1/nಸತಿ ಸಹಗಮನ ಪದ್ಧತಿ ಮತ್ತು ಪುರೋಹಿತಶಾಹಿ ಇಂಡೊಲೊಜಿ ಪ್ರಾಪಗಾಂಡ.
ಸತಿ ಪದ್ಧತಿ ಅನ್ನುವುದು ಈ ಮಣ್ಣಿನ ಅತಿಕ್ರೂರ ಪದ್ಧತಿಗಳಲ್ಲಿ ಒಂದು. ಹಿಂದೆ ಇತ್ತು ಈಗ ಇಲ್ಲ ಅನ್ನುವ ಮಾತು ಇತ್ತೀಚಿನ ವರ್ಷಗಳವರೆಗೆ ಕೇಳಿಬರ್ತಾ ಇತ್ತು. ಆಮೇಲೆ ಶುರು ಆಗಿದ್ದು ಹೊಸ ವಾದ.
2/n“ಹೌದು ಈ ದುಷ್ಟ ಪದ್ಧತಿ ಇಲ್ಲಿ ಇತ್ತು ಆದರೆ ಇದು ನಮ್ಮ ಸನಾತನ ಧರ್ಮದ ಭಾಗ ಅಲ್ಲ, ಇದು ಬಂದಿದ್ದು ಸಾಬರಿಂದ. ಸಾಬ್ರ ಅತ್ಯಾಚಾರಗಳಿಂದ ನಮ್ಮ ಮಾನ ಉಳಿಸಿಕೊಳ್ಳಲು ಬೇರೆ ವಿಧಿ ಇಲ್ಲದೆ ಇದನ್ನು ಮಾಡ್ಬೇಕಾಗಿ ಬಂತು. ಇಲ್ಲ ಅಂದ್ರೆ ಸಾಬ್ರು ಗಂಡ ಸತ್ತ ವಿಧವೆಯರನ್ನು ರೇಪ್ ಮಾಡಿ ಬಲವಂತವಾಗಿ ತಮ್ಮ ಜನಾನ ಗೆ ಸೇರಿಸಿಕೊಳ್ತಾ ಇದ್ರು.
3/nಹಾಗಾಗಿ ಸತಿ ಕೂಡ ಮುಸ್ಲಿಮರ ಕೊಡುಗೆ, ಈ ಮಣ್ಣಿನದ್ದು ಅಲ್ಲ ಅಂತ ಹೊಸ ಇಂಡೊಲೊಜಿ ಲಾಯರ್ ಗಳ ವಾದ.
ಹೌದು ಮುಸ್ಲಿಂ ದಾಳಿಕೋರರು ಲೂಟಿ ಅತ್ಯಾಚಾರ ಎಲ್ಲ ಮಾಡಿದ್ದು ಹೌದು. ಅಫ್ಘಾನ್ ದಂಡುಕೋರರೇ ಹಾಗೆ. ಮಂಗೋಲ್ ಜೇಂಗಿಸ್ ಖಾನ್ ಕೂಡ ಹೀಗೆಯೇ ಇದ್ದಿದ್ದು, ಹೂಣರು ಅದೇ ಮಾಡಿದ್ದು, ಕ್ರುಸೇಡರು ಕೂಡ. ನಮ್ಮಲ್ಲಿ ಏನೂ ಕಮ್ಮಿ ಇಲ್ಲ.
4/nಮರಾಠರ ಶೃಂಗೇರಿ ಮಠದ ದಾಳಿಯಲ್ಲಿ ಅದೆಷ್ಟು ಹೆಣ್ಣು ಮಕ್ಕಳ ಮಾನ ಪ್ರಾಣ ಸೂರೆ ಆಗಿತ್ತು ಅನ್ನುವುದು ಲೆಕ್ಕಕ್ಕೆ ಸಿಕ್ಕಿಲ್ಲ.
