1/n ಒಂದು ಹೊಟ್ಟೆಯ ಪುರಾಣ!
ನೀವು ಗಮನಿಸಿರಬಹುದು, ನಿಮ್ಮ ಸುತ್ತ ಮುತ್ತಲಿನ ಬಹುಪಾಲು ಭಾರತೀಯರಲ್ಲಿ ಅದರಲ್ಲೂ ಈ ಇಂಜಿನಿಯರುಗಳಲ್ಲಿ ಹೊಟ್ಟೆ ಸ್ವಲ್ಪ ಮುಂದೆ ಬಂದಿರುತ್ತದೆ. ಕೆಲವರದ್ದು ಮಿತಿ ಮೀರಿ ಬಂದಿರುತ್ತದೆ. ಆದರೆ ಅವರ ಉಳಿದ ದೇಹ ಭಾಗಗಳು ಅಷ್ಟು ಕೊಬ್ಬಿರುವುದಿಲ್ಲ. ಇನ್ಫ್ಯಾಕ್ಟ್ ಅವು ಸಣ್ಣಗೆ ಇರುವ ಚಾನ್ಸಸ್ ಜಾಸ್ತಿ.
2/nಅದಕ್ಕೇ ಅವರ BMI ಲೆಕ್ಕ ಹಾಕಿದರೆ ಅದು “ಲಿಮಿಟ್” ಒಳಗಡೆ ಇದ್ದರೂ ಆಶ್ಚರ್ಯ ಇಲ್ಲ.
ಈ ತರಹದ ದೇಹ ರಚನೆ, ಅಂದ್ರೆ ಗುಡಾಣ ಹೊಟ್ಟೆ, ಸಣಕಲು ದೇಹ, ಪ್ರಪಂಚದ ಉಳಿದ ಭಾಗಗಳಲ್ಲಿ ಅಷ್ಟು ಹೆಚ್ಚು ಕಾಣ ಬರುವುದಿಲ್ಲ. ಉದಾಹರಣೆಗೆ ಅಮೇರಿಕ ಅಲ್ಲಿ ಕೂಡ ಡೊಳ್ಳು ಹೊಟ್ಟೆಯವರು ಇದ್ದಾರೆ ಆದ್ರೆ ಅವರಲ್ಲಿ ಹೊಟ್ಟೆ ಜೊತೆ ತೋಳು, ಕತ್ತು,
3/nತೊಡೆ ಹೀಗೆ ಎಲ್ಲಾ ಕೊಬ್ಬಿರುತ್ತದೆ.
ಇದೇ ಕಾರಣದಿಂದ ಇಂದು ಭಾರತೀಯ ವೈದ್ಯಲೋಕದಲ್ಲಿ BMI ಲೆಕ್ಕವನ್ನು ಕೈ ಬಿಟ್ಟು waist-to-stature ratio (WSR) ಅನ್ನು ಹೆಚ್ಚು ಉಪಯೋಗಿಸುತ್ತಾರೆ. ಇದಕ್ಕೂ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗಗಳಿಗೆ ನೇರ ಸಂಬಂಧ ಇದೆ.
ಈಗ ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್ ಗೆ ಬರುವ. ನಿಮಗೆ ಗೊತ್ತಿರಬಹುದು,
4/nಭಾರತ, ಪ್ರಪಂಚದ ಡೈಯಾಬಿಟೀಸ್ ರಾಜಧಾನಿ. ಒಂದು ಅಂಶಗಳ ಪ್ರಕಾರ ೫ ರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ. ಕೆಲವು ತಜ್ಞರ ಪ್ರಕಾರ ಮೂರರಲ್ಲಿ ಒಬ್ಬರಿಗೆ ಇನ್ಸುಲಿನ್ ರೆಸಿಸ್ಟೆನ್ಸ್ ಇದೆ ಇಲ್ಲಿ. ಹಾಗೂ ಈ ಖಾಯಿಲೆಯ ಡಿಸ್ಟ್ರಿಬ್ಯುಶನ್ ಕೂಡ ಅಚ್ಚರಿಯಾಗಿದೆ.
ಮೊದಲಿದ್ದ ವಾದ, ಭಾರತೀಯರು ಜಾಸ್ತಿ ಕಾರ್ಬ್ಸ್ ತಿನ್ನುತ್ತಾರೆ, ಅದಕ್ಕೆ ಅಂತ.
5/nಇದು ಒಂದು ಮಟ್ಟಿಗೆ ಸರಿ ಆದ್ರೆ ದೂರದ ಫ್ರಾನ್ಸ್ ಅಲ್ಲಿ ಇಟಲಿ ಅಲ್ಲಿ ಎಲ್ಲವು ಮೈದಾ ಮಯ! ಜಪಾನಿಯರು ಸಹ ಪೊಗಸ್ತಾಗಿ ಅನ್ನ ತಿನ್ನುತ್ತಾರೆ.
