ಶಾಲಾ-ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇಲ್ಲಾ, ತರಗತಿಗೆ ತಲುಪಲು ಸಾರಿಗೆ ವ್ಯವಸ್ಥೆ, ಸರಿಯಾದ ರಸ್ತೆಗಳಿಲ್ಲಾ, ಪಾಠ ಮಾಡಲು ಸಂಬಂಧಿಸಿದ ವಿಷಯಗಳಿಗೆ ಅಧ್ಯಾಪಕರಿಲ್ಲಾ, ಮಳೆ ಬಂದರೆ ಬಚ್ಚಲಿಗೂ ತರಗತಿಗೂ ವ್ಯತ್ಯಾಸ ಇಲ್ಲಾ. ತಲೆ ಮೇಲೆ ಸೂರಿಲ್ಲದೆ ಬಯಲಿನಲ್ಲಿ, ಫ್ಲೈ ಓವರ್ನಾ ಅಡಿಯಲ್ಲಿ ಕುಳಿತು 1/7
ಶಿಕ್ಷಣ ಪಡೆಯುವ ಕೆಟ್ಟ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ವಿಧ್ಯಾರ್ಥಿಗಳು ಹರತಾಳ ಮಾಡಿ,ತಮ್ಮ ಹಕ್ಕನ್ನು ಪಡೆದು ಬದುಕನ್ನು ಉಜ್ವಲವನ್ನಾಗಿ ಮಾಡಿಕೊಳ್ಳುವುದು ಬಿಟ್ಟು ಕೆಲಸಕ್ಕೆ ಬಾರದ ಉದ್ಯೋಗ ಕೊಡಿಸಿದ,ಹೊಟ್ಟೆಗೆ ಹಿಟ್ಟು ಹುಟ್ಟಿಸಿದ ಧರ್ಮವಂತೆ. ಚೆಂದದ ಕಾಲೇಜು ನೆನಪುಗಳನ್ನು ಹಾಳು ಮಾಡಿಕೊಂಡ 2/7
ಈ ತಲೆಮಾರಗಳು ಇಡೀ ಭಾರತವನ್ನು ಪತನಮುಖೀಯಾಗಿಸುವುದರಲ್ಲಿ ಯಾವ ಸಂಶಯವು ಇಲ್ಲಾ.

ಹಿಜಬ್,ಕೇಸರಿ ಶಾಲು, ನೀಲಿ ಶಾಲು,ಟೋಪಿ,ಜನಿವಾರ,ಮೊಟ್ಟೆ,ಲಂಗೋಟಿ,ಉಡುದಾರ,ಕೇಸರಿ ಬಾತ್, ಬಿರಿಯಾನಿ ಎನ್ನುವ ಅಸಹ್ಯ ರಾಜಕೀಯ ಮಾಡಿಕೊಂಡ ಎಷ್ಟು ರಾಜಕೀಯ ನಾಯಕರ ಮಕ್ಕಳು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ವಿದೇಶಿಗಳಲ್ಲಿ ಅಭ್ಯಾಸ ಮಾಡುತ್ತಿರುವಾಗ 3/7
ನೀವು ಹರಕೆಯ ಕುರಿಗಳಾಗುತ್ತಿರುವುದು ನಿಮಗೆ ಅರಿವುಗಾವುದಾದರು ಯಾವಗಾ?
ಕೇಸರಿ- ಹಿಜಬ್,ಗಜಬ್,ನೀಲಿ ಶಾಲು ಅಂತ ಹೊಡೆದಾಡಿಕೊಂಡರೆ ನಿಮಗೆ ಸಿಗುವುದಾದರೂ ಏನೂ..?ಪದವಿಯ ನಂತರ ನಿಮಗೆ ಉದ್ಯೋಗ ಸಿಗುತ್ತದೆ ಎಂದು ಭಾವಿಸಿದ್ದೀರಾ..?

