1/nಜನ ಎಲ್ಲ ಹೇಳೋದು ಉಂಟು, ನಮ್ಮ ಸರ್ವಶಕ್ತ ಪರಮ ಪ್ರಭುಗಳು ಕಪ್ಪು ಹಣ ತರ್ತೀನಿ ಅಂದ್ರು, ತರ್ಲಿಲ್ಲ. ೫ ಟ್ರಿಲಿಯನ್ ಎಕಾನಮಿ ಮಾಡ್ತೀನಿ ಅಂದ್ರು, ಪೆಟ್ರೋಲ್ ನ ೩೫ ರೂಪಾಯಿ ಲೀಟರ್ ಮಾಡ್ತೀನಿ ಅಂದ್ರು, ೧ ಡಾಲರ್ ಗೆ ಒಂದು ರೂಪಾಯಿ ಆಗುವ ಹಾಗೆ ಮಾಡ್ತೀನಿ .. ಆದ್ರೆ ಏನೂ ಮಾಡ್ಲಿಲ್ಲ ಯಾಕೆ?
ಯಾಕಿಷ್ಟು ಚಂಚಲ ಆಶ್ವಾಸನೆ?
2/nಸನ್ನಿಧಾನಂ ಗಳು ಅದಕ್ಕೆನಮ್ಮ ಸನಾತನ ಸಂಸ್ಕೃತಿಯಿಂದಾಯ್ದ ಒಂದು ಹಳೆಯ ಶ್ಲೋಕದ ಮುಖಾಂತರ ಉತ್ತರ ನೀಡಲಿದ್ದಾರೆ
मनो मधुकरो मेघो मद्यपो मत्कुणो मरुत् |
मा मोदी मर्कटो मत्स्यो मकारा दश चंचलाः ||
ಇದು ಹಲವು ಸಾವಿರ ವರ್ಷಗಳ ಹಿಂದೆ ಹೇಳಿರುವುದು. ಇದರ ಅರ್ಥ ಹೀಗಿದೆ .
मनस् = ಮನಸ್ಸು
मधुकर = ಜೇನು ಹುಳ
मेघ = ಮೋಡ
3/nमद्यप = ರವಿ ಶಾಸ್ತ್ರಿ ಅಥವಾ ಕುಡುಕ
मत्कुण = ತಿಗಣೆ
मरुत् = ಗಾಳಿ
मा = ಲಕ್ಷ್ಮಿ, ಸಂಪತ್ತು
मोदी = ಮೋದಿ, ಅಹಂ
मर्कट = ಮಂಗ
मत्स्य = ಮೀನು
मकार = ಮ ಅಕ್ಷರದಿಂದ ಶುರು ಆಗುವವು
दश = ಹತ್ತು
चंचल = ಚಂಚಲ, ಇದ್ದಂಗೆ ಇರುವುದಿಲ್ಲ
4/nಅಂದ್ರೆ ಮೇಲೆ ಹೇಳಿದ ಈ ಹತ್ತೂ ವಿಷಯಗಳನ್ನು ನಂಬಿ ಬದುಕುವುದು ಕಷ್ಟ, ನಂಬಲೂ ಬಾರದು. ಯಾಕಂದ್ರೆ ಇವು ಚಂಚಲ.
ಮನಸ್ಸು ಪ್ರತಿ ಕ್ಷಣ ದಿಕ್ಕು ಬದಲಾಯಿಸುತ್ತೆ. ಒಮ್ಮೆ ಇಲ್ಲಿ ಇದ್ದರೆ ಮರುಕ್ಷಣ ಎವರೆಸ್ಟ್ ಅಲ್ಲಿ.
ಇನ್ನು ಜೇನುಹುಳ, ಅದು ಒಂದೇ ಹೂವಿನಲ್ಲಿ ಇರದು. ಸದಾ ಚಂಚಲ
5/nಮೋಡ ಅಂತೂ ಕೇಳುವುದೇ ಬೇಡ, ರೈತರಿಗೆ ಹೇಗೆ ಸತಾಯಿಸಿ ಜೀವ ಹಿಂಡುತ್ತವೆ ಅಂತ.
