A: ಅವಗ್ರಹವನ್ನು ಒಂದು ವಿಶೇಷ ಸನ್ನೆಯಾಗಿ ಬೇರೆಬೇರೆ ಭಾಷೆಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಬಳಸುತ್ತಾರೆ.
ಕನ್ನಡದಲ್ಲಿ ಸಾಧಾರಣವಾಗಿ, ಇದನ್ನು ಹ್ರಸ್ವ ಸ್ವರವನ್ನು ಎಳೆದು ಹೇಳುವಾಗ *ಆದರೆ, ದೀರ್ಘಸ್ವರವನ್ನು ಪ್ರಯೋಗಿಸದೇ ಇರುವಾಗ ತೋರಿಸುತ್ತೇವೆ.
1/3
ಎಂದರೆ, ಅಕ್ಕಽಽ ಮತ್ತು ಅಕ್ಕಾ ಇವೆರಡರ ಉಚ್ಚಾರ ಬೇರೆಬೇರೆಯಾಗಿರುತ್ತದೆ
ಇನ್ನೊಂದೆರಡು ಉದಾಹರಣೆಗಳು:
ನಾ ಬಂದಽ ನಾಕ್ ತಾಸಾಗೇಽದ ಚೆನ್ನಾಗಿ
ಅದೆಷ್ಟ್ ಛಂಽದ ಅದಾಳ
ಆಡುಮಾತನ್ನು ಹೆಚ್ಚು ಕರಾರುವಾಕ್ಕಾಗಿ ತೋರಿಸಲು ಈ ಬಳಕೆ ಅಷ್ಟೇ.
ಕನ್ನಡ ಲಿಪಿಯಲ್ಲಿ ಕೊಂಕಣಿ ಮೊದಲಾದ ಭಾಷೆಗಳನ್ನು ಬರೆಯುವಾಗ ಕೂಡ ಇದು ಬಹಳ ಉಪಯುಕ್ತವಾಗುತ್ತೆ.
2/3
ಇನ್ನು ಸಂಸ್ಕೃತದಲ್ಲಿ ಪೂರ್ವರೂಪ ಪರರೂಪ ಸಂಧಿಗಳಾಗಿರುವುದನ್ನು ತೋರಿಸುವೆಡೆ ಸಾಮಾನ್ಯವಾಗಿ ಅವಗ್ರಹ ಸನ್ನೆಯನ್ನು ಹಾಕುತ್ತಾರೆ. ಆದರೆ ಇಲ್ಲಿ ನಿಜವಾಗಿ ಅವಗ್ರಹ ಹಾಕಿದರೂ ಹಾಕದೇ ಇದ್ದರೂ ಉಚ್ಚಾರಣೆ ಒಂದೇ ಆಗಿರುತ್ತೆ.
ಉದಾ:पद्मनाभोऽरविन्दाक्षः ಇದರ ಉಚ್ಚಾರ पद्मनाभोरविन्दाक्ष: ಎಂದೇ.सर्वेऽपि ಇದರ ಉಚ್ಚಾರ सर्वेपि ಎಂದೇ. 3/3
Q: ಕರ್ನಾಟಕ ಸಂಗೀತದಲ್ಲಿ ತೆಲುಗು ಭಾಷೆಯಲ್ಲಿ ಹೆಚ್ಚು ರಚನೆಗಳಾಗಿರುವುದಕ್ಕೆ ಕಾರಣ ಏನು? ಕನ್ನಡದಲ್ಲಿ ಯಾಕೆ ಅಷ್ಟು ಆಗಲಿಲ್ಲ?
This needs a long answer - Sharing for those interested, as there is lot of confusion about this point even among music students and pratcitioners of the art!