ಸಮಾನತೆ ಬೇಕು ಅಂದ್ರೆ ದಲಿತ,ಒಕ್ಕಲಿಗ,ಬ್ರಾಹ್ಮಣ,ಲಿಂಗಾಯತ,ಜೈನ,ಮುಸ್ಲಿಂ,ಕುರುಬ,ನೇಕಾರ ಗಂಗಾಮತಸ್ಥ, 4/7
ಲಂಬಾಣಿ,ನಾಯಕ ಸಮುದಾಯದ ಎಲ್ಲಾ ವಿಧ್ಯಾರ್ಥಿಗಳಿಗೆ ಒಂದೇ ಹಾಸ್ಟೆಲ್ ಮಾಡಿ. ಯಾವ ತಾರತಮ್ಯ ಇಲ್ಲದೇ ಸಮಾಜದಲ್ಲಿ ಶಿಕ್ಷಣ ಕೊಡಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಬಡ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವ್ಯವಸ್ಥೆ ಮಾಡಿ. ನಾವೆಲ್ಲಾ ಭಾರತೀಯರು ಅನ್ನುವಂಥಹ ಮನೋಭಾವನೆ ಬೆಳಸಿ. ಅದು ಬಿಟ್ಟು 5/7
ಜಾತಿಗೊಂದು ಕಾಲೇಜ್,ಶಾಲೆ,ಮಠಗಳು,ನಿಗಮ ಮಂಡಳಿ ದೇವಸ್ಥಾನಗಳನ್ನು ಮಾಡಿ ನಾವೆಲ್ಲಾ ಒಂದೇ, ಹಿಂದೂ ನಾವೆಲ್ಲಾ ಒಂದು,ನಾವು ಭಾರತೀಯರೆಂದು "ಮನುಷ್ಯ ಜಾತಿ ತಾನೊಂದೇ ವಲಂ" ಎನ್ನುವ ಪಂಪವಾಣಿಯನ್ನ ಕೇಳದ ಈಗಿನ ಪೀಳಿಗೆಯವರ ತಲೆಯಲ್ಲಿ ಕೋಮುದ್ವೇಷ ಏಕೆ ಬಿತ್ತುತ್ತಿದ್ದೀರಿ..? 6/7
ಈ ದೇಶದ ಸಮಸ್ಯೆಗಳು ಬೇರೆ ಇವೆ ಧರ್ಮ,ಜಾತಿ ಅಂತ ನೀವು ನೀವೇ ಕಿತ್ತಾಡಿಕೊಳ್ಳಲ್ಲಿಕ್ಕಾದರೂ ಮೊದಲು ನಮ್ಮ ಪರಿಸರ, ಪಶ್ಚಿಮ ಘಟ್ಟ, ನದಿಗಳನ್ನು ಉಳಿಸಿಕೊಳ್ಳಿ. ಆಮೇಲೆ ಧರ್ಮ,ಕರ್ಮ,ಮುಂಜಿ,ಉಡುದಾರ ಎಲ್ಲಾ.
_ ಗಿರೀ ವಾಲ್ಮೀಕಿ
#ವೈವಿಧ್ಯತೆಯೇಭಾರತದಸೌಂದರ್ಯ
#ಪರಿಸರಉಳಿಸಿ
#SaveWesternGhats 7/7

• • •

Missing some Tweet in this thread? You can try to force a refresh
 

Keep Current with Western Ghats🌱ಪಶ್ಚಿಮ ಘಟ್ಟಗಳು

Western Ghats🌱ಪಶ್ಚಿಮ ಘಟ್ಟಗಳು Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @TheWesternGhat

Nov 13, 2021
ಕಳೆದ ಶನಿವಾರ ಮತ್ತು ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಕೈಗೊಂಡಿದ್ದೆವು.. ಆದರೆ ಚಾರಣದುದ್ದಕ್ಕೂ ನಮಗೆ ಕಂಡಿದ್ದು ಕಾಂಕ್ರೀಟ್ ನಾಡಿನಿಂದ ಕಾಡುಪ್ರವೇಶಿಸುವ ನಾಡಪ್ರಾಣಿಗಳು ತಮ್ಮ ಹಸಿವಿನ ತೀಟೆ ತೀರಿಸಿ ತಿಂದು, ಕುಡಿದು ವನ ದೇವತೆಯ ಮಡಿಲಲ್ಲಿ ಬಿಟ್ಟು ಹೋದ ನೂರಾರು ಬಾಟಲ್, ಸಾವಿರಾರು ಪ್ಲಾಸ್ಟಿಕ್ ಗಳು😡 1/4
ಚಾರಣದಲ್ಲಿ ಗಿರಿಗದ್ದೆ forest camp ನಿಂದ ಕುಮಾರ ಪರ್ವತದ ತುದಿಯ 5km ವರೆಗಿ‌ನ ದಾರಿಯಲ್ಲಿ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಲ್ಲೊಂದು ಇಲ್ಲೊಂದು ಹಳೇ ಕಸಗಳು ಸಿಕ್ಕಿದ್ದು ಬಿಟ್ಟರೆ ಹೆಚ್ಚುಕಮ್ಮಿ ಪರ್ವತ ಸ್ವಚ್ಛವಾಗಿತ್ತು.