ಇನ್ನು ಕುಡುಕ, ಬುದ್ಧಿ ಸ್ತಿಮಿತದಲ್ಲಿ ಇರುವುದಿಲ್ಲ. ಎಷ್ಟೋ ಸರಿ ಕುಡಿದ ಮತ್ತಿನಲ್ಲಿ ಪ್ರಪೋಸ್ ಮಾಡಿ ಜೀವನ ಹಾಳು ಮಾಡಿಕೊಂಡ ಎಷ್ಟೋ ಜನ ಇದ್ದಾರೆ. ಇನ್ನು ಕುಡಿದ ಮತ್ತಿನಲ್ಲಿ ಮಕ್ಕಳು ಮಾಡಿದ ಪೇರೆಂಟ್ಸ್ ಕಥೆ ಹೆಚ್ಚು ಹೇಳುವ ಅಗತ್ಯ ಇಲ್ಲ.
6/nತಿಗಣೆ ಕಾಟ ಅನುಭವಿಸಿದವರಿಗೆ ಗೊತ್ತು. ಆದ್ರೆ ಇದು ಇದ್ದ ಕಡೆ ಇರಲ್ಲ. ಬೆಳಿಗ್ಗೆ ಎಲ್ಲೋ ಗೋಡೆ ಬಿರುಕು, ಸಂದಿ ಅಲ್ಲಿ ಅಡಗಿ ಕೊಳ್ಳುತ್ತದೆ.
ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ ಅಂದ್ರೆ ನಿಮಗೆ ಗೊತ್ತು. ಗಾಳಿ ಚಂಚಲ
7/nಇನ್ನು ಲಕ್ಷ್ಮಿ, ಹೇಳುವುದು ಬೇಡ. ಜೇಬಿನಲ್ಲಿ ನೆನ್ನೆ ಇದ್ದ ನೋಟು ಇವತ್ತು ಇರಲ್ಲ. ಸುಮ್ನೆ ಪೆಟ್ರೋಲ್ ಬಂಕ್ ಗೆ ಒಮ್ಮೆ ಹೋದ್ರೆ ಸಾಕು ಬ್ಯಾಂಕ್ ಬ್ಯಾಲೆನ್ಸ್ ನ ಒಂದೆರೆಡು ಡಿಜಿಟ್ಟೆ ಮಾಯ!
ಮತ್ತೆ ನಮ್ಮ ಮೋದಿ! ಇವರ ಬಗ್ಗೆ ಹೇಳುವುದಕ್ಕಿಂತ ಸುಮ್ನೆ ಇರುವುದು ಒಳ್ಳೆಯದು.
8/nಅಚ್ಛೇ ದಿನ್ ಅನ್ನುವ ಬಿಸಿಲು ಕುದುರೆ ಹಿಂದೆ ಬಿದ್ದ ಭಕ್ತರ ಕಥೆ ಏನಾಗಿದೆ ಅಂತ ನಿಮಗೆ ಚೆನ್ನಾಗಿ ಗೊತ್ತು. ನಮ್ಮ ಪೂರ್ವಿಕರಿಗೆ ಅವತ್ತೇ ಗೊತ್ತಿತ್ತು, ಇಂತಹ ಒಂದು ಮೋದಿ ಎನ್ನುವ ಅನಾಮಲಿ ಘಟಿಸುತ್ತದೆ ಅಂತ. ಅದಕ್ಕೆ ಈ ಶ್ಲೋಕ ಅವತ್ತೇ ಮಾಡಿದ್ದೂ.
ಮತ್ತೆ ಮಂಗ, ಮರದಿಂದ ಮರಕ್ಕೆ, ತೋಟದಿಂದ ತೋಟಕ್ಕೆ,
9/nಬಾಲ್ಕನಿ ಇಂದ ಬಾಲ್ಕನಿಗೆ ಹೀಗೆ ಸದಾ ಹಾರುತ್ತಲೇ ಇರುತ್ತೆ.
ಮೀನು ಇದ್ದ ಜಾಗದಲ್ಲಿ ಇದೆ ಅಂದ್ರೆ ಅದು ಸತ್ತು ಹೋಗಿದೆ ಅಂತ ಅರ್ಥ!
