@sathvik_nv@acharya2@Ashwin_K_Ash#ಅಯ್ಯೋಶಿವನೆ, ಶಂಬಾಜೋಶಿ, ಬಿಎಮ್‍ಶ್ರೀ ಅಥವಾ ಡಿಎನ್‍ಎನ್ ಅವರ ಕಾಲಕ್ಕೇ ಬೆಳಗಾಗಲಿಲ್ಲ. ಅವರಿಗೂ ಸಾವಿರಾರು ವರ್ಷದ ಹಿಂದಿನಿಂದ ಈ ವಿಷಯಗಳನ್ನು ತಿಳಿದವರು ಇಲ್ಲವೇ? ಹೊಸಬರ ಮಹತ್ವ ಗುರುತಿಸೋಣ. ಆದರೆ ಹಳಬರ ಹಿರಿಮೆ ಮರೆಯದಿರೋಣ. 🙏
@sathvik_nv@acharya2@Ashwin_K_Ash ಇವತ್ತಿನ ದಿನದಲ್ಲಿ , ಓದಲು ಶಂಕರ ಭಟ್ಟರ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಒಳ್ಳೆಯ ಪುಸ್ತಕವೇ. ಆದರೆ , ಬಹುಪಾಲು ಶಾಸ್ತ್ರ ಗ್ರಂಥ ಗಳನ್ನು ಓದಲು ಬೇಕಾಗುವಂತೆ ಇದನ್ನು ಓದಲೂ ಒಂದು ಮಟ್ಟದ ತಯಾರಿ ಬೇಕು. ಅದಿಲ್ಲದೇ ಓದಿದರೆ ಕಷ್ಟ.
1/n
@sathvik_nv@acharya2@Ashwin_K_Ash ಉದಾ: ಸಂಧಿಯನ್ನು ಸೇರಿಕೆ, ಸಮಾಸವನ್ನು ಒಟ್ಟುಪದ, ಕೂಡುಪದ ಎಂದು ಶಂಕರ ಭಟ್ಟರು ಹೇಳುವುದರಲ್ಲಿ ಕ್ರಾಂತಿಕಾರಿ ಹೊಸ ವಿಚಾರ ಏನೂ ಹೇಳಲಿಲ್ಲ , ಬದಲಾಗಿ ಪಾರಿಭಾಷಿಕ ಪದ ಒಂದನ್ನು ಹೊಸದಾಗಿ ಹೇಳಿದ್ದಾರೆ.
ಪಾರಿಭಾಷಿಕ ಪದಗಳನ್ನು ಪೂರ್ವ ಪ್ರಸಿದ್ಧ ವಾದದ್ದನ್ನೇ ತೆಗೆದುಕೊಳ್ಳುವುದು ಒಂದು ದಾರಿ ಆದರೆ ಇದು ಇನ್ನೊಂದು ದಾರಿ.ಎರಡೂ ಸರಿಯೇ.
2/n
@sathvik_nv@acharya2@Ashwin_K_Ash ಪೂರ್ಪ್ರಸಿದ್ಧವೆನ್ನುವ ಕಾರಣಕ್ಕೆ ಹಳೆಯ ಪ್ರಯೋಗಗಳು ಉಳಿಯುತ್ತವೆ. ಅದಕ್ಕೆ ಯಾವುದೇ ಹುನ್ನಾರ ನಡೆದಿದೆ ಎಂಬ ಅನುಮಾನಗಳು ಬೇಕಿಲ್ಲ. ಕ್ರಿಕೆಟ್ ಆಟದ ಯಾವುದೋ ವಿಷಯವನ್ನು (ಉದಾ: ರನ್ ಔಟ್) ಅನ್ನುವುದನ್ನು ಏನು ಎಂದು ತಿಳಿಸಿಕೊಟ್ಟರೆ ಆಮೇಲೆ ಪ್ರತಿಯೊಬ್ಬ ಆಸಕ್ತನಿಗೂ, ಅದು ಕನ್ನಡವೇ, ಇಂಗ್ಲಿಷೇ, ಹಿಂದಿಯೇ ಎಂದು ಯೋಚಿಸದೇ ತಿಳಿಯುತ್ತಾನೆ. 3/n
@sathvik_nv@acharya2@Ashwin_K_Ash ಇಂಗ್ಲಿಷ್ ಗಿಂತ ಐವತ್ತು-ನೂರು ಪಟ್ಟು ಹೆಚ್ಚು ಕಾಲ ಕೇಳಿ ಪಳಗಿದ್ದ ಭಾಷೆಯಿಂದ ಪಾರಿಭಾಷಿಕ ಪದಗಳನ್ನು ಉಳಿಸಿಕೊಂಡರೆ ಆಶ್ಚರ್ಯವೇನು?