ಆದರೆ ಯಾವುದೇ forest chekpost ಇಲ್ಲದ ಗಿರಿಗದ್ದೆಯಿಂದ ಸುಬ್ರಹ್ಮಣ್ಯದ ದೇವರಗದ್ದೆ ವರೆಗಿನ 2/4
5km ಕಾಡುಪ್ರದೇಶ ಮಾತ್ರ ಅಕ್ಷರಶಃ ಕಸ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಂತೆ ಭಾಸವಾಗಿತ್ತು. ದಾರಿಯ ಇಕ್ಕೆಲದಲ್ಲೇಲ್ಲಾ ಬರೀ ಪ್ಲಾಸ್ಟಿಕ್ ಬಾಟಲ್, ಚಾಕೊಲೇಟ್ wrappers, ಕಿತ್ತೋದ ಚಪ್ಪಲಿಗಳ ರಾಶಿಗಳು ಮನುಷ್ಯನೆಂಬ ಪ್ರಾಣಿಗಳ ಯೋಗ್ಯತೆಯನ್ನು ಅಳೆಯುವಂತಿತ್ತು. 3/4
Read 4 tweets
Oct 4, 2021
ಕಬ್ಬೆಕ್ಕುಗಳು - CIVETS

ವಿವೆರಿಡೀ(viverridae) ಕುಟುಂಬದ ಕಬ್ಬೆಕ್ಕುಗಳು ಬೆಕ್ಕುಗಳಿಗೆ ಹೋಲಿಕೆ ಕಂಡು ಬಂದರೂ ಮುಂಗುಸಿಗಳಿಗೆ ಹತ್ತಿರದವು, ಉದ್ದ ಶರೀರ ಗಿಡ್ಡ ಕಾಲು, ಪ್ರತಿ ಕಾಲಿಗೆ ಭಾಗಶಃ ಒಳ ಸೇರುವ ಉಗುರುಳ್ಳ ಐದು ಬೆರಳುಗಳಿವೆ, ನೀಳ ತಲೆ ಚೂಪಾದ ಮುಸುಡಿ ಇದೆ, ಇವು ಮಿಶ್ರಹಾರಿಗಳು.
ನಮ್ಮ ರಾಜ್ಯದಲ್ಲಿ ಮೂರು ಜಾತಿಯ ಕಬ್ಬೆಕ್ಕುಗಳನ್ನು ನೋಡಬಹುದು. ಇಂಗ್ಲೀಷಲ್ಲಿ ಇವಕ್ಕೆ Civet ಎಂದು ಕರೆಯುತ್ತಾರೆ.

1) ಸಾಮಾನ್ಯ ಕಬ್ಬೆಕ್ಕು:Asian palm civet ಇದು ರಾಜ್ಯದೆಲ್ಲೆಡೆ ಕಂಡುಬರುತ್ತದೆ, ಮರ ಹಾಗು ನೆಲ ವಾಸಿ, ಮಿಶ್ರಹಾರಿ, ಸಾಮಾನ್ಯ ಮೈಬಣ್ಣ ಬಿಳಿ ಮಿಶ್ರಿತ ಕಪ್ಪು ರಾತ್ರಿ ಸಂಚರಿಸುವ ಇವು ಪಾಳು ಮನೆ ಮರದ ಪೊಟರೆಯಲ್ಲಿ
ವಾಸಿಸುತ್ತದೆ, ಕೆಲವು ಸಲ ಮನೆಗಳಿಗೂ ನುಗ್ಗಿ ದಾಂಧಲೆ ಮಾಡುತ್ತದೆ

