My Authors
Read all threads
#ಸಂಸ್ಕೃತ ಮತ್ತು #ಪ್ರಾಕೃತ ಭಾಷೆಗಳ ಸಂಬಂಧ ಬಹು ಚರ್ಚಿತ ವಿಷಯ. ಈ ಬಗ್ಗೆ ಟಿಪ್ಪಣಿ ಹಾಕೋಣವೆನ್ನಿಸಿತು. ಸಂಸ್ಕೃತ ಪ್ರಾಕೃತಗಳೆರಡೂ #ಕನ್ನಡ #ಭಾಷೆ ಯ ಬೆಳವಣಿಗೆಯಲ್ಲಿ ಒಂದು ವಿಶಿಷ್ಟ ಪಾತ್ರ ವಹಿಸಿರುವುದು ತಿಳಿದ ವಿಷಯವಷ್ಟೇ.

#thread #oldstuff #FBmemories 1/n #Sanskrit #Kannada #Prakrit #Prakrta #Linguistics
ಹಿಂದಿನ ಸಂಸ್ಕೃತ ಗ್ರಂಥಗಳಲ್ಲಿ "ಪ್ರಕೃತಿಃ ಸಂಸ್ಕೃತಮ್, ತತ್ರ ಭವೇತ್ ಪಾಕೃತಂ" ಅನ್ನುವ ವಿವರಣೆಯನ್ನು ಕಾಣಬಹುದು.ಈ ಮಾತಿನ ಅರ್ಥ ಸಂಸ್ಕೃತ ಭಾಷೆಯ ರೂಪಗಳಾಗಿ, ಅದರಿಂದ ಪ್ರಾಕೃತವು(ಗಳು) ಬಂದಿತು(ಬಂದವು) ಎಂದು. ಮಾತಾಡುವುದಕ್ಕೂ ಪುಸ್ತಕದ ಭಾಷೆಗೂ ವ್ಯತ್ಯಾಸಗಳಿರುವುದು ಹೆಚ್ಚಿನ ಭಾಷೆಗಳಲ್ಲಿ ಕಂಡುಬರುವ ವಿಷಯವೇ

