Q: ಕರ್ನಾಟಕ ಸಂಗೀತದಲ್ಲಿ ತೆಲುಗು ಭಾಷೆಯಲ್ಲಿ ಹೆಚ್ಚು ರಚನೆಗಳಾಗಿರುವುದಕ್ಕೆ ಕಾರಣ ಏನು? ಕನ್ನಡದಲ್ಲಿ ಯಾಕೆ ಅಷ್ಟು ಆಗಲಿಲ್ಲ?

This needs a long answer - Sharing for those interested, as there is lot of confusion about this point even among music students and pratcitioners of the art!
A: ಇದು ತುಂಬಾ ಒಳ್ಳೆಯ ಪ್ರಶ್ನೆ. ಇಂದಿನ ಕರ್ನಾಟಕ ಸಂಗೀತದಲ್ಲಿ ನಮ್ಮ 18-19 ನೇ ಶತಮಾನದಲ್ಲಿ ಇದ್ದಂತಹ ತ್ಯಾಗರಾಜರ ಪರಂಪರೆಯ ಕೊಡುಗೆ ಅಪಾರ. ತ್ಯಾಗರಾಜರ ಹೆಚ್ಚು ರಚನೆಗಳು ತೆಲುಗು ಭಾಷೆಯಲ್ಲಿ ಇದ್ದವು. ತ್ಯಾಗರಾಗರ ಏಳ್ನೂರಕ್ಕೂ ಹೆಚ್ಚು ರಚನೆಗಳಲ್ಲಿ ಸುಮಾರು ನೂರಕ್ಕೆ ತೊಂಬತ್ತಾದರೂ ತೆಲುಗು ರಚನೆಗಳಾಗಿದ್ದು (1/n)
ಉಳಿದವು ಸಂಸ್ಕೃತ ಭಾಷೆಯಲ್ಲಿವೆ. ತ್ಯಾಗರಾಜರ ಕಾಲಾನಂತರದ ಸಂಗೀತದಲ್ಲಿ ಅವರ ಕೃತಿಗಳು ಹೆಚ್ಚು ಪ್ರಚಾರಕ್ಕೆ ಬಂದವು. ತ್ಯಾಗರಾಜರು ಸುಮಾರು ಅರುವತ್ತೈದು ವರ್ಷ ಸಂಗೀತವನ್ನು ಪಾಠ ಮಾಡಿದ್ದ, ದೊಡ್ಡ ಶಿಷ್ಯಸಮೂಹವನ್ನು ಹೊಂದಿದ್ದ ವಾಗ್ಗೇಯಕಾರರು. ಇಪ್ಪತ್ತನೆ ಶತಮಾನದಲ್ಲಿ ಸಾರ್ವಜನಿಕ ಸಂಗೀತ ಕಚೇರಿಗಳ ಪದ್ಧತಿ ಬಂದಾಗ ಅವರ ರಚನೆಗಳು ಕಚೇರಿಗೆ 2/n
ತುಂಬಾ ಸೂಕ್ತವಾಗಿ ಹೊಂದಿಕೊಂಡವು. ತ್ಯಾಗರಾಜ ರಚನೆಗಳಲ್ಲಿರುವ ಸಂಗೀತ-ಸಾಹಿತ್ಯದ ಹಿತವಾದ ಸಂಯೋಜನೆ,, ಅದರಲ್ಲಿ ಹಲವು ಸಂಗತಿಗಳನ್ನು ಹೊಂದಿದ ಪಲ್ಲವಿ, ಅನುಪಲ್ಲವಿಗಳು, ಮತ್ತು ಸಂಗೀತಕ್ಕೆ ಎಡೆ ಕೊಡುವಂತಹ ಸಾಹಿತ್ಯ, ಕಲಾವಿದನು ಸಂಗೀತ ಅಂಶಗಳನ್ನು ಎತ್ತಿ ತೋರಿಸಲು ಇರುವ ಅವಕಾಶ, ಇತರ ಕೆಲವು ವಾಗ್ಗೇಯಕಾರರ ರಚನೆಗಳಿಗಿಂತ ಹೆಚ್ಚಾಗಿವೆ 3/n
, ಈ ಎಲ್ಲಾ ಕಾರಣಗಳು, ಮತ್ತೆ, ತ್ಯಾಗರಾಜರ ಬಹಳ ದೊಡ್ಡ ಶಿಷ್ಯರ ಪರಂಪರೆ ಅವರ ರಚನೆಗಳನ್ನು ಬಹಳ ಜನಪ್ರಿಯವಾಗಿ ಮಾಡಿತು. ಮುಂದೆ ಅವರ ಶಿಷ್ಯ ಪರಂಪರೆಯವರಾದ ಪಟ್ಟಣಂ ಸುಬ್ರಮಣ್ಯ ಅಯ್ಯರ್, ಮೈಸೂರು ವಾಸುದೇವಾಚಾರ್ಯ ಮೊದಲಾದವರೂ, ತ್ಯಾಗರಾಜರ ಮೇಲ್ಪಂಕ್ತಿಯನ್ನೇ ಅನುಸರಿಸಿ, ಹೆಚ್ಚು ರಚನೆಗಳನ್ನು ತೆಲುಗಿನಲ್ಲಿಯೇ ಮಾಡಿದ್ದಾರೆ..4/n
ಹಾಗಾಗಿ ನಾವಿವತ್ತು ತೆಲುಗಿನ ರಚನೆಗಳನ್ನು ಹೆಚ್ಚಾಗಿ ನೋಡುತ್ತೇವೆ.

