My Authors
Read all threads
@bhardwaj_salil Here is what I got from the author, just now:೨೯-ಗತಿಮೂಲಾ ಪ್ರಕೃತಿ ಹಾಗೂ ಅದರ ’ಸ್ಥಿತಿ-ಗತಿ-ಆಗತಿ’ ಎಂಬ ಮೂರು ಪ್ರಮುಖ ವಿವರ್ತಗಳು-
ಈ ಗತಿತತ್ವವು ಮುಂದುವರೆದು ಐದು ಸ್ವರೂಪಗಳಲ್ಲಿ ಪರಿಣತವಾಗುತ್ತದೆ. ಕೇಂದ್ರದಿಂದ ಪೃಷ್ಠದತ್ತ ಯಾವ ಚಲನೆ ಉಂಟಾಗುತ್ತದೆಯೋ, ಅದನ್ನು "ಗತಿ" ಎನ್ನಲಾಗಿದೆ. ~1
@bhardwaj_salil ಪೃಷ್ಠದಿಂದ ಕೇಂದ್ರದತ್ತ ಯಾವ ಚಲನೆ ಉಂಟಾಗುತ್ತದೆಯೋ, ಅದನ್ನು "ಆಗತಿ" ಎನ್ನಲಾಗಿದೆ. ಗತಿ ಗಮನವಾಗಿದ್ದರೆ, ಆಗತಿಯು ಆಗಮನವಾಗಿದೆ. ಬರುವುದು ಮತ್ತು ಹೋಗುವುದು, ಎಂಬ ಎರಡೂ ಸ್ವರೂಪಗಳು ಸರ್ವವಿದಿತವಾಗಿರುವಂತಹವು. ಆಗತಿಲಕ್ಷಣವುಳ್ಳ ಗತಿಯು ಆದಾನ (ಪಡೆಯುವ) ಭಾವದ ಅಧಿಷ್ಠಾತ್ರಿಯಾಗಿದೆ, ಹಾಗೂ ಗತಿಲಕ್ಷಣವುಳ್ಳ ಗತಿಯು ವಿಸರ್ಗ (ಕೊಡುವ) ಭಾವದ 2
@bhardwaj_salil ಅಧಿಷ್ಠಾತ್ರಿಯಾಗಿದೆ. ಆದಾನ-ವಿಸರ್ಗದಲ್ಲಿ ಪ್ರತಿಕ್ಷಣ ಸ್ಪರ್ಧೆ ನಡೆಯುತ್ತಿರುತ್ತದೆ. ಇದೇ ಸ್ಪರ್ಧೆಯು ಪದಾರ್ಥಗಳ ಜೀವನದ ಮುಖ್ಯ ಹೇತುವಾಗಿದೆ. ವಿರುದ್ಧ ದಿಗ್‍ದ್ವಯಗತಿಯ ಸಮನ್ವಯವೇ "ಸ್ಥಿತಿ" ಎಂಬುದಾಗಿದೆ. ಸ್ಥಿತಿಭಾವವು ಗತಿಗಿಂತ ಭಿನ್ನ ತತ್ವವಲ್ಲ. ಆದರೆ ಗತಿಸಮುಚ್ಚಯದ ಹೆಸರೇ ಸ್ಥಿತಿ ಎಂದು. ಗತಿಭಾವದ ಸಮಷ್ಟಿಲಕ್ಷಣವಾದ ಈ ಮೂರನೆಯ 3
@bhardwaj_salil ವಿವರ್ತವೇ ಆದಾನ-ವಿಸರ್ಗ ಲಕ್ಷಣವಾದ ಆಗತಿ-ಗತಿ ಭಾವಗಳ ಪ್ರತಿಷ್ಠಾ ಆಗುತ್ತದೆ. ಸ್ಥಿತಿ-ಗತಿ-ಆಗತಿ, ಈ ಮೂರೂ ಒಂದೇ ಗತಿತತ್ವದ ಮೂರು ವಿವರ್ತಗಳಾಗಿವೆ.
೩೦-ಗತಿತತ್ವದ ಐದು ಮಹಿಮಾ-ವಿವರ್ತಗಳು ಹಾಗೂ ತನ್ಮೂಲಕ ’ಅಂತರ್ಯಾಮೀ’ ಹಾಗೂ ’ಸೂತ್ರಾತ್ಮ’ದ ಸಂಸ್ಮರಣೆ-ಗತಿಯನ್ನು ಸ್ಥಿತಿಯ ಗರ್ಭದಲ್ಲಿ ಪ್ರತಿಷ್ಠಿತಗೊಳಿಸಿರಿ. ಆಗ ಸ್ಥಿತಿಗರ್ಭಿತಾ ಗತಿ ಎಂಬ 4