ಇದಕ್ಕೆ ಕಾರಣ ಇದೆ. ಯುದ್ಧ ಅನ್ನುವುದು ಅತ್ಯಂತ ದುಭಾರಿ. ಅದೆಷ್ಟೇ ದೇಶ ಭಕ್ತಿ ಇದ್ದರೂ ಯುದ್ಧ ಮಾಡಲು ಸೈನಿಕನಿಗೆ ಭಕ್ತಿ ಮಾತ್ರ ಸಾಲದು. ಅವನಿಗೆ “ಪೇಮೆಂಟ್” ಕೊಡಲೇ ಬೇಕು.
5/nಸಂಬಳ ಇಲ್ಲದೆ ಯಾವನೂ ಬಿಟ್ಟಿಯಾಗಿ ಪ್ರಾಣ ಕೊಡುವುದಿಲ್ಲ.
ಉದಾಹರಣೆಗೆ ಕಾನ್ಸ್ಟ್ಯಾಂಟಿನೋಪಲ್ ಅನ್ನು ಮೆಹಮದ್ ವಶಪಡಿಸಿಕೊಳ್ಳುವ ಯುದ್ಧದಲ್ಲಿ ಅವತ್ತಿನ ರೋಮನ್ ಸೀಸರ್ ಕಾನ್ಸ್ಟಂಟೈನ್ ಸೋಲಲು ಕಾರಣ ಅವನ ಬೊಕ್ಕಸ ಬರಿದಾಗಿದ್ದು. ಅವತ್ತು ಸೀಸರ್ ಪರ ಹೋರಾಡುತ್ತಿದ್ದ ಯುರೋಪ್ ನ ವೀರಾಧಿವೀರ ಜಿವಾನಿ ಜೆಸ್ಟಿನ್ಯಾನಿ ಕೂಡ
6/nಒಬ್ಬ ಮರ್ಸಿನರಿ ಆಗಿದ್ದ ಅಂದ್ರೆ ಅವನು ಒಬ್ಬ ಬಾಡಿಗೆ ಯೋಧ. ಸೀಸರ್ ನ ಹಣ ಖಾಲಿಯಾದಾಗ ಜಿವಾನಿ ಕಡೆಯ ಯೋಧರು ಯುದ್ಧರಂಗವನ್ನು ಬಿಡುತ್ತಾರೆ. ಮೆಹಮದ್ ಇನ್ನೊಂದು ಕಡೆ ತನ್ನ ಬೊಕ್ಕಸವನ್ನು ಚೆನ್ನಾಗಿ ತುಂಬಿಸಿಟ್ಟುಕೊಂಡಿರುತ್ತಾನೆ. ಕೊನೆಗೆ ಕಾನ್ಸ್ಟಂಟೈನ್ ಒಟ್ಟೋಮನ್ ಪಾಲಾಗುತ್ತೆ.
ಇದು ಹಣ ಇರುವ ಕಥೆ ಆಯಿತು.
ಹಣ ಇಲ್ಲ ಅಂದ್ರೆ?
7/nಆಗ ದಾಳಿಕೋರರು ಉಪಯೋಗಿಸುವುದು ಇನ್ನೊಂದು ತಂತ್ರ. ಇಲ್ಲಿ ಯೋಧರಿಗೆ ಅವರೊಂದು ಪ್ರಮಾಣ ಮಾಡುತ್ತಾರೆ “ಗೆದ್ದ ಜಾಗದ ಹೆಣ್ಣು, ಹೊನ್ನು, ಮಣ್ಣು ನಿಮಗೆ” ಇದನ್ನೇ ಮರಾಠರ ಪುರುಷೋತ್ತಮ ರಾವ್ ಪಿಂಡಾರಿಗಳಿಗೆ ಪ್ರಮಾಣ ಮಾಡಿರುತ್ತಾನೆ. ಶ್ರೀರಂಗಪಟ್ಟಣದ ದಾಳಿಯ ಮುಂಚೆ. ಅದರ ಪರಿಣಾಮವೇ ಶೃಂಗೇರಿಯ ಅತ್ಯಾಚಾರ.