2) ಪುನುಗು ಬೆಕ್ಕು Small Indian civet ಇದು ಸಾಮಾನ್ಯವಾಗಿ ಎಲ್ಲೆಡೆ ಕಾಣುತ್ತದೆ, 3 - 4 ಕಿಲೋ ತೂಗುತ್ತವೆ, ಹಳದಿ ಬೂದು ಅಥವಾ ಬೂದುಗಂದು, ಬೆನ್ನ ಮೇಲೆ 4-5 ಕಪ್ಪು ಪಟ್ಟೆಗಳು ಪಕ್ಕದಲ್ಲಿ ಚುಕ್ಕೆಗಳ ಸಾಲು ಇದೆ, ಬಾಲದುದ್ದಕ್ಕೂ ಕಪ್ಪು ಉಂಗುರಗಳಿವೆ.
Read 10 tweets
Oct 3, 2021
ಇಂದು ದೇಶಾದ್ಯಂತ ಹಾಗೂ ನಮ್ಮ ರಾಜ್ಯಾದ್ಯಂತ ಆಚರಿಸುತ್ತಿರೋ “ವನ್ಯಜೀವಿ ಸಪ್ತಾಹ” ಕ್ಕೆ ನಮ್ಮ ತೀವ್ರ ವಿರೋಧವಿದೆ….!

ರಾಜ್ಯಪಾಲರು, ಅರಣ್ಯಮಂತ್ರಿಗಳು, ಅರಣ್ಯ ಪಡೆಯ ಮುಖ್ಯಸ್ಥರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದು: 👇👇👇👇( ದಯವಿಟ್ಟು ಓದಿ )🙏🙏🙏 Retweet ಮಾಡಿ ImageImageImageImage
ನಿಮಗೆ ತಿಳಿದಿರುವಂತೆ ಈ ಎಲ್ಲಾ ಯೋಜನೆಗಳು ನಮ್ಮ ಪಶ್ಚಿಮಘಟ್ಟದೊಳಗಿನ ಅತೀಸೂಕ್ಷ್ಮ ಪರಿಸರ ವಲಯದಲ್ಲಿಯೇ ಬರುತ್ತವೆ. ಹಾವನ್ನು ಕುರಿತಾಗಿ, ಕಪ್ಪೆಗಳ ಅಧ್ಯಯನ ಹೀಗೇ ನಾನಾ ರೀತಿಯ ಸಂಶೋಧನೆ ಮಾಡುತ್ತಿರುವ ನೀವುಗಳು ಯಾಕೆ ಇಂತಹ ಯೋಜನೆಗಳನ್ನು ವಿರೋಧಿಸ್ತಿಲ್ಲ? ಮುಂದೆ ಈ ಯೋಜನೆಗಳೆಲ್ಲಾ ನಡೆದುಹೋದರೆ ನಿಮಗೆ ನಮಗೆ ಕುಡಿಯೋಕೇ ನೀರು ಸಿಗಲ್ಲ…!
ಉಸಿರೇ ಇರಲ್ಲ…! ಇನ್ನು ಕಪ್ಪೆ ಹಾವು ಚಿಟ್ಟೆಗಳ ಮಾತೆಲ್ಲಿ ಬಂತು?

ವನ್ಯಜೀವಿ ಕಾಯ್ದೆ ಎಲ್ಲಿದೆ?
ಅರಣ್ಯನೀತಿ ಎಲ್ಲಿದೆ?
ಮಾಧವ್ ಗಾಡ್ಗೀಳ್ ವರದಿಗಳು ಎಲ್ಲಿ ಹೋದವು? ಅವುಗಳನ್ನು ಸಂಪೂರ್ಣವಾಗಿ ಜಾರಿಮಾಡುವುದು ಮತ್ತು ಅದರಂತೆ ಕಾನೂನು ಕಾಪಾಡುವುದು ಯಾರ ಕೆಲಸ? ಸರ್ಕಾರದವರು ಎಡವಿದಾಗ ನಿಮ್ಮಂತವರು ಎಚ್ಚರಿಸಬೇಕಲ್ಲವೇ?
Read 7 tweets
Sep 8, 2021
ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ...

ಕಾರಣ,
ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ ಮನೆಯಲ್ಲಿರಬೇಕು,
2, ಅದನ್ನ ಸಮಾಜದಲ್ಲಿ ಇನ್ನೊಬ್ಬರ ಮೇಲೆ ಹೇರಕೂಡದು ಅಂತ ಹೇಳ್ದವರು. ತೇಜಸ್ವಿ ಯಾವತ್ತೂ ತಮ್ಮ ತಮ್ಮ ಸಮುದಾಯದವರನ್ನೇ ಬೆಳೆಸಿಕೊಂಡು ಬರಲಿಲ್ಲ..