ಇನ್ನು ಕ್ಯಾಲೋರಿ ಲೆಕ್ಕ ಹಾಕಿದರೆ ಭಾರತೀಯರ ಕ್ಯಾಲೋರಿ ಇಂಟೇಕ್ ತುಂಬಾ ಕಮ್ಮಿ. ಯುರೋಪ್ ಮಂದಿಗೆ ಹೋಲಿಸಿದರೆ ನಾವು ಅಂಡರ್ ನರಿಷ್ದ್. ಹಾಗಿದ್ದೂ ನಮ್ಮಲ್ಲಿ ಗುಡಾಣ ಹೊಟ್ಟೆ, ಡೈಯಾಬಿಟೀಸು.
6/nಇಲ್ಲಿಗಿನ ಐದಾರು ಪಟ್ಟು ತಿನ್ನುವ ವೈಕಿಂಗ್ ಮಂದಿಯ ಹೊಟ್ಟೆ ಇಸ್ತ್ರಿ ಮಾಡಿದ ತರಹ ಇದೆ. ಬಕಾಸುರನ ತರ ಮೇಯುವ ರಷಿಯನ್ನರ ಜರ್ಮನರ ಹೊಟ್ಟೆ ಇಲ್ಲಿಯ ತರ ಕೈಕಾಲು ಸಣ್ಣ ಹೊಟ್ಟೆ ದೊಡ್ಡ ಇಲ್ಲ! ಡಯಾಬಿಟೀಸು ಕೂಡ ಇಲ್ಲಿನಷ್ಟು ಇಲ್ಲ. ಡಯಾಬಿಟಿಸ್ ಜೊತೆಗೆ ಇರುವುದು ಹೃದ್ರೋಗ. ಅದೂ ಕೂಡ ಇಲ್ಲಿ ಜಾಸ್ತಿ
7/nಒಮ್ಮೆ ನಮ್ಮ ದೇಹರಚನೆ ಬಗ್ಗೆ ನೋಡುವ. ನಮಗೆ ಬದುಕಲು ಶಕ್ತಿ ಬೇಕು. ಅದಕ್ಕೆ ನಾವು ತಿನ್ನುತ್ತೇವೆ. ತಿಂದ ಆಹಾರ ಏನೇ ಇದ್ದರು ಜೀವಕೋಶಗಳಲ್ಲಿ ಅದು ಸೇರುವ ಮೊದಲು ಗ್ಲುಕೋಸ್ ಆಗಲೇಬೇಕು. ಈ ಗ್ಲುಕೋಸ್ ಅನ್ನು ಒಂದು ಕುದುರೆ ಅನ್ನುವ, ಈ ಕುದುರೆ ಜೀವಕೋಶವೆಂಬ ಕೋಟೆಯ ಒಳಗೆ ಹೋದರೆ ಮಾತ್ರ ಕೋಶಕ್ಕೆ ಶಕ್ತಿ ಸಿಗುತ್ತದೆ.
8/nಆದ್ರೆ ಆ ಕೋಟೆಗೆ ಒಂದು ಬಾಗಿಲು ಇದೆ. ಅದಕ್ಕೊಂದು ಬೀಗ ಹಾಗೂ ಬೀಗಕ್ಕೊಂದು ಕೀ. ಆ ಕೀ ನೇ ಇನ್ಸುಲಿನ್. ಅಂದ್ರೆ ಈ ಗ್ಲುಕೋಸ್ ಕುದ್ರೆ ಜೀವಕೋಶದ ಒಳಗೆ ಹೋಗಿ ಶಕ್ತಿ ನೀಡಬೇಕು ಅಂದ್ರೆ ಈ ಇನ್ಸುಲಿನ್ ಕೀ ಬೀಗವನ್ನು ಓಪನ್ ಮಾಡಬೇಕು!
ಒಮ್ಮೊಮ್ಮೆ ಈ ಬೀಗಕ್ಕೆ ತುಕ್ಕು ಹಿಡಿಯುತ್ತೆ, ಕೀ ಇಂದ ಬೇಗ ಓಪನ್ ಮಾಡಲು ಆಗುವುದಿಲ್ಲ.
9/nಕುದುರೆ ಕೋಟೆಯ ಹೊರಗಡನೆ ವೇಟ್ ಮಾಡುವ ಸ್ಥಿತಿ ಬರುತ್ತದೆ. ಇನ್ನೊಂದು ಕಡೆ ಕೋಶದ ಒಳಗೆ ಕುದುರೆಯ ಶಕ್ತಿ ಬಂದಿಲ್ಲ. ಅಂದ್ರೆ ರಕ್ತದಲ್ಲಿ ಗ್ಲುಕೋಸ್ ಅಂಶ ಜಾಸ್ತಿ ಆಗಿದೆ ಆದ್ರೆ ದೇಹದಲ್ಲಿ ಶಕ್ತಿ ಇಲ್ಲ. ಇದಕ್ಕೆ ಕಾರಣ ಬೀಗ ಹಾಳಾಗಿರುವುದು. ಇದು ಇನ್ಸುಲಿನ್ ರೆಸಿಸ್ಟನ್ಸ್. ಒಂದು ಹಂತ ದಾಟಿದರೆ ಡಯಾಬಿಟೀಸು.