ಶಂಕರಭಟ್ಟರ ಎಷ್ಟೋ ವಿಚಾರಗಳು ತಿಳಿದುಕೊಳ್ಳಬೇಕಾದಂತಹವು. ಆದರೆ ಕೆಲವು ಜಿಲ್ಲೆಗಳ ಕನ್ನಡದಲ್ಲಿ(ಅಲ್ಲಿ ಕೂಡ ಎಲ್ಲರಲ್ಲಿಯೂ ಅಲ್ಲ) ಕಾಣುವ ಮಹಾಪ್ರಾಣದ ಕೊರತೆಯನ್ನು "ಎಲ್ಲರ ಕನ್ನಡ" ಎನ್ನುವುದು ಭ್ರಮೆ.4/n
@sathvik_nv@acharya2@Ashwin_K_Ash ಹಾಗಾಗಿ ಮಹಾಪ್ರಾಣಗಳು ಕನ್ನಡದಲ್ಲಿ ಬೇಕೇ ಇಲ್ಲ ಎಂದು ಹೇಳುವುದು ಸರಿಯಿಲ್ಲ. ವ್ಯಾಕರಣಕಾರರ ಕೆಲಸ ಇರುವ ಭಾಷೆಯನ್ನು ವಿವರಿಸುವುದು, ಅದರಲ್ಲಿರುವ ವಿಶೇಷಗಳನ್ನು ಗುರುತಿಸುವುದು. ಈ ಸದ್ದು ಕನ್ನಡದಲ್ಲಿಲ್ಲ ಆ ಸದ್ದು ಇಲ್ಲ ಎಂದು ಗುಡಿಸಿ ಹಾಕುವುದಲ್ಲ.
First time seeing association of Lion with the #madhyama swara. And also the nakshatra, tithi association with musical notes. Or at least if I had read earlier, I have forgotten 🙊
And here a #Virashaiva kavi is describing a concert where they are singing nibaddha ( "composed,pre determined) & anibaddha ( manodharma,unbounded) types of music, in 3-sthayi & 9-rasas, including both dEsI & mArgI type 3/3 p.s: There is cure for everything except for self-hate
This is how the #ThaparHabibClan and their more famous international counterparts take into advantage most gullible people who read their books , who do not know a word of #Samskrta , forget knowing anything from #RgVeda!
ಪ್ರಕಾಶ್ ನಾಯಕ್ ಅವರ ಅಂತು ಓದಿ ಮುಗಿಸಿದೆ. ಕುತೂಹಲಕಾರಿಯಾಗಿರುವ ಕಥೆ. ಈ ಕಥೆ ನಡೆಯುವ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಂದಹಾಗೆ ಶಂಕರಾಚಾರ್ಯರಿಗೂ , ಸದ್ಯದಲ್ಲೇ ಪ್ರಕಟವಾಗಲಿರುವ ನನ್ನ ಅಮರುಕಶತಕದ ಅನುವಾದಕ್ಕೂ, ಅಂತು ಕಾದಂಬರಿಗೂ ಒಂದು ಸಂಬಂಧ ಇದೆ!
ಓದಿ ಅಂತ ನನ್ನ ಶಿಫಾರಸು.
#ಅಂತು - ವನ್ನು ಓದಿ ಅಂತ ನನ್ನ ಶಿಫಾರಸು. ನಾನು ಓದಿದ್ದು ಗೂಗಲ್ ಪ್ಲೇ ನಲ್ಲಿ, ಇ- ಬುಕ್ ರೂಪದಲ್ಲಿ. ಇನ್ನೂ ಇಂಗ್ಲಿಷ್ ಇ-ಬುಕ್ ಗಳಂತೆ ಬೇರೆ ಬೇರೆ ಫಾಂಟ್ ಗಳಲ್ಲಿ ಓದುವ ಅನುಕೂಲವಿಲ್ಲ. ಆದರೂ ಪಿಡಿಎಫ್ ನ್ನೇ ಹಾಕಿರುವ ಪುಸ್ತಕಗಳಿಗಿಂತ ವಾಸಿ ( ಅಕ್ಷರಗಳನ್ನು ದೊಡ್ಡದು ಚಿಕ್ಕದು ಮಾಡಿಕೊಳ್ಳುವ ಅವಕಾಶವಿದೆ). #ಪುಸ್ತಕ#ಕನ್ನಡ
ಕಾದಂಬರಿಯ ಪಾತ್ರಗಳನ್ನು ಮನಸ್ಸಿನಲ್ಲೇ ಊಹೆ ಮಾಡಿಕೊಳ್ಳುತ್ತಾ ಓದಲು ಸೊಗಸಾಗಿದೆ. ಇಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದ ಚಿತ್ರಣ ಚಿತ್ತಾಲರ ಪುರುಷೋತ್ತಮ ದಲ್ಲಿ ಕಾಣುವ ಉತ್ತರಕನ್ನಡ/ಮುಂಬಯಿ, ದತ್ತಾತ್ರಿ ರಾಮಣ್ಣ ಅವರ ದ್ವೀಪವ ಬಯಸಿ/ಮಸುಕು ಬೆಟ್ಟದ ಹಾದಿ - ಗಳ ಕಾಣುವ ಬೇಲೂರು/ಚಿಕ್ಕಮಗಳೂರು ತಾಲೂಕಿನ ಸುಂದರ ಚಿತ್ರಣವನ್ನು ನೆನಪಿಸಿತು
I mentioned this #inscription in my talk:
*A trader from Banavasi (Karnataka), renovating a chaitya at Karle (Maharashtra)
*A trader from Kashmira renovated the gopura of #Beluru Channakeshava temple ( Karnataka)
* A chieftain from Karnataka built tempes on the banks of Yamuna
But naysayers say there was no concept of a country, and India is 70 years old.