಖ ಅವರು ಪೇಜಾವರರ ಹೆಸರು ಹೇಳದೆ ಬೇರೆ ಮಠದ ಸ್ವಾಮೀಜಿಗಳ ಹೆಸರು ಹೇಳಿದ್ದರೆ ಸಂಗಿಗಳು ಇಷ್ಟೊಂದು ಗಲಾಟೆ ಮಾಡ್ತಾ ಇದ್ದರ?
ಯಾಕಂದ್ರೆ ನಮ್ಮ ವೈಕ್ತಿಕ ಅನುಭವದ ಪ್ರಕಾರ, ಉಡುಪಿ ಮಠ ಯಾವತ್ತಿಗೂ ಅಷ್ಟು ಸಹಿಷ್ಣು ಮಠ ಅಲ್ಲ. ಬೇರೆ ಜಾತಿ ಧಾರ್ಮ ಬಿಡಿ, ಹಿಂದೂ ಧರ್ಮದ ಪ್ರಸಿದ್ಧ
2/n ತತ್ವಜ್ಞಾನಿ ಅದ್ವೈತ ಧರ್ಮದ ಪ್ರತಿಪಾದಕ ಶಂಕರ ಭಗವತ್ಪಾದರನ್ನು ಕಂಡ್ರೆ ಉಡುಪಿ ಮಠಕ್ಕೆ ಆಗಲ್ಲ.
ಉಡಪಿಮಠಮಾತ್ರವಲ್ಲ ಮಧ್ವಪರಂಪರೆಯಲ್ಲಿ ಯಾರಿಗೂ ಶಂಕರಾಚಾರ್ಯರ ಬಗ್ಗೆ ಗೌರವಯಿಲ್ಲ. ಅವರ ಮತದ ಗ್ರಂಥಗಳಲ್ಲಿ ಶಂಕರರನ್ನ "(ಜಾತಿ)ಸಂಕರ" ನೆಂದು, ಅವರ ತಾಯಿ ನಡತೆಗೆಟ್ಟವಳೆಂದೂ, ಶಂಕರರು ಮಣಿಮಂತನೆಂಬ ರಾಕ್ಷಸ.... ಹೀಗೆಲ್ಲಾ ನಿಂದನೆ ಉಂಟು.
3/n ಶಂಕರರ ನಿಂದನೆ ವಿರುದ್ಧ ಹೋರಾಟವಾದಾಗ ಪೇಜಾವರರು ಅಂತಹ ಗ್ರಂಥಗಳ ಮುದ್ರಣ, ಪ್ರವಚನ, ಪಾಠ ನಿಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಅವರ ವಿದ್ಯಾಪೀಠದಲ್ಲಿ ಇಂದಿಗೂ ಶಂಕರರ ನಿಂದನೆಯ ಗ್ರಂಥ ಮುದ್ರಣ, ಪಾಠ, ಪ್ರವಚನ ನಡೆಯುತ್ತಿದೆ. ಇಷ್ಟೆಲ್ಲಾ ಇದ್ದರೂ ಶಂಕರ ಭಗವತ್ಪಾದರ ಪೀಠ ದಕ್ಷಿಣಾನ್ಮಯ ಶ್ರೀ ಶೃಂಗೇರಿ ಪೀಠ ಯಾವತ್ತೂ ಉಡುಪಿ ಮಠದ ಜೊತೆ
1/n ಸನ್ನಿಧಾನಂ ಗಳ ಆನ್ಲೈನ್ ಮತ್ತು ಆಫ್ಲೈನ್ ಮಿತ್ರವೃಂದದಲ್ಲಿ ಹಲವಾರು ದಲಿತರು ಇದ್ದಾರೆ. ಕೆಲವರು ಹೇಳುವುದುಂಟು ನೀವು ಗ್ರೇಟ್ ಕಣ್ರೀ, ವಾಯ್ಸ್ ಎತ್ತುತ್ತಾ ಇದ್ದೀರಾ..
ಈ ವಿಷಯದ ಬಗ್ಗೆಯೇ ಇವತ್ತಿನ ಪ್ರವಚನ.
ಈ ರೀತಿ ಸಮಾಜದಲ್ಲಿ ಮೇಲ್ವರ್ಗ ಅನ್ನಿಸಿಕೊಳ್ಳುವವರಿಂದ ದಲಿತರ ಹೋರಾಟಗಳು ಹೈಜಾಕ್ ಆಗುವ ಎಲ್ಲ ಚಾನ್ಸಸ್ ಇದೆ.
2/n ಹಾಗಾಗಿ ನಮ್ಮನ್ನು ಅಟ್ಟ ಹತ್ತಿಸಬೇಡಿ. ನಾವು ಯಾವತ್ತಿಗೂ ವಾಯ್ಸ್ ಆಗಲು ಸಾಧ್ಯ ಇಲ್ಲ ಯಾಕಂದ್ರೆ ನಾವು ಏನೇ ಮಾಡಿದರು ಸಮಾಜದಲ್ಲಿ ನಮಗೊಂದು ಕಂಫರ್ಟಬಲ್ ಸ್ಥಾನ ಇದೆ. ಇಲ್ಲಿ ಹೋರಾಟವನ್ನು ಅವರೇ ಮಾಡಬೇಕು. ಇದಕ್ಕೊಂದು ಉದಾಹರಣೆ ಕೊಡುವ. ಒಂದು ಮನೆ ಇದೆ ಅಲ್ಲಿ ಮಗ ಮಗಳು ಇದ್ದಾರೆ. ಇಲ್ಲಿ ಮಗ ಅವನು ಊಟ ಮಾಡಿದ ತಟ್ಟೆ ತೊಳೀತಾನೆ,
3/n ಅಲ್ಪ ಸ್ವಲ್ಪ ಮನೆ ಗುಡಿಸಿ ಒರೆಸುತ್ತಾನೆ ಕೂಡ. ಎಲ್ಲ ಕಡೆ ಅವನ ಬಗ್ಗೆಯೇ ಮಾತು “ಎಷ್ಟು ಒಳ್ಳೆ ಹುಡುಗ, ಮನೆ ಕೆಲಸ ಎಲ್ಲ ಮಾಡ್ತಾನೆ, ತುಂಬಾ ಗ್ರೇಟು, ಮಗ ಅಂದ್ರೆ ಹಾಗಿರಬೇಕು”
ಆಮೇಲೆ ಈ ಹುಡುಗನೇ ಹೆಣ್ಣು ಮಕ್ಕಳ ಕಷ್ಟದ ಬದುಕನ್ನು ಜನರ ಮುಂದೆ ಬಿಡಿಸಿ ಇಟ್ಟು ಅವರ ಪರ ಧ್ವನಿ ಎತ್ತುತ್ತಾನೆ ಅಂದುಕೊಳ್ಳಿ
ಇಲ್ಲಿ ಆ ಹುಡುಗ ಅರಿಯದೆ