2/n #Kannada #Prakrit
ಕಾಲ ದೇಶಗಳಿಗೆ ತಕ್ಕಂತೆ ಭಾಷೆ ಸ್ವಲ್ಪ ಸ್ವಲ್ಪವಾಗಿ ಮಾರ್ಪಾಡಾಗುವುದೂ ಗೊತ್ತಿರುವ ಸಂಗತಿಯೇ.ಹಾಗಾಗಿ, ಒಂದು ಭಾಷೆಗೆ (ಅಂದರೆ ಇಲ್ಲಿ ಸಂಸ್ಕೃತಕ್ಕೆ) ಹಲವಾರು ಮಾತಾಡುವ ರೂಪಗಳಿದ್ದರೆ (ಅಂದರೆ ಶೌರಸೇನಿ, ಮಾಗಧಿ, ಪಾಲಿ, ಮಹಾರಾಷ್ಟ್ರೀ ಇತ್ಯಾದಿ ಹೆಸರುಗಳಿಂದ ಪ್ರಖ್ಯಾತವಾದ ಪ್ರಾಕೃತಗಳು) ಅದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ . 3/n #Thread
ಈಚೆಗೆ, ಅಂದರೆ ಒಂದು ಸುಮಾರು ೨೦೦ ವರ್ಷಗಳ ಹಿಂದಿನಿಂದ ಪ್ರಾಕೃತವೇ (ಗಳೇ) ಮೊದಲು, ಅವುಗಳನ್ನು ಸಂಸ್ಕರಿಸಿ ಸಂಸ್ಕೃತವನ್ನು "ಕಟ್ಟ"ಲಾಯಿತು ಎಂಬ ವಾದ ಬಂದಿರುವುದು ತಿಳಿದ ವಿಷಯವೇ. ಈ ವಾದವನ್ನು ಮಂಡಿಸುವ ಜನರಲ್ಲಿ ಹೆಚ್ಚಿನವರಿಗೆ #ಸಂಸ್ಕೃತ ಅಥವಾ #ಪ್ರಾಕೃತ ಎರಡೂ ತಿಳಿಯದೇ ಇರುವುದು ಒಂದು ವಿಪರ್ಯಾಸವೇ ಸರಿ! #thread 4/n #Kannada
ಇಂಥ ಕೆಲವು ಮಹನೀಯರು ಸಂಸ್ಕೃತ ಅನ್ನುವ ಭಾಷೆ ಇರಲೇ ಇಲ್ಲ, ಆ ಕಾಲದಲ್ಲಿ ಜನರು ಆಡುತ್ತಿದ್ದ ಪ್ರಾಕೃತವೆಂಬ (ಗಳೆಂಬ) ಭಾಷೆಯನ್ನು ಜರಡಿಯಾಡಿ, ಸೋಸಿ ಶುದ್ಧೀಕರಿಸಿ ಒಂದು ಸಂಸ್ಕೃತವೆಂಬ ಕೃತಕವಾದ ಭಾಷೆಯನ್ನು "ಕಟ್ಟಿದರು" ಅನ್ನುವ ಒಂದು ಮೊಂಡು ವಾದವನ್ನು ಮಂಡಿಸಿರುವುದನ್ನೂ ಕಾಣಬಹುದು! #thread 5/n #linguistics #Kannada #Prakrita
"ಪಾಣಿನಿ" ಎಂಬಾತ ವ್ಯಾಕರಣವನ್ನು ಬರೆದು ಈ ಭಾಷೆಯನ್ನು ಕಟ್ಟಿದ ಎಂಬುದು ಈ ಹುಚ್ಚು ವಾದ. ಯಾವ ಭಾಷೆಗೇ ಆಗಲಿ, ಅದಿರುವ ರೂಪವನ್ನು ವರ್ಣಿಸಲು, ಅದರಲ್ಲಾಗಿರುವ ಬದಲಾವಣೆಗಳನ್ನು ಗುರುತಿಸಲು ವ್ಯಾಕರಣವೇ ಹೊರತು, ವ್ಯಾಕರಣ ಬರೆದು ಅದರಿಂದ ಭಾಷೆಯನ್ನು ಹುಟ್ಟಿಸಲಾಗುವುದಿಲ್ಲ. #thread 6/n #Linguistics #Kannada #Sanskrit #Prakrit
ಈ ವಾದ ಹೊಸತಲ್ಲವಾದರೂ, ಈಚೀಚೆಗೆ ಸಾಮಾಜಿಕ ತಾಣಗಳಲ್ಲಿ ಜನರು ಓಡಾಡುವುದು ಹೆಚ್ಚಾಗಿರುವುದರಿಂದ, ಅಲ್ಲೆಲ್ಲಾ ಈ ವಾದಗಳು ಹರಿದಾಡುವುದನ್ನು ನೋಡಿರುವುದರಿಂದ, ಹೆಚ್ಚು ಜನಗಳಿಗೆ ಇದು ಈಗ ಪರಿಚಯವಾಗಿದೆ ಅನ್ನಬಹುದು. #thread 7/n #linguistics #Kannada #Samskrta #Prakrta