A: ಇದು ತುಂಬಾ ಒಳ್ಳೆಯ ಪ್ರಶ್ನೆ. ಇಂದಿನ ಕರ್ನಾಟಕ ಸಂಗೀತದಲ್ಲಿ ನಮ್ಮ 18-19 ನೇ ಶತಮಾನದಲ್ಲಿ ಇದ್ದಂತಹ ತ್ಯಾಗರಾಜರ ಪರಂಪರೆಯ ಕೊಡುಗೆ ಅಪಾರ. ತ್ಯಾಗರಾಜರ ಹೆಚ್ಚು ರಚನೆಗಳು ತೆಲುಗು ಭಾಷೆಯಲ್ಲಿ ಇದ್ದವು. ತ್ಯಾಗರಾಗರ ಏಳ್ನೂರಕ್ಕೂ ಹೆಚ್ಚು ರಚನೆಗಳಲ್ಲಿ ಸುಮಾರು ನೂರಕ್ಕೆ ತೊಂಬತ್ತಾದರೂ ತೆಲುಗು ರಚನೆಗಳಾಗಿದ್ದು (1/n)
ಉಳಿದವು ಸಂಸ್ಕೃತ ಭಾಷೆಯಲ್ಲಿವೆ. ತ್ಯಾಗರಾಜರ ಕಾಲಾನಂತರದ ಸಂಗೀತದಲ್ಲಿ ಅವರ ಕೃತಿಗಳು ಹೆಚ್ಚು ಪ್ರಚಾರಕ್ಕೆ ಬಂದವು. ತ್ಯಾಗರಾಜರು ಸುಮಾರು ಅರುವತ್ತೈದು ವರ್ಷ ಸಂಗೀತವನ್ನು ಪಾಠ ಮಾಡಿದ್ದ, ದೊಡ್ಡ ಶಿಷ್ಯಸಮೂಹವನ್ನು ಹೊಂದಿದ್ದ ವಾಗ್ಗೇಯಕಾರರು. ಇಪ್ಪತ್ತನೆ ಶತಮಾನದಲ್ಲಿ ಸಾರ್ವಜನಿಕ ಸಂಗೀತ ಕಚೇರಿಗಳ ಪದ್ಧತಿ ಬಂದಾಗ ಅವರ ರಚನೆಗಳು ಕಚೇರಿಗೆ 2/n
#ರಾಗ ಗಳ #ಲಕ್ಷಣ ದಮೇಲೆ ಒಂದು ಸರಣಿ. Quora ಗೆಂದು ಬರೆದದ್ದು.
ಸಾಂಪ್ರದಾಯಿಕವಾಗಿ ಒಂದು #ರಾಗ ದಲ್ಲಿ ಹಲವು #ಸ್ವರ ಗಳ ಸಮೂಹವು ಇದ್ದರೂ,ಸ್ವರಗಳ ಸಮೂಹವಷ್ಟೇ ರಾಗ ಆಗಲಾರದು. ಆ ಸ್ವರ ಸಮೂಹವನ್ನು ಒಂದು ರಾಗವಾಗಿಸಬೇಕಾದರೆ ಒಂದು ಚೌಕಟ್ಟಿನಲ್ಲಿ ಅದನ್ನು ಬೆಳೆಸಿ ಹಾಡಲಿಕ್ಕೆ ಅವಕಾಶವಿರಬೇಕು. ಹಾಗೆಂದರೆ ಮಾತ್ರ ಅದು ರಾಗ ಆಗಲು ಸಾಧ್ಯ. 1/n
ಎಲ್ಲ ಸ್ವರಗಳೂ ಸದ್ದುಗಳೇ, ಆದರೆ ಎಲ್ಲ ಸದ್ದುಗಳೂ ಹೇಗೆ ಸಂಗೀತವಾಗುವುದಿಲ್ಲವೋ, ಅದೇ ರೀತಿ, ಹಲವು ಸ್ವರಗಳೂ (ಅದರಲ್ಲಿ ಸಂಗೀತಾಂಶವಿದ್ದೂ) ಸುಮ್ಮನೇ ಒಂದರ ಪಕ್ಕ ಒಂದನ್ನು ಜೋಡಿಸಿ ಹಾಡಿದರೆ #ರಾಗ ವಾಗುವುದಿಲ್ಲ
ಹಾಗೆಂದೇ ಒಂದು ರಾಗಕ್ಕೆ ಹತ್ತು, ಹದಿಮೂರು ಇತ್ಯಾದಿ ಬೇರೆ ಬೇರೆ ಲಕ್ಷಣಗಳನ್ನು ಹೇಳಲಾಗಿದೆ. 2/n
ಇಲ್ಲಿ ಹತ್ತು, ಹದಿಮೂರು ಅಥವ ಹದಿನೈದೇ ಎಂಬ ಸಂಖ್ಯೆ ಮುಖ್ಯವಲ್ಲ, ಆದರೆ ಹಾಗೆ ಹೆಸರಿಸಿರುವ #ಲಕ್ಷಣಗಳು ಹೇಗೆ ಸ್ವರಗಳಿಗೆ ರಾಗತ್ವವನ್ನು ತಂದುಕೊಡುತ್ತವೆ ಎಂದು ಸ್ವಲ್ಪ ಸರಳವಾಗಿ ಇಲ್ಲಿ ವಿವರಿಸುತ್ತೇನೆ.