ಹಾಗೆಂದು ಕನ್ನಡದಲ್ಲಿ (ಅಥವಾ ಇತರ ಭಾಷೆಗಳಲ್ಲಿ) ಒಳ್ಳೆಯ ಸಂಗೀತರಚನೆಗಳಿ ಇಲ್ಲವೆಂದಿಲ್ಲ. ಹಲವಾರು ವಾಗ್ಗೇಯಕಾರರು ಕನ್ನಡದಲ್ಲಿ ರಚನೆಗಳನ್ನು ಮಾಡಿದ್ದಾರೆ. ಕೆಲವು ಬೆಳಕಿಗೆ ಬಂದಿದೆ. ಆದರೆ ಬರಬೇಕಾದಷ್ಟು ಬಂದಿಲ್ಲ ಎನ್ನುವುದು ಬೇಸರದ ಸಂಗತಿ.5/n
ಆದರೆ ಇದರಲ್ಲಿ ಯಾವ ಹುನ್ನಾರವನ್ನು ಹುಡುಕುವ ಅಗತ್ಯವಿಲ್ಲ. ಸಂಗೀತದಲ್ಲಿ ಯಾವುದನ್ನು ಜನರು ಹೆಚ್ಚು ಕೇಳುತ್ತಾರೋ, ಅಂತದ್ದನ್ನೇ ಹೆಚ್ಚಾಗಿ ಸಂಗೀತಗಾರರು ಹಾಡುತ್ತಾರೆ. ಮತ್ತೆ ಯಾವುದನ್ನು ಸಂಗೀತಗಾರರು ಹಾಡುತ್ತಾರೋ ಅದನ್ನೇ ಜನ ಕೇಳುತ್ತಾರೆ, ಮತ್ತೆ ಮತ್ತೆ ಕೇಳಲು ಬಯಸುತ್ತಾರೆ. ಈ ರೀತಿಯಾಗಿ ತೆಲುಗು ರಚನೆಗಳನ್ನು ಹೆಚ್ಚು ಹೆಚ್ಚು ಕೇಳಿ 6/n
ಜನರಿಗೆ ಅದು ಮೆಚ್ಚುಗೆ ಅಂತ ಎನ್ನಿಸಿರುವುದು ಸಹಜ.
ಯಾವುದೇ ಹೊಸ ರಚನೆಯಾಗಲಿ ಯಾವುದೇ ಭಾಷೆಯಲ್ಲಾಗಲಿ ಬೆಳಕಿಗೆ ಬಂದು ಪ್ರಸಿದ್ಧವಾಗಲು ಕಷ್ಟ ಇದೆ. ಈ ಕಾಲದಲ್ಲಿ ಮಾಡಿದಂತಹ ತೆಲುಗು ರಚನೆಗಳು ಕೂಡ, ಉದಾ- ಬಾಲಮುರಳಿಕೃಷ್ಣ ಅಂತಹ ಹಿರಿಯ ವಾಗ್ಗೇಯಕಾರರ ತೆಲುಗು ರಚನೆಗಳೂ ಕೂಡ, ಹಿಂದಿನ ತ್ಯಾಗರಾಜರ ಅಥವಾ ಮೈಸೂರು ವಾಸುದೇವಾಚಾರ್ಯರ 7/n
ತೆಲುಗು ರಚನೆಗಳಷ್ಟು ಜನಪ್ರಿಯತೆಗೆ ಮುಟ್ಟಿಲ್ಲ. ಸಂಗೀತದ ಗುಣಮಟ್ಟ ಎಷ್ಟೇ ಚೆನ್ನಾಗಿದ್ದರೂ ಕೂಡ, ಹೊಸ ಸಂಗೀತ ಕೃತಿಯು ನೆಲೆ ನಿಲ್ಲಲು, ಅದು ಅದರ ಕಾಲವನ್ನು ತೆಗೆದುಕೊಳ್ಳುತ್ತವೆ. ಜನ ಅದನ್ನು ಮೆಚ್ಚಿದ ನಂತರ ಕಾರ್ಯಕ್ರಮಗಳಲ್ಲಿ, ಸಂಗೀತ ಕಚೇರಿಗಳಲ್ಲಿ ಕಲಾವಿದರು ಹಾಡ್ತಾರೆ. 8/n