10/nಮೊದ ಮೊದಲು ಸ್ವಲ್ಪ ಕ್ಲೀನ್ ಮಾಡಿ ಬಿಗ ಸರಿ ಮಾಡಬಹುದು. ಕೆಲವರಲ್ಲಿ ಇದು ಅಸಾಧ್ಯ..
ಈಗ ಇನ್ನೊಂದು ಅಂಶ ನಮ್ಮ ದೇಹದ ವಿಕಾಸ. ಮೊದಲೇ ಹೇಳಿದ ಹಾಗೆ ನಾವು ತಿನ್ನುವ ಆಹಾರ ಗ್ಲುಕೋಸ್ ಆಗಿ ಕೋಶಗಳಿಗೆ ಹೋಗುತ್ತದೆ, ಶಕ್ತಿಯ ಉಪಯೋಗ ಆಗುತ್ತದೆ. ಅಕಸ್ಮಾತ್ ದೇಹಕ್ಕೆ ಅಷ್ಟು ಶಕ್ತಿ ಬೇಡವಾದರೆ?
11/nಆಗ ದೇಹ ಈ ಶಕ್ತಿಯನ್ನು ಕೂಡಿಡುತ್ತದೆ, ಕೊಬ್ಬಿನ ರೀತಿಯಲ್ಲಿ. ಮೊದಲಿಗೆ ಶೇಖರಿಸಿ ಇಡುವುದೇ ಹೊಟ್ಟೆಯ ಸುತ್ತಮುತ್ತ.
ಇಲ್ಲಿ ಇರುವ ಇನ್ನೊಂದು ಸೋಜಿಗ ಅಂದ್ರೆ ಎಲ್ಲರ ದೇಹವೂ ಒಂದೇ ತರಹ ಶೇಖರಿಸಿ ಇಡುವುದಿಲ್ಲ. ಇದಕ್ಕೆ ದೇಹದಲ್ಲಿ ಇರುವ ಕೋಡ್ ಕಾರಣ. ಆ ಕೋಡ್ ನಮ್ಮ ಡಿಎನ್ಎ.
12/nಇದರಲ್ಲಿ ದೇಹ ಏನು ಮಾಡಬೇಕು, ಏನು ಮಾಡಬಾರದು ಅನ್ನುವ ಸಂದೇಶ ಇರುತ್ತದೆ ಹಾಗು ಇದು ಸಾವಿರಾರು ವರ್ಷಗಳಿಂದ ಕಲಿತ ಮಾಹಿತಿ.
ಅಂತಹ ಒಂದು ಮಾಹಿತಿ ಈ famine gene ಅಥವ ಬರ ಜೀನ್! ಇದು ಭಾರತೀಯರಲ್ಲಿ ಅದರಲ್ಲೂ ಈ ಡೊಳ್ಳು ಹೊಟ್ಟೆ ಸಣ್ಣ ದೇಹದವರಲ್ಲಿ ಕಂಡುಬರುತ್ತದೆ. ಹಾಗಿದ್ರೆ ಏನಿದು?
13/nಮೇಲೆ ಹೇಳಿದ ಹಾಗೆ ದೇಹ ಹೆಚ್ಚಾದ ಗ್ಲುಕೋಸ್ ಅನ್ನು ಕೊಬ್ಬಿನ ರೂಪದಲ್ಲಿ ಶೇಖರಿಸುವ ವ್ಯವಸ್ಥೆ ಹೊಂದಿದೆ ಅಂತ. ಈಗ ಒಂದು ಉದಾಹರಣೆ ನೋಡಿ. ನಿಮ್ಮ ಮನೆಗೆ ೨೪ ಗಂಟೆ ನೀರಿನ ವ್ಯವಸ್ಥೆ ಇದೆ, ಯಾವತ್ತೂ ಅದು ತಪ್ಪುವುದಿಲ್ಲ. ಹಾಗಿದ್ದರೆ ನೀವು ಒಂದು ಸ್ಟೋರೇಜ್ ಟ್ಯಾಂಕ್ ಗೊಡ ವೆಗೆ ಹೋಗುವುದಿಲ್ಲ.
14/nಆದ್ರೆ ನಿಮಗೆ ಸಿಗುವ ನೀರು ದಿನಕ್ಕೆ ೪ ಗಂಟೆ ಅಂದ್ರೆ ಒಂದು ಸಂಪ್ ಅನ್ನು ಮಾಡಿಕೊಳ್ತೀರಾ.
ಅಕಸ್ಮಾತ್ ನಿಮಗೆ ಸಿಗುವುದು ಕೇವಲ ಅರ್ಧ ಗಂಟೆ ನೀರು ಆದ್ರೆ ವಾರಕ್ಕೊಮ್ಮೆ ಅಂದ್ರೆ?