8/nಎರಡನೇ ಮಹಾಯುದ್ಧದಲ್ಲಿ ಸ್ಟಾಲಿನ್ ಕೈಲಿ ಸೈನಿಕರಿಗೆ ಕೊಡಲು ಕಾಸಿರಲಿಲ್ಲ, ಹಾಗಾಗಿ ಇದೆ “ಹೆಣ್ಣು ಹೊನ್ನು ಮಣ್ಣಿನ “ ಪ್ರಾಮಿಸ್ ಮಾಡ್ತಾನೆ. ಅದರ ಪರಿಣಾಮವೇ ೪೫ರ ರೇಪ್ ಆಫ್ ಬರ್ಲಿನ್. ಘಜನಿ ಘೋರಿ ಯು ಇದನ್ನೇ ಉಪಯೋಗಿಸುತ್ತಾರೆ.
ಆದ್ರೆ ಇದಕ್ಕೂ ಸತಿಗೂ ಯಾವುದೇ ಸಂಬಂಧ ಇಲ್ಲ. ನಮ್ಮಲ್ಲಿ ಸತಿ ಪದ್ಧತಿಯ ಉಲ್ಲೇಖ
9/nಇಸ್ಲಾಂ ಧರ್ಮ ಹುಟ್ಟುವುದಕ್ಕಿಂತ ಮುಂಚೆಯೇ ಇದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು.
ಗರುಡ ಪುರಾಣ, ಸನಾತನ ಧರ್ಮದಲ್ಲಿ ಬರುವ ಪ್ರಮುಖ ಗ್ರಂಥ. ಇಲ್ಲಿ ಮನುಷ್ಯನ ಬದುಕು ಮತ್ತು ಅವನು ಸತ್ತ ಮೇಲೆ ಏನಾಗುತ್ತೆ ಅನ್ನುವ ವಿವರಣೆ ಇದೆ. ಪಾಪ ಪುಣ್ಯಗಳ ವ್ಯಖ್ಯಾನ ಇದೆ. ಇಲ್ಲಿ ಬರುವ ಒಂದು ಅಂಶ ಅಂದ್ರೆ ಸ್ತ್ರೀಯರ ಬಗ್ಗೆ ಹೇಳಿರುವುದು.
10/nಗರುಡ ಪುರಾಣದ ಪ್ರಕಾರ ಸ್ತ್ರಿಯಾಗಿ ಜನ್ಮ ಪಡೆಯುವುದೇ ಪೂರ್ವ ಜನ್ಮದ ಪಾಪದ ಫಲ. ಅರ್ತಾತ್ ನೀವು ಹಿಂದಿನ ಜನ್ಮದಲ್ಲಿ ಎಸಗಿದ ಪಾಪಕ್ಕೆ ನಿಮಗೆ ಸ್ತ್ರೀ ಜನ್ಮ ಸಿಕ್ಕಿರುವುದು. ಅಂದ್ರೆ ಸ್ತ್ರಿಯಾಗಿ ಹುಟ್ಟುವುದೇ ಪಾಪ.
ಅಂತೆಯೇ ಗರುಡ ಪುರಾಣದಲ್ಲಿ ಮೋಕ್ಷದ ಉಲ್ಲೇಖ ಇದೆ. ಮೋಕ್ಶ ಅಂದ್ರೆ ಜನ್ಮ ಸಾವು ಪುನರ್ಜನ್ಮ ಎನ್ನುವ ಚಕ್ರದಿಂದ ಮುಕ್ತಿ.
