#ಭಾಷೆ , #ಲಿಪಿ ಇತ್ಯಾದಿ ಗಳಬಗ್ಗೆ ಒಂದು ಸರಳಿಃ🧵
#ಸಂಸ್ಕೃತ ವೊಂದೇ ಏಕೆ, ಯಾವ ಭಾಷೆಗೂ ಮೊದಲು ಲಿಪಿಯಿರಲಿಲ್ಲ(ಇರುವುದಿಲ್ಲ)-ಏಕೆಂದರೆ ಮಾತು ಮೊದಲು ಬರೆಹ ನಂತರ. #ಕನ್ನಡ ದ ಮೊದಲ ದಾಖಲೆ ಸಿಕ್ಕಿರುವುದು ಸಾಮಾನ್ಯಶಕ 2-3 ನೇ ಶತಮಾನದಲ್ಲಿ. ಅದಕ್ಕೆ ಮೊದಲು ಕನ್ನಡ ಇರಲೇ ಇಲ್ಲವೆಂದು ತಿಳಿಯೋಣವೇ? ಹಾಗೆ ನಿರ್ಧರಿಸುವುದು ತಪ್ಪಾಗುತ್ತದೆ. 1/n
3 ನೇ ಶತಮಾನದಲ್ಲಿ ಬರವಣಿಗೆಗೆ ಕನ್ನಡವನ್ನು ಒಳಪಡಿಸಿದರು ಎನ್ನುವುದು ಹೆಚ್ಚು ಸರಿಯಾಗಬಹುದಾದ ಊಹೆ.
ಸಂಸ್ಕೃತಕ್ಕೂ ಹಾಗೇ. ಲಿಪಿಯಿಲ್ಲದ ಕಾಲ ಒಂದಿತ್ತು. ಒಂದು ಕಾಲದಲ್ಲಿ ಬರೆಹದ ಶಕ್ತಿಯನ್ನರಿತ ಮೇಲೆ ಬರೆವಣಿಗೆ ಬಂದಿತು. ಅದರ ನಂತರವೂ ಮೌಖಿಕ ಪರಂಪರೆಯೂ ಜೊತೆಗೇ ಮುಂದುವರೆಯಿತು. ಮುದ್ರಣ ಬರುವವರೆಗೆ ಇದಕ್ಕಿದ್ದ ಹೆಚ್ಚಾಯ ಅರಿತಿದ್ದೇವೆ. 2/n
ಪಾಣಿನಿಯ ಕಾಲಕ್ಕಾಗಲೆ ಲಿಪಿ ಇತ್ತು ಎಂಬುದು ನಿರ್ವಿವಾದ. ಆಸಕ್ತರು ವಾಸುದೇವ ಶರಣ ಅಗ್ರವಾಲ ಅವರ India as known to #Panini ಪುಸ್ತಕವನ್ನು ಓದಬಹುದು. ವ್ಯಾಸ ವಾಲ್ಮೀಕಿಯರು ಬರಹವನ್ನು ಪ್ರಸ್ತಾಪ ಮಾಡಿಲ್ಲ -ಅವರು ಪಾಣಿನಿಗೂ ಹಿಂದಿನವರಾದ್ದರಿಂದ ಅವರ ಕಾಲದಲ್ಲಿ ಬರವಣಿಗೆ ರೂಢಿಗೆ ಬಂದಿಲ್ಲದಿದ್ದಿರಬಹುದೆಂಬ ಊಹೆಯನ್ನು ನಾವು ಮಾಡಬಹುದು. 3/n
ಚಾಣಕ್ಯನ ಅರ್ಥಶಾಸ್ತ್ರವು ಲೆಕ್ಕ ಪತ್ರಗಳನ್ನು ಬರೆದಿಡುವ ವಿಷಯವನ್ನು ಹೇಳುತ್ತದೆ. ಲಿಪಿಯಿಲ್ಲದೇ ಲೆಕ್ಕಪತ್ರ ಬರೆಯುವುದು ಸಾಧ್ಯವೇ? ಹಾಗಾಗಿ ಭಾರತದ ಇನ್ನಾವ ಭಾಷೆಗೂ ಮೊದಲೇ ಸಂಸ್ಕೃತವನ್ನು ಬರೆಯುತ್ತಿದ್ದರು ಅಂತ ಖಚಿತವಾಗಿ ಹೇಳಬಹುದು. ನಮಗೆ ಸಿಕ್ಕಿರುವ ಮೊದಮೊದಲ ಶಿಲಾಶಾಸನಗಳು ಪ್ರಾಕೃತದವು, ಆದರೆ ಪ್ರಾಕೃತವೂ ಸಂಸ್ಕೃತದ್ದೇ ಛಾಯೆ. 4/n
ಖಾತ್ರಿಯಾಗಿ ಹೇಳಬಹುದೇನೆಂದರೆ ಮೊದಮೊದಲ ಶಿಲಾಶಾಸನಗಳಲ್ಲಿ ಪ್ರಾಕೃತ ಬಳಸಿ ಒಂದೆರಡು ಶತಮಾನಗಳ ನಂತರ ಸಂಸ್ಕೃತ ಬಳಸಿದ್ದಾರೆ ಎಂದು ಅಷ್ಟೇ. ಅದಕ್ಕಿಂತ ಹೆಚ್ಚು ಏನು ಹೇಳಿದರೂ ಅದು ಊಹೆಯೇ.