ಮನಸ್ಸಿಗೆ ರಂಜನೆಯನ್ನು, ಹಿತವನ್ನು ತಂದುಕೊಡುವುದೇ ರಾಗ (ರಂಜಯತಿ ಇತಿ ರಾಗಃ) ಎಂಬುದು ಶಾಸ್ತ್ರಗ್ರಂಥಗಳ ಅಭಿಮತ. 3/n
When #Kannada textbooks are written by by unqualified people this was what going to happen. #Fail
Sad such books are supported by Karnataka Govt & Kannada Abhivrddhi Pradhikara
ಮಕ್ಕಳ ಭವಿಷ್ಯ ಹಾಳಾಗಲು ಇನ್ನೇನು ಬೇಕು? ಕರ್ನಾಟಕ ಸರಕಾರ ಇವನ್ನು ಬೆಂಬಲಿಸುತ್ತದೆ ಎಂದರೆ ಅದಕ್ಕಿಂತ ದುರ್ವಿಧಿ ಏನಿದೆ?
ಕೊರಳು ಎನ್ನುವುದು ಹಳಗನ್ನಡದ ಕುರಲ್ ಎಂಬಪದದಿಂದಲೂ, ಕೊಳಲು ಎನ್ನುವುದು ಹಳಗನ್ನಡದ ಕುೞಲ್ ಎಂಬ ಪದದಿಂದಲೂ ಬಂದು ಬದಲಾವಣೆಯಾಗಿ ಇಂದು ಬಳೆಕೆಯಲ್ಲಿ ನಿಂತವು.
ಕೊರಳು ಎನ್ನಲು ಕೆಲವು ಕಡೆ ಆಡುಮಾತಿನಲ್ಲಿ ಕೊಳ್ಳು ಎನ್ನಬಹುದಾದರೂ,ಕೊಳ್ ಎನ್ನುವ ಕ್ರಿಯಾಪದಕ್ಕೂ (ತೆಗೆದುಕೋ), ಕೊರಳಿಗೂ ಸಂಬಂಧ ಇಲ್ಲ. ಕೊಳ್ ಎಂದರೆ ಕತ್ತು ಎಂಬ ಮೂಲಾರ್ಥವಿಲ್ಲ.
ಕೊರಳು ಮತ್ತು ಕೊಳಲು ಬೇರೆ ಬೇರೆ ಪದಗಳು. ಎನ್ನಲು ಕೊಳವೆ, ಕೊಳಲು, ಕೊಳಾಯಿ, ಮೊದಲಾದುವು ಒಂದಕ್ಕೊಂದು ಸಂಬಂಧ ಹೊಂದಿವೆ. ಕೊರಳುಪಟ್ಟಿ ಎಂಬುದು ಕೊರಳು ಎಂಬ ಪದವನ್ನು ಬಳಸಿಕೊಂಡು ಬಂದ ಪದವೇ. ಕೊಳ್ ಎಂಬುದರಿಂದ ಅಲ್ಲ. (ಇನ್ನು ಕೊಳಗ ಎಂಬ ಪದದ ವ್ಯುತ್ಪತ್ತಿ ನನಗೆ ಸರಿಯಾಗಿ ತಿಳಿದಿಲ್ಲ)
I wonder who the audience for the book are. "loud rituals", "pouring clarified butter into flames" "pecking order" "political power".hmm.
Such rituals exist even today-political or non political, including clarified butter or not. Suffice to say nothing specific to Kings. #AKST
Wonder if the writer has seen anything abt temples of Talakadu, hundreds of years before Chalukyas.
If temporary altars are expensive & difficult undertakings even for kings, were structural and permanent temples a cheaper alternative? Need comnon sense before writing! #AKST