ಹೀಗೆ ಹತ್ತು “ಮ”ಕಾರಗಳು ಚಂಚಲ ಅಂತೆ. ಇವನ್ನು ನಂಬಿದರೆ ತಿರುಪತಿ ಚೊಂಬು ಗ್ಯಾರಂಟಿ.
n/nಬೈ ದ ವೇ, ಈ ಶ್ಲೋಕದಲ್ಲಿ ಮೊದಲು ಮಾನಿನಿ ಅನ್ನುವ ಉಲ್ಲೇಖ ಇತ್ತು. ಕಾಲ ಕ್ರಮೇಣ ಅದು ಸೆಕ್ಸಿಸ್ಟ್ ಅಂತ ಎತ್ತಾಕಲಾಗಿದೆ. ಅದು ಯಾವನೋ ವರ್ಜಿನ್ ಲವ್ ಫೇಲ್ಯೂರ್ ಹುಡ್ಗ ಬರೆದಿದ್ದು ಇರ್ಬೇಕು
• • •
Missing some Tweet in this thread? You can try to
force a refresh
1/8 newsckm.com/archives/1839
ಇದೊಂದು ನಮ್ಮ ರಾಜ್ಯದಲ್ಲಿ UP ಮಾದರಿಯಲ್ಲಿ ಆಗಿರುವ ಘನಘೋರ ಅನ್ಯಾಯ.
ಚೆಲುವರಾಜ್ ಅನ್ನುವ ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ @RAshokaBJP ನೇತೃತ್ವದ ಸಿಸ್ಟಮ್ ಮಾಡಿರುವ ಅನ್ಯಾಯ.
2/8 ನಿಮಗೆ ಚೆಲುವರಾಜು ಅವರ ಬಗ್ಗೆ ಹೇಳಬೇಕು. ಇವರು ಶೃಂಗೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾಗ ಇವರ ಪ್ರಾಮಾಣಿಕತೆಯ ಬಗ್ಗೆ ಶೃಂಗೇರಿಯ ಮೂಲೆ ಮೂಲೆ ಅಲ್ಲಿಯೂ ಪ್ರಸಿದ್ಧತೆ ಇತ್ತು, ಈಗಲೂ ಇದೆ. ಶೃಂಗೇರಿಯ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತ ಇದೆ ಹಾಗು
3/8 ಇದು ಕೇವಲ ಶೃಂಗೇರಿ ಮಾತ್ರ ಅಲ್ಲ, ಪ್ರತಿ ಊರಿನ ಹಣೆ ಬರಹ ಇದೇ . ಅದರಲ್ಲೂ ರೆವೆನ್ಯೂ ಡಿಪಾರ್ಟ್ಮೆಂಟ್ ಬಗ್ಗೆ ಹೇಳುವುದೇ ಬೇಡ.
ಹಾಗಂತ ಈ ಭ್ರಷ್ಟಾಚಾರಕ್ಕೆ ಕಾರಣ ಇದೆ. ಪ್ರತಿ ತಾಲೂಕಿನ ರೆವೆನ್ಯೂ ವಿಭಾಗದಿಂದ ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ರೆವೆನ್ಯೂ ಮಂತ್ರಿಗೆ "ಸಂದಾಯ" ಆಗಬೇಕೆಂಬ ಅಘೋಷಿತ ನಿಯಮ ದಶಕಗಳಿಂದ ಜಾರಿಯಲ್ಲಿದೆ.
1/nಒಂದು ನರಿ ಪುರಾಣ.
ಜಂಬೂದ್ವೀಪದ ದಕ್ಷಿಣದ ಕರ್ನಾಟಕದಲ್ಲಿ ಒಂದು ಊರು, ಅಲ್ಲಿನ ಒಂದು ಅಗ್ರಹಾರ ವಶಿಷ್ಠ ಪುರ. ಅಲ್ಲಿನ ಗೋವಿಂದ ಭಟ್ಟರ ಹೆಂಡತಿ ಭಕ್ತವತಿ. ಒಮ್ಮೆ ಗೋವಿಂದ ಭಟ್ಟರು ಸಪತ್ನಿಕರಾಗಿ ತಿರುಪತಿಗೆ ಹೋಗುತ್ತಾರೆ. ಅಲ್ಲಿ ತಿಮ್ಮಪ್ಪನಿಗೆ ಪ್ರದಕ್ಷಿಣೆ ಹಾಕುವ ಸಂದರ್ಭ. ಎಲ್ಲಾ ಭಕ್ತಾದಿಗಳೂ ಗೋವಿಂದ ಗೋವಿಂದ ಅಂತ ಹೇಳ್ತಾ ಇದ್ದಾರೆ.