11/n ಈ ಮೋಕ್ಷಕ್ಕೆ ಅನೇಕ ದಾರಿಗಳನ್ನು ಗರುಡ ಪುರಾಣ ಸೂಚಿಸುತ್ತದೆ. ಅದರಲ್ಲಿ ಒಂದು “ಯಾವ ಸ್ತ್ರೀಯು ತನ್ನ ಮೃತ ಗಂಡನ ತಲೆಯನ್ನು ತನ್ನ ತೊಡೆಯ ಮೇಲಿಟ್ಟು ಅಗ್ನಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೋ ಆಕೆ ಯಾವುದೇ ಪಾಪ ಮಾಡಿದ್ದರೂ ಕೂಡ ಆಕೆಗೆ ನೇರ ಮೋಕ್ಷ ಪ್ರಾಪ್ತಿಯಾಗುತ್ತದೆ”
ಗರುಡ ಪುರಾಣವನ್ನು ಪೂರ್ತಿ ಅವಲೋಕಿಸಿದರೆ ಸ್ತ್ರೀಯರಿಗೆ
12/nಮೋಕ್ಷದ ದಾರಿಗಳು ತುಂಬಾ ಕಮ್ಮಿ ಹಾಗೂ ಕ್ಲಿಷ್ಟಕರ, “ಪತಿಯ ಶವದೊಂದಿಗೆ ಚಿತೆಯೇರುವುದೇ ದಾರಿ” ಅನ್ನುವ ರೀತಿ ಇದೆ.
ಇದು ಸನಾತನ ಧರ್ಮದಲ್ಲಿ ಬರುವ ಸತಿ!
ಇನ್ನು ಇದೇ ಮಣ್ಣಿನ ಇನ್ನೊಂದು ಧರ್ಮ ಜೈನ ಧರ್ಮ. ಇಲ್ಲಿ ಕೂಡ ಮಹಾಸತಿ ಕಲ್ಲು, ಮಾಸ್ತಿ ಕಲ್ಲು ಅಂತ ಅನೇಕ ಸ್ಮಾರಕ ಕಲ್ಲುಗಳು ಮಲೆನಾಡು ಕರಾವಳಿ ಭಾಗದಲ್ಲಿ ಕಾಣುತ್ತವೆ.
13/nಇವು ಪತಿಗಾಗಿ (ಕೆಲವೊಮ್ಮೆ ರಾಜ್ಯಕ್ಕಾಗಿ) ಪ್ರಾಣಾಹುತಿ ಮಾಡಿದ ಪತಿವ್ರತೆಯ ನೆನಪಿಗೆ ನೆಟ್ಟ ಕಲ್ಲುಗಳು. ಇವು ಕೂಡ ಇಸ್ಲಾಂ ಹುಟ್ಟುವುದಕ್ಕಿಂತ ಮುಂಚೆ ಇದ್ದವುಗಳು.
ತನ್ನ ಪತಿ ಈಶ್ವರನಿಗೆ ತನ್ನಪ್ಪ ದಕ್ಷಬ್ರಹ್ಮ ಮಾಡಿದ ಅವಮಾನಕ್ಕೆ ರೋಷಗೊಂಡು ಯಜ್ಞಕುಂಡಕ್ಕೆ ತನ್ನನ್ನೇ ಆಹುತಿ ಮಾಡಿಕೊಂಡ ಸತಿ ದೇವಿಯ ಬಗ್ಗೆ ನಿಮಗೆ ಗೊತ್ತು.
14/nಇಷ್ಟೆಲ್ಲಾ ಹೇಳುವ ಉದ್ದೇಶ ಇಷ್ಟೇ. ನಮ್ಮಲ್ಲಿನ ಹುಳುಕುಗಳನ್ನು ಒಪ್ಪದೇ ಅದನ್ನು ಬೇರೆಯವರ ತಲೆಗೆ ಹಚ್ಚಿ ನಮ್ಮದೇ ಗ್ರೇಟೆಸ್ಟ್, ನಮ್ದೇ ವಿಶ್ವಗುರು, ನಮ್ಮಲ್ಲಿ ಎಲ್ಲವೂ ಸರಿ ಅನ್ನುವ ಆಧುನಿಕ ಕೇಸರಿ ಇಂಡೊಲೊಜಿ ಅವ್ರ ಪ್ರಾಪಗಾಂಡವನ್ನು ಬಯಲು ಮಾಡುವ ಅಂತ.