ವಾಟ್ಸಪ್ ಫೇಸ್ ಬುಕ್ ನಿಂದ ಮೊದಲ್ ಗೊಂಡು ಪತ್ರಿಕೆಗಳ ಅಂಕಣಕಾರರೂ ಸೇರಿದಂತೆ ಹಲವರು ಒಂದು ಸ್ವಲ್ಪ ಅಧ್ಯಯನವೂ ಇಲ್ಲದೇ ತಮಗೆ ಬೇಕಾದ, ತಮ್ಮ ಕಲ್ಪನೆಗಳಲ್ಲಿ ಹುಟ್ಟಿದ್ದನ್ನೆಲ್ಲ ಸತ್ಯವೆಂದು ಪ್ರತಿಪಾದಿಸುತ್ತಿರುವುದು ದುರದೃಷ್ಟಕಾರಿ ಸಂಗತಿ. #linguistics #kannada #thread 8/n
ಹಿಂದೂ ಇದು ಇರಲಿಲ್ಲವೆಂದಲ್ಲ, ಆದರೆ ಈಗ ಈ ಅಜ್ಞಾನ ಪ್ರಸಾರ ಅತಿ ಕಡಿಮೆ ಹೊತ್ತಿನಲ್ಲಿ ಅತಿ ಹೆಚ್ಚು ಜನರನ್ನು ತಲುಪುತ್ತಿದೆ.ಸಾಮಾನ್ಯ ಜನರಲ್ಲಿಯೂ ಪ್ರಾಥಮಿಕ ಮೂಲಗಳಿಂದ ಓದಿ ತಿಳಿದು ಮಾಡಿಕೊಳ್ಳುವ ಪ್ರವೃತ್ತಿ ಹುಟ್ಟುವತನಕ, ಇದು ಮುಂದುವರೆಯುತ್ತಲೇ ಇರುತ್ತೆ ಎಂದೆನಿಸುತ್ತೆ.ಬೇಸರದ ಸಂಗತಿಯಾದರೂ, ನಿಜ. 9/n #thread#Kannada #linguistics
ಇದರಲ್ಲಿ ಹೆಚ್ಚಿನ ವಾದಗಳು ಕೇವಲ ಇಂಗ್ಲಿಷ್ ನಲ್ಲಿರುವ ಅನುವಾದಗಳನ್ನು, ಅಥವಾ ವಾದಗಳನ್ನು ಓದಿಕೊಂಡು, ಯಾವುದೇ ಮೂಲಗಳನ್ನೂ ನೋಡದೇ ಮಾಡದೇ, ಅರೆ ತಿಳುವಳಿಕೆಯೆಂವ ತಲುಪಿರುವ ತಪ್ಪು ತೀರ್ಮಾನವಲ್ಲದೇ, ಮತ್ತೇನೂ ಅಲ್ಲ.
10/n #kannada #ಕನ್ನಡ #thread #prakrit #Linguistics #ಪ್ರಾಕೃತ #ಸಂಸ್ಕೃತ
"ಬೌದ್ಧರ ತ್ರಿಪಿಟಕ ವಿರುವುದು ಪಾಲಿ ಭಾಷೆಯಲ್ಲಿ. ಬೌದ್ಧ ಧರ್ಮವು ಜನ ಸಾಮಾನ್ಯರನ್ನು ತಲುಪಲು ಜನರಾಡುತ್ತಿದ್ದ ಪಾಲಿ ಭಾಷೆಯಲ್ಲಿ ತನ್ನ ತತ್ವಗಳನ್ನು ಹೇಳಿತು"- ನೀವು ಇಂತಹ ಹೇಳಿಕೆಗಳನ್ನು ಓದಿರಲೂ ಬಹುದು. #thread 11/n #Linguistics
ಸನಾತನ ಧರ್ಮಕ್ಕೆ ವಿರೋಧವಾಗಿ ನಿಂತಿತೆನ್ನಲಾದ ಬೌದ್ಧ ಧರ್ಮ, ಸಂಸ್ಕೃತಕ್ಕೆ ವಿರೋಧವಾಗಿ ಪಾಲಿಯಲ್ಲಿ ಬರೆದು ಕ್ರಾಂತಿ ಮಾಡಿತು ಎಂದುಕೊಂಡಿದ್ದರೆ ಆ ತೀರ್ಮಾನಕ್ಕೆ ಬರುವ ಮೊದಲು ಒಂದು ನಿಮಿಷ ತಾಳಿ! ಸಂಸ್ಕೃತಕ್ಕೆ ಪಾಲಿಯು ವಿರುದ್ಧವಾಗಿ ನಿಂತದ್ದು ಎಂಬ ಅಭಿಪ್ರಾಯ ತಪ್ಪು ಅನ್ನುವುದಕ್ಕೆ, ಪಾಲಿ ಸೂಕ್ತಗಳನ್ನೇ ಉದಾಹರಣೆಯಾಗಿ ನೋಡಿ! 12/n
ಪಾಲಿಯನ್ನು ನಾನು ಈ ಮೊದಲು ಮೂಲದಲ್ಲಿಯೇ ಆಗಲಿ, ಅನುವಾದದಲ್ಲೇ ಆಗಲಿ ತುಸುವೂ ಓದಿಲ್ಲದಿದ್ದರೂ, ಈ ಸೂಕ್ತಗಳನ್ನು ನೋಡಿದ ಕೂಡಲೆ, ಅವುಗಳ ಸಂಸ್ಕೃತ ಅವತರಣಿಕೆ ಏನಿರಬೇಕೆಂದು ಕೂಡಲೆ ಹೊಳೆಯಿತು ಅಂದರೆ, ಸಂಸ್ಕೃತ-ಪಾಲಿಗಳ ನಡುವೆ ಎಂತಹ ಹತ್ತಿರದ ಸಂಬಂಧವಿದೆ ಅನ್ನುವುದು ತಿಳಿಯುತ್ತೆ. 13/n #thread # Kannada #Linguistics #Sanskrit
ಪಾಲಿ ಮೂಲ:

