ಆಕರ್ಷಕ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ನೇತ್ರಾವತಿ ನದಿಯ ಉಪನದಿಯಿಂದ ರೂಪುಗೊಂಡಿರುವ, ಸುಮಾರು 200 ಅಡಿ ಎತ್ತರದಿಂದ ಹರಿಯುವ ಬಂಡಾಜೆ ಅರ್ಬಿ ಜಲಪಾತವು ಒಂದು ದಿನದ ವಿಹಾರ (ಪಿಕ್ನಿಕ್) ಮತ್ತು ಚಾರಣಕ್ಕೆ (ಟ್ರೆಕ್ಕಿಂಗ್) ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ.
📍Bandaje Arbi Waterfall
Formed from a tributary of the Netravathi River in the lush green forests of the Western Ghats, the 200 feet high Bandaje Arbi Waterfall is a popular spot for picnic and trekking.
ಉತ್ತರ ಕನ್ನಡ ಜಿಲ್ಲೆ, ಮಾಗೋಡುನಿಂದ 3 ಕಿ. ಮೀ ದೂರದಲ್ಲಿರುವ ಮಾಗೋಡು ಜಲಪಾತವು ಬೇಡ್ತಿ ನದಿಯಿಂದ ರೂಪುಗೊಂಡು ಎರಡು ಧಾರೆಗಳಾಗಿ ಸುಮಾರು 650 ಅಡಿ ಎತ್ತರದಿಂದ ಧುಮುಕುವ ಜಲಪಾತವು ಅರ್ಧಚಂದ್ರಾಕೃತಿಯಾಗಿ ಹರಿದು ಅರಬಿ ಸಮುದ್ರ ಸೇರುತ್ತದೆ. (1/8)
ದಟ್ಟ ಅರಣ್ಯದ ಮಧ್ಯೆ ಬೇಡ್ತಿ ನದಿ ಹೆಬ್ಬಾವಿನ ಹಾಗೆ ಸುತ್ತಿಕೊಂಡು ವೈಯ್ಯಾರದಿಂದ ಹರಿಯುವುದು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.
ಈ ಸುಂದರ ಮಾಗೋಡು ಜಲಪಾತದ ಮನಸೂರೆಗೊಳ್ಳುವ ಸೌಂದರ್ಯವನ್ನು ಕಣ್ ತುಂಬಿಕೊಳ್ಳಲು ಹಾಗೂ ಅರಣ್ಯದ ಮಧ್ಯೆ ಗಿಡ, ಮರ, ಬಳ್ಳಿ, ಹೂವುವಿನ ಸುವಾಸನೆಯನ್ನು ಆಸ್ವಾದಿಸುತ್ತ, (2/8)
ಪ್ರಾಣಿ ಪಕ್ಷಿಗಳ ನಿನಾದವನ್ನು ಆಲಿಸುತ್ತ, ಜಲಪಾತವನ್ನು ಅನ್ವೇಷಿಸುವ ಸಾಹಸಮಯ ರೋಮಾಂಚನದ ಟ್ರೆಕ್ಕಿಂಗ್ ಮಾಡಲು ಇಂದೇ ಪ್ರವಾಸ ಕೈಗೊಳ್ಳಿ. (3/8)
ನೈಸರ್ಗಿಕ ಸೌಂದರ್ಯದ ಮಧ್ಯೆ ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜೋಮ್ಲು ತೀರ್ಥ ಜಲಪಾತವು ಸೀತಾ ನದಿಯಿಂದ ರೂಪುಗೊಂಡ ಸಣ್ಣ ಕ್ಯಾಸ್ಕೇಡಿಂಗ್ ಜಲಪಾತವಾಗಿದೆ. ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಒಂದು ದಿನದ ಪಿಕ್ನಿಕ್ ಗೆ ಆಕರ್ಷಣೆಯ ಸ್ಥಳವಾಗಿದೆ.
📍Jomlu Theertha Falls
The Jomlu Theertha Falls is a small cascading waterfall formed by the river Sita. It is an attraction for a day picnic with family and friends.