@bhardwaj_salil ನಾಲ್ಕನೆಯ ವಿವರ್ತವು ಪ್ರಕಟವಾಗುತ್ತದೆ. ಇದೇ ರೀತಿ ಆಗತಿಯನ್ನು ಸ್ಥಿತಿಯ ಗರ್ಭದಲ್ಲಿ ಪ್ರತಿಷ್ಠಿತಗೊಳಿಸಲು ಸ್ಥಿತಿಗರ್ಭಿತಾ ಆಗತಿ ಎಂಬ ಐದನೆಯ ಭಾವವು ಪ್ರಕಟವಾಗುತ್ತದೆ. ಈ ಐದನ್ನು ಹೊರತುಪಡಿಸಿ ಗತಿತತ್ವದ ಆರನೆಯ ವಿವರ್ತವು ನಿಮಗೆ ಸಿಗುವುದಿಲ್ಲ. ಉತ್‍ಕ್ಷೇಪಣ, ಅವಕ್ಷೇಪಣ, ಆಕುಂಚನ, ಪ್ರಸಾರಣ ಇತ್ಯಾದಿ ಎಷ್ಟು ಗತಿಭಾವಗಳಿವೆಯೋ, 5
@bhardwaj_salil ಅವೆಲ್ಲವೂ ಇದೇ ಐದರಲ್ಲಿ ಅಂತರ್ಭೂತವಾಗಿವೆ. ಈ ಐದರಲ್ಲಿಯೂ ಸ್ಥಿತಿ-ಆಗತಿ-ಗತಿ, ಎಂಬ ಮೂರರದ್ದು ಒಂದು ವಿಭಾಗವಾದರೆ, ಉಳಿದೆರಡರದ್ದು ಇನ್ನೊಂದು ವಿಭಾಗ. ಅಂತರ್ಜಗತ್ ಹಾಗೂ ಬಹಿರ್ಜಗತ್ ಎಂಬುದೇ ಈ ಎರಡು ಭಾಗಗಳಿಗೆ ಕಾರಣ. ಗತಿತ್ರಯಿಯು ಪದಾರ್ಥದ ಅಂತರ್ಜಗತ್-ಲಕ್ಷಣವಾದ ಹೃದಯಭಾವಕ್ಕೆ ಸಂಬಂಧಿಸಿದ್ದರೆ, ಗತಿದ್ವಯಿಯು ಪದಾರ್ಥದ ಬಹಿರ್ಜಗತ್- 6
@bhardwaj_salil ಲಕ್ಷಣವಾದ ಪಿಂಡಭಾವಕ್ಕೆ ಸಂಬಂಧಿಸಿದೆ. ಇತರೆ ಶಬ್ದಗಳಲ್ಲಿ, ಪಿಂಡಭಾವದ ರಕ್ಷಣೆಯು ಗತಿದ್ವಯಿಯ ಮೇಲೆ ನಿರ್ಭರವಾಗಿದೆ ಹಾಗೂ ಹೃದಯಭಾವವು ಗತಿತ್ರಯಿಯ ಆಧಾರದಲ್ಲಿ ಪ್ರತಿಷ್ಠಿತವಾಗಿದೆ. ಏಕೆಂದರೆ ಐದೂ ಭಾವಗಳು ಒಂದರದ್ದೇ ಐದು ಅವಸ್ಥೆಗಳಷ್ಟೆ. ಹಾಗಾಗಿ ಈ ಐದನ್ನೂ ನಾವು ಆ ಒಂದರ ಐದು ಕಲೆಗಳೆಂದು ಹೇಳುತ್ತೇವೆ, ಹಾಗೂ ಆ ಪಂಚಕಲಗೆಳನ್ನು ಒಂದು 7
@bhardwaj_salil ತತ್ವವೆಂದು ಹೇಳುತ್ತೇವೆ. ಪಂಚಕಲಾತ್ಮಕ ಅಂತಹಾ ಒಂದು ತತ್ವವೇ ’ಪ್ರಕೃತಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅದರ ಗತಿತ್ರಯೀಲಕ್ಷಣವು ಮೊದಲ ವಿಭಾಗ ಹಾಗೂ ಗತಿದ್ವಯೀಲಕ್ಷಣವು ಎರಡನೆಯ ವಿಭಾಗ. ಇವುಗಳೇ ವಿಜ್ಞಾನಭಾಷೆಯಲ್ಲಿ ಕ್ರಮವಾಗಿ ’ಅಂತರ್ಯಾಮೀ’ ಹಾಗೂ ’ಸೂತ್ರಾತ್ಮಾ’ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದೆ. Concluded. 4 whoever to know.
Missing some Tweet in this thread? You can try to force a refresh.

Enjoying this thread?

Keep Current with HinduRashtrChowkidar Dr.S.Ramakrishna#HDL

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!