ನ ಭಜೇ ಪಾಪಕೇ ಮಿತ್ತೇ
ನ ಭಜೇ ಪುರಿಸಾಧಮೇ
ಭಜೇಥಾ ಮಿತ್ತೇ ಕಲ್ಯಾಣೇ
ಭಜೇಥಾ ಪುರಿಸುತ್ತಮೇ

ನನ್ನ ಸಂಸ್ಕೃತ ಸಂಸ್ಕೃತ ಛಾಯೆ:

ನ ಭಜೇ ಪಾಪಕೇ ಮಿತ್ರೇ
ನ ಭಜೇ ಪುರುಷಾಧಮೇ
ಭಜೇsಥಾ ಮಿತ್ರೇ ಕಲ್ಯಾಣೇ
ಭಜೇsಥಾ ಪುರುಷೋತ್ತಮೇ

ಇವು ಒಂದೇ ಭಾಷೆಯ ಎರಡು dialects ಇರಬೇಕು ಎಂದು ಎನ್ನಿಸುವುದಿಲ್ಲವೇ?

#thread 14/n #Pali #ಕನ್ನಡ
ಇನ್ನೊಂದು ಪಾಲಿ ಸೂಕ್ತ :

ಮನೋಪುಬ್ಬಂಗಮಾ ಧಮ್ಮಾ
ಮನೋಸೇಟ್ಠಾ ಮನೋಮಯಾಃ
ಮನಸಾ ಚೇ ಪದುಟ್ಠೀನ
ಭಾಸತಿ ವಾ ಕರೋತಿ ವಾ
ತತೋ ನಙ್ ದುಕ್ಖಣ್ ಅನ್ವೇತಿ
ಚಕ್ಕಂ ವ ವಹತೋ ಪದಙ್

ಇದರ ಸಂಸ್ಕೃತ ಅನುವಾದ

ಮನೋ ಪೂರ್ವಂಗಮಾ ಧರ್ಮ
ಮನಸೇಷ್ಟಾ ಮನೋಮಯಾಃ
ಮನಸೋ ಚೇತ್ ಪ್ರದುಷ್ಟೇನ
ಭಾಸತಿ ವಾ ಕರೋತಿ ವಾ
ತತೋ ನಹಿ ದುಃಖಮನ್ವೇತಿ
ಚಕ್ರಂ ವೋ ವಹತೋ ಪದಾನ್

15/n
ಇವುಗಳನ್ನು ಓದಿದ ಯಾರಿಗೇ ಆಗಲಿ, ಇವು ಒಂದೇ ಭಾಷೆಯ ಎರಡು ರೂಪ ಅನ್ನಿಸುವುದರಲ್ಲಿ ಅನುಮಾನವಿಲ್ಲ!