n/nಒಂದು ಸಂಸ್ಕೃತಿ ವಿಕಾಸ ಆಗುವುದು ಕಾಲಕ್ಕೆ ಸರಿಯಾಗಿ ತನ್ನಲ್ಲಿ ಆಗಿದ್ದ ತಪ್ಪುಗಳನ್ನು ಒಪ್ಪಿ, ತಿದ್ದಿಕೊಂಡು ಮುಂದೆ ಹೋಗುವುದು ಮತ್ತು ಆ ತಪ್ಪು ನಮ್ಮಲ್ಲಿ ಇತ್ತು ಅನ್ನುವುದನ್ನು ಒಪ್ಪುವುದು. ಅದರ ಬದಲು ನಮ್ಮಲ್ಲಿ ಎಲ್ಲವು ಸರಿ ಇತ್ತು, ಸರಿ ಇದೆ, ಸರಿಯಾಗಿಯೇ ಇರುತ್ತೆ ಅನ್ನುವುದು ಮೂರ್ಖತನದ ಪರಮಾವಧಿ.
• • •
Missing some Tweet in this thread? You can try to
force a refresh
1/nಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ಸಮಾಜದ ತಪ್ಪುಗಳು.
ಇವತ್ತಿನ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಒಂದು ಕಡೆ ಕಲೆ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ಶಿಕ್ಷಣ ಇನ್ನೊಂದು ಕಡೆ.
ಮುಖ್ಯವಾಹಿನಿ ಅಲ್ಲಿ “ಬುದ್ಧಿವಂತ” ಮಕ್ಕಳು ಹೋಗುವುದು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣಕ್ಕೆ. ಕಲೆ ಸಾಹಿತ್ಯ ಎಲ್ಲ ದಡ್ಡರಿಗೆ.
2/nಇದರ ಮೇಲೆ, ತಾಂತ್ರಿಕ ಅಥವಾ ವಿಜ್ಞಾನ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಯು ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣದಿಂದ ದೂರ ಉಳಿಯುತ್ತಾನೆ. ಕಾರಣ ಅವನ ಪಠ್ಯದಲ್ಲಿ ಇದಾವುದೂ ಇಲ್ಲ. ಹೀಗಾಗಿಯೇ ಇವತ್ತಿನ ಬಹುಪಾಲು ಇಂಜಿನಿಯರ್ ಗಳಿಗೆ ಸಮಾಜದ ನಿಜ ಪರಿಚಯವೇ ಆಗಿಲ್ಲ. ಈ ನೆಲದಲ್ಲಿ ಆದ ಚಳುವಳಿಗಳು, ಸುಧಾರಣೆಗಳು, ತತ್ವಗಳು ಸಿದ್ಧಾಂತಗಳು
3/nಇವೆಲ್ಲ ಪರಿಚಯವೇ ಇಲ್ಲ. ಇವುಗಳ ನಗ್ಗೆ ಸ್ವಲ್ಪ ಗೊತ್ತಿದ್ದರೆ ಅದು ಹೈ ಸ್ಕೂಲ್ ತನಕ ಕಲಿತದ್ದು ಮಾತ್ರ ಮತ್ತು ಆ ಸಮಯದಲ್ಲಿ ಮಕ್ಕಳು ಬಾಯಿ ಪಾಠ ಮಾಡಿದ್ದರಿಂದ ಇವುಗಳ ಭಾವಾರ್ಥ ಗೊತ್ತಾಗಿರುವ ಸಾಧ್ಯತೆಗಳು ಕಮ್ಮಿ.
ಹಾಗಾಗಿ ಈ ಇಂಜಿನಿಯರುಗಳನ್ನ ಸುಲಭವಾಗಿ ಬ್ರೈನ್ ವಾಷ್ ಮಾಡಿ ಅವರ ತಲೆಗೆ ಏನು ಬೇಕಾದರೂ ತು೦ಬಬಹುದು.
1/4 Dear non-resident UPites,
A lot of you still have the voter ID from UP but you arent residing there. You had come out of UP for a better life and you might be successful by now.
This is regarding the upcoming #UPElection2022 it is pretty important.
2/4 The PR machinery is targeting you.
You are getting fooled by misinformation and you may believe them and that influences your voting decisions.
Please note, your vote affects the people who are still in UP and want to live there.
3/4 So start talking to the people in your voting constituency. Make your decisions based on that. not on the PR.