ನಾವು ಸಂಸ್ಕೃತಕ್ಕೂ ದೇವನಾಗರಿ ಲಿಪಿಯೂ ಒಂದೇ ಎಂದುಕೊಳ್ಳಬಾರದು. ಭಾಷೆಗೂ ಲಿಪಿಯೂ ಒಂದಕ್ಕೆ ಒಂದೇ ಎನ್ನುವಂತಿಲ್ಲ ಅನ್ನುವುದು ವ್ಯಕ್ತ. 5/n #Brahmi
ಸಂಸ್ಕೃತದ ಲಿಪಿಯೂ ದೇಶ ಕಾಲಗಳಿಗೆ ಬದಲಾಗುತ್ತಾ ಹೋಗಿದೆ. ದೊರಕಿರುವ ಇತಿಹಾಸವನ್ನು ನೋಡಿದರೆ ಮೊದಲು ಬ್ರಾಹ್ಮೀ.ಅದಕ್ಕೂ ಮೊದಲು ಯಾವುದಾದರೂ ಲಿಪಿ ಇದ್ದದ್ದು(ಪಾಣಿನಿಯ ಕಾಲದಲ್ಲಿ) ನಮಗೆ ದೊರೆತಿಲ್ಲ.
ಬ್ರಾಹ್ಮೀ ಅನ್ನುವುದೂ ೧೯ನೇ ಶತಮಾನದಲ್ಲಿಟ್ಟ ಹೊಸ ಹೆಸರು, ೨0೦೦ ವರ್ಷಗಳ ಹಿಂದೆ ಆ ಲಿಪಿಗೆ ಹೆಸರಿತ್ತೇ, ಏನು ಎಂಬುದು ಊಹಾಪೋಹವಷ್ಟೇ. 6/n
ನಂತರ ಶಾರದಾ, ವಂಗ, ನಾಗರೀ, ಸಿದ್ಧಂ, ಗ್ರಂಥ, ಕನ್ನಡ/ತೆಲುಗು ಮಲಯಾಳ ತಿಗಳಾರಿ ತಿಬೆಟ್ ಹೀಗೆ ಹತ್ತು ಹಲವು ಲಿಪಿಗಳಲ್ಲಿ ಬರೆದಿರುವುದು ಕಂಡುಬರುತ್ತದೆ. ಈ ಎಲ್ಲ ಲಿಪಿಗಳೂ ಬ್ರಾಹ್ಮಿಯು ಬದಲಾಗುತ್ತ ಬಂದ ಬೆಳವಣಿಗೆಯ ಹಂತಗಳೆಂದು ನೋಡಿದಾಗ ಸಂಸ್ಕೃತಕ್ಕೆ ಲಿಪಿಯಿಲ್ಲ ಎಂಬ ಮಾತಿಗೆ ಹುರುಳಿಲ್ಲವೆಂಬುದು ತಿಳಿಯುತ್ತದೆ. 7/n #Tigalari #Sharada
ಸಂಸ್ಕೃತವನ್ನು ಕೇವಲ ದೇವನಾಗರಿಯಲ್ಲಿ ಮಾತ್ರ ಬರೆಯುತ್ತಿರುವುದು ಇತ್ತೀಚಿನ ರೂಢಿ. ಹಿಂದೆ ಸಂಸ್ಕೃತವನ್ನು ಹಲವು ಲಿಪಿಗಳಲ್ಲಿ ಬರೆವ ರೂಢಿ ಇತ್ತು. ಆ ರೂಢಿ ಏಕೆ ಬಂತೆಂದರೆ, ದೇಶ ವಿದೇಶಗಳ ವಿವಿಧ ಭಾಗಗಳಲ್ಲೂ ಸಂಸ್ಕೃತದಲ್ಲಿ ಉಪಯೋಗವೆನಿಸುವ ಶಾಸ್ತ್ರ-ಕಾವ್ಯ ಕೃತಿಗಳಿದ್ದದ್ದು. 8/n #Devanagari #Hindi #Sanskrit #Kannada #script
ಹಾಗೂ ಅಂಥ ಕೃತಿಗಳು ತಮಗೆ ಉಪಯುಕ್ತವೆಂದು ಸಂಸ್ಕೃತವನ್ನು (ಹೆಚ್ಚಾಗಿ) ಮಾತಾಡದ, ಅಥವಾ ಸಂಸ್ಕೃತ ಜನ್ಯವಾದ ಭಾಷೆಗಳನ್ನು ಮಾತಾಡ ಪ್ರದೇಶದ ಜನರೂ ಅರಿತಿದ್ದೇ ಅದಕ್ಕೆ ಕಾರಣ.