ಇದಕ್ಕೆ ಸಮಾಂತರವಾಗಿ ಕನ್ನಡದಲ್ಲಿ ರತ್ನನ ಪದದ ಉದಾಹರಣೆ ತೆಗೆದುಕೊಂಡು ನೋಡೋಣ:

ಬ್ರಮ್ಮ ನಿಂಗೆ ಜೋಡುಸ್ತೀನಿ ಯೆಂಡ ಮುಟ್ಟಿದ್ಕೈನ
ಬೂಮ್ಯುದ್ದಕ್ಕೂ ಬೊಗ್ಗುಸ್ತೀನಿ ಯೆಂಡ ತುಂಬಿದ್ಮೈನ

16/n #thread #Linguistics #Sanskrit #ಪಾಳಿ
ಮೇಲಿನ ಪದ ದಕ್ಷಿಣ ಕರ್ನಾಟಕದ ಹಳ್ಳಿಯ ಕಡೆಯ, ಹೆಚ್ಚು ಓದು ಬರಹಬಾರದ ಕುಡುಕನೊಬ್ಬನ ಭಾಷೆ ಎಂದುಕೊಂಡರೆ, ಅದರ ಬರಹದ ಶುದ್ಧ ರೂಪ ಹೇಗಿರಬಹುದು?

ಬ್ರಹ್ಮ ನಿನಗೆ ಜೋಡಿಸುತ್ತೇನೆ ಹೆಂಡ ಮುಟ್ಟಿದ ಮೈಯನ್ನು
ಭೂಮಿಯುದ್ದಕ್ಕೂ ಬಗ್ಗಿಸುತ್ತೇನೆ ಹೆಂಡ ತುಂಬಿದ ಮೈಯನ್ನು

#thread 17/n #ಕನ್ನಡ #ಪಾಲಿ #ಸಂಸ್ಕೃತ #linguistics #ಪ್ರಾಕೃತ #prakrit
ಈಗ ಈ ಎರಡನ್ನೂ ಹೋಲಿಸಿದರೆ, ಅವೆರಡಕ್ಕೂ ಇರುವ ವ್ಯತ್ಯಾಸವೂ ಮೇಲೆ ಇರುವ ಪಾಲಿ-ಸಂಸ್ಕೃತಗಳ ವ್ಯತ್ಯಾಸದಷ್ಟೇ ಅನ್ನುವುದು ನಿಚ್ಚಳ. ಅಂದರೆ, ಪ್ರಾಕೃತವೂ ಸಂಸ್ಕೃತವೂ ಕನ್ನಡದ ಆಡುಮಾತುಗಳು, ಮತ್ತು ಸಾಮಾನ್ಯ ಬರಹದ ಮಾತುಗಳಷ್ಟೇ ಸಂಬಂಧವಿರುವುವು ಹೊರತು ಬೇರೆ ಭಾಷೆಗಳಲ್ಲ ಅನ್ನುವ ನಿರ್ಧಾರಕ್ಕೆ ಬರುವುದು ಸುಲಭ. 18/n #ಸಂಸ್ಕೃತ #ಪಾಕೃತ #ಕನ್ನಡ
ಈ ಮೇಲಿನ ರತ್ನನ ಪದದಲ್ಲಿ ಎರಡನೆಯ ವರಸೆಯನ್ನು "ಕಟ್ಟಿದ" ಸುಳ್ಳು ಭಾಷೆ, ನಿಜವಾದ ಭಾಷೆ ಅಲ್ಲ ಅಂತ ಹೇಳುವುದು ಎಷ್ಟು ಅರ್ಥ ಹೀನ ಎನ್ನುವುದನ್ನು ನಾನು ಮತ್ತೆ ಹೊಸದಾಗಿ ವಿವರಿಸಬೇಕಾಗಿಲ್ಲ!

