ಸನ್ನಿಧಾನಂಗಳ ಅನುಭವದ ತಾಳೇಗರಿಯಿಂದ ಒಂದಷ್ಟು.
ನಾವು ನೋಡಿದ ಹಾಗೆ ಬಹಳಷ್ಟು ಜನರಲ್ ಮೆರಿಟ್ ಹುಡುಗರು ಪಿಯುಸಿ ನಂತರ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಬರಲಿಲ್ಲ. ಕಾರಣ ಅವರಿಗೆ ರಿಸೆರ್ವೆಷನ್ ಇಂದಾಗಿ ಸೀಟುಗಳು ಸಿಗಲಿಲ್ಲ ಅಂತಲ್ಲ. ಅವರು ತೆಗೆದ ಅಂಕಗಳು ಹಾಗೆ ಇದ್ದವು.
1/n
2/n
ಕರ್ನಾಟಕದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎಷ್ಟು ಸೀಟುಗಳು ಇವೆ ಅಂದ್ರೆ ೨೦೧೯ರಲ್ಲಿ ಸರಿ ಸುಮಾರು ೨೭೦೦೦ ಸೀಟುಗಳಿಗೆ ವಿದ್ಯಾರ್ಥಿಗಳೇ ಇರಲಿಲ್ಲ! ಅಂದ್ರೆ ಇರುವ ಸೀಟುಗಳು ತೇರ್ಗಡೆಯಾಗಿ ಬರುವ ವಿದ್ಯಾರ್ಥಿಗಳಿಗಿಂತ ಜಾಸ್ತಿ ಇದ್ದವು.
ಅಂದ್ರೆ ಈ ಜನರಲ್ ಮೆರಿಟ್ ಅವ್ರು ಇಂಜಿನಿಯರಿಂಗ್ ಇಂದ ವಂಚಿತರಾಗಿದ್ದು ರಿಸರ್ವೇಶನ್ ಇಂದ ಅಲ್ಲ!
3/n
ನಾವು ಗಮನಿಸಿದ ಹಾಗೆ ಬಹುಪಾಲು ಈ ಜನರಲ್ ಅವರು ಶಿಕ್ಷಣ ನಿಲ್ಲಿಸಿದ್ದು ವಯೋ ಸಹಜ ಬಿಸಿ ರಕ್ತ ಮಿದುಳಿನಲ್ಲಿ ಜಾಸ್ತಿ ಜಾಸ್ತಿ ತುಂಬಿ! ಯಾವನಿಗೂ ರಿಸರ್ವೇಶನ್ ಇಂದ ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣ ಕೈ ತಪ್ಪಿಲ್ಲ. ಇವರ ಇನ್ನೊಂದು ವಾದ ಅಂದ್ರೆ "ಹೌದು ಸೀಟುಗಳು ಇದ್ದವು ಆದ್ರೆ ನಮಗೆ ಕಡಿಮೆ ಫೀಸ್ ನ ಸರ್ಕಾರೀ ಸೀಟುಗಳು ತಪ್ಪಿ ಹೋದವು".
4/n
ನಿಮಗೆ ಗೊತ್ತಿರಬಹುದು ಈ ಸರ್ಕಾರೀ ಸೀಟುಗಳಲ್ಲಿನ ವಿನಾಯಿತಿ ಎಷ್ಟು ಅಂತ. ಹಾಗೆಯೆ ನಿಜವಾಗಿಯೂ ಬಡತನ ಇದ್ದರೆ ಅಂತಹವರಿಗಾಗಿಯೇ ಅನೇಕ ವಿದ್ಯಾರ್ಥಿ ವೇತನ ವ್ಯವಸ್ಥೆ ಇವೆ. ಹಾಗೆಯೆ ಇಂತಹ ಸಮಯದಲ್ಲಿ ಇವರೇ ಕಟ್ಟಿ ಬೆಳೆಸಿದ ಮಠ ಮಾನ್ಯಗಳಿಗೇನು ದಾಡಿ ಇವರನ್ನು ಸ್ಪಾನ್ಸರ್ ಮಾಡಲು?