ತೇಜಸ್ವಿ ಯಾವತ್ತೂ ಯಾರೋ ಒಬ್ಬ ಬಂದು ದೇಶವನ್ನ ನಡೆಸ್ತಾನೆ, ಯಾವುದೋ ದೇವರು ಧರೆಗಿಳಿದು ಬರುವ ಅವನಿಲ್ಲದೆ ಈ ದೇಶ ನಡೆಯೋದೆ ಇಲ್ಲ ಅನ್ನೋ ಆಶಾವಾದಿತನದಿಂದ ಬದುಕಿದವರಲ್ಲ....
ಒಮ್ಮೆ
3,ಅಂದಿನ ಪ್ರಧಾನಿ 'ಉದಯರವಿ' ಮನೆಗೆ ಬರ್ತೀನಿ ಅಂದಾಗ ದಯವಿಟ್ಟು ಬರಬೇಡಿ, ತೊಂದ್ರೆ ಆಗುತ್ತೆ ಅಂತ ನೇರವಾಗಿ ಹೇಳ್ದೋರು ತೇಜಸ್ವಿ.

ತೇಜಸ್ವಿ ಯಾವತ್ತೂ ಮಾರ, ಎಂಕ್ಟ, ಕರಿಯಪ್ಪ, ಚೀಂಕ್ರ, ಬಬ್ಬು, ಮೂಡಿಗೆರೆಯ ಬಿರಿಯಾನಿ ಸಾಬು, ಮೆಕ್ಯಾನಿಕ್ ಗಳು, ಟಿವಿ ರಿಪೇರಿ ಅಂಗಡಿಯವರು, ಬೇಕರಿಯವರು, ತಮ್ಮ ಕೂಲಿಯಾಳುಗಳ ಜತೆ ಮುಕ್ತವಾಗಿ ಬೆರೆಯುತ್ತ,
Read 13 tweets
Sep 7, 2021
ಒಳ್ಳೆಯ ಅನ್ನ ಬೇಕು, ಬೇಸಾಯ ಬೇಡ?

ಹಳ್ಳಿ ಮನೆಗೆ ಬಂದವರು ಹಾಲು, ತುಪ್ಪ, ಬೆಲ್ಲ, ಅನ್ನ,ಮೊಸರು,ಮಜ್ಜಿಗೆ,ಉಪ್ಪಿನಕಾಯಿ ಬಗ್ಗೆ ಮೆಚ್ಚಿ ಮಾತಾಡೋದು ಎಲ್ಲರಿಗೂ ಗೊತ್ತಿದೆ.
ನೀವಿನ್ನೂ ಭತ್ತ ಬೇಳಿತೀರಾ?
ಆಕಳು ಸಾಕ್ತೀರ? ಪ್ರಶ್ನೆಯನ್ನು ಕೇಳ್ತಾರೆ.

ಮಾತಿನ ಮಧ್ಯೆ ಎಮ್ಮೆ ಹಾಲು ಚಹಾ ಚೆನ್ನಾಗಿ ಇರ್ತದೆ ಎಂದು ಹೇಳ್ತಾರೆ.
2, ನಿರ್ವಹಣೆ ಕಷ್ಟ , ಕೃಷಿ ನಷ್ಟ ಎಂದು ಗದ್ದೆ, ಕೊಟ್ಟಿಗೆ ನೋಡುವ ರೀತಿಗಳು ಈಗ ಬದಲಾಗಿವೆ. ಆದರೆ ಉಣ್ಣಲು ಒಳ್ಳೆಯದು ಬೇಕೆಂಬ ಹಂಬಲ ಮಾತ್ರ ಹಾಗೇ ಇದೆ😀

'ಮೊದಲು ನನ್ನ ಮನೆಗೆ. ಏನೆಲ್ಲ ಒಳ್ಳೆಯದು ಬೇಕೋ ಅದನ್ನು ನಾನು ಬೇಳಿತಿನಿ....' ಹೆಚ್ಚಿದ್ದರೆ ಮಾರಾಟ ಎಂಬ ನಿಲುವು ಕೆಲ ಕೃಷಿಕರದು. 'ಕೃಷಿಕರಿದ್ದರೆ ಚೆನ್ನ, ದುಡಿಯುವವರಿದ್ದರೆ ಅನ್ನ'
3, ಸತ್ಯ ಮನದಟ್ಟಾಗಿದೆ.