ಸರಿ,ಇಷ್ಟರಿಂದಲೇ ಪಾಲಿಯಿಂದ ಸಂಸ್ಕೃತ ಬಂದಿಲ್ಲ ಅಂತ ಹೇಗೆ ಹೇಳುವಿರಿ ಎನ್ನುವುದಾದರೆ, ಅದಕ್ಕೂ ಉತ್ತರವಿದೆ, ಮುಂದೆಓದಿ.19/n #thread #linguistics
ಪಾಲಿಯೊಂದೇ ಪ್ರಾಕೃತವಲ್ಲ. ದಕ್ಷಿಣ ಪ್ರಸ್ಥಭೂಮಿಯಲ್ಲಿ ಪ್ರಚಲಿತವಿದ್ದ ಮಹಾರಾಷ್ಟ್ರೀ, ಗಂಗಾ ಯಮುನಾ ಬಯಲಿನ ಶೌರಸೇನೀ ಮೊದಲಾದ ಹಲವು ಪ್ರಾಕೃತಗಳೂ ಇವೆ. ಅಲ್ಲಿ ಗಮನಿಸಬೇಕಾದ್ದೇನೆಂದರೆ ಎಲ್ಲ ಈ ಎಲ್ಲ ಪ್ರಾಕೃತಗಳಿಗೂ ಮತ್ತು ಸಂಸ್ಕೃತಕ್ಕೂ ನಾನು ಈಗ ಮೇಲೆ ತೋರಿಸಿದ ರೀತಿಯೇ ಸಂಬಂಧವನ್ನು ಬಹಳ ಸುಲಭವಾಗಿ ತೋರಿಸಬಹುದು. 20/n #Linguistics
ಇದನ್ನು ಹೇಗೆ ವಿವರಿಸುವುದು? ಇವೆಲ್ಲಾ ಒಂದೇ ಭಾಷೆಯ ರೂಪಗಳು ಎಂಬುದೇ ನೇರ ವಿವರಣೆ.