ಇನ್ನು ಮುಂದೆ ಬರುವ
5/n
ಇಲ್ಲಿ ಇರುವ ವಾದ ಅಂದ್ರೆ "ಅವನು ರಿಸೆರ್ವೆಷನ್ ಇಂದ ವೈದ್ಯ ಆದ, ಅವನು ರಿಸೆರ್ವೆಷನ್ ಇಂಜಿನಿಯರ್.. "
ನೆನಪಿಡಿ, ಅಕಸ್ಮಾತ್ ನೀವು ರಿಸೆರ್ವೆಷನ್ ಇಂದ ಸಿತು ಪಡೆದರೂ, ಡಿಗ್ರಿ ಪಡೆಯಲು ನೀವು ಎಲ್ಲರಂತೆಯೇ ಕಷ್ಟ ಪಡಬೇಕು. ಪರೀಕ್ಷೆಯಲ್ಲಿ ಯಾವುದೇ ರಿಸೆರ್ವೆಷನ್ ಇರುವುದಿಲ್ಲ. ಪಾಸಾಗುವುದು ನಿಮ್ಮ ವೈಕ್ತಿಕ ಶಕ್ತಿಯಿಂದ ಮಾತ್ರ.
6/n
ಸುಖಾ ಸುಮ್ಮನೆ ಕುಣಿಯಲಾಗದವಳು ನೆಲ ಡೊಂಕು ಅಂದಳಂತೆ ಹಾಗೆ ನಿಮ್ಮ ದಡ್ಡತನಕ್ಕೆ ನಿಮ್ಮ ಸೋಮಾರಿತನಕ್ಕೆ ರಿಸರ್ವೇಶನ್ ಅನ್ನು ದೂರುವುದು ಮೂರ್ಖತನ ಅಷ್ಟೇ.
ನೆನಪಿಡಿ ರಿಸೆರ್ವೆಷನ್ ಇಂದ ನೀವು ಕಂಡರಿಯದ ಅನೇಕ ಪ್ರತಿಭೆಗಳು ಈ ಸಮಾಜಕ್ಕೆ ಬರುವಂತಾಗಿದೆ. ಎಲ್ಲೋ ದೂರದ ಕಾಡಿನ ನಡುವೆ ಇದ್ದ ಬುಡಕಟ್ಟು ಸಮುದಾಯದ ಹುಡುಗ ನಗರದ ಇಂಜಿನಿಯರಿಂಗ್
7/n
ಕಾಲೇಜಿಗೆ ಬಂದರೆ ಅದು ಕೇವಲ ಒಬ್ಬ ಹುಡುಗನ ಪ್ರವೇಶ ಆಗಿರುವುದಿಲ್ಲ, ಬದಲಿಗೆ ಅವನ ಜೊತೆ ಕಂಡು ಕೇಳರಿಯದ ಒಂದು ಸಂಸ್ಕೃತಿಯೇ ಬರುತ್ತದೆ. ನೀವು ಮನೆಯಿಂದ ಹೊರಗಿಟ್ಟ ದಲಿತ ಹುಡುಗ ನಿಮ್ಮ ಮಗನ ಜೊತೆ ಇಂಜಿನಿಯರಿಂಗ್ ಮಾಡುತ್ತಾ ಇದ್ದಾನೆ ಅಂದ್ರೆ ಅದಕ್ಕೆ ಹೆಮ್ಮೆ ಪಡಿ.
n/n
ನಿಮ್ಮ ಮಗ ವೇಸ್ಟ್ ಬಾಡಿ ಆಗಿದ್ದರೆ ಅದಕ್ಕೆ ಕಾರಣ ರಿಸೆರ್ವೆಷನ್ ಅಲ್ಲ, ನಿಮ್ಮ ಪೇರೆಂಟಿಂಗ್ ಅಷ್ಟೇ.