Because it is your responsibility as a voter, as a citizen.
1/nಸನಾತನ ಧರ್ಮದಲ್ಲಿ ಸ್ಲೇವರಿ ಅಥವಾ ದಾಸ್ಯ ಪದ್ಧತಿ.
ಹೀಗೆ ಹೇಳಿದ ಕೂಡಲೇ ಬರ್ತಾರೆ ಇಂಡೊಲೊಜಿ ಲಾಯರ್ಸ್, ಇಲ್ಲ ಇದೆಲ್ಲ ಸುಳ್ಳು ನಮ್ಮ ಭವ್ಯ ಸಂಸ್ಕೃತಿ ದಾಸ್ಯ ಎಂಬುದು ಇಲ್ಲವೇ ಇಲ್ಲ. ಇದೆಲ್ಲ ಇದ್ದಿದ್ದು ಪಶ್ಚಿಮದಲ್ಲಿ ಮಾತ್ರ. ಹಾಗೂ ಸಾಬರು ಇದನ್ನು ನಮ್ಮ ದೇಶಕ್ಕೆ ತಂದಿದ್ದು. ಅವರಿಗಿಂತ ಮುಂಚೆ ಇವೆಲ್ಲ ಇಲ್ಲಿ ಇರಲಿಲ್ಲ.
2/nಸನ್ನಿಧಾನಂಗಳ ಇವತ್ತಿನ ಪ್ರವಚನದಲ್ಲಿ ಈ ಇಂಡೊಲೊಜಿ ಮಂದಿಯ ಭಂಡ ಬಾಳನ್ನು ಬಯಲು ಮಾಡುವ.
ಒಂದು ದಂತ ಕಥೆ ಇಂದ ಶುರು ಮಾಡುವ. ಇಲ್ಲಿ ಒಂದು ಕಾಮಿಡಿ ಇದೆ. ಇದನ್ನು ನಾವು ದಂತ ಕಥೆ ಅಂದ್ರೆ ಸನಾತನಿಗಳಿಗೆ ಉರಿಯುತ್ತದೆ ಕಾರಣ ಸನಾತನ ನಂಬಿಕೆಗಳ ಮೂಲ ಇರುವುದೇ ಇಲ್ಲಿ. ಸೃಷ್ಟಿಯ ಕಥೆ ಇಲ್ಲಿ ಬರುತ್ತದೆ.
3/nಸತ್ಯ ಅಂದ್ರೆ ಇಲ್ಲಿನ ಅಸಂಬದ್ಧ ಕಾಮಿಡಿಗಳನ್ನು ನಿಜ ಅಂತ ಅವ್ರೇ ಒಪ್ಪಬೇಕಾಗುತ್ತದೆ. ಇರಲಿ
ಮನುವಿನ (ಸನಾತನಿಗಳ ಪ್ರಕಾರ ಮನುಷ್ಯರ ಮೂಲ ಪುರುಷ ಮನು, ಅಬ್ರಾಮಿಕ್ ಧರ್ಮಿಯರ ಆಡಮ್ ಸಮಾನ ) ಅಪ್ಪ ಕಶ್ಯಪನಿಗೆ ಹಲವು ಪತ್ನಿಯರು. ಅವರಲ್ಲಿ ಇಬ್ಬರು ವಿನಿತೆ ಮತ್ತು ಕದ್ರು. ಒಮ್ಮೆ ಇವರ ಮದ್ಯೆ ಒಂದು ಬೆಟ್ಟಿಂಗ್ ಆಗುತ್ತೆ.
1/8 newsckm.com/archives/1839
ಇದೊಂದು ನಮ್ಮ ರಾಜ್ಯದಲ್ಲಿ UP ಮಾದರಿಯಲ್ಲಿ ಆಗಿರುವ ಘನಘೋರ ಅನ್ಯಾಯ.
ಚೆಲುವರಾಜ್ ಅನ್ನುವ ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ @RAshokaBJP ನೇತೃತ್ವದ ಸಿಸ್ಟಮ್ ಮಾಡಿರುವ ಅನ್ಯಾಯ.