2/nಈಗ ಭಕ್ತವತಿಗೆ ಆಗಿರುವುದು ಸಂಕಷ್ಟ. ಸನಾತನ ಧರ್ಮದಲ್ಲಿ ಗಂಡನ ಹೆಸ್ರು ಹೇಳುವ ಹಾಗೆ ಇಲ್ಲ. ಹೇಳಿದರೆ ಗಂಡನ ವಯಸ್ಸು ಕಮ್ಮಿ ಆಗುತ್ತೆ ಅಂತೇ. ಆಗ ಭಕ್ತವತಿಯು "ಗೋವಿಂದನ ಭಜನೆಯೂ ಆಗಬೇಕು ಆದ್ರೆ ಗಂಡನ ಆಯಸ್ಸು ಕಮ್ಮಿ ಆಗಬಾರದು, ಇದಕ್ಕೇನು ಮಾಡುವುದು" ಅಂತ ಚಿಂತೆಗೆ ಬೀಳುತ್ತಾಳೆ.
3/nಆಗ ಅವಳಿಗನ್ನಿಸುತ್ತದೆ, ಇದಕ್ಕೆ ಭವಿಷ್ಯದಲ್ಲಿ ಖಂಡಿತಾ ಉತ್ತರ ಇರುತ್ತದೆ. ಸೋ ಭಕ್ತವತಿಯು ತನ್ನ ಪತಿವ್ರತಾ ಶಕ್ತಿಯನ್ನು ಉಪಯೋಗಿಸಿ ಟೈಮ್ ಟ್ರಾವೆಲ್ ಮಾಡಿ ೨೦೨೧ಕ್ಕೆ ಬರ್ತಾಳೆ. ಇಲ್ಲಿ ನೋಡಿದರೆ ಭಕ್ತವತಿಯ ಈಗಿನ ಜನ್ಮ ಈ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಕಂಟ್ರೋಲ್ ಸಿ ಕಂಟ್ರೋಲ್ ವಿ ಅನ್ನುವ ಮಂತ್ರ ಎಲ್ಲಾ ಭಕ್ತರ ಬಾಯಲ್ಲಿ!
1/nಅಯೋದ್ಯೆ ಮಂದಿರದ ವಿಷಯದಲ್ಲಿ ಹಿಂದೂ ಮುಸಲ್ಮಾನರು ಕಚ್ಚಾಡಿದ್ದು ಗೊತ್ತಿರಬಹುದು. ಈ ಜಗಳ ಅದೊಂದೇ ವಿಷಯಕ್ಕೆ ಮಾತ್ರ ಸೀಮಿತ ಅಲ್ಲ, ಶತಮಾನಗಳಿಂದ ಇವರಿಬ್ಬರು ಕಚ್ಚಾಡುತ್ತಾ ಇದ್ದಾರೆ. ಹಾಗೆಯೆ ದೂರದ ಏರುಸೆಲಂ ಅಲ್ಲಿ ಕ್ರಿಶ್ಚಿಯನ್ ರು, ಮುಸಲ್ಮಾನರು ಮತ್ತು ಯಹೂದಿಗಳು ಕಚ್ಚಾಡುತ್ತಾ ಇದ್ದಾರೆ.
2/nಇವರೆಲ್ಲರಲ್ಲೂ “ತಾನೇ ಶ್ರೇಷ್ಠ, ನಮ್ಮ ದೇವರೇ ಎಲ್ಲರಿಗಿಂತ ಮೇಲು” ಅನ್ನುವ ಭಾವನೆ ಆಳವಾಗಿ ಬೇರೂರಿದೆ.
ಇವರೆಲ್ಲರಲ್ಲೂ ಇರುವ ಒಂದು ಸಾಮಾನ್ಯ ಅಂಶ ಅಂದ್ರೆ ಈ ನಾಲ್ವರೂ (ಸನಾತನಿ, ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ) ಸೃಷ್ಟಿಕರ್ತ ಅನ್ನುವ ಅಂಶದಲ್ಲಿ ನಂಬಿಕೆ ಇಟ್ಟಿದ್ದಾರೆ.