ಅದನ್ನು ಜನ ಕೇಳಿ ಮೆಚ್ಚಲು, ಕಲಾವಿದರು ಮೊದಲು ಅವುಗಳನ್ನು ಹಾಡಬೇಕಲ್ಲ! ಹಾಗಾಗಿ ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಅಂತ ಹೇಳುತ್ತಾರಲ್ಲ ಹಾಗೆ ಒಂದು ಕಷ್ಟದ ಸಮಸ್ಯೆ. ಅಷ್ಟು ಸುಲಭವಾಗಿ ಬಗೆಹರಿಸಲು ಸಾಧ್ಯವಿಲ್ಲ.ಕನ್ನಡ ರಚನೆಗಳನ್ನು ಹೆಚ್ಚು ಜನ ಕೇಳಿ ಮೆಚ್ಚಿದರೆ ಅದನ್ನು ಸಂಗೀತಗಾರರು ಅವನ್ನು ಹಾಡಲು ಪ್ರಾರಂಭಿಸುತ್ತಾರೆ ಎಂಬುದೂ ಸತ್ಯ 9/n
ಹಿಂದಿನ ಪುರಂದರದಾಸರ ಮತ್ತು ಇತರ ದಾಸರುಗಳ ಸಾವಿರಾರು ರಚನೆಗಳಿದ್ದರೂ. ಅವುಗಳೆಲ್ಲದರ ಸಂಗೀತ ಇಂದು ನಮಗೆ ಉಳಿದಿಲ್ಲ. ಆ ರಚನೆಗಳ ಸಾಹಿತ್ಯ ಮಾತ್ರ ಇದ್ದು ಮೂಲದ ಸಂಗೀತ ಇಲ್ಲದೆ ಇರುವುದರಿಂದ, ಒಬ್ಬರ ರಚನೆಗೆ ಮತ್ತೊಬ್ಬರ ಸಂಗೀತವನ್ನು ಹೊಂದಿಸುವುದೇ ಆಗಿರುತ್ತದಾದ್ದರಿಂದ ಇವುಗಳಲ್ಲಿ ಅನೇಕ ರಚನೆಗಳು, ಸಂಗೀತದ ಲೆಕ್ಕದಲ್ಲಿ ತ್ಯಾಗರಾಜರ 11/n
ಮತ್ತು ಬೇರೆ ವಾಗ್ಗೇಯಕಾರರ ಕೃತಿಗಳ ಮಟ್ಟಕ್ಕೆ ಹೋಗದೆ ಇರಬಹುದು. . ಆ ಕಾರಣದಿಂದಾಗಿ ಅಂತಹ ರಚನೆಗಳು ಅಷ್ಟು ಜನಪ್ರಿಯ ಆಗದೆ ಇರಬಹುದು.
ಇಂದು ಕನ್ನಡದಲ್ಲಿ ಕರ್ನಾಟಕ ಸಂಗೀತದ ಹಲವು ರಚನೆಗಳನ್ನು ಮಾಡಿರುವ ಹಲವು ಸಮಕಾಲೀನ ವಿದ್ವಾಂಸ ವಿದುಷಿಯರಿದ್ದಾರೆ. ಅವುಗಳಲ್ಲಿ ಒಳ್ಳೆಯ ಅಂಶಗಳನ್ನು ಗುರುತಿಸಿ ಬೆಳೆಸಬೇಕಾದ್ದು ಕೇಳುಗರ ಜವಾಬ್ದಾರಿ. 12/n
ನಾನು ಕೂಡ ನನ್ನ ಬಹುಪಾಲು ಸಂಗೀತ ರಚನೆಗಳ ಸಾಹಿತ್ಯವನ್ನು ಕನ್ನಡದಲ್ಲೇ ಮಾಡಿದ್ದೇನೆ ಎಂದು ತಿಳಿಸಲು ಹರ್ಷಿಸುತ್ತೇನೆ. 13/13