2/8 ನಿಮಗೆ ಚೆಲುವರಾಜು ಅವರ ಬಗ್ಗೆ ಹೇಳಬೇಕು. ಇವರು ಶೃಂಗೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾಗ ಇವರ ಪ್ರಾಮಾಣಿಕತೆಯ ಬಗ್ಗೆ ಶೃಂಗೇರಿಯ ಮೂಲೆ ಮೂಲೆ ಅಲ್ಲಿಯೂ ಪ್ರಸಿದ್ಧತೆ ಇತ್ತು, ಈಗಲೂ ಇದೆ. ಶೃಂಗೇರಿಯ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತ ಇದೆ ಹಾಗು
3/8 ಇದು ಕೇವಲ ಶೃಂಗೇರಿ ಮಾತ್ರ ಅಲ್ಲ, ಪ್ರತಿ ಊರಿನ ಹಣೆ ಬರಹ ಇದೇ . ಅದರಲ್ಲೂ ರೆವೆನ್ಯೂ ಡಿಪಾರ್ಟ್ಮೆಂಟ್ ಬಗ್ಗೆ ಹೇಳುವುದೇ ಬೇಡ.
ಹಾಗಂತ ಈ ಭ್ರಷ್ಟಾಚಾರಕ್ಕೆ ಕಾರಣ ಇದೆ. ಪ್ರತಿ ತಾಲೂಕಿನ ರೆವೆನ್ಯೂ ವಿಭಾಗದಿಂದ ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ರೆವೆನ್ಯೂ ಮಂತ್ರಿಗೆ "ಸಂದಾಯ" ಆಗಬೇಕೆಂಬ ಅಘೋಷಿತ ನಿಯಮ ದಶಕಗಳಿಂದ ಜಾರಿಯಲ್ಲಿದೆ.
1/nಜನ ಎಲ್ಲ ಹೇಳೋದು ಉಂಟು, ನಮ್ಮ ಸರ್ವಶಕ್ತ ಪರಮ ಪ್ರಭುಗಳು ಕಪ್ಪು ಹಣ ತರ್ತೀನಿ ಅಂದ್ರು, ತರ್ಲಿಲ್ಲ. ೫ ಟ್ರಿಲಿಯನ್ ಎಕಾನಮಿ ಮಾಡ್ತೀನಿ ಅಂದ್ರು, ಪೆಟ್ರೋಲ್ ನ ೩೫ ರೂಪಾಯಿ ಲೀಟರ್ ಮಾಡ್ತೀನಿ ಅಂದ್ರು, ೧ ಡಾಲರ್ ಗೆ ಒಂದು ರೂಪಾಯಿ ಆಗುವ ಹಾಗೆ ಮಾಡ್ತೀನಿ .. ಆದ್ರೆ ಏನೂ ಮಾಡ್ಲಿಲ್ಲ ಯಾಕೆ?
ಯಾಕಿಷ್ಟು ಚಂಚಲ ಆಶ್ವಾಸನೆ?
2/nಸನ್ನಿಧಾನಂ ಗಳು ಅದಕ್ಕೆನಮ್ಮ ಸನಾತನ ಸಂಸ್ಕೃತಿಯಿಂದಾಯ್ದ ಒಂದು ಹಳೆಯ ಶ್ಲೋಕದ ಮುಖಾಂತರ ಉತ್ತರ ನೀಡಲಿದ್ದಾರೆ
मनो मधुकरो मेघो मद्यपो मत्कुणो मरुत् |
मा मोदी मर्कटो मत्स्यो मकारा दश चंचलाः ||
ಇದು ಹಲವು ಸಾವಿರ ವರ್ಷಗಳ ಹಿಂದೆ ಹೇಳಿರುವುದು. ಇದರ ಅರ್ಥ ಹೀಗಿದೆ .