• • •

Missing some Tweet in this thread? You can try to force a refresh
 

Keep Current with Sri Sri Sri Srimad Jagatmindri Mahaswamigal 🛕

Sri Sri Sri Srimad Jagatmindri Mahaswamigal 🛕 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @jagatmindri

31 Jul
1/n
ಇತ್ತೀಚಿನ ಆಂಟಿ ರಿಸೆರ್ವೆಷನ್ ಕೂಗಿನಲ್ಲಿ ಬರುತ್ತಿರುವ ಇನ್ನೊಂದು ವಾದ “ಹೌದು ಅವರು ಶೋಷಿತರು ಇರಬಹುದು ಆದ್ರೆ ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಮಾಡಿದ್ದ (ಒಂದು ವೇಳೆ ಮಾಡಿದ್ದರೆ!) ಶೋಷಣೆಗೆ ನಾವ್ಯಾಕೆ ಇವತ್ತು ಬೆಲೆ ತೆರಬೇಕು? ನಮ್ಮ ತಪ್ಪೇನಿದೆ?”
ಇದಕ್ಕೆ ನೇರವಾಗಿ ಉತ್ತರಿಸುವ ಮುಂಚೆ ಒಂದು ಕಥೆ. ImageImageImage
2/n
ಅವನು ಒಬ್ಬ ಸಾಮಾನ್ಯ ಹುಡುಗ, ಜನರಲ್ ಕೆಟಗರಿ ಅವನು ಮಲೆನಾಡ ಪ್ರಾಂತ್ಯ. ಪಿಯುಸಿ ನಂತರ ಬರೆದ ಸಿ ಇ ಟಿ ಅಲ್ಲಿ ಐದೋ ಆರೋ ಸಾವಿರ ರ್ಯಾಂಕ್ ಬಂದಿತ್ತು. ಅಯ್ಯೋ ಬಿ ಎಮ್ಮೆಸ್ ಅಲ್ಲಿ ಈ ದರಿದ್ರ ರಿಸೆರ್ವೆಷನ್ ಇಂದ ಕಂಪ್ಯೂಟರ್ ಸೈನ್ಸ್ ತಪ್ಪಿ ಹೋಯಿತು ಅಂತ ಅತ್ಕೋತಾ ಮೆಕ್ಯಾನಿಕಲ್ ತಗೊಂಡ. ಅದೇ ರ್ಯಾಂಕ್ ಗೆ ಬೇರೆ ಕಾಲೇಜಲ್ಲಿ
3/n
ಕಂಪ್ಯೂಟರ್ ಸೈನ್ಸ್ ಸೀಟು ಇತ್ತು ಅದು ಬೇರೆ ಮಾತು. ಇರಲಿ. ಅವನ ಪ್ರಾಂತ್ಯದಲ್ಲೇ ಇದ್ದ ಕಾಲೇಜಿನಲ್ಲಿ ಎಲ್ಲ ಸೀಟುಗಳು ಕೊಳೆಯುತ್ತಾ ಬಿದ್ದಿದ್ದವು ಕೂಡಾ!
ಸನ್ನಿಧಾನಂ ಅವ್ನ ಜೊತೆ ಸಂವಾದ ಮಾಡುವಾಗ ಬಂದ ಪ್ರಶ್ನೆ
“ಏನು ನೀನು ಬೆಂಗಳೂರಿನಲ್ಲಿ ಎಲ್ಲಿದ್ದೆ? ಪಿಜಿ ಯಾ ಅಥವಾ ಕಾಲೇಜು ಹಾಸ್ಟೆಲ್ಲ?”
Read 9 tweets
23 Jul
1/n
ಪೆಗಾಸಸ್ಸಿನ ಬಣ್ಣ ಯಾವುದು?
ಇವಾಗ ಅದು ಕೇಸರಿ ಬಣ್ಣ ಅಂತ ನಮಗೆ ಗೊತ್ತಾಗಿದೆ ಆದ್ರೆ ೨೮ ಬಿಲಿಯನ್ ವರ್ಷಗಳ ಹಿಂದೆ ಇದೇ ಪ್ರಶ್ನೆಗೆ ಕಾಸ್ಮಿಕ್ ವರ್ಲ್ದೇ ಅಲ್ಲೋಲ ಕಲ್ಲೋಲ ಆಗಿತ್ತು. ಅದರ ಬಗ್ಗೆ ಇವತ್ತಿನ ಪ್ರವಚನ.