ಆ ದಾರಿಯಲ್ಲಿ, ಒಂದೇ ಭಾಷೆಯನ್ನು ಬರೆಯಲು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಚಲಿತವಾದ ಲಿಪಿಗಳನ್ನು ಬಳಸಿದರು ಅಷ್ಟೇ. 9/n #Sanskrit #Script #India #Writing
ಒಟ್ಟಿನಲ್ಲಿ ಹತ್ತು ಹನ್ನೆರಡನೇ ಶತಮಾನದವರೆಗೆ ದೇವನಾಗರಿ ಲಿಪಿ ಕಂಡುಬರುವುದಿಲ್ಲ ಎಂದ ಮಾತ್ರಕ್ಕೆ ಅಲ್ಲಿಯವರೆಗೆ ಸಂಸ್ಕೃತವನ್ನುಬರೆಯಲಿಲ್ಲ ಎಂದು ಅರ್ಥವಲ್ಲ.
ಕನ್ನಡದ ಲಿಪಿಯೂ ಹೀಗೇ - ಮೊದಲಿಗೆ ಕದಂಬ, ನಂತರ ಚಾಲುಕ್ಯ , ನಂತರ ಹೊಯ್ಸಳ, ನಂತರ ವಿಜಯ ನಗರ ಹೀಗೆ ಕಾಲಕಾಲಕ್ಕೆ ಬದಲಾಗುತ್ತಬಂದದ್ದೇ. 10/n #Kadamba #Hoysala #Script
ಕದಂಬ ಚಾಲುಕ್ಯ ಲಿಪಿಗಳಲ್ಲಿ ಸಂಸ್ಕೃತ ತೆಲುಗು ಕನ್ನಡ ಮೂರೂ ಭಾಷೆಗಳನ್ನು ಬರೆದಿರುವುದನ್ನು ನೋಡುವಾಗ, ನಾವು ಐಹೊಳೆಯ ರವಿಕೀರ್ತಿ ಶಾಸನದ ಲಿಪಿಯನ್ನು "ಕನ್ನಡ" ಲಿಪಿ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ನಾವೇ ಕೇಳಿಕೊಳ್ಳಬೇಕು! ಅದು ಒಂದುಸಾಮಾನ್ಯ ನೆಲೆಯಲ್ಲಿ ಸರಳವಾಗಿ ಹೇಳುವ ಮಾತಷ್ಟೇ.11/n #Kannada #Samskrta #Sanskrit
ಅದರಿಂದ ಸಂಸ್ಕೃತಕ್ಕೆ ಲಿಪಿಯಿರಲಿಲ್ಲವೆಂದಾಗಲಿ, ಸಂಸ್ಕೃತ ಬಲ್ಲವರು ಬರವಣಿಗೆಯನ್ನು ಧಿಕ್ಕರಿಸಿದರೆಂದಾಗಲೀ ಅಲ್ಲ. ಅಂತಹ ಅಭಿಪ್ರಾಯವನ್ನು ಯಾರು ವ್ಯಕ್ತಪಡಿಸಿದರೂ ಅದು ಸರಿಯಲ್ಲ!