ಮಹಾರಾಷ್ಟ್ರಿ ನರ್ಮದಾ ಗೋದಾವರಿ ನದೀ ಪ್ರದೇಶದಲ್ಲಿತ್ತು. ಮಾಗಧಿ ಪಾಲಿಗಳಿದ್ದದ್ದು ಸೋನ್, ಗಂಗಾ ಪ್ರದೇಶದ ಬಿಹಾರ. ಶೌರಸೇನಿಯಿದ್ದದ್ದು ಗಂಗಾ ಯಮುನಾ ಪ್ರದೇಶದ ಹರಿಯಾನಾ ಪಶ್ಚಿಮ ಉತ್ತರ ಪ್ರದೇಶಗಳಲ್ಲಿ - ಇವೆಲ್ಲಾ ನೂರಾರು ಮೈಲಿ ಅಂತರದಲ್ಲಿವೆ 21/n
ನೂರಾರು ಮೈಲಿ ದೂರದಲ್ಲಿದ್ದ ಭಾಷೆಗಳನ್ನೆಲ್ಲ "ಒಟ್ಟು ಸೇರಿಸಿ, ಶುದ್ಧೀಕರಣ ಮಾಡಿ ಸಂಸ್ಕೃತವನ್ನು" ಕಟ್ಟಿದರು ಅನ್ನುವುದು ಒಪ್ಪಲಾಗದ ಮಾತು. ಅಂತಹ ವಾದಕ್ಕಿಂತ, ಬರವಣಿಗೆಯಲ್ಲಿ ಬಳಕೆಯಲ್ಲಿದ್ದ ಒಂದು ಭಾಷೆಯ ಒಳನುಡಿಗಳು (dialect) ಎಂದರೆ ಆ ವಿವರಣೆ ಅಷ್ಟೇ ಸರಳವಾಗುತ್ತದೆ. 22/n #Linguistics #ಕನ್ನಡ #ಪಾಕೃತ
ಇದೆಲ್ಲ ಸರಿ, ಕನ್ನಡಿಗರಿಗೆ ಪ್ರಾಕೃತ ಆದರೇನು ಸಂಸ್ಕೃತ ಆದರೇನು ಅನ್ನುವಿರಾ? ನಿಜ ಹೇಳಬೇಕೆಂದರೆ ಪ್ರಾಕೃತಕ್ಕೂ , ಅದರಲ್ಲೂ ಮಹಾರಾಷ್ಟ್ರೀ ಪ್ರಾಕೃತಕ್ಕೂ, ಕನ್ನಡಕ್ಕೂ ಸಾವಿರಾರು ವರ್ಷಗಳ ಸಂಬಂಧವಿದೆ. ರಾಷ್ಟ್ರಕೂಟ ಚಾಲುಕ್ಯ ರಾಜ್ಯದಲ್ಲಿ ಕನ್ನಡವನ್ನೂ , ಮಹಾರಾಷ್ಟ್ರೀಯನ್ನೂ ಮಾತಾಡುತ್ತಿದ್ದವರು ನೂರಾರು ವರ್ಷ ಒಟ್ಟಿಗೇ ಇದ್ದಿರಬೇಕು. 23/n
ಇಂದಿಗೂ, ನಾವು ಪ್ರತಿದಿನವೂ ಬಳಸುವ ಎಷ್ಟೋ "ಕನ್ನಡ’ ಪದಗಳು ಈ #ಮಹಾರಾಷ್ಟ್ರೀ #ಪ್ರಾಕೃತದಿಂದಲೇ ಬಂದಿವೆ. ಅದರಂತೆಯೇ ಕನ್ನಡದ ಪದಗಳೂ ಮಹಾರಾಷ್ಟ್ರೀ ಪ್ರಾಕೃತವನ್ನು, ಅದರಿಂದ ಇಂದಿನ ಮರಾಠಿಯಲ್ಲೂ ಸೇರಿ ಹಾಸುಹೊಕ್ಕಾಗಿರುವುದೂ ಆ ಒಡನಾಟದಿಂದಲೇ ಅನ್ನುವುದೂ ನಿರೂಪಿತವಾದ ಸಂಗತಿ 24/n #Linguistics #ಕನ್ನಡ #Thread
ಕನ್ನಡದಲ್ಲಿ ಹಲ ತದ್ಭವಗಳು ನೇರವಾಗಿ ಸಂಸ್ಕೃತದಿಂದಲ್ಲದೇ ಮಹಾರಾಷ್ಟ್ರೀ ಇಂದ ಬಂದಿರುವುದು ಎರಡೂ ಭಾಷೆಗಳನ್ನು ತಿಳಿದವರಿಗೆ ಗೊತ್ತಾಗುತ್ತೆ.
#ಪಾಲಿ ಎಂದರೆ #ಸಂಸ್ಕೃತ ವಿರೋಧಿ, #ಪ್ರಾಕೃತ ಅಂದರೆ ಸಹಜ, ಸಂಸ್ಕೃತ ಎಂದರೆ ಕೃತಕ ಎನ್ನುವ ವಾದಗಳನ್ನು ಮತ್ತೆ ಮತ್ತೆ ಓದಿ ಇಷ್ಟೆಲ್ಲಾ ಬರೆಯಬೇಕಾಯಿತು!

25/25 End of #Linguistics #thread
🙏
Missing some Tweet in this thread? You can try to force a refresh.

Enjoying this thread?

Keep Current with hamsanandi

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!