ನೀವು ನೀರಿನ ಖರ್ಚಿನ ಮೇಲೆ ಜಾಸ್ತಿ ನಿಗಾ ವಹಿಸುತ್ತೀರಾ. ಶೇಖರಣೆ ಕೂಡಾ ನಿಮ್ಮ ಪ್ರಿಯಾರಿಟಿ ಆಗುತ್ತೆ.
15/nಇದು ನಿಮಗೆ ವಾರಕ್ಕೊಮ್ಮೆ ನೀರು ಬಂದೆ ಬರುತ್ತೆ ಅನ್ನುವ ನಂಬಿಕೆ ಇದ್ರೆ. ಅಕಸ್ಮಾತ್ ಅದೂ ಕೂಡ ಇಲ್ಲದೆ ಹೋದಲ್ಲಿ? ಅರ್ತಾಥ್ ನೀರು ಯಾವಾಗ ಬರುತ್ತೆ ಅನ್ನುವ ಮಾಹಿತಿಯೇ ಇಲ್ಲದಾಗ?
ಆಗ ನಿಮ್ಮ ಆತ್ಮೋಸ್ಟ್ ಪ್ರಿಯಾರಿಟಿ ಸಿಕ್ಕ ನೀರನ್ನು ಶೇಖರಿಸಿ ಇಡುವಲ್ಲಿ ಮತ್ತು ಎಷ್ಟು ಕಮ್ಮಿಯೋ ಅಷ್ಟು ಬಳಸುವಲ್ಲಿ.
16/nಇದೇ ಆಗಿದ್ದು ಈ ಗುಡಾಣ ಹೊಟ್ಟೆಯ ಪೂರ್ವಿಕರಲ್ಲಿ. ಇವರು ಬಹಳ ಬರ ಪರಿಸ್ಥಿತಿಯಲ್ಲಿ ಇರುತ್ತಾರೆ. ಊಟ ಸಿಕ್ಕುವುದು ಯಾವಾಗಲೋ ಒಮ್ಮೆ. (ನಮ್ಮ ಹಿಂದಿನ ಪ್ರವಚನದಲ್ಲಿ ಈ ಮಂದಿ ಹೇಗೆ ಹಸುವನ್ನು ಸಾಯಿಸದೆ ಅದರ ಹಾಲನ್ನು ಉಪಯೋಗಿಸುವದನ್ನು ಕಂಡುಕೊಂಡರು ಅಂತ ಹೇಳಿದ್ದೇವೆ).
17/nದೇಹಕ್ಕೆ ಇದು ಗೊತ್ತಾಗಿದೆ. ಹಾಗಾಗಿ ಯಾವಾಗ ಆಹಾರ ಸಿಕ್ಕರೂ ಅದನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ. ಬದಲಿಗೆ ಶೇಖರಿಸಿ ಇಡುತ್ತದೆ. ಹಾಗಾಗಿಯೇ ಸ್ನಾಯುಗಳು ಬೆಳೆಯಲ್ಲ, ಕೈಕಾಲು ಕೃಶ ಆದ್ರೆ ಹೊಟ್ಟೆ ದೊಡ್ಡ!
ಇದು ಸಾವಿರಾರು ವರ್ಷಗಳ ಕಾಲ ನಡೆಯುತ್ತೆ, ದೇಹದ ಡಿಎನ್ಎ ಇದೇ ಯಾವಾಗಲು ಇರುವುದು ಹಾಗೂ ಇದನ್ನು ಎದುರಿಸಲು
18/nನಾವು ಸಿದ್ಧ ಇರಬೇಕು ಅಂತ ಅಂದುಕೊಳ್ಳುತ್ತದೆ. ಅದೇ ವಿಷಯ ಕೋಡ್ ಆಗುತ್ತದೆ. ಮುಂದೆ ಯಾವತ್ತೇ ಆಹಾರ ಸಿಕ್ಕರೂ ದೇಹ ಅದನ್ನು ಶೇಖರಿಸಿ ಇಡುವ ಕೆಲಸ ಮಾಡುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ ಇರುವುದು ವೈಕಿಂಗ್ ಜನರ ಪ್ರಕೃತಿ. ಅವರಿಗೆ ದಂಡಿಯಾಗಿ ಆಹಾರ ಸಿಗುತ್ತಾ ಇತ್ತು. ಸರಿಯಾಗಿ ತಿನ್ನುತ್ತಾ ಇದ್ದರು. ಯಾವತ್ತೂ ಕೊರತೆ ಇರಲಿಲ್ಲ
19/nಹಾಗಾಗಿ ಅವರ ಡಿಎನ್ಎ ಜಾಸ್ತಿ ಶೇಖರಿಸಿ ಇಡುವ ಗೊಡವೆಗೆ ಹೋಗಲಿಲ್ಲ. ತಿಂದಿದ್ದೆಲ್ಲ ಶಕ್ತಿಯಾಗಿ ಸಿಕ್ಕಿತು.