3/nಅಂದ್ರೆ ಇವರ ಪ್ರಕಾರ ಸಮಸ್ತ ವಿಶ್ವಕ್ಕೆ, ಅಲ್ಲಿರುವ ಜೀವಿಗಳಿಗೆ, ಗುಡ್ಡ ಬೆಟ್ಟ ನದಿ ಸಾಗರಗಳು “ಸೃಷ್ಟಿ” ಇಂದ ಆದವುಗಳು. ಒಬ್ಬ ಸರ್ವಶಕ್ತ ದೇವರು ಇದನ್ನೆಲ್ಲಾ ಮಾಡಿದ್ದು. ಮಾನವನು ಸಹ ಸೃಷ್ಟಿಯೇ. ಇವರೆಲ್ಲರ ಪ್ರಕಾರ ನಮಗೆ ಒಬ್ಬ ಮೂಲ ಪುರುಷ ಇದ್ದಾನೆ. ಅದು ಆಡಂ ಅಂತ ಒಬ್ಬರು ಅಂದರೆ ಮನು ಅಂತ ಇನ್ನೊಬ್ಬರು ಅಂತಾರೆ.
ನೀವು ಬ್ರಾಹ್ಮಣರು ಆಗಿದ್ದರೆ ಮುಂದೆ ಓದಿರಿ. ನಿಮ್ಮ ಬಗ್ಗೆಯೇ ಹೇಳಿರುವ ಒಂದು ಮಾಲಿಕೆ. ಅನುಭವ ಅಂತ ಬೇಕಾದರೂ ಅನ್ನಿ.
ನೀವು ಬಹಳ ಕಷ್ಟ ಪಟ್ಟು ಓದಿ ಇವಾಗ ಯಾವುದಾದರೂ MNC ಅಲ್ಲಿ ಇದ್ದೀರಾ, ಬೆಂಗಳೂರು ಇಲ್ಲವೇ ಅಮೇರಿಕ, ಯೂರೋಪ್ ದೇಶಗಳಲ್ಲಿ ಸೆಟಲ್ ಆಗಿದ್ದೀರಾ.
ನಿಮ್ಮ ಸ್ಥಿತಿ ಚೆನ್ನಾಗಿ ಇದೆ ಹಾಗೂ ಇದಕ್ಕೆ ನಿಮ್ಮ ಸ್ವಂತ ಶ್ರಮವೇ ಕಾರಣ.
ಪೆಟ್ರೋಮ್ಯಾಕ್ಸ್ ವಿಷಯಕ್ಕೆ ಬರುವ, ಗ್ಯಾಸ್ ಲೈಟಿಂಗ್ ಎಫೆಕ್ಟ್ ಅಂತ ಇದೆ, ಇಲ್ಲಿ ವಿಕ್ಟಿಮ್ ಗೆ ಮೇಲಿಂದ ಮೇಲೆ ಏನನ್ನೋ ಹೇಳಿ ಅದೇ ನಿಜ, ಅದೇ ಬದುಕು, ಅದೇ ಸರ್ವಸ್ವ ಅಂತ ನಂಬಿಸುವುದು.
ಉದಾಹರಣೆಗೆ ಮಹಿಳೆಯರಿಗೆ ತಾಯಿ ಎಂಬ ಸ್ಥಾನವೇ ಅತ್ಯುನ್ನತ, ತಾಯಿಯೇ ದೇವರು ಅಂತ ಹೇಳುತ್ತಾ ಆಕೆಯನ್ನು ಒಂದು ಬಂಧನದಲ್ಲಿ ಕಟ್ಟಿ ಹಾಕುವುದು. ಆಕೆಗೆ ಕೂಡ ಇದೇ ನನ್ನ ದೊಡ್ಡ ಅಚೀವ್ಮೆಂಟ್ ಅಥವಾ ಇದರಿಂದನೇ ನನ್ನ ಗೌರವ ಹೆಚ್ಚು ಅನ್ನುವ ನಂಬಿಕೆ ಮನಸ್ಸಿನಲ್ಲಿ ಉರುತ್ತದೆ, ಅದನ್ನೇ ಮುಂದೆ ಆಕೆ ತನ್ನ ಮಗಳಿಗೆ/ಸೊಸೆಗೆ ಹೇಳುತ್ತಾಳೆ.