मनस् = ಮನಸ್ಸು
मधुकर = ಜೇನು ಹುಳ
मेघ = ಮೋಡ
3/nमद्यप = ರವಿ ಶಾಸ್ತ್ರಿ ಅಥವಾ ಕುಡುಕ
मत्कुण = ತಿಗಣೆ
मरुत् = ಗಾಳಿ
मा = ಲಕ್ಷ್ಮಿ, ಸಂಪತ್ತು
मोदी = ಮೋದಿ, ಅಹಂ
मर्कट = ಮಂಗ
मत्स्य = ಮೀನು
मकार = ಮ ಅಕ್ಷರದಿಂದ ಶುರು ಆಗುವವು
दश = ಹತ್ತು
चंचल = ಚಂಚಲ, ಇದ್ದಂಗೆ ಇರುವುದಿಲ್ಲ
1/nಒಂದು ನರಿ ಪುರಾಣ.
ಜಂಬೂದ್ವೀಪದ ದಕ್ಷಿಣದ ಕರ್ನಾಟಕದಲ್ಲಿ ಒಂದು ಊರು, ಅಲ್ಲಿನ ಒಂದು ಅಗ್ರಹಾರ ವಶಿಷ್ಠ ಪುರ. ಅಲ್ಲಿನ ಗೋವಿಂದ ಭಟ್ಟರ ಹೆಂಡತಿ ಭಕ್ತವತಿ. ಒಮ್ಮೆ ಗೋವಿಂದ ಭಟ್ಟರು ಸಪತ್ನಿಕರಾಗಿ ತಿರುಪತಿಗೆ ಹೋಗುತ್ತಾರೆ. ಅಲ್ಲಿ ತಿಮ್ಮಪ್ಪನಿಗೆ ಪ್ರದಕ್ಷಿಣೆ ಹಾಕುವ ಸಂದರ್ಭ. ಎಲ್ಲಾ ಭಕ್ತಾದಿಗಳೂ ಗೋವಿಂದ ಗೋವಿಂದ ಅಂತ ಹೇಳ್ತಾ ಇದ್ದಾರೆ.
2/nಈಗ ಭಕ್ತವತಿಗೆ ಆಗಿರುವುದು ಸಂಕಷ್ಟ. ಸನಾತನ ಧರ್ಮದಲ್ಲಿ ಗಂಡನ ಹೆಸ್ರು ಹೇಳುವ ಹಾಗೆ ಇಲ್ಲ. ಹೇಳಿದರೆ ಗಂಡನ ವಯಸ್ಸು ಕಮ್ಮಿ ಆಗುತ್ತೆ ಅಂತೇ. ಆಗ ಭಕ್ತವತಿಯು "ಗೋವಿಂದನ ಭಜನೆಯೂ ಆಗಬೇಕು ಆದ್ರೆ ಗಂಡನ ಆಯಸ್ಸು ಕಮ್ಮಿ ಆಗಬಾರದು, ಇದಕ್ಕೇನು ಮಾಡುವುದು" ಅಂತ ಚಿಂತೆಗೆ ಬೀಳುತ್ತಾಳೆ.
3/nಆಗ ಅವಳಿಗನ್ನಿಸುತ್ತದೆ, ಇದಕ್ಕೆ ಭವಿಷ್ಯದಲ್ಲಿ ಖಂಡಿತಾ ಉತ್ತರ ಇರುತ್ತದೆ. ಸೋ ಭಕ್ತವತಿಯು ತನ್ನ ಪತಿವ್ರತಾ ಶಕ್ತಿಯನ್ನು ಉಪಯೋಗಿಸಿ ಟೈಮ್ ಟ್ರಾವೆಲ್ ಮಾಡಿ ೨೦೨೧ಕ್ಕೆ ಬರ್ತಾಳೆ. ಇಲ್ಲಿ ನೋಡಿದರೆ ಭಕ್ತವತಿಯ ಈಗಿನ ಜನ್ಮ ಈ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಕಂಟ್ರೋಲ್ ಸಿ ಕಂಟ್ರೋಲ್ ವಿ ಅನ್ನುವ ಮಂತ್ರ ಎಲ್ಲಾ ಭಕ್ತರ ಬಾಯಲ್ಲಿ!