"अयुक्तमपि न ग्राह्यं साक्षदपि बृहस्पतेः᳚ ಎಂಬ ಮಾತು ನಮಗಿಲ್ಲಿ ದಾರಿದೀಪವಾಗಬೇಕು. 12/12

#EndOfThread #Language #Script #India 🧵

• • •

Missing some Tweet in this thread? You can try to force a refresh
 

Keep Current with ಹಂಸಾನಂದಿ Hamsanandi हंसानन्दि

ಹಂಸಾನಂದಿ Hamsanandi हंसानन्दि Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @hamsanandi

Mar 28
A #thread about some #myths of #languages and #scripts (of #India): 🧵(I wrote in Kannada earlier)
Every language including #Sanskrit comes in spoken form first & later in written form. Most languages are dated by the earliest time when a written record for them is found. 1/17
#Samskrta can be considered an exception, where we have record of the spoken word before we see its written form. This is because the #Vedas were preserved in a speech form for millennia before being written down. In case of other languages, this is not so. 2/17
For ex: First written record of #Kannada date to 2-3rd C CE. But this does not prove Kannada did'nt exist prior to 2nd CE. It is better to inferwriting was introduced/adapted to Kannada then. In fact we see how the script used to write Prakrit in as adapted to write Kannada 3/17
Read 17 tweets
Mar 26
For those asking "What about Aryan" "What about Dravidian" languages - remember these terms were coined in 19th C.
Think of them as bags in which you organize things. Image
@pvaal2 Why these article writers do not see Adityas (who were not demons) and and who were named so for being sons of Aditi? Selective blindness? Image
@pvaal2 These statements may be okay in a "general" book but do they fit in a book talking about languages?

Anyone who has lived in an English speaking language knows English also has aspirated consonants. Image
Read 5 tweets
Jun 3, 2022
Q: #ಅವಗ್ರಹ ಚಿಹ್ನೆಯ (ಽ) ಪದಗಳನ್ನು ಹೇಗೆ ಉಚ್ಚರಿಸಬೇಕು?

A: ಅವಗ್ರಹವನ್ನು ಒಂದು ವಿಶೇಷ ಸನ್ನೆಯಾಗಿ ಬೇರೆಬೇರೆ ಭಾಷೆಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಬಳಸುತ್ತಾರೆ.

ಕನ್ನಡದಲ್ಲಿ ಸಾಧಾರಣವಾಗಿ, ಇದನ್ನು ಹ್ರಸ್ವ ಸ್ವರವನ್ನು ಎಳೆದು ಹೇಳುವಾಗ *ಆದರೆ, ದೀರ್ಘಸ್ವರವನ್ನು ಪ್ರಯೋಗಿಸದೇ ಇರುವಾಗ ತೋರಿಸುತ್ತೇವೆ.

1/3
ಎಂದರೆ, ಅಕ್ಕಽಽ ಮತ್ತು ಅಕ್ಕಾ ಇವೆರಡರ ಉಚ್ಚಾರ ಬೇರೆಬೇರೆಯಾಗಿರುತ್ತದೆ

ಇನ್ನೊಂದೆರಡು ಉದಾಹರಣೆಗಳು:
ನಾ ಬಂದಽ ನಾಕ್ ತಾಸಾಗೇಽದ ಚೆನ್ನಾಗಿ
ಅದೆಷ್ಟ್ ಛಂಽದ ಅದಾಳ

ಆಡುಮಾತನ್ನು ಹೆಚ್ಚು ಕರಾರುವಾಕ್ಕಾಗಿ ತೋರಿಸಲು ಈ ಬಳಕೆ ಅಷ್ಟೇ.

ಕನ್ನಡ ಲಿಪಿಯಲ್ಲಿ ಕೊಂಕಣಿ ಮೊದಲಾದ ಭಾಷೆಗಳನ್ನು ಬರೆಯುವಾಗ ಕೂಡ ಇದು ಬಹಳ ಉಪಯುಕ್ತವಾಗುತ್ತೆ.