ಸೋ ಈ ಬರ ಡಿಎನ್ಎ ದೇಹದಲ್ಲಿ ಹಾಗೆಯೆ ಉಳಿದಿದೆ. ಈಗ ಊಟಕ್ಕೆ ಬರ ಇಲ್ಲ ಆದ್ರೆ ಡಿಎನ್ಎ ಪ್ರಕಾರ ಮುಂದೆ ಬರ ಬರಬಹುದು ಹಾಗಾಗಿ ಶೇಖರಿಸಿ ಇಡು ಅಂತ ದೇಹಕ್ಕೆ ಹೇಳುತ್ತೆ! ಸೊ ಗುಡಾಣ ಹೊಟ್ಟೆ.
20/nಹಾಗಂತ ಈ ಬರ ಜೀನ್ ಎಲ್ಲ ಭಾರತೀಯರಲ್ಲೂ ಇಲ್ಲ. ಈಶಾನ್ಯ ಭಾರತೀಯರು ನೋಡಿ, ಅವರಲ್ಲಿ ಇದು ಕಮ್ಮಿ. ನಮ್ಮ ಬುಡಕಟ್ಟು ಜನರಲ್ಲಿ ಕೂಡ ಕಮ್ಮಿ, ಅದರಲ್ಲೂ ಪಶ್ಚಿಮ ಘಟ್ಟದ ಕಾಡಿನ ಮಂದಿಯಲ್ಲಿ ಇದು ಇಲ್ಲವೇ ಇಲ್ಲ.
ಹಾಗಾಗಿ ನಮ್ಮಲ್ಲಿ ಹೆಚ್ಚು ಹೆಚ್ಚು ಡಯಾಬಿಟೀಸು!
ಗಮನಿಸಿ ಈ ಬರ ಜೀನ್ ಥಿಯರಿ ಒಂದು ರೀತಿಯ ಉತ್ತರ ಅಷ್ಟೇ.
21/nಭಾರತೀಯರಲ್ಲಿ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗ ನಿಜಕ್ಕೂ ಅಚ್ಚರಿಯೇ! ಗುಡಾಣ ಹೊಟ್ಟೆ ಕೂಡ.
ನಿಮಗೆ ಬೇರೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಿ. ಸನ್ನಿಧಾನಂ ಗಳು ವೈದ್ಯಕೀಯ ಲೋಕದವರು ಅಲ್ಲ. ಹಾಗಾಗಿ ಪ್ರವಚನದಲ್ಲಿ ದೋಷಗಳು ಇರುವ ಸಾಧ್ಯತೆಗಳು ಇವೆ. ಅಂತಹ ತಪ್ಪುಗಳನ್ನು ಸರಿ ಪಡಿಸಿ.
n/nಕೊನೆಯ ಲೈನ್! ಆದಷ್ಟು ದೇಹಕ್ಕೆ ಈ ಗ್ಲುಕೋಸ್ ಅನ್ನು ಅನಾವಶ್ಯಕವಾಗಿ ಶೇಖರಿಸಲು ಬಿಡಬೇಡಿ! ಒಂದೋ ಎಷ್ಟು ಬೇಕೋ ಅಷ್ಟು ತಿನ್ನಿ, ಇಲ್ಲ ತಿಂದದ್ದನ್ನು ಅರಗಿಸಿ, ಅದರ ಶಕ್ತಿಯನ್ನು ಉಪಯೋಗಿಸಿ. ಹೊಟ್ಟೆ ಸುತ್ತಳತೆ ಬಗ್ಗೆ ನಿಗಾ ಇರಲಿ.
• • •
Missing some Tweet in this thread? You can try to
force a refresh
1/n
ಪೆಗಾಸಸ್ಸಿನ ಬಣ್ಣ ಯಾವುದು?
ಇವಾಗ ಅದು ಕೇಸರಿ ಬಣ್ಣ ಅಂತ ನಮಗೆ ಗೊತ್ತಾಗಿದೆ ಆದ್ರೆ ೨೮ ಬಿಲಿಯನ್ ವರ್ಷಗಳ ಹಿಂದೆ ಇದೇ ಪ್ರಶ್ನೆಗೆ ಕಾಸ್ಮಿಕ್ ವರ್ಲ್ದೇ ಅಲ್ಲೋಲ ಕಲ್ಲೋಲ ಆಗಿತ್ತು. ಅದರ ಬಗ್ಗೆ ಇವತ್ತಿನ ಪ್ರವಚನ.
ಸನಾತನ ಧರ್ಮದ ಪ್ರಕಾರ ಇವತ್ತಿನ ಎಲ್ಲ ಮನುಷ್ಯರ ಮೂಲ ಪುರುಷ ಮನು.
