ಕ ಚ ಟ ತ ಪ ವರ್ಗಗಳ ಕೊನೆಯ ಅಕ್ಷರ ಗಳನ್ನು ಪದದ ಒಳಗೆ ಬಂದಾಗ ಅವನ್ನು ೦ ಎಂಬ ಅನುಸ್ವಾರದಿಂದ ಸೂಚಿಸುತ್ತೇವೆ
ಅಂಕೆ
ಅಂಚೆ
ಅಂಟು
ಅಂತೂ
ಅಂಬು
ಇವು ಐದೂ ವರ್ಗಗಳ ಉದಾಹರಣೆಗಳು. (೧/ಹಲವು)
ಅಲ್ಲಿ
ಕ ವರ್ಗದ (ಕ ಖ ಗ ಘ) ಅಕ್ಷರ ಇದ್ದರೆ, ಆ ೦ ಯ ಉಚ್ಚಾರಣೆ ಙ್ (ಅಙ್ ಕೆ)
ಚ ವರ್ಗದ (ಚ ಛ ಜ ಝ) ಅಕ್ಷರ ಇದ್ದರೆ, ಆ ೦ ಯ ಉಚ್ಚಾರಣೆ ಞ್ (ಅಞ್ ಚೆ)
ಟ ವರ್ಗದ (ಟ ಠ ಡ ಢ) ಅಕ್ಷರ ಇದ್ದರೆ, ಆ ೦ ಯ ಉಚ್ಚಾರಣೆ ಣ್ (ಅಣ್ ಟು)
(೨/ಹಲವು)
ತ ವರ್ಗದ (ತ ಥ ದ ಧ) ಅಕ್ಷರ ಇದ್ದರೆ, ಆ ೦ ಯ ಉಚ್ಚಾರಣೆ ನ್ (ಅಂದ= ಅನ್ ದ )
ಪ ವರ್ಗದ (ಪ ಫ ಬ ಭ) ಅಕ್ಷರ ಇದ್ದರೆ, ಆ ೦ ಯ ಉಚ್ಚಾರಣೆ ಮ್ (ಅಮ್ ಬು = ಅಂಬು)
ಅದೇ ಕಾರಣಕ್ಕೆ
ಅಂಚು != ಅನ್ ಚು != ಅಮ್ ಚು
ಉಂಡು != ಉನ್ ಡು != ಉಮ್ ಡು
(೩/ಹಲವು)
ಉದಾ: ಹಿಂಸೆ, ಅಂಶು, ಹಂಸ, ಸಂವಿಧಾನ
ಕೆಲ ದಶಕಗಳಿಂದ, ದಕ್ಷಿಣ ಕರ್ನಾಟಕದಲ್ಲಿ ಅವರ್ಗೀಯ ವ್ಯಂಜನದ ಬರುವ ೦ ಯನ್ನು 'ಮ್' ಎಂದು ಉಚ್ಚರಿಸುವ (ಪರಂಪರೆಗೆ ವಿರುದ್ಧವಾದ) ರೂಢಿ ಬೆಳೆದಿದೆ
(೩/ಹಲವು)
(೪/ಹಲವು)