2/3
ಇನ್ನು ಸಂಸ್ಕೃತದಲ್ಲಿ ಪೂರ್ವರೂಪ ಪರರೂಪ ಸಂಧಿಗಳಾಗಿರುವುದನ್ನು ತೋರಿಸುವೆಡೆ ಸಾಮಾನ್ಯವಾಗಿ ಅವಗ್ರಹ ಸನ್ನೆಯನ್ನು ಹಾಕುತ್ತಾರೆ. ಆದರೆ ಇಲ್ಲಿ ನಿಜವಾಗಿ ಅವಗ್ರಹ ಹಾಕಿದರೂ ಹಾಕದೇ ಇದ್ದರೂ ಉಚ್ಚಾರಣೆ ಒಂದೇ ಆಗಿರುತ್ತೆ.
ಉದಾ:पद्मनाभोऽरविन्दाक्षः ಇದರ ಉಚ್ಚಾರ पद्मनाभोरविन्दाक्ष: ಎಂದೇ.सर्वेऽपि ಇದರ ಉಚ್ಚಾರ सर्वेपि ಎಂದೇ. 3/3
Read 4 tweets
Jun 2, 2022
medium.com/@hamsanandi/%E… #ಹರಟೆ #ಪ್ರಬಂಧ
Remembered this #oldpost because of the ಪ್ರಬಂಧ ಹಿಂಪಡೆಯುವಿಕೆ going on with #KarnatakaTexbooks 😂
medium.com/@hamsanandi/%E… #ಹರಟೆ #ಪ್ರಬಂಧ
Remembered this #oldpost because of the ಪ್ರಬಂಧ ಹಿಂಪಡೆಯುವಿಕೆ going on with #KarnatakaTexbooks 😂
medium.com/p/c4d7fc38fd44 #ಹರಟೆ #ಪ್ರಬಂಧ
Remembered this #oldpost because of the ಪ್ರಬಂಧ ಹಿಂಪಡೆಯುವಿಕೆ going on with #KarnatakaTexbooks 😂
Read 7 tweets
May 20, 2022
Q: ಕರ್ನಾಟಕ ಸಂಗೀತದಲ್ಲಿ ತೆಲುಗು ಭಾಷೆಯಲ್ಲಿ ಹೆಚ್ಚು ರಚನೆಗಳಾಗಿರುವುದಕ್ಕೆ ಕಾರಣ ಏನು? ಕನ್ನಡದಲ್ಲಿ ಯಾಕೆ ಅಷ್ಟು ಆಗಲಿಲ್ಲ?