2/n ಮುಸ್ಲಿಂ ಕ್ರಿಶ್ಚಿಯನ್ ಯಹೂದಿಗಳಲ್ಲಿ ಆಡಮ್ ಇದ್ದಾನಲ್ಲ ಹಂಗೆ. ಅದಕ್ಕೆ ಹೇಳುವುದು ಈ ನನ್ಮಕ್ಕಳು ಎಲ್ಲಾ ಸೇಮ್ ಟು ಸೇಮ್.
ಹಂಗಾದ್ರೆ ಎರಡನೇ ಜೆನೆರೇಷನ್ ಮನುಷ್ಯರೆಲ್ಲ ಏನು ಇನ್ಸೆಸ್ಟ್ ಇಂದ ಹುಟ್ಟಿದ್ದಾ? ಅನ್ನುವ ಅಧಿಕಪ್ರಸಂಗ ಬೇಡ. ಎಲ್ಲಾ ಧರ್ಮಗಳ ಪ್ರಕಾರ ಮಾನವ ಕುಲ ಬೆಳೆದಿದ್ದೆ ಇನ್ಸೆಸ್ಟ್ ಇಂದ! ಅದಕ್ಕೆ ನಾವು ಧರ್ಮ ಗಳಿಂದ ದೂರ!
3/n
ಇರಲಿ
ಆ ಮನುವಿನ ಅಪ್ಪ ಕಶ್ಯಪ ಬ್ರಹ್ಮ. ಹಾಗು ಆ ಕಶ್ಯಪನಿಗೆ ಹಲವಾರು ಹೆಂಡತಿಯರು. ಒಬ್ಬಳು ಹೆಂಡತಿ ದಿತಿ, ಅವಳ ಮಕ್ಕಳು ದೈತ್ಯರು. ಅದಿತಿ ಯ ಮಕ್ಕಳ ದೇವತೆಗಳು. ದೇವತೆಗಳ ರಾಜ ದೇವೇಂದ್ರ. ನರರ ರಾಜ ನರೇಂದ್ರ ಇದ್ದ ಹಾಗೆ. ಈ ನರೇಂದ್ರನ ಹತ್ರ ಒಂದು ಪೆಗಾಸಸ್ಸು.. ಅಯ್ಯೋ ಸಾರಿ ಪ್ರವಚನದ ಓಘದಲ್ಲಿ ತಪ್ಪು ಆಯಿತು.
1/nಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ಸಮಾಜದ ತಪ್ಪುಗಳು.
ಇವತ್ತಿನ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಒಂದು ಕಡೆ ಕಲೆ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ಶಿಕ್ಷಣ ಇನ್ನೊಂದು ಕಡೆ.
ಮುಖ್ಯವಾಹಿನಿ ಅಲ್ಲಿ “ಬುದ್ಧಿವಂತ” ಮಕ್ಕಳು ಹೋಗುವುದು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣಕ್ಕೆ. ಕಲೆ ಸಾಹಿತ್ಯ ಎಲ್ಲ ದಡ್ಡರಿಗೆ.
2/nಇದರ ಮೇಲೆ, ತಾಂತ್ರಿಕ ಅಥವಾ ವಿಜ್ಞಾನ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಯು ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣದಿಂದ ದೂರ ಉಳಿಯುತ್ತಾನೆ. ಕಾರಣ ಅವನ ಪಠ್ಯದಲ್ಲಿ ಇದಾವುದೂ ಇಲ್ಲ. ಹೀಗಾಗಿಯೇ ಇವತ್ತಿನ ಬಹುಪಾಲು ಇಂಜಿನಿಯರ್ ಗಳಿಗೆ ಸಮಾಜದ ನಿಜ ಪರಿಚಯವೇ ಆಗಿಲ್ಲ. ಈ ನೆಲದಲ್ಲಿ ಆದ ಚಳುವಳಿಗಳು, ಸುಧಾರಣೆಗಳು, ತತ್ವಗಳು ಸಿದ್ಧಾಂತಗಳು
3/nಇವೆಲ್ಲ ಪರಿಚಯವೇ ಇಲ್ಲ. ಇವುಗಳ ನಗ್ಗೆ ಸ್ವಲ್ಪ ಗೊತ್ತಿದ್ದರೆ ಅದು ಹೈ ಸ್ಕೂಲ್ ತನಕ ಕಲಿತದ್ದು ಮಾತ್ರ ಮತ್ತು ಆ ಸಮಯದಲ್ಲಿ ಮಕ್ಕಳು ಬಾಯಿ ಪಾಠ ಮಾಡಿದ್ದರಿಂದ ಇವುಗಳ ಭಾವಾರ್ಥ ಗೊತ್ತಾಗಿರುವ ಸಾಧ್ಯತೆಗಳು ಕಮ್ಮಿ.
ಹಾಗಾಗಿ ಈ ಇಂಜಿನಿಯರುಗಳನ್ನ ಸುಲಭವಾಗಿ ಬ್ರೈನ್ ವಾಷ್ ಮಾಡಿ ಅವರ ತಲೆಗೆ ಏನು ಬೇಕಾದರೂ ತು೦ಬಬಹುದು.