ಸನಾತನ ಧರ್ಮದ ಪ್ರಕಾರ ಇವತ್ತಿನ ಎಲ್ಲ ಮನುಷ್ಯರ ಮೂಲ ಪುರುಷ ಮನು. Image
2/n
ಮುಸ್ಲಿಂ ಕ್ರಿಶ್ಚಿಯನ್ ಯಹೂದಿಗಳಲ್ಲಿ ಆಡಮ್ ಇದ್ದಾನಲ್ಲ ಹಂಗೆ. ಅದಕ್ಕೆ ಹೇಳುವುದು ಈ ನನ್ಮಕ್ಕಳು ಎಲ್ಲಾ ಸೇಮ್ ಟು ಸೇಮ್.
ಹಂಗಾದ್ರೆ ಎರಡನೇ ಜೆನೆರೇಷನ್ ಮನುಷ್ಯರೆಲ್ಲ ಏನು ಇನ್ಸೆಸ್ಟ್ ಇಂದ ಹುಟ್ಟಿದ್ದಾ? ಅನ್ನುವ ಅಧಿಕಪ್ರಸಂಗ ಬೇಡ. ಎಲ್ಲಾ ಧರ್ಮಗಳ ಪ್ರಕಾರ ಮಾನವ ಕುಲ ಬೆಳೆದಿದ್ದೆ ಇನ್ಸೆಸ್ಟ್ ಇಂದ! ಅದಕ್ಕೆ ನಾವು ಧರ್ಮ ಗಳಿಂದ ದೂರ!
3/n

ಇರಲಿ
ಆ ಮನುವಿನ ಅಪ್ಪ ಕಶ್ಯಪ ಬ್ರಹ್ಮ. ಹಾಗು ಆ ಕಶ್ಯಪನಿಗೆ ಹಲವಾರು ಹೆಂಡತಿಯರು. ಒಬ್ಬಳು ಹೆಂಡತಿ ದಿತಿ, ಅವಳ ಮಕ್ಕಳು ದೈತ್ಯರು. ಅದಿತಿ ಯ ಮಕ್ಕಳ ದೇವತೆಗಳು. ದೇವತೆಗಳ ರಾಜ ದೇವೇಂದ್ರ. ನರರ ರಾಜ ನರೇಂದ್ರ ಇದ್ದ ಹಾಗೆ. ಈ ನರೇಂದ್ರನ ಹತ್ರ ಒಂದು ಪೆಗಾಸಸ್ಸು.. ಅಯ್ಯೋ ಸಾರಿ ಪ್ರವಚನದ ಓಘದಲ್ಲಿ ತಪ್ಪು ಆಯಿತು.
Read 13 tweets
16 Jul
1/n ಒಂದು ಹೊಟ್ಟೆಯ ಪುರಾಣ!
ನೀವು ಗಮನಿಸಿರಬಹುದು, ನಿಮ್ಮ ಸುತ್ತ ಮುತ್ತಲಿನ ಬಹುಪಾಲು ಭಾರತೀಯರಲ್ಲಿ ಅದರಲ್ಲೂ ಈ ಇಂಜಿನಿಯರುಗಳಲ್ಲಿ ಹೊಟ್ಟೆ ಸ್ವಲ್ಪ ಮುಂದೆ ಬಂದಿರುತ್ತದೆ. ಕೆಲವರದ್ದು ಮಿತಿ ಮೀರಿ ಬಂದಿರುತ್ತದೆ. ಆದರೆ ಅವರ ಉಳಿದ ದೇಹ ಭಾಗಗಳು ಅಷ್ಟು ಕೊಬ್ಬಿರುವುದಿಲ್ಲ. ಇನ್ಫ್ಯಾಕ್ಟ್ ಅವು ಸಣ್ಣಗೆ ಇರುವ ಚಾನ್ಸಸ್ ಜಾಸ್ತಿ. Image
2/nಅದಕ್ಕೇ ಅವರ BMI ಲೆಕ್ಕ ಹಾಕಿದರೆ ಅದು “ಲಿಮಿಟ್” ಒಳಗಡೆ ಇದ್ದರೂ ಆಶ್ಚರ್ಯ ಇಲ್ಲ.