This needs a long answer - Sharing for those interested, as there is lot of confusion about this point even among music students and pratcitioners of the art!
A: ಇದು ತುಂಬಾ ಒಳ್ಳೆಯ ಪ್ರಶ್ನೆ. ಇಂದಿನ ಕರ್ನಾಟಕ ಸಂಗೀತದಲ್ಲಿ ನಮ್ಮ 18-19 ನೇ ಶತಮಾನದಲ್ಲಿ ಇದ್ದಂತಹ ತ್ಯಾಗರಾಜರ ಪರಂಪರೆಯ ಕೊಡುಗೆ ಅಪಾರ. ತ್ಯಾಗರಾಜರ ಹೆಚ್ಚು ರಚನೆಗಳು ತೆಲುಗು ಭಾಷೆಯಲ್ಲಿ ಇದ್ದವು. ತ್ಯಾಗರಾಗರ ಏಳ್ನೂರಕ್ಕೂ ಹೆಚ್ಚು ರಚನೆಗಳಲ್ಲಿ ಸುಮಾರು ನೂರಕ್ಕೆ ತೊಂಬತ್ತಾದರೂ ತೆಲುಗು ರಚನೆಗಳಾಗಿದ್ದು (1/n)
ಉಳಿದವು ಸಂಸ್ಕೃತ ಭಾಷೆಯಲ್ಲಿವೆ. ತ್ಯಾಗರಾಜರ ಕಾಲಾನಂತರದ ಸಂಗೀತದಲ್ಲಿ ಅವರ ಕೃತಿಗಳು ಹೆಚ್ಚು ಪ್ರಚಾರಕ್ಕೆ ಬಂದವು. ತ್ಯಾಗರಾಜರು ಸುಮಾರು ಅರುವತ್ತೈದು ವರ್ಷ ಸಂಗೀತವನ್ನು ಪಾಠ ಮಾಡಿದ್ದ, ದೊಡ್ಡ ಶಿಷ್ಯಸಮೂಹವನ್ನು ಹೊಂದಿದ್ದ ವಾಗ್ಗೇಯಕಾರರು. ಇಪ್ಪತ್ತನೆ ಶತಮಾನದಲ್ಲಿ ಸಾರ್ವಜನಿಕ ಸಂಗೀತ ಕಚೇರಿಗಳ ಪದ್ಧತಿ ಬಂದಾಗ ಅವರ ರಚನೆಗಳು ಕಚೇರಿಗೆ 2/n
Read 13 tweets
Apr 28, 2022
#ರಾಗ ಗಳ #ಲಕ್ಷಣ ದಮೇಲೆ ಒಂದು ಸರಣಿ. Quora ಗೆಂದು ಬರೆದದ್ದು.
ಸಾಂಪ್ರದಾಯಿಕವಾಗಿ ಒಂದು #ರಾಗ ದಲ್ಲಿ ಹಲವು #ಸ್ವರ ಗಳ ಸಮೂಹವು ಇದ್ದರೂ,ಸ್ವರಗಳ ಸಮೂಹವಷ್ಟೇ ರಾಗ ಆಗಲಾರದು. ಆ ಸ್ವರ ಸಮೂಹವನ್ನು ಒಂದು ರಾಗವಾಗಿಸಬೇಕಾದರೆ ಒಂದು ಚೌಕಟ್ಟಿನಲ್ಲಿ ಅದನ್ನು ಬೆಳೆಸಿ ಹಾಡಲಿಕ್ಕೆ ಅವಕಾಶವಿರಬೇಕು. ಹಾಗೆಂದರೆ ಮಾತ್ರ ಅದು ರಾಗ ಆಗಲು ಸಾಧ್ಯ. 1/n
ಎಲ್ಲ ಸ್ವರಗಳೂ ಸದ್ದುಗಳೇ, ಆದರೆ ಎಲ್ಲ ಸದ್ದುಗಳೂ ಹೇಗೆ ಸಂಗೀತವಾಗುವುದಿಲ್ಲವೋ, ಅದೇ ರೀತಿ, ಹಲವು ಸ್ವರಗಳೂ (ಅದರಲ್ಲಿ ಸಂಗೀತಾಂಶವಿದ್ದೂ) ಸುಮ್ಮನೇ ಒಂದರ ಪಕ್ಕ ಒಂದನ್ನು ಜೋಡಿಸಿ ಹಾಡಿದರೆ #ರಾಗ ವಾಗುವುದಿಲ್ಲ

ಹಾಗೆಂದೇ ಒಂದು ರಾಗಕ್ಕೆ ಹತ್ತು, ಹದಿಮೂರು ಇತ್ಯಾದಿ ಬೇರೆ ಬೇರೆ ಲಕ್ಷಣಗಳನ್ನು ಹೇಳಲಾಗಿದೆ. 2/n
ಇಲ್ಲಿ ಹತ್ತು, ಹದಿಮೂರು ಅಥವ ಹದಿನೈದೇ ಎಂಬ ಸಂಖ್ಯೆ ಮುಖ್ಯವಲ್ಲ, ಆದರೆ ಹಾಗೆ ಹೆಸರಿಸಿರುವ #ಲಕ್ಷಣಗಳು ಹೇಗೆ ಸ್ವರಗಳಿಗೆ ರಾಗತ್ವವನ್ನು ತಂದುಕೊಡುತ್ತವೆ ಎಂದು ಸ್ವಲ್ಪ ಸರಳವಾಗಿ ಇಲ್ಲಿ ವಿವರಿಸುತ್ತೇನೆ.
ಮನಸ್ಸಿಗೆ ರಂಜನೆಯನ್ನು, ಹಿತವನ್ನು ತಂದುಕೊಡುವುದೇ ರಾಗ (ರಂಜಯತಿ ಇತಿ ರಾಗಃ) ಎಂಬುದು ಶಾಸ್ತ್ರಗ್ರಂಥಗಳ ಅಭಿಮತ. 3/n
Read 10 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(