1/4 Dear non-resident UPites,
A lot of you still have the voter ID from UP but you arent residing there. You had come out of UP for a better life and you might be successful by now.
This is regarding the upcoming #UPElection2022 it is pretty important.
2/4 The PR machinery is targeting you.
You are getting fooled by misinformation and you may believe them and that influences your voting decisions.
Please note, your vote affects the people who are still in UP and want to live there.
3/4 So start talking to the people in your voting constituency. Make your decisions based on that. not on the PR.
Because it is your responsibility as a voter, as a citizen.
1/nಸತಿ ಸಹಗಮನ ಪದ್ಧತಿ ಮತ್ತು ಪುರೋಹಿತಶಾಹಿ ಇಂಡೊಲೊಜಿ ಪ್ರಾಪಗಾಂಡ.
ಸತಿ ಪದ್ಧತಿ ಅನ್ನುವುದು ಈ ಮಣ್ಣಿನ ಅತಿಕ್ರೂರ ಪದ್ಧತಿಗಳಲ್ಲಿ ಒಂದು. ಹಿಂದೆ ಇತ್ತು ಈಗ ಇಲ್ಲ ಅನ್ನುವ ಮಾತು ಇತ್ತೀಚಿನ ವರ್ಷಗಳವರೆಗೆ ಕೇಳಿಬರ್ತಾ ಇತ್ತು. ಆಮೇಲೆ ಶುರು ಆಗಿದ್ದು ಹೊಸ ವಾದ.
2/n“ಹೌದು ಈ ದುಷ್ಟ ಪದ್ಧತಿ ಇಲ್ಲಿ ಇತ್ತು ಆದರೆ ಇದು ನಮ್ಮ ಸನಾತನ ಧರ್ಮದ ಭಾಗ ಅಲ್ಲ, ಇದು ಬಂದಿದ್ದು ಸಾಬರಿಂದ. ಸಾಬ್ರ ಅತ್ಯಾಚಾರಗಳಿಂದ ನಮ್ಮ ಮಾನ ಉಳಿಸಿಕೊಳ್ಳಲು ಬೇರೆ ವಿಧಿ ಇಲ್ಲದೆ ಇದನ್ನು ಮಾಡ್ಬೇಕಾಗಿ ಬಂತು. ಇಲ್ಲ ಅಂದ್ರೆ ಸಾಬ್ರು ಗಂಡ ಸತ್ತ ವಿಧವೆಯರನ್ನು ರೇಪ್ ಮಾಡಿ ಬಲವಂತವಾಗಿ ತಮ್ಮ ಜನಾನ ಗೆ ಸೇರಿಸಿಕೊಳ್ತಾ ಇದ್ರು.
3/nಹಾಗಾಗಿ ಸತಿ ಕೂಡ ಮುಸ್ಲಿಮರ ಕೊಡುಗೆ, ಈ ಮಣ್ಣಿನದ್ದು ಅಲ್ಲ ಅಂತ ಹೊಸ ಇಂಡೊಲೊಜಿ ಲಾಯರ್ ಗಳ ವಾದ.
ಹೌದು ಮುಸ್ಲಿಂ ದಾಳಿಕೋರರು ಲೂಟಿ ಅತ್ಯಾಚಾರ ಎಲ್ಲ ಮಾಡಿದ್ದು ಹೌದು. ಅಫ್ಘಾನ್ ದಂಡುಕೋರರೇ ಹಾಗೆ. ಮಂಗೋಲ್ ಜೇಂಗಿಸ್ ಖಾನ್ ಕೂಡ ಹೀಗೆಯೇ ಇದ್ದಿದ್ದು, ಹೂಣರು ಅದೇ ಮಾಡಿದ್ದು, ಕ್ರುಸೇಡರು ಕೂಡ. ನಮ್ಮಲ್ಲಿ ಏನೂ ಕಮ್ಮಿ ಇಲ್ಲ.
1/nಸನಾತನ ಧರ್ಮದಲ್ಲಿ ಸ್ಲೇವರಿ ಅಥವಾ ದಾಸ್ಯ ಪದ್ಧತಿ.
ಹೀಗೆ ಹೇಳಿದ ಕೂಡಲೇ ಬರ್ತಾರೆ ಇಂಡೊಲೊಜಿ ಲಾಯರ್ಸ್, ಇಲ್ಲ ಇದೆಲ್ಲ ಸುಳ್ಳು ನಮ್ಮ ಭವ್ಯ ಸಂಸ್ಕೃತಿ ದಾಸ್ಯ ಎಂಬುದು ಇಲ್ಲವೇ ಇಲ್ಲ. ಇದೆಲ್ಲ ಇದ್ದಿದ್ದು ಪಶ್ಚಿಮದಲ್ಲಿ ಮಾತ್ರ. ಹಾಗೂ ಸಾಬರು ಇದನ್ನು ನಮ್ಮ ದೇಶಕ್ಕೆ ತಂದಿದ್ದು. ಅವರಿಗಿಂತ ಮುಂಚೆ ಇವೆಲ್ಲ ಇಲ್ಲಿ ಇರಲಿಲ್ಲ.