ಒಳ್ಳೆಯ ಚಹಾ ಬೇಕು, ಹಸು ಸಾಕೋದು ಕಷ್ಟ.
ಆರೋಗ್ಯ ದೃಷ್ಟಿಯಿಂದ ಉತ್ತಮ ನಾಟಿ ಅಕ್ಕಿ ಬೇಕು, ಭತ್ತದ ಬೇಸಾಯ ಸಾಧ್ಯವಿಲ್ಲ.... ಎಂಬ ಸಮಸ್ಯೆ.

ಹಾಗಾದರೆ ಒಂದು ಕೆಲಸ ಮಾಡಿ . ಆಗಾಗ ಕೃಷಿ ಪ್ರವಾಸ ಮಾಡಿ, ಕೃಷಿಕರನ್ನು ಮಾತಾಡಿಸಿ ಪರಿಚಯ ಮಾಡಿಕೊಳ್ಳಿ. ನಿಮಗೆ ವಿಶ್ವಾಸ ಮೂಡಿದಾಗ ನೇರ ರೈತರಿಂದ ಖರೀದಿ ಮಾಡಿ.
Read 4 tweets
Jun 9, 2021
ಪರಿಸರ ದಿನಾಚರಣೆಯೇನೋ ಬರೀ ಪೋಟೋ ಹಾಕಿ ಸಂಭ್ರಮಿಸೋಕಾ!! ಗಿಡ ನೆಟ್ಟಿರಿ ಹೌದು ಒಳ್ಳೆಯದೇ , ಗಿಡ ನೆಡಿ ಪರಿಸರ ಉಳಿಸಿ ಎಂಬಿತ್ಯಾದಿ ವ್ಯಾಖ್ಯಾನದೊಂದಿಗೆ ವಾಟ್ಸಪ್, ಇನಸ್ಟಾಗ್ರಾಂ ಸ್ಟೇಟಸಲ್ಲಿ ರಾರಾಜಿಸಾಯ್ತು. ಆದರೆ ಪ್ರತಿ ದಿನ ನಮ್ಮ ಅತ್ಯಮೂಲ್ಯ ಕಾಡಿನ ಮೇಲೆ ಆಗೋ ದೌರ್ಜನ್ಯಕ್ಕೆ ಯಾಕೆ ದನಿ ಎತ್ತುತ್ತಿಲ್ಲಾ?????
ಬರಿ ಭಾಷೆಗೊಂದೆ ಸಾಕಾ ನಿಮ್ಮ ಅಭಿಮಾನ, ಬದುಕೋಕೆ ಭಾಷೆ ಜೊತೆ ನೆಲ,ಕಾಡು,ನೀರು, ಶುದ್ಧ ಗಾಳಿ ಇವು ಬೇಕು ಸ್ವಾಮಿ! ಯಾರೋ ಏನೋ ಮಾಡ್ತಾರೆ ಇನ್ಯಾರೋ ಹೋರಾಡುತ್ತಾರೆ ಅಂತ ನೀವು ಇವತ ಸುಮ್ಮನೆ ಆದರೆ ಮುಂದಿನ ನಿಮ್ಮ ಮಕ್ಕಳ ಭವಿಷ್ಯ ನೀವೆ ಹಾಳು ಮಾಡಿದಂಗೆ.
ಕೇವಲ ಮರ ಬೆಳೆಸಿದರೆ ಸಾಕಾಗಲ್ಲಾ! ಅದೆಷ್ಟೋ ವರುಷಗಳಿಂದ ಬೆಳೆದ ಈ ಸಂಕೀರ್ಣ ಕಾಡುಗಳನ್ನು ಕಾಪಾಡೋದು ಅತ್ಯವಶ್ಯಕ. ನಾವು ಈಗಾಗಲೇ ಅಭಿವೃದ್ಧಿಯ ಹೆಸರಲ್ಲಿ ಕಾಡು ಕಳೆದುಕೊಂಡಿದು ಆಯ್ತು, ಸಕಾಲಕ್ಕೆ ಮಳೆ ಬಾರದೇ ಅಕಾಲಿಕ ಮಳೆಗೆ ಜನ ಪರದಾಡಿದು ಆಯ್ತು ಆದ್ರೂ ನಮಗೆ ಬುದ್ಧಿ ಬಂದಿಲ್ಲಾ!!
ಯಾಕಂದ್ರೆ ನಮಗೆ ಅದ ಬೇಡ, ವಿದ್ಯಾವಂತರಾದರು ಕಾಡು ,
Read 6 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

:(