🙏😀 #EndOfThread #Music #Karnataka #Kannada #Composition #Kriti #Vaggeyakara

• • •

Missing some Tweet in this thread? You can try to force a refresh
 

Keep Current with ಹಂಸಾನಂದಿ Hamsanandi हंसानन्दि

ಹಂಸಾನಂದಿ Hamsanandi हंसानन्दि Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @hamsanandi

Apr 28
#ರಾಗ ಗಳ #ಲಕ್ಷಣ ದಮೇಲೆ ಒಂದು ಸರಣಿ. Quora ಗೆಂದು ಬರೆದದ್ದು.
ಸಾಂಪ್ರದಾಯಿಕವಾಗಿ ಒಂದು #ರಾಗ ದಲ್ಲಿ ಹಲವು #ಸ್ವರ ಗಳ ಸಮೂಹವು ಇದ್ದರೂ,ಸ್ವರಗಳ ಸಮೂಹವಷ್ಟೇ ರಾಗ ಆಗಲಾರದು. ಆ ಸ್ವರ ಸಮೂಹವನ್ನು ಒಂದು ರಾಗವಾಗಿಸಬೇಕಾದರೆ ಒಂದು ಚೌಕಟ್ಟಿನಲ್ಲಿ ಅದನ್ನು ಬೆಳೆಸಿ ಹಾಡಲಿಕ್ಕೆ ಅವಕಾಶವಿರಬೇಕು. ಹಾಗೆಂದರೆ ಮಾತ್ರ ಅದು ರಾಗ ಆಗಲು ಸಾಧ್ಯ. 1/n
ಎಲ್ಲ ಸ್ವರಗಳೂ ಸದ್ದುಗಳೇ, ಆದರೆ ಎಲ್ಲ ಸದ್ದುಗಳೂ ಹೇಗೆ ಸಂಗೀತವಾಗುವುದಿಲ್ಲವೋ, ಅದೇ ರೀತಿ, ಹಲವು ಸ್ವರಗಳೂ (ಅದರಲ್ಲಿ ಸಂಗೀತಾಂಶವಿದ್ದೂ) ಸುಮ್ಮನೇ ಒಂದರ ಪಕ್ಕ ಒಂದನ್ನು ಜೋಡಿಸಿ ಹಾಡಿದರೆ #ರಾಗ ವಾಗುವುದಿಲ್ಲ