2/nಸನ್ನಿಧಾನಂಗಳ ಇವತ್ತಿನ ಪ್ರವಚನದಲ್ಲಿ ಈ ಇಂಡೊಲೊಜಿ ಮಂದಿಯ ಭಂಡ ಬಾಳನ್ನು ಬಯಲು ಮಾಡುವ.
ಒಂದು ದಂತ ಕಥೆ ಇಂದ ಶುರು ಮಾಡುವ. ಇಲ್ಲಿ ಒಂದು ಕಾಮಿಡಿ ಇದೆ. ಇದನ್ನು ನಾವು ದಂತ ಕಥೆ ಅಂದ್ರೆ ಸನಾತನಿಗಳಿಗೆ ಉರಿಯುತ್ತದೆ ಕಾರಣ ಸನಾತನ ನಂಬಿಕೆಗಳ ಮೂಲ ಇರುವುದೇ ಇಲ್ಲಿ. ಸೃಷ್ಟಿಯ ಕಥೆ ಇಲ್ಲಿ ಬರುತ್ತದೆ.
3/nಸತ್ಯ ಅಂದ್ರೆ ಇಲ್ಲಿನ ಅಸಂಬದ್ಧ ಕಾಮಿಡಿಗಳನ್ನು ನಿಜ ಅಂತ ಅವ್ರೇ ಒಪ್ಪಬೇಕಾಗುತ್ತದೆ. ಇರಲಿ
ಮನುವಿನ (ಸನಾತನಿಗಳ ಪ್ರಕಾರ ಮನುಷ್ಯರ ಮೂಲ ಪುರುಷ ಮನು, ಅಬ್ರಾಮಿಕ್ ಧರ್ಮಿಯರ ಆಡಮ್ ಸಮಾನ ) ಅಪ್ಪ ಕಶ್ಯಪನಿಗೆ ಹಲವು ಪತ್ನಿಯರು. ಅವರಲ್ಲಿ ಇಬ್ಬರು ವಿನಿತೆ ಮತ್ತು ಕದ್ರು. ಒಮ್ಮೆ ಇವರ ಮದ್ಯೆ ಒಂದು ಬೆಟ್ಟಿಂಗ್ ಆಗುತ್ತೆ.
1/8 newsckm.com/archives/1839
ಇದೊಂದು ನಮ್ಮ ರಾಜ್ಯದಲ್ಲಿ UP ಮಾದರಿಯಲ್ಲಿ ಆಗಿರುವ ಘನಘೋರ ಅನ್ಯಾಯ.
ಚೆಲುವರಾಜ್ ಅನ್ನುವ ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ @RAshokaBJP ನೇತೃತ್ವದ ಸಿಸ್ಟಮ್ ಮಾಡಿರುವ ಅನ್ಯಾಯ.
2/8 ನಿಮಗೆ ಚೆಲುವರಾಜು ಅವರ ಬಗ್ಗೆ ಹೇಳಬೇಕು. ಇವರು ಶೃಂಗೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾಗ ಇವರ ಪ್ರಾಮಾಣಿಕತೆಯ ಬಗ್ಗೆ ಶೃಂಗೇರಿಯ ಮೂಲೆ ಮೂಲೆ ಅಲ್ಲಿಯೂ ಪ್ರಸಿದ್ಧತೆ ಇತ್ತು, ಈಗಲೂ ಇದೆ. ಶೃಂಗೇರಿಯ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತ ಇದೆ ಹಾಗು
3/8 ಇದು ಕೇವಲ ಶೃಂಗೇರಿ ಮಾತ್ರ ಅಲ್ಲ, ಪ್ರತಿ ಊರಿನ ಹಣೆ ಬರಹ ಇದೇ . ಅದರಲ್ಲೂ ರೆವೆನ್ಯೂ ಡಿಪಾರ್ಟ್ಮೆಂಟ್ ಬಗ್ಗೆ ಹೇಳುವುದೇ ಬೇಡ.
ಹಾಗಂತ ಈ ಭ್ರಷ್ಟಾಚಾರಕ್ಕೆ ಕಾರಣ ಇದೆ. ಪ್ರತಿ ತಾಲೂಕಿನ ರೆವೆನ್ಯೂ ವಿಭಾಗದಿಂದ ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ರೆವೆನ್ಯೂ ಮಂತ್ರಿಗೆ "ಸಂದಾಯ" ಆಗಬೇಕೆಂಬ ಅಘೋಷಿತ ನಿಯಮ ದಶಕಗಳಿಂದ ಜಾರಿಯಲ್ಲಿದೆ.