ಈ ತರಹದ ದೇಹ ರಚನೆ, ಅಂದ್ರೆ ಗುಡಾಣ ಹೊಟ್ಟೆ, ಸಣಕಲು ದೇಹ, ಪ್ರಪಂಚದ ಉಳಿದ ಭಾಗಗಳಲ್ಲಿ ಅಷ್ಟು ಹೆಚ್ಚು ಕಾಣ ಬರುವುದಿಲ್ಲ. ಉದಾಹರಣೆಗೆ ಅಮೇರಿಕ ಅಲ್ಲಿ ಕೂಡ ಡೊಳ್ಳು ಹೊಟ್ಟೆಯವರು ಇದ್ದಾರೆ ಆದ್ರೆ ಅವರಲ್ಲಿ ಹೊಟ್ಟೆ ಜೊತೆ ತೋಳು, ಕತ್ತು,
3/nತೊಡೆ ಹೀಗೆ ಎಲ್ಲಾ ಕೊಬ್ಬಿರುತ್ತದೆ.
ಇದೇ ಕಾರಣದಿಂದ ಇಂದು ಭಾರತೀಯ ವೈದ್ಯಲೋಕದಲ್ಲಿ BMI ಲೆಕ್ಕವನ್ನು ಕೈ ಬಿಟ್ಟು waist-to-stature ratio (WSR) ಅನ್ನು ಹೆಚ್ಚು ಉಪಯೋಗಿಸುತ್ತಾರೆ. ಇದಕ್ಕೂ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗಗಳಿಗೆ ನೇರ ಸಂಬಂಧ ಇದೆ.

ಈಗ ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್ ಗೆ ಬರುವ. ನಿಮಗೆ ಗೊತ್ತಿರಬಹುದು,
Read 22 tweets
14 Jul
1/nಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ಸಮಾಜದ ತಪ್ಪುಗಳು.
ಇವತ್ತಿನ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಒಂದು ಕಡೆ ಕಲೆ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ಶಿಕ್ಷಣ ಇನ್ನೊಂದು ಕಡೆ.
ಮುಖ್ಯವಾಹಿನಿ ಅಲ್ಲಿ “ಬುದ್ಧಿವಂತ” ಮಕ್ಕಳು ಹೋಗುವುದು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣಕ್ಕೆ. ಕಲೆ ಸಾಹಿತ್ಯ ಎಲ್ಲ ದಡ್ಡರಿಗೆ.
2/nಇದರ ಮೇಲೆ, ತಾಂತ್ರಿಕ ಅಥವಾ ವಿಜ್ಞಾನ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಯು ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣದಿಂದ ದೂರ ಉಳಿಯುತ್ತಾನೆ. ಕಾರಣ ಅವನ ಪಠ್ಯದಲ್ಲಿ ಇದಾವುದೂ ಇಲ್ಲ. ಹೀಗಾಗಿಯೇ ಇವತ್ತಿನ ಬಹುಪಾಲು ಇಂಜಿನಿಯರ್ ಗಳಿಗೆ ಸಮಾಜದ ನಿಜ ಪರಿಚಯವೇ ಆಗಿಲ್ಲ. ಈ ನೆಲದಲ್ಲಿ ಆದ ಚಳುವಳಿಗಳು, ಸುಧಾರಣೆಗಳು, ತತ್ವಗಳು ಸಿದ್ಧಾಂತಗಳು
3/nಇವೆಲ್ಲ ಪರಿಚಯವೇ ಇಲ್ಲ. ಇವುಗಳ ನಗ್ಗೆ ಸ್ವಲ್ಪ ಗೊತ್ತಿದ್ದರೆ ಅದು ಹೈ ಸ್ಕೂಲ್ ತನಕ ಕಲಿತದ್ದು ಮಾತ್ರ ಮತ್ತು ಆ ಸಮಯದಲ್ಲಿ ಮಕ್ಕಳು ಬಾಯಿ ಪಾಠ ಮಾಡಿದ್ದರಿಂದ ಇವುಗಳ ಭಾವಾರ್ಥ ಗೊತ್ತಾಗಿರುವ ಸಾಧ್ಯತೆಗಳು ಕಮ್ಮಿ.