ಹಾಗೆಂದೇ ಒಂದು ರಾಗಕ್ಕೆ ಹತ್ತು, ಹದಿಮೂರು ಇತ್ಯಾದಿ ಬೇರೆ ಬೇರೆ ಲಕ್ಷಣಗಳನ್ನು ಹೇಳಲಾಗಿದೆ. 2/n
ಇಲ್ಲಿ ಹತ್ತು, ಹದಿಮೂರು ಅಥವ ಹದಿನೈದೇ ಎಂಬ ಸಂಖ್ಯೆ ಮುಖ್ಯವಲ್ಲ, ಆದರೆ ಹಾಗೆ ಹೆಸರಿಸಿರುವ #ಲಕ್ಷಣಗಳು ಹೇಗೆ ಸ್ವರಗಳಿಗೆ ರಾಗತ್ವವನ್ನು ತಂದುಕೊಡುತ್ತವೆ ಎಂದು ಸ್ವಲ್ಪ ಸರಳವಾಗಿ ಇಲ್ಲಿ ವಿವರಿಸುತ್ತೇನೆ.
ಮನಸ್ಸಿಗೆ ರಂಜನೆಯನ್ನು, ಹಿತವನ್ನು ತಂದುಕೊಡುವುದೇ ರಾಗ (ರಂಜಯತಿ ಇತಿ ರಾಗಃ) ಎಂಬುದು ಶಾಸ್ತ್ರಗ್ರಂಥಗಳ ಅಭಿಮತ. 3/n
Read 10 tweets
Apr 25
When #Kannada textbooks are written by by unqualified people this was what going to happen. #Fail
Sad such books are supported by Karnataka Govt & Kannada Abhivrddhi Pradhikara

ಮಕ್ಕಳ ಭವಿಷ್ಯ ಹಾಳಾಗಲು ಇನ್ನೇನು ಬೇಕು? ಕರ್ನಾಟಕ ಸರಕಾರ ಇವನ್ನು ಬೆಂಬಲಿಸುತ್ತದೆ ಎಂದರೆ ಅದಕ್ಕಿಂತ ದುರ್ವಿಧಿ ಏನಿದೆ? Image
ಕೊರಳು ಎನ್ನುವುದು ಹಳಗನ್ನಡದ ಕುರಲ್ ಎಂಬಪದದಿಂದಲೂ, ಕೊಳಲು ಎನ್ನುವುದು ಹಳಗನ್ನಡದ ಕುೞಲ್ ಎಂಬ ಪದದಿಂದಲೂ ಬಂದು ಬದಲಾವಣೆಯಾಗಿ ಇಂದು ಬಳೆಕೆಯಲ್ಲಿ ನಿಂತವು.
ಕೊರಳು ಎನ್ನಲು ಕೆಲವು ಕಡೆ ಆಡುಮಾತಿನಲ್ಲಿ ಕೊಳ್ಳು ಎನ್ನಬಹುದಾದರೂ,ಕೊಳ್ ಎನ್ನುವ ಕ್ರಿಯಾಪದಕ್ಕೂ (ತೆಗೆದುಕೋ), ಕೊರಳಿಗೂ ಸಂಬಂಧ ಇಲ್ಲ. ಕೊಳ್ ಎಂದರೆ ಕತ್ತು ಎಂಬ ಮೂಲಾರ್ಥವಿಲ್ಲ.
ಕೊರಳು ಮತ್ತು ಕೊಳಲು ಬೇರೆ ಬೇರೆ ಪದಗಳು. ಎನ್ನಲು ಕೊಳವೆ, ಕೊಳಲು, ಕೊಳಾಯಿ, ಮೊದಲಾದುವು ಒಂದಕ್ಕೊಂದು ಸಂಬಂಧ ಹೊಂದಿವೆ. ಕೊರಳುಪಟ್ಟಿ ಎಂಬುದು ಕೊರಳು ಎಂಬ ಪದವನ್ನು ಬಳಸಿಕೊಂಡು ಬಂದ ಪದವೇ. ಕೊಳ್ ಎಂಬುದರಿಂದ ಅಲ್ಲ. (ಇನ್ನು ಕೊಳಗ ಎಂಬ ಪದದ ವ್ಯುತ್ಪತ್ತಿ ನನಗೆ ಸರಿಯಾಗಿ ತಿಳಿದಿಲ್ಲ)

Save students from bad textbooks! #Karnataka
Read 8 tweets
Feb 10
A good reason why people writing about India/Indian history/Indian arts/sciences should know Indian languages!
Is there any reason to believe this hypothesis?

Is there any record where such restrictions really existed in major temples?

(Krishneshvara referred to here is the Ellora Kailasanatha temple)

.cc @swamin400 @hsraghav Image
There is quite a bit of difference between a work of grammar and a work of poetics.

#Kavirajamarga #Amoghavarsha #AKST Image
Read 7 tweets
Feb 7
Aha ;-) Whata flowery language. #justsaying Image
I wonder who the audience for the book are. "loud rituals", "pouring clarified butter into flames" "pecking order" "political power".hmm.
Such rituals exist even today-political or non political, including clarified butter or not. Suffice to say nothing specific to Kings. #AKST Image
Wonder if the writer has seen anything abt temples of Talakadu, hundreds of years before Chalukyas.
If temporary altars are expensive & difficult undertakings even for kings, were structural and permanent temples a cheaper alternative? Need comnon sense before writing!
#AKST Image
Read 24 tweets
Oct 28, 2021
Here's listing errors here, one by one not in any specific order.
*ಬತ್ತೀಸ್ ಎಂಬ ಪದ ಹಿಂದಿ ಅಥವಾ ಉರ್ದುವಿನಿಂದ ಬಂದಿದೆ
ಬಸವಣ್ಣ(೧೧೨೪-೧೧೯೯ )ಅವರ ವಚನ"ಎನ್ನಕಾಯವ" 1199ಕ್ಕೆ ಮೊದಲಿನದು.
ಘೋರಿಯ ಗುಲಾಮ ಕುತ್ಬುದ್ದೀನ್ ಐಬಕ್ ದೆಲ್ಲಿಯನ್ನು ಆಳಲಾರಂಭಿಸಿದ್ದೇ ೧೧೯೨. ಆಗಿನ್ನೂ ಉರ್ದು ಎಂಬ ಹೆಸರಿನ ಯಾವ ಭಾಷೆಯೂ ಇರಲಿಲ್ಲ.
1/n
ಬ್ರಜ್ ಭಾಷೆಯೇ ಮೊದಲಾದ ಹಿಂದಿಗೆ ಬಹಳ ಸಮೀಪದ ಭಾಷೆಗಳು ಆ ಸಮಯದಲ್ಲಿ ಇದ್ದವಾದರೂ , ಹಿಂದಿ ಎಂಬ ಹೆಸರಿನಲ್ಲಿ ಆಗ ಇನ್ನೂ ಪ್ರಸಿದ್ಧವಾಗಿತ್ತೋ ಎಂಬುದು ನನಗೆ ಸರಿಯಾಗಿ ತಿಳಿಯದು. 2/n
ಇನ್ನು ದಂಡಿಗೆಯ ವಿಷಯಕ್ಕೆ ಬರೋಣ. ತಂತೀವಾದ್ಯಗಳಲಿರುವ ಕೋಲಿನಂತಹ ಭಾಗವೇ ದಂಡಿ. ವೀಣೆ ಎಂಬುದು ನಮ್ಮ ಹಿಂದಿನ ಪರಿಭಾಷೆಯಲ್ಲಿ ಎಲ್ಲಾ ತಂತೀವಾದ್ಯಗಳನ್ನೂ ಒಳಗೊಳ್ಳುವ ಹೆಸರು.ವೀಣೆಯಲ್ಲಿ ಸೋರೆ ಬುರುಡೆಯೂ,ಕೋಲಿನಂತಹ ಭಾಗವೂ, ಮತ್ತೆ ತಂತಿ(ಗಳು) ಇರಬೇಕು. ದಂಡಿಗೆ ಎನ್ನುವುದು ದಂಡಿಕಾ (= ದಂಡ, ಕೋಲು) ಎಂಬ ಸಂಸ್ಕೃತ ಪದದ ತದ್ಭವ. 3/n
Read 14 tweets
Aug 7, 2021
A rant: Those who are not interested in Indian classical music, and the wrong narratives that are being created may ignore the thread 1/n
This is specifically meant for those who fall in the performing arena and talk about "creating safe spaces for students".
Plenty of novices & those who are superficially/casually interested in music are listening to your clubhouse sessions because you have made a name. 2/n
So it makes sense to give a fair picture of the field. Painting a picture of abusive teachers is not going to help most of those. It may also turn away some people who are learning the art with interest. Don't call me insensitive. I have read those metoo tweets, & sympathize 3/n
Read 10 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(