ಹಾಗಾಗಿ ಈ ಇಂಜಿನಿಯರುಗಳನ್ನ ಸುಲಭವಾಗಿ ಬ್ರೈನ್ ವಾಷ್ ಮಾಡಿ ಅವರ ತಲೆಗೆ ಏನು ಬೇಕಾದರೂ ತು೦ಬಬಹುದು.
Read 10 tweets
14 Jul
1/4 Dear non-resident UPites,
A lot of you still have the voter ID from UP but you arent residing there. You had come out of UP for a better life and you might be successful by now.
This is regarding the upcoming #UPElection2022 it is pretty important.
2/4 The PR machinery is targeting you.
You are getting fooled by misinformation and you may believe them and that influences your voting decisions.
Please note, your vote affects the people who are still in UP and want to live there.
3/4 So start talking to the people in your voting constituency. Make your decisions based on that. not on the PR.
Because it is your responsibility as a voter, as a citizen.
Read 4 tweets
13 Jul
1/nಸತಿ ಸಹಗಮನ ಪದ್ಧತಿ ಮತ್ತು ಪುರೋಹಿತಶಾಹಿ ಇಂಡೊಲೊಜಿ ಪ್ರಾಪಗಾಂಡ.

ಸತಿ ಪದ್ಧತಿ ಅನ್ನುವುದು ಈ ಮಣ್ಣಿನ ಅತಿಕ್ರೂರ ಪದ್ಧತಿಗಳಲ್ಲಿ ಒಂದು. ಹಿಂದೆ ಇತ್ತು ಈಗ ಇಲ್ಲ ಅನ್ನುವ ಮಾತು ಇತ್ತೀಚಿನ ವರ್ಷಗಳವರೆಗೆ ಕೇಳಿಬರ್ತಾ ಇತ್ತು. ಆಮೇಲೆ ಶುರು ಆಗಿದ್ದು ಹೊಸ ವಾದ.
2/n“ಹೌದು ಈ ದುಷ್ಟ ಪದ್ಧತಿ ಇಲ್ಲಿ ಇತ್ತು ಆದರೆ ಇದು ನಮ್ಮ ಸನಾತನ ಧರ್ಮದ ಭಾಗ ಅಲ್ಲ, ಇದು ಬಂದಿದ್ದು ಸಾಬರಿಂದ. ಸಾಬ್ರ ಅತ್ಯಾಚಾರಗಳಿಂದ ನಮ್ಮ ಮಾನ ಉಳಿಸಿಕೊಳ್ಳಲು ಬೇರೆ ವಿಧಿ ಇಲ್ಲದೆ ಇದನ್ನು ಮಾಡ್ಬೇಕಾಗಿ ಬಂತು. ಇಲ್ಲ ಅಂದ್ರೆ ಸಾಬ್ರು ಗಂಡ ಸತ್ತ ವಿಧವೆಯರನ್ನು ರೇಪ್ ಮಾಡಿ ಬಲವಂತವಾಗಿ ತಮ್ಮ ಜನಾನ ಗೆ ಸೇರಿಸಿಕೊಳ್ತಾ ಇದ್ರು.
3/nಹಾಗಾಗಿ ಸತಿ ಕೂಡ ಮುಸ್ಲಿಮರ ಕೊಡುಗೆ, ಈ ಮಣ್ಣಿನದ್ದು ಅಲ್ಲ ಅಂತ ಹೊಸ ಇಂಡೊಲೊಜಿ ಲಾಯರ್ ಗಳ ವಾದ.
ಹೌದು ಮುಸ್ಲಿಂ ದಾಳಿಕೋರರು ಲೂಟಿ ಅತ್ಯಾಚಾರ ಎಲ್ಲ ಮಾಡಿದ್ದು ಹೌದು. ಅಫ್ಘಾನ್ ದಂಡುಕೋರರೇ ಹಾಗೆ. ಮಂಗೋಲ್ ಜೇಂಗಿಸ್ ಖಾನ್ ಕೂಡ ಹೀಗೆಯೇ ಇದ್ದಿದ್ದು, ಹೂಣರು ಅದೇ ಮಾಡಿದ್ದು, ಕ್ರುಸೇಡರು ಕೂಡ. ನಮ್ಮಲ್ಲಿ ಏನೂ ಕಮ್ಮಿ ಇಲ್ಲ